ಇತಿಹಾಸ ಬರೆದ ಲಕ್ಷ್ಯ ಸೇನ್; ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಭಾರತದ ಮೊದಲ ಆಟಗಾರ
- ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಲಕ್ಷ್ಯಸೇನ್ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ಐತಿಹಾಸಿಕ ಪದಕ ಗೆಲುವಿಗೆ ಇನ್ನೂ ಒಂದು ಪಂದ್ಯದಲ್ಲಿ ಗೆಲ್ಲಬೇಕಿದೆ.

(1 / 5)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧದ ರೋಚಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದರು. ಆ ಮೂಲಕ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ನಲ್ಲಿ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಪಾತ್ರರಾದರು.(Reuters)
(2 / 5)
ರೋಚಕವಾಗಿ ನಡೆದ ಪಂದ್ಯದಲ್ಲಿ ಲಕ್ಷ್ಯ ಮೊದಲ ಸೆಟ್ ಅನ್ನು 19-21 ಅಂತರದಿಂದ ಕಳೆದುಕೊಂಡರು. ಕಠಿಣ ಪೈಪೋಟಿ ನೀಡಿ ಕೊನೆಯ ಹಂತದಲ್ಲಿ ಮೊದಲ ಸೆಟ್ ಸೋತರು. ಆದರೆ, ಆ ಬಳಿಕ ಎದುರಾಳಿಯ ವೀಕ್ನೆಸ್ ಅರ್ಥಮಾಡಿಕೊಂಡ ಭಾರತೀಯ ಚಾಣಾಕ್ಷ ಆಟವಾಡಿದರು.
(3 / 5)
22 ವರ್ಷದ ಆಟಗಾರ ನಿಖರ ಹೊಡೆತಗಳೊಂದಿಗೆ ಎರಡು ಹಾಗೂ ಮೂರನೇ ಸೆಟ್ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ಎರಡನೇ ಸೆಟ್ ಅನ್ನು 21-15ರಿಂದ ವಶಪಡಿಸಿಕೊಂಡ ಬಳಿಕ, ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.
(4 / 5)
ಕೊನೆಯಲ್ಲಿ 19-21 21-15 21-12 ಅಂತರದಿಂದ ಪಂದ್ಯ ಗೆದ್ದು ಬೀಗಿದರು. ವಿಶ್ವದ 11ನೇ ಶ್ರೇಯಾಂಕದ ಚೌ ವಿರುದ್ಧ, 2021ರ ವಿಶ್ವ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತ ಲಕ್ಷ್ಯ ಗೆದ್ದು ಬೀಗಿದರು.
ಇತರ ಗ್ಯಾಲರಿಗಳು