ಗೆದ್ದಿದ್ದು 6, ಕಳೆದುಕೊಂಡಿದ್ದು 7 ಪದಕ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಿಂದ 4ನೇ ಸ್ಥಾನ ಪಡೆದ ಭಾರತೀಯರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗೆದ್ದಿದ್ದು 6, ಕಳೆದುಕೊಂಡಿದ್ದು 7 ಪದಕ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಿಂದ 4ನೇ ಸ್ಥಾನ ಪಡೆದ ಭಾರತೀಯರು

ಗೆದ್ದಿದ್ದು 6, ಕಳೆದುಕೊಂಡಿದ್ದು 7 ಪದಕ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಿಂದ 4ನೇ ಸ್ಥಾನ ಪಡೆದ ಭಾರತೀಯರು

  • ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಈ ಬಾರಿ ಭಾರತವು ಒಟ್ಟು 6 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೆಲವೊಂದು ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾಗಿದ್ದಾರೆ. ಪ್ಯಾರಿಸ್‌ನಲ್ಲಿ ಭಾರತವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಸಂದರ್ಭಗಳು ಹೀಗಿವೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆರು ಪದಕಗಳೊಂದಿಗೆ ಭಾರತ ಅಭಿಯಾನ ಅಂತ್ಯಗೊಳಿಸಿದೆ. ಶೂಟಿಂಗ್‌ನಲ್ಲಿ ಮೂರು ಕಂಚಿನ ಪದಕಗಳು ಬಂದರೆ, ಹಾಕಿ ತಂಡ ಕೂಡಾ ಕಂಚಿನ ಪದಕ ಗೆದ್ದಿತು. ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದರು. ಕುಸ್ತಿಯಲ್ಲಿ ಅಮನ್‌ ಸೆಹ್ರಾವತ್‌ ಐತಿಹಾಸಿಕ ಕಂಚು ಸಾಧನೆ ಮಾಡಿದರು, ಈ ನಡುವೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರು ಕನಿಷ್ಠ 7 ಪದಕಗಳನ್ನು ಕೂದಲೆಳೆ ಅಂತರದಿಂದ ಕಳೆದುಕೊಂಡಿತು. ಆರು ಸಂದರ್ಭಗಳಲ್ಲಿ ಭಾರತದ ಅಥ್ಲೀಟ್‌ಗಳು ನಾಲ್ಕನೇ ಸ್ಥಾನ ಪಡೆದರು. ಇನ್ನೊಂದರಲ್ಲಿ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯ್ತು.
icon

(1 / 8)

10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸರ್ಜೋತ್ ಅವರೊಂದಿಗೆ ಭಾರತದ ಮನು ಭಾಕರ್ ಕಂಚಿನ ಪದಕ ಗೆದ್ದರು. ಆದರೆ, ಮಹಿಳೆಯರ 25 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸ್ವಲ್ಪವೇ ಅಂತರದಿಂದ ಅವರು ನಾಲ್ಕನೇ ಸ್ಥಾನ ಪಡೆಯಬೇಕಾಯ್ತು. ಹೀಗಾಗಿ ಮನು ಪದಕಗಳ ಹ್ಯಾಟ್ರಿಕ್‌ ಸಾಧನೆಯಿಂದ ವಂಚಿತರಾದರು.
icon

(2 / 8)

10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸರ್ಜೋತ್ ಅವರೊಂದಿಗೆ ಭಾರತದ ಮನು ಭಾಕರ್ ಕಂಚಿನ ಪದಕ ಗೆದ್ದರು. ಆದರೆ, ಮಹಿಳೆಯರ 25 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸ್ವಲ್ಪವೇ ಅಂತರದಿಂದ ಅವರು ನಾಲ್ಕನೇ ಸ್ಥಾನ ಪಡೆಯಬೇಕಾಯ್ತು. ಹೀಗಾಗಿ ಮನು ಪದಕಗಳ ಹ್ಯಾಟ್ರಿಕ್‌ ಸಾಧನೆಯಿಂದ ವಂಚಿತರಾದರು.(PTI)

ಪುರುಷರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಅರ್ಜುನ್ ಬಬುಟಾ ಉತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಅವರು ಫೈನಲ್‌ನಲ್ಲಿ ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದರು. ಇದರ ಪರಿಣಾಮವಾಗಿ ಭಾರತ ಕಂಚಿನ ಪದಕದಿಂದ ವಂಚಿತವಾಯಿತು.
icon

(3 / 8)

ಬಿಲ್ಲುಗಾರಿಕೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಕಂಚಿನ ಪದಕ ಪಂದ್ಯದಲ್ಲಿ ಸೋತರು. ಹೀಗಾಗಿ ಐತಿಹಾಸಿಕ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.
icon

(4 / 8)

ಬಿಲ್ಲುಗಾರಿಕೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಕಂಚಿನ ಪದಕ ಪಂದ್ಯದಲ್ಲಿ ಸೋತರು. ಹೀಗಾಗಿ ಐತಿಹಾಸಿಕ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.(AFP)

ಶೂಟಿಂಗ್‌ನಲ್ಲಿ ಸ್ಕೀಟ್‌ ಮಿಶ್ರ ತಂಡ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅನಂತ್‌ಜೀತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ನಾಲ್ಕನೇ ಸ್ಥಾನ ಪಡೆದರು. ಆ ಬಳಿಕ ಅವರು ಕಂಚಿನ ಪದಕದ ಪಂದ್ಯದಲ್ಲಿ ಸೋತರು. ಹೀಗಾಗಿ ಭಾರತವು ಮತ್ತೊಂದು ಪದಕವನ್ನು ಕಳೆದುಕೊಂಡಿತು.
icon

(5 / 8)

ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಪದಕ ಗೆಲ್ಲುವ ಭರವಸೆಯಲ್ಲಿದ್ದರು. ಆದರೆ ಕೊನೆಯಲ್ಲಿ ಆ ಕನಸು ನನಸಾಗಲಿಲ್ಲ. ಕಂಚಿನ ಪದಕದ ಪಂದ್ಯದಲ್ಲಿ ಲಕ್ಷ್ಯ ಸೋಲು ಕಂಡು ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಬೇಕಾಯಿತು.
icon

(6 / 8)

ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಕೂದಲೆಳೆ ಅಂತರದಿಂದ ಕಂಚಿನ ಪದಕವನ್ನು ಕಳೆದುಕೊಂಡರು. ಅವರು ಸ್ನ್ಯಾಚ್ ಮತ್ತು ಕ್ಲೀನ್ ಅಂಡ್ ಜರ್ಕ್ ನಲ್ಲಿ ಒಟ್ಟಾರೆ ನಾಲ್ಕನೇ ಸ್ಥಾನ ಪಡೆದರು. ಟೋಕಿಯೊದಲ್ಲಿ ಪದಕ ಗೆದ್ದಿದ್ದ ಚಾನು, ಪ್ಯಾರಿಸ್‌ನಲ್ಲಿ ಕೇವಲ ಒಂದು ಕೆಜಿ ಅಂತರದಿಂದ ಪದಕ ವಂಚಿತರಾದರು,
icon

(7 / 8)

ಮಹಿಳಾ ಫ್ರೀಸ್ಟೈಲ್ ಕುಸ್ತಿ 50 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ ತಲುಪಿದ್ದಾರೆ. ಆದರೆ, ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ಅಧಿಕ ತೂಕ ಹೊಂದಿದ್ದರಿಂದ ಟೂರ್ನಿಯಿಂದ ಹೊರಗುಳಿದಿದ್ದರು. ಅವರು ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಒಲಿಂಪಿಕ್ಸ್ ನಂತರ ವಿನೇಶ್ ಭವಿಷ್ಯ ತಿಳಿಯಲಿದೆ. ಈ ಕೂಟದಲ್ಲಿ ಭಾರತ ಇದುವರೆಗೂ ಪದಕ ಗೆದ್ದಿಲ್ಲ. ಫೋಟೋ: ರಾಯಿಟರ್ಸ್.
icon

(8 / 8)

ಇತರ ಗ್ಯಾಲರಿಗಳು