ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲಿನ ಜೊತೆಗೆ ಐದು ಮುಜುಗರದ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲಿನ ಜೊತೆಗೆ ಐದು ಮುಜುಗರದ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲಿನ ಜೊತೆಗೆ ಐದು ಮುಜುಗರದ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

  • India vs New Zealand 3rd Test: ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 25 ರನ್​ಗಳ ಹೀನಾಯ ಸೋಲಿಗೆ ಶರಣಾಗಿದೆ. ಈ ಸೋಲಿನೊಂದಿಗೆ ಭಾರತ ತಂಡವು ಐದು ಮುಜುಗರದ ದಾಖಲೆಗಳನ್ನು ನಿರ್ಮಿಸಿದೆ.

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತ 147 ರನ್​​ಗಳ ಅಲ್ಪ ಗುರಿ ಬೆನ್ನಟ್ಟಲು ವಿಫಲವಾಯಿತು. 4ನೇ ಇನ್ನಿಂಗ್ಸ್​​ನಲ್ಲಿ ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 121 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 3-0 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತು.
icon

(1 / 7)

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತ 147 ರನ್​​ಗಳ ಅಲ್ಪ ಗುರಿ ಬೆನ್ನಟ್ಟಲು ವಿಫಲವಾಯಿತು. 4ನೇ ಇನ್ನಿಂಗ್ಸ್​​ನಲ್ಲಿ ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 121 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 3-0 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತು.(PTI)

ನ್ಯೂಜಿಲೆಂಡ್ ಎದುರು ಸರಣಿ ಸೋತ ಬಳಿಕ ಟೀಮ್ ಇಂಡಿಯಾ 5 ಮುಜುಗರದ ದಾಖಲೆಗಳನ್ನು ಬರೆದಿದೆ. ಅವುಗಳ ಪಟ್ಟಿ ಇಲ್ಲಿದೆ.
icon

(2 / 7)

ನ್ಯೂಜಿಲೆಂಡ್ ಎದುರು ಸರಣಿ ಸೋತ ಬಳಿಕ ಟೀಮ್ ಇಂಡಿಯಾ 5 ಮುಜುಗರದ ದಾಖಲೆಗಳನ್ನು ಬರೆದಿದೆ. ಅವುಗಳ ಪಟ್ಟಿ ಇಲ್ಲಿದೆ.(PTI)

92 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡವು ತವರಿನಲ್ಲಿ 3 ಪಂದ್ಯಗಳ ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಸರಣಿಯಲ್ಲಿ ವೈಟ್​ವಾಶ್ ಮುಖಭಂಗಕ್ಕೆ ಒಳಗಾಗಿದೆ. 92 ವರ್ಷಗಳ ಇತಿಹಾಸದಲ್ಲಿ ಇದು ಹಿಂದೆಂದೂ ಸಂಭವಿಸಿಲ್ಲ. ಈ ಸೋಲಿನೊಂದಿಗೆ ಟೀಮ್ ಇಂಡಿಯಾ ಐದು ಮುಜುಗರದ ದಾಖಲೆಗಳನ್ನು ಬರೆದಿದೆ.
icon

(3 / 7)

92 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡವು ತವರಿನಲ್ಲಿ 3 ಪಂದ್ಯಗಳ ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಸರಣಿಯಲ್ಲಿ ವೈಟ್​ವಾಶ್ ಮುಖಭಂಗಕ್ಕೆ ಒಳಗಾಗಿದೆ. 92 ವರ್ಷಗಳ ಇತಿಹಾಸದಲ್ಲಿ ಇದು ಹಿಂದೆಂದೂ ಸಂಭವಿಸಿಲ್ಲ. ಈ ಸೋಲಿನೊಂದಿಗೆ ಟೀಮ್ ಇಂಡಿಯಾ ಐದು ಮುಜುಗರದ ದಾಖಲೆಗಳನ್ನು ಬರೆದಿದೆ.(PTI)

ಗೆಲ್ಲಲು 147 ರನ್​​ಗಳ ಸಣ್ಣ ಗುರಿ ಬೆನ್ನಟ್ಟಲು ವಿಫಲವಾದ ಭಾರತ, ಮತ್ತೊಂದು ಕೆಟ್ಟ ದಾಖಲೆ ಬರೆದಿದೆ. ತವರಿನಲ್ಲಿ ಟೆಸ್ಟ್ ಇತಿಹಾಸದಲ್ಲಿ 4ನೇ ಇನ್ನಿಂಗ್ಸ್​ನ ಅತ್ಯಂತ ಚಿಕ್ಕ ಗುರಿಯಾಗಿತ್ತು. ಆದರೂ ಬೆನ್ನಟ್ಟಲು ಸಾಧ್ಯವಾಗದೇ ಇರುವುದು ಅಚ್ಚರಿ ಮೂಡಿಸಿದೆ.
icon

(4 / 7)

ಗೆಲ್ಲಲು 147 ರನ್​​ಗಳ ಸಣ್ಣ ಗುರಿ ಬೆನ್ನಟ್ಟಲು ವಿಫಲವಾದ ಭಾರತ, ಮತ್ತೊಂದು ಕೆಟ್ಟ ದಾಖಲೆ ಬರೆದಿದೆ. ತವರಿನಲ್ಲಿ ಟೆಸ್ಟ್ ಇತಿಹಾಸದಲ್ಲಿ 4ನೇ ಇನ್ನಿಂಗ್ಸ್​ನ ಅತ್ಯಂತ ಚಿಕ್ಕ ಗುರಿಯಾಗಿತ್ತು. ಆದರೂ ಬೆನ್ನಟ್ಟಲು ಸಾಧ್ಯವಾಗದೇ ಇರುವುದು ಅಚ್ಚರಿ ಮೂಡಿಸಿದೆ.(AFP)

ನ್ಯೂಜಿಲೆಂಡ್ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಸತತ 3 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಕಿವೀಸ್ ತನ್ನ ತವರಿನ ಹೊರಗೆ ಕಳಪೆ ದಾಖಲೆ ಹೊಂದಿತ್ತು. ಇದೀಗ ಭಾರತದ ನೆಲದಲ್ಲಿ ಭಾರತ ತಂಡವನ್ನು ಸೋಲಿಸಿದ ನ್ಯೂಜಿಲೆಂಡ್, ಐತಿಹಾಸಿಕ ದಾಖಲೆ ಬರೆದಿದೆ. ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಸತತ ಮೂರು ಗೆದ್ದಿದೆ.
icon

(5 / 7)

ನ್ಯೂಜಿಲೆಂಡ್ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಸತತ 3 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಕಿವೀಸ್ ತನ್ನ ತವರಿನ ಹೊರಗೆ ಕಳಪೆ ದಾಖಲೆ ಹೊಂದಿತ್ತು. ಇದೀಗ ಭಾರತದ ನೆಲದಲ್ಲಿ ಭಾರತ ತಂಡವನ್ನು ಸೋಲಿಸಿದ ನ್ಯೂಜಿಲೆಂಡ್, ಐತಿಹಾಸಿಕ ದಾಖಲೆ ಬರೆದಿದೆ. ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಸತತ ಮೂರು ಗೆದ್ದಿದೆ.(PTI)

ನ್ಯೂಜಿಲೆಂಡ್ ತನ್ನ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸರಣಿಯಲ್ಲಿ 3 ಪಂದ್ಯಗಳನ್ನು ಗೆದ್ದಿದೆ. ಬೆಂಗಳೂರಿನಲ್ಲಿ ಭಾರತ ತಂಡವನ್ನು ಸೋಲಿಸಿದ ನಂತರ, ನ್ಯೂಜಿಲೆಂಡ್ ಪುಣೆ ಮತ್ತು ಮುಂಬೈನಲ್ಲಿಯೂ ಗೆದ್ದಿದೆ. ಕಿವೀಸ್ ತಂಡವು ಮೊದಲ ಬಾರಿಗೆ ಸರಣಿಯಲ್ಲಿ 3 ಟೆಸ್ಟ್ ಗೆದ್ದಿದೆ.
icon

(6 / 7)

ನ್ಯೂಜಿಲೆಂಡ್ ತನ್ನ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸರಣಿಯಲ್ಲಿ 3 ಪಂದ್ಯಗಳನ್ನು ಗೆದ್ದಿದೆ. ಬೆಂಗಳೂರಿನಲ್ಲಿ ಭಾರತ ತಂಡವನ್ನು ಸೋಲಿಸಿದ ನಂತರ, ನ್ಯೂಜಿಲೆಂಡ್ ಪುಣೆ ಮತ್ತು ಮುಂಬೈನಲ್ಲಿಯೂ ಗೆದ್ದಿದೆ. ಕಿವೀಸ್ ತಂಡವು ಮೊದಲ ಬಾರಿಗೆ ಸರಣಿಯಲ್ಲಿ 3 ಟೆಸ್ಟ್ ಗೆದ್ದಿದೆ.(AFP)

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಶುರುವಾದಾಗಿನಿಂದ ಭಾರತ ತಂಡವು ಸರಣಿ ಸೋತಿರಲಿಲ್ಲ, ಆದರೆ ಇದೀಗ ಸರಣಿಯನ್ನು ಕಳೆದುಕೊಂಡಿದೆ. ಈ ಸೋಲು ಫೈನಲ್ ತಲುಪುವ ಭಾರತದ ಭರವಸೆಯನ್ನು ಬಹುತೇಕ ಕೊನೆಗೊಳಿಸಿದೆ.
icon

(7 / 7)

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಶುರುವಾದಾಗಿನಿಂದ ಭಾರತ ತಂಡವು ಸರಣಿ ಸೋತಿರಲಿಲ್ಲ, ಆದರೆ ಇದೀಗ ಸರಣಿಯನ್ನು ಕಳೆದುಕೊಂಡಿದೆ. ಈ ಸೋಲು ಫೈನಲ್ ತಲುಪುವ ಭಾರತದ ಭರವಸೆಯನ್ನು ಬಹುತೇಕ ಕೊನೆಗೊಳಿಸಿದೆ.(PTI)


ಇತರ ಗ್ಯಾಲರಿಗಳು