ಭಾರತದ ವಿರುದ್ಧ ಶತಕ ಸಿಡಿಸಿ ಸ್ಟೀವ್ ವಾ, ಕೇನ್ ವಿಲಿಯಮ್ಸನ್ ದಾಖಲೆ ಮುರಿದ ಸ್ಟೀವ್ ಸ್ಮಿತ್
- Steve Smith Test Century: ಭಾರತ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ಸ್ಟೀವ್ ಸ್ಮಿತ್ ಅವರು ಕೇನ್ ವಿಲಿಯಮ್ಸನ್ ಮತ್ತು ಸ್ಮಿತ್ ವಾ ದಾಖಲೆಯನ್ನು ಮುರಿದಿದ್ದಾರೆ.
- Steve Smith Test Century: ಭಾರತ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ಸ್ಟೀವ್ ಸ್ಮಿತ್ ಅವರು ಕೇನ್ ವಿಲಿಯಮ್ಸನ್ ಮತ್ತು ಸ್ಮಿತ್ ವಾ ದಾಖಲೆಯನ್ನು ಮುರಿದಿದ್ದಾರೆ.
(1 / 5)
ಟೀಮ್ ಇಂಡಿಯಾ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಈ ಸೆಂಚುರಿಯೊಂದಿಗೆ ದಿಗ್ಗಜ ಆಟಗಾರರಾದ ಸ್ಟೀವ್ ವಾ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಜೊತೆಗೆ ಅಲಸ್ಟೇರ್ ಕುಕ್ ದಾಖಲೆ ಸರಿಗಟ್ಟಿದ್ದಾರೆ.
(2 / 5)
185 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ ತಮ್ಮ 33ನೇ ಟೆಸ್ಟ್ ಶತಕ ಪೂರೈಸಿದ ಸ್ಟೀವ್ ಸ್ಮಿತ್ ಅವರು 190 ಎಸೆತಗಳಲ್ಲಿ 101 ರನ್ ಗಳಿಸಿ ಬುಮ್ರಾ ಬೌಲಿಂಗ್ನಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
(3 / 5)
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 33ನೇ ಸೆಂಚುರಿ ಬಾರಿಸಿದ ಸ್ಮಿತ್ ಸ್ಮಿತ್ ಅವರು ಸ್ಟೀವ್ ವಾ (32) ಮತ್ತು ಕೇನ್ ವಿಲಿಯಮ್ಸನ್ (32) ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ, ಇಂಗ್ಲೆಂಡ್ ದಿಗ್ಗಜ ಆಟಗಾರ ಅಲಸ್ಟೇರ್ ಕುಕ್ (33) ಅವರ ದಾಖಲೆ ಸರಿಗಟ್ಟಿ ಈ ಪಟ್ಟಿಯಲ್ಲಿ ಜಂಟಿ 11ನೇ ಸ್ಥಾನಕ್ಕೆ ಏರಿದ್ದಾರೆ.
(4 / 5)
112 ಟೆಸ್ಟ್ಗಳ 199 ಇನ್ನಿಂಗ್ಸ್ಗಳಲ್ಲಿ 33ನೇ ಶತಕವನ್ನು ಬಾರಿಸಿರುವ ಸ್ಮಿತ್ ಅವರು ಸ್ಟೀವ್ ವಾ ದಾಖಲೆ ಮುರಿದು ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಿಕಿ ಪಾಂಟಿಂಗ್ ಅವರು 41 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಸ್ಮಿತ್, ಸ್ಟೀವ್ ವಾ ಬಳಿಕ ಮ್ಯಾಥ್ಯೂ ಹೇಡನ್ (30) ನಾಲ್ಕನೇ ಸ್ಥಾನದಲ್ಲಿದ್ದಾರೆ. ಡಾನ್ ಬ್ರಾಡ್ಮನ್ (29) ಐದನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು