ಒಲಿಂಪಿಕ್ಸ್: ಗ್ರೇಟ್ ಬ್ರಿಟನ್ ವಿರುದ್ಧ ಐತಿಹಾಸಿಕ ಜಯ; ಶೂಟೌಟ್‌ನಲ್ಲಿ 4-2 ಅಂತರದಿಂದ ಗೆದ್ದು ಹಾಕಿ ಸೆಮಿಫೈನಲ್ ಲಗ್ಗೆಯಿಟ್ಟ ಭಾರತ
- India vs Great Britain: ಭಾರತದ ಪುರುಷರ ಹಾಕಿ ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ರೋಚಕ ಜಯ ಸಾಧಿಸಿದೆ. ಪಂದ್ಯವು ನಿಗದಿತ ಸಮಯದಲ್ಲಿ 1-1 ಅಂತರದಿಂದ ಸಮಬಲದಲ್ಲಿ ಕೊನೆಗೊಂಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತವು 4-2 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.

(1 / 6)
ಪ್ಯಾರಿಸ್‌ನಲ್ಲಿ ಹಾಕಿ ಪಂದ್ಯವು ರೋಚಕ ಹಂತ ತಲುಪಿತ್ತು. ಬಲಿಷ್ಠ ತಂಡಗಳಾದ ಭಾರತ ಹಾಗೂ ಗ್ರೇಟ್ ಬ್ರಿಟನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದವು. ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿತ್ತು. ಸಮಬಲದ ಹೋರಾಟ ನಡೆಸಿದ ಭಾರತವು, ಪಂದ್ಯವನ್ನು ಟೈ ಮಾಡಿತು.(PTI)
(2 / 6)
ಭಾರತದ ಗೋಲ್ ಮಷಿನ್ ಹಾಗೂ ನಾಯಕ ಹರ್ಮನ್‌ಪ್ರೀತ್ ಸಿಂಗ್, ಪಂದ್ಯಾವಳಿಯಲ್ಲಿ ಏಳನೇ ಗೋಲು ಗಳಿಸಿದರು. ಆರಂಭದಲ್ಲಿ ಭಾರತದ ಲೀಡ್ ಗಳಿಸಿತ್ತು. ಬ್ರಿಟನ್ ಪರ ಲೀ ಮಾರ್ಟನ್ ಗೋಲು ಗಳಿಸಿ ಸಮಬಲ ಸಾಧಿಸಲು ನೆರವಾದರು. ಮೂರನೇ ಕ್ವಾರ್ಟರ್‌ನ ಕೊನೆಯಲ್ಲಿ ಸ್ಕೋರ್ 1-1ರಲ್ಲಿ ಸಮಬಲಗೊಂಡಿತ್ತು.(REUTERS)
(3 / 6)
4ನೇ ಕ್ವಾರ್ಟರ್ ಭಾರಿ ರೋಚಕತೆಗೆ ಕಾರಣವಾಯ್ತು. ಪಂದ್ಯದ ಕೊನೆಯಲ್ಲಿ ಬ್ರಿಟನ್ ಮೇಲಿಂದ ಮೇಲೆ ಗೋಲ್ ಗಳಿಸುವ ಅವಕಾಶ ಗಳಿಸಿತು. ಆದರೆ ಗುರಿ ಸಮೀಪ ಗಟ್ಟಿ ಗೋಡೆಯಂತೆ ನಿಂತಿದ್ದ ಭಾರತದ ಗೋಲ್ ಕೀಪರ್ ಶ್ರೀಜೇಶ್, ಬ್ರಿಟನ್‌ಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ.(REUTERS)
(4 / 6)
ಸಮಬಲಗೊಂಡ ನಂತರ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸಲಾಯ್ತು. ಮೊದಲ ಎರಡು ಅವಕಾಶಗಳಲ್ಲಿ ಉಭಯ ತಂಡಗಳು ಕೂಡಾ ತಲಾ ಎರಡು ಗೋಲು ಬಾರಿಸಿದವು. ಆ ನಂತರದ ಬ್ರಿಟನ್ ಎರಡು ಪ್ರಯತ್ನವನ್ನು ಶ್ರೀಜೇಶ್ ವಿಫಲವಾಗಿಸಿದರು. ಆದರೆ ಭಾರತ ಯಶಸ್ವಿಯಾಯ್ತು.(REUTERS)
(5 / 6)
ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾದವರು ಶ್ರೀಜೇಶ್. ಅನುಭವಿ ಗೋಲ್‌ಕೀಪರ್ ಒಲಿಂಪಿಕ್ಸ್ ಬಳಿಕ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಲಿದ್ದಾರೆ. ಗೋಲ್ ಬಾಕ್ಸ್ ಬಳಿ ಗೋಡೆಯಂತೆ ನಿಂತು ಬ್ರಿಟನ್ ಗೋಲು ಅವಕಾಶಗಳಿಗೆ ತಡೆಯೊಡ್ಡಿದ ಶರೀಜೇಶ, ಭಾರತದ ಗೆಲುವಿನ ರೂವಾರಿಯಾದರು.(REUTERS)
ಇತರ ಗ್ಯಾಲರಿಗಳು