ಒಲಿಂಪಿಕ್ಸ್: ಸೆಮೀಸ್‌ನಲ್ಲಿ ಲಕ್ಷ್ಯ ಸೇನ್‌ಗೆ ಸೋಲು, ಕಂಚಿನ ಪದಕದ ಆಸೆ ಜೀವಂತ; ಲವ್ಲಿನಾ ಬೊರ್ಗೊಹೈನ್‌ಗೆ ನಿರಾಶೆ
- ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪದಕ ಭರವಸೆಯ ಆಟಗಾರ ಲಕ್ಷ್ಯ ಸೇನ್ ಸೋಲು ಕಂಡಿದ್ದಾರೆ. ವಿಶ್ವದ 2ನೇ ಶ್ರೇಯಾಂಕಿತ ಆಟಗಾರನ ವಿರುದ್ಧ ಸೇನ್ ಸೋತರು. ಆದರೆ ಯುವ ಆಟಗಾರನಿಗೆ ಪದಕ ಗೆಲ್ಲುವ ಅವಕಾಶ ಇನ್ನೂ ಇದೆ. ಲಕ್ಷ್ಯ ಮುಂದೆ ಕಂಚಿನ ಪದಕ ಪಂದ್ಯದಲ್ಲಿ ಆಡಲಿದ್ದಾರೆ.

(1 / 5)
ಲಕ್ಷ್ಯ ಸೇನ್ ಸೆಮಿಫೈನಲ್ ಪಂದ್ಯದಲ್ಲಿ ಸೋತರೂ ಇತಿಹಾಸ ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಸೋಮವಾರ ಮಲೇಷ್ಯಾದ ಲಿ ಜಿಯಾ ವಿರುದ್ಧ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಅವರು ಸೆಣಸಲಿದ್ದಾರೆ. ಒಂದು ವೇಳೆ ಅಲ್ಲಿ ಗೆದ್ದರೆ, ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.(PTI)
(2 / 5)
ಸೆಮೀಸ್‌ನಲ್ಲಿ ಲಕ್ಷ್ಯ ಸೇನ್ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ಸೋತರು. ಭಾರತದ ಶಟ್ಲರ್ 20-22 ಮತ್ತು 14-21ರಿಂದ ಮುಗ್ಗರಿಸಿದರು.(PTI)
(3 / 5)
ಮೊದಲ ಸೆಟ್‌ನಲ್ಲಿ ಲಕ್ಷ್ಯ ಗೆಲ್ಲುವ ಹಂತದಲ್ಲಿದ್ದರು. ಮುನ್ನಡೆ ಕಾಯ್ದಕೊಂಡಿದ್ದ ಲಕ್ಷ್ಯ ಕೊನೆಯ ಹಂತದಲ್ಲಿ ಸತತ ಪಾಯಿಂಟ್ ಗಳಿಸುವಲ್ಲಿ ವಿಫಲರಾದರು. ಸತತ ಅಂಕ ಗಳಿಸಿದ ಎದುರಾಳಿ 20-22 ಅಂತರದಿಂದ ಗೆದ್ದರು.
(4 / 5)
ಕಂಚಿನ ಪದಕ ಪಂದ್ಯವು ನಾಳೆ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಪಂದ್ಯದಲ್ಲಿ ಲಕ್ಷ್ಯ ಅವರು ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಆಡಲಿದ್ದಾರೆ.
ಇತರ ಗ್ಯಾಲರಿಗಳು