ಗಟ್ಟಿ ದೇಹಕ್ಕೆ ನಾಟಿ ಆಹಾರವೇ ಶಕ್ತಿ; ಚಿನ್ನದ ಹುಡುಗಿ ವಿನೇಶ್ ಫೋಗಟ್ ಆಹಾರಕ್ರಮ, ಫಿಟ್‌ನೆಸ್ ಸೀಕ್ರೆಟ್
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದಿಂದ ವಂಚಿತರಾದ ವಿನೇಶ್ ಫೋಗಟ್, ಮೇಲ್ಮನವಿಯ ತೀರ್ಪಿಗಾಗಿ ಕಾಯುತ್ತಿದ್ದಾರೆ. ತೂಕ ವ್ಯತ್ಯಾಸದಿಂದ ಪದಕ ಕಳೆದುಕೊಂಡ ಕುಸ್ತಿಪಟುವಿನ ಪರ ಭಾರತದಾದ್ಯಂತ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುವಿನ ಆಹಾರಕ್ರಮದ ಕುರಿತು ತಿಳಿಯೋಣ.
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದಿಂದ ವಂಚಿತರಾದ ವಿನೇಶ್ ಫೋಗಟ್, ಮೇಲ್ಮನವಿಯ ತೀರ್ಪಿಗಾಗಿ ಕಾಯುತ್ತಿದ್ದಾರೆ. ತೂಕ ವ್ಯತ್ಯಾಸದಿಂದ ಪದಕ ಕಳೆದುಕೊಂಡ ಕುಸ್ತಿಪಟುವಿನ ಪರ ಭಾರತದಾದ್ಯಂತ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುವಿನ ಆಹಾರಕ್ರಮದ ಕುರಿತು ತಿಳಿಯೋಣ.
(1 / 7)
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಕುಸ್ತಿಪಟು ವಿನೇಶ್ ಫೋಗಟ್. ಅನರ್ಹಗೊಂಡು ಪದಕ ಕಳೆದುಕೊಂಡರೂ, ಅವರ ಪ್ರದರ್ಶನ ಭಾರತೀಯರ ಮನಗೆದ್ದಿದೆ.
(2 / 7)
ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ತಮ್ಮ ತೂಕ ಕಡಿಮೆ ಮಾಡಿಕೊಂಡಿದ್ದರು. ಸೂಕ್ತ ಆಹಾರ ಕ್ರಮ, ದೇಹದಂಡನೆ ಮೂಲಕ ದೇಹದ ತೂಕವನ್ನು ಕಾಪಾಡಿಕೊಂಡಿದ್ದರು. ಅದಕ್ಕಾಗಿ ಅವರು ನಿಖರ ಆಹಾರವನ್ನು ಸೇವಿಸುತ್ತಿದ್ದರು.
(3 / 7)
ಸಂದರ್ಶನವೊಂದರಲ್ಲಿ ತಮ್ಮ ಆಹಾರಕ್ರಮದ ಕುರಿತು ಮಾತನಾಡಿದ್ದ ವಿನೇಶ್, ಮನೆಯಲ್ಲೇ ಬೆಳೆದ ಸಾವಯವ ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತಾರೆ ಎಂದು ಹೇಳಿದ್ದರು. ಇದೇ ವೇಳೆ ಬಿಸಿ ಚಪಾತಿಯನ್ನು ಮನೆಯದ್ದೇ ಬೆಣ್ಣೆಯೊಂದಿಗೆ ತಿನ್ನುತ್ತಾರೆ. ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತಾರಂತೆ.
(4 / 7)
ಆರಂಭಿಕ ದಿನಗಳಲ್ಲಿ ತಮ್ಮ ಆಹಾರದ ಬಗ್ಗೆ ವಿನೇಶ್‌ಗೆ ಹೆಚ್ಚು ತಿಳಿದಿರಲಿಲ್ಲ, ಹೀಗಾಗಿ ಉಪಾಹಾರವನ್ನು ತಿನ್ನುತ್ತಿರಲಿಲ್ಲ. ಮಧ್ಯಾಹ್ನ ತರಕಾರಿಗಳು ಮತ್ತು ಬ್ರೆಡ್ ತಿಂದರೆ, ರಾತ್ರಿ ಬೇಯಿಸಿದ ಮೊಟ್ಟೆ ತಿನ್ನುತ್ತಿದ್ದಾಗಿ ಖುದ್ದು ವಿನೇಶ್ ಹೇಳಿದರು.
(5 / 7)
ಈಗ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಪಡೆಯಲು ಬೆಳಿಗ್ಗೆ ಉಪಾಹಾರ, ಮೊಟ್ಟೆ, ಓಟ್ಸ್, ಟೊಮೆಟೊ ಮತ್ತು ಕಂದು ಬ್ರೆಡ್ ತಿನ್ನುತ್ತಾರೆ.
(6 / 7)
ಮಧ್ಯಾಹ್ನದ ಊಟಕ್ಕೆ ತಮ್ಮ ದೈಹಿಕ ಅಗತ್ಯಗಳ ಆಧಾರದ ಮೇಲೆ ಪ್ರೋಟೀನ್‌ಗಾಗಿ ಬ್ರೆಡ್ ಮತ್ತು ತರಕಾರಿಗಳು, ಕಡಲೆ, ರಾಜ್ಮಾ, ಮೊಸರು ಮತ್ತು ಸಲಾಡ್ ತಿನ್ನುತ್ತಾರೆ. ರಾತ್ರಿ ಊಟಕ್ಕೆ ಬ್ರೆಡ್, ಮೊಟ್ಟೆ ಮತ್ತು ಸಲಾಡ್ ತಿನ್ನುತ್ತಾರೆ. ಸಂಜೆ ಊಟಕ್ಕೆ ಡ್ರೈಫ್ರುಟ್ಸ್ ಮತ್ತು ಡ್ರೈಫ್ರುಟ್ಸ್ ಪ್ರೋಟೀನ್ ಶೇಕ್ಸ್ ಸೇವಿಸುತ್ತಾರೆ.
ಇತರ ಗ್ಯಾಲರಿಗಳು