ವಿಂಬಲ್ಡನ್, ಯೂರೋ, ಕೋಪಾ-ಅಮೆರಿಕ; ಗೆದ್ದವರಿಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಂಬಲ್ಡನ್, ಯೂರೋ, ಕೋಪಾ-ಅಮೆರಿಕ; ಗೆದ್ದವರಿಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು?

ವಿಂಬಲ್ಡನ್, ಯೂರೋ, ಕೋಪಾ-ಅಮೆರಿಕ; ಗೆದ್ದವರಿಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು?

  • ಕಾರ್ಲೊಸ್ ಅಲ್ಕರಾಜ್ ವಿಂಬಲ್ಡನ್ ಗೆದ್ದರು. ಅತ್ತ ಸ್ಪೇನ್ ತಂಡ ಯೂರೋ ಚಾಂಪಿಯನ್ ಪಟ್ಟಕ್ಕೇರಿತು. ಮತ್ತೊಂದೆಡೆ ಅರ್ಜೆಂಟೀನಾ ತಂಡವು ಕೋಪಾ-ಅಮೆರಿಕಾ ಕಪ್‌ ಗೆದ್ದಿತು. ಈ ಮೂರೂ ಟೂರ್ನಿ ಗೆದ್ದವರು ಭರ್ಜರಿ ಬಹುಮಾನ ಪಡೆದಿದ್ದಾರೆ. ಹಾಗಿದ್ದರೆ ಯಾರು ಎಷ್ಟು ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬುದನ್ನು ನೋಡೋಣ.

ಮೂರು ಮೆಗಾ ಈವೆಂಟ್‌ಗಳ ಫೈನಲ್ಸ್ ಪಂದ್ಯವು ಒಂದೇ ದಿನ ವಿಶ್ವದ ಮೂರು ಭಾಗಗಳಲ್ಲಿ ನಡೆಯಿತು. ಆ ಮೂರು ಫೈನಲ್‌ಗಳ ವಿಜೇತರು ಭರ್ಜರಿ ಬಹುಮಾನ ಹಣವನ್ನು ಪಡೆದಿದ್ದಾರೆ. ಯೂರೋ ಮತ್ತು ಕೋಪಾ ಅಮೆರಿಕ ಪ್ರಶಸ್ತಿ ಮೊತ್ತವನ್ನು ಸಂಪೂರ್ಣ ತಂಡ ಹಂಚಿಕೊಳ್ಳಲಿದೆ. ವಿಂಬಲ್ಡನ್ ಪುರುಷರ ಸಿಂಗಲ್ಸ್ ಗೆದ್ದ ಆಟಗಾರ ಒಬ್ಬರೇ ಆ ಮೊತ್ತ ತಮ್ಮದಾಗಿಸಿಕೊಳ್ಳಲಿದ್ದಾರೆ.
icon

(1 / 5)

ಮೂರು ಮೆಗಾ ಈವೆಂಟ್‌ಗಳ ಫೈನಲ್ಸ್ ಪಂದ್ಯವು ಒಂದೇ ದಿನ ವಿಶ್ವದ ಮೂರು ಭಾಗಗಳಲ್ಲಿ ನಡೆಯಿತು. ಆ ಮೂರು ಫೈನಲ್‌ಗಳ ವಿಜೇತರು ಭರ್ಜರಿ ಬಹುಮಾನ ಹಣವನ್ನು ಪಡೆದಿದ್ದಾರೆ. ಯೂರೋ ಮತ್ತು ಕೋಪಾ ಅಮೆರಿಕ ಪ್ರಶಸ್ತಿ ಮೊತ್ತವನ್ನು ಸಂಪೂರ್ಣ ತಂಡ ಹಂಚಿಕೊಳ್ಳಲಿದೆ. ವಿಂಬಲ್ಡನ್ ಪುರುಷರ ಸಿಂಗಲ್ಸ್ ಗೆದ್ದ ಆಟಗಾರ ಒಬ್ಬರೇ ಆ ಮೊತ್ತ ತಮ್ಮದಾಗಿಸಿಕೊಳ್ಳಲಿದ್ದಾರೆ.

ಸ್ಪೇನ್ ತಂಡ ಯೂರೋವನ್ನು ಗೆದ್ದಿತು? ಇದರೊಂದಿಗೆ ಯುಇಎಫ್ಎ ಬಹುಮಾನದ ಮೊತ್ತದ ಪ್ರಕಾರ ಸ್ಪೇನ್ ಬರೋಬ್ಬರಿ 28.25 ಮಿಲಿಯನ್ ಯುರೋಗಳನ್ನು ತನ್ನದಾಗಿಸಿಕೊಂಡಿದೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 257 ಕೋಟಿ ರೂಪಾಯಿ.
icon

(2 / 5)

ಸ್ಪೇನ್ ತಂಡ ಯೂರೋವನ್ನು ಗೆದ್ದಿತು? ಇದರೊಂದಿಗೆ ಯುಇಎಫ್ಎ ಬಹುಮಾನದ ಮೊತ್ತದ ಪ್ರಕಾರ ಸ್ಪೇನ್ ಬರೋಬ್ಬರಿ 28.25 ಮಿಲಿಯನ್ ಯುರೋಗಳನ್ನು ತನ್ನದಾಗಿಸಿಕೊಂಡಿದೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 257 ಕೋಟಿ ರೂಪಾಯಿ.(AFP)

ಯೂರೋ 2024ರಲ್ಲಿ ಭಾಗವಹಿಸಲು ಸ್ಪೇನ್‌ ತಂಡಕ್ಕೆ 9.25 ಮಿಲಿಯನ್ ಯುರೋಗಳನ್ನು ಪಾವತಿಸಲಾಗಿದೆ. ಗುಂಪಿನ ಪ್ರತಿಯೊಂದು ಪಂದ್ಯವನ್ನು ಗೆದ್ದಿದ್ದಕ್ಕಾಗಿ ಮೂರು ಮಿಲಿಯನ್ ಯುರೋಗಳನ್ನು ಬಹುಮಾನವಾಗಿ ನೀಡಲಾಗಿದೆ. ಯುಇಎಫ್ಎ ಪ್ರಿ-ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ತಲುಪಲು ಕ್ರಮವಾಗಿ 1.5 ಮಿಲಿಯನ್ ಯುರೋ, 2.5 ಮಿಲಿಯನ್ ಯುರೋ ಮತ್ತು 4 ಮಿಲಿಯನ್ ಯುರೋಗಳನ್ನು ನೀಡಲಾಗುತ್ತದೆ. ಸ್ಪೇನ್ ಚಾಂಪಿಯನ್ ಆಗಿ ಇನ್ನೂ ಎಂಟು ಮಿಲಿಯನ್ ಯುರೋಗಳನ್ನು ಪಡೆಯಿತು. ಒಟ್ಟಾರೆಯಾಗಿ, ಭಾರತೀಯ ಕರೆನ್ಸಿಯಲ್ಲಿ ಸುಮಾರು 257 ಕೋಟಿ ರೂಪಾಯಿಯನ್ನು ತಂಡ ಸ್ವೀಕರಿಸಿದೆ.
icon

(3 / 5)

ಯೂರೋ 2024ರಲ್ಲಿ ಭಾಗವಹಿಸಲು ಸ್ಪೇನ್‌ ತಂಡಕ್ಕೆ 9.25 ಮಿಲಿಯನ್ ಯುರೋಗಳನ್ನು ಪಾವತಿಸಲಾಗಿದೆ. ಗುಂಪಿನ ಪ್ರತಿಯೊಂದು ಪಂದ್ಯವನ್ನು ಗೆದ್ದಿದ್ದಕ್ಕಾಗಿ ಮೂರು ಮಿಲಿಯನ್ ಯುರೋಗಳನ್ನು ಬಹುಮಾನವಾಗಿ ನೀಡಲಾಗಿದೆ. ಯುಇಎಫ್ಎ ಪ್ರಿ-ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ತಲುಪಲು ಕ್ರಮವಾಗಿ 1.5 ಮಿಲಿಯನ್ ಯುರೋ, 2.5 ಮಿಲಿಯನ್ ಯುರೋ ಮತ್ತು 4 ಮಿಲಿಯನ್ ಯುರೋಗಳನ್ನು ನೀಡಲಾಗುತ್ತದೆ. ಸ್ಪೇನ್ ಚಾಂಪಿಯನ್ ಆಗಿ ಇನ್ನೂ ಎಂಟು ಮಿಲಿಯನ್ ಯುರೋಗಳನ್ನು ಪಡೆಯಿತು. ಒಟ್ಟಾರೆಯಾಗಿ, ಭಾರತೀಯ ಕರೆನ್ಸಿಯಲ್ಲಿ ಸುಮಾರು 257 ಕೋಟಿ ರೂಪಾಯಿಯನ್ನು ತಂಡ ಸ್ವೀಕರಿಸಿದೆ.(AFP)

ಮತ್ತೊಂದೆಡೆ, ಅರ್ಜೆಂಟೀನಾ ತಂಡ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದಿತು. ಇದರೊಂದಿಗೆ 18 ಮಿಲಿಯನ್ ಡಾಲರ್ ನಹುಮಾನ ಮೊತ್ತ ತನ್ನದಾಗಿಸಿಕೊಂಡಿತು. ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 151 ಕೋಟಿ ರೂಪಾಯಿ. ನಿಯಮಗಳ ಪ್ರಕಾರ, ಕೋಪಾ ಅಮೆರಿಕದಲ್ಲಿ ಭಾಗವಹಿಸಲು ಪ್ರತಿ ತಂಡಕ್ಕೆ ಎರಡು ಮಿಲಿಯನ್ ಡಾಲರ್ ಪಾವತಿಸಲಾಗುತ್ತದೆ. ಫೈನಲ್ ಗೆದ್ದ ಅರ್ಜೆಂಟೀನಾ ಪ್ರತ್ಯೇಕವಾಗಿ 16 ಮಿಲಿಯನ್ ಡಾಲರ್‌ ನೀಡಲಾಗಿದೆ.
icon

(4 / 5)

ಮತ್ತೊಂದೆಡೆ, ಅರ್ಜೆಂಟೀನಾ ತಂಡ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದಿತು. ಇದರೊಂದಿಗೆ 18 ಮಿಲಿಯನ್ ಡಾಲರ್ ನಹುಮಾನ ಮೊತ್ತ ತನ್ನದಾಗಿಸಿಕೊಂಡಿತು. ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 151 ಕೋಟಿ ರೂಪಾಯಿ. ನಿಯಮಗಳ ಪ್ರಕಾರ, ಕೋಪಾ ಅಮೆರಿಕದಲ್ಲಿ ಭಾಗವಹಿಸಲು ಪ್ರತಿ ತಂಡಕ್ಕೆ ಎರಡು ಮಿಲಿಯನ್ ಡಾಲರ್ ಪಾವತಿಸಲಾಗುತ್ತದೆ. ಫೈನಲ್ ಗೆದ್ದ ಅರ್ಜೆಂಟೀನಾ ಪ್ರತ್ಯೇಕವಾಗಿ 16 ಮಿಲಿಯನ್ ಡಾಲರ್‌ ನೀಡಲಾಗಿದೆ.(AFP)

ಮತ್ತೊಂದೆಡೆ, ವಿಂಬಲ್ಡನ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸ್ಪೇನ್‌ನ ಆಟಗಾರ ಕಾರ್ಲೋಸ್ ಅಲ್ಕರಾಜ್ 2,700,000 ಗ್ರೇಟ್ ಬ್ರಿಟನ್ ಪೌಂಡ್ ಪಡೆದಿದ್ದಾರೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು 29.26 ಕೋಟಿ ರೂಪಾಯಿ. ವಿಂಬಲ್ಡನ್ ಚಾಂಪಿಯನ್ ಬಹುಮಾನದ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 14.9 ರಷ್ಟು ಹೆಚ್ಚಾಗಿದೆ.
icon

(5 / 5)

ಮತ್ತೊಂದೆಡೆ, ವಿಂಬಲ್ಡನ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸ್ಪೇನ್‌ನ ಆಟಗಾರ ಕಾರ್ಲೋಸ್ ಅಲ್ಕರಾಜ್ 2,700,000 ಗ್ರೇಟ್ ಬ್ರಿಟನ್ ಪೌಂಡ್ ಪಡೆದಿದ್ದಾರೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು 29.26 ಕೋಟಿ ರೂಪಾಯಿ. ವಿಂಬಲ್ಡನ್ ಚಾಂಪಿಯನ್ ಬಹುಮಾನದ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 14.9 ರಷ್ಟು ಹೆಚ್ಚಾಗಿದೆ.(REUTERS)


ಇತರ ಗ್ಯಾಲರಿಗಳು