ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಹಣ ಗಳಿಸಲು ಬಯಸುವವರಿಗೆ ಅಮೂಲ್ಯ 5 ಸಲಹೆಗಳು; ಸೋಷಿಯಲ್‌ ಮೀಡಿಯಾದಲ್ಲಿ ಝಣ ಝಣ ಕಾಂಚಾಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಹಣ ಗಳಿಸಲು ಬಯಸುವವರಿಗೆ ಅಮೂಲ್ಯ 5 ಸಲಹೆಗಳು; ಸೋಷಿಯಲ್‌ ಮೀಡಿಯಾದಲ್ಲಿ ಝಣ ಝಣ ಕಾಂಚಾಣ

ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಹಣ ಗಳಿಸಲು ಬಯಸುವವರಿಗೆ ಅಮೂಲ್ಯ 5 ಸಲಹೆಗಳು; ಸೋಷಿಯಲ್‌ ಮೀಡಿಯಾದಲ್ಲಿ ಝಣ ಝಣ ಕಾಂಚಾಣ

  • ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್‌ ಇದ್ದರೆ ಪ್ರಮೋಷನ್‌ ಇತ್ಯಾದಿಗಳಿಂದ ಆದಾಯ ದೊರಕುತ್ತದೆ. ಇದೇ ರೀತಿ ರೀಲ್ಸ್‌ ಮೂಲಕ ಕಂಟೆಂಟ್‌ ಕ್ರಿಯೆಟರ್‌ಗಳಾಗಲು ಬಯಸುವವರಿಗೆ ಒಂದಿಷ್ಟು ಟಿಪ್ಸ್‌ ಇಲ್ಲಿದೆ.

ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್‌ ಇದ್ದರೆ ಪ್ರಮೋಷನ್‌ ಇತ್ಯಾದಿಗಳಿಂದ ಆದಾಯ ದೊರಕುತ್ತದೆ.  ನೀವು ಗಮನಿಸಿರಬಹುದು, ಇಂತಹ ಇನ್‌ಫ್ಲೂಯೆನ್ಸರ್‌ಗಳ ಖಾತೆಯಲ್ಲಿ ಡಿಎಂ ಪಾರ್‌ ಪ್ರಮೋಷನ್‌ ಇತ್ಯಾದಿ ಸಂದೇಶ ಇರುತ್ತದೆ. ಕೆಲವರು ಈಗ ರೀಲ್ಸ್‌ ಅನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಉದ್ಯೋಗದಲ್ಲಿದ್ದುಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೀಲ್ಸ್‌ ಮೂಲಕ ಹಣ ಗಳಿಸಬೇಕೆಂದರೆ ನೀವು ರೀಲ್ಸ್‌ ಜಗತ್ತಿನಲ್ಲಿ ಜನಪ್ರಿಯತೆ ಪಡೆಯಬೇಕು. 
icon

(1 / 7)

ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್‌ ಇದ್ದರೆ ಪ್ರಮೋಷನ್‌ ಇತ್ಯಾದಿಗಳಿಂದ ಆದಾಯ ದೊರಕುತ್ತದೆ.  ನೀವು ಗಮನಿಸಿರಬಹುದು, ಇಂತಹ ಇನ್‌ಫ್ಲೂಯೆನ್ಸರ್‌ಗಳ ಖಾತೆಯಲ್ಲಿ ಡಿಎಂ ಪಾರ್‌ ಪ್ರಮೋಷನ್‌ ಇತ್ಯಾದಿ ಸಂದೇಶ ಇರುತ್ತದೆ. ಕೆಲವರು ಈಗ ರೀಲ್ಸ್‌ ಅನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಉದ್ಯೋಗದಲ್ಲಿದ್ದುಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೀಲ್ಸ್‌ ಮೂಲಕ ಹಣ ಗಳಿಸಬೇಕೆಂದರೆ ನೀವು ರೀಲ್ಸ್‌ ಜಗತ್ತಿನಲ್ಲಿ ಜನಪ್ರಿಯತೆ ಪಡೆಯಬೇಕು. (Pixabay)

ಕಂಟೆಂಟ್‌ ವಿಷಯ ಮತ್ತು ಐಡಿಯಾ: ನಿಮ್ಮ ವೀಕ್ಷಕರಿಗೆ ನೀಡುವ ವಿಡಿಯೋದಲ್ಲಿ ಏನು ಕಂಟೆಂಟ್‌ ಇರಬೇಕು ಎಂದು ಯೋಚಿಸಿ. ಆ ಕಂಟೆಂಟ್‌ ನೀಡಲು ನಿಮ್ಮ ಸಾಮರ್ಥ್ಯ, ಆಸಕ್ತಿ ಪರಿಶೀಲಿಸಿ. ಪ್ರತಿಯೊಬ್ಬರಲ್ಲಿಯೂ ವಿಶೇಷ ಪ್ರತಿಭೆ ಇರುತ್ತದೆ. ನಿಮ್ಮಲ್ಲಿರುವ ಅಂತಹ ಪ್ರತಿಭೆಯನ್ನು ಹುಡುಕಿ. ಅಂದರೆ, ಸ್ಪೂರ್ತಿದಾಯಕ ವಿಡಿಯೋ ಮಾಡುವಿರ? ಹಾಸ್ಯ ವಿಡಿಯೋ ಮಾಡುವಿರಾ? ಯುವ ತಲೆಮಾರಿಗೆ ಮಾರ್ಗದರ್ಶಿ ವಿಡಿಯೋ ಮಾಡುವಿರಾ? ಯೋಚಿಸಿ. 
icon

(2 / 7)

ಕಂಟೆಂಟ್‌ ವಿಷಯ ಮತ್ತು ಐಡಿಯಾ: ನಿಮ್ಮ ವೀಕ್ಷಕರಿಗೆ ನೀಡುವ ವಿಡಿಯೋದಲ್ಲಿ ಏನು ಕಂಟೆಂಟ್‌ ಇರಬೇಕು ಎಂದು ಯೋಚಿಸಿ. ಆ ಕಂಟೆಂಟ್‌ ನೀಡಲು ನಿಮ್ಮ ಸಾಮರ್ಥ್ಯ, ಆಸಕ್ತಿ ಪರಿಶೀಲಿಸಿ. ಪ್ರತಿಯೊಬ್ಬರಲ್ಲಿಯೂ ವಿಶೇಷ ಪ್ರತಿಭೆ ಇರುತ್ತದೆ. ನಿಮ್ಮಲ್ಲಿರುವ ಅಂತಹ ಪ್ರತಿಭೆಯನ್ನು ಹುಡುಕಿ. ಅಂದರೆ, ಸ್ಪೂರ್ತಿದಾಯಕ ವಿಡಿಯೋ ಮಾಡುವಿರ? ಹಾಸ್ಯ ವಿಡಿಯೋ ಮಾಡುವಿರಾ? ಯುವ ತಲೆಮಾರಿಗೆ ಮಾರ್ಗದರ್ಶಿ ವಿಡಿಯೋ ಮಾಡುವಿರಾ? ಯೋಚಿಸಿ. (Pixabay)

ಹೀಗೆ ಯಾವ ಕಂಟೆಂಟ್‌ ವಿಷಯ ಮೂಲಕ ಜನಪ್ರಿಯತೆ ಪಡೆಯಬಹುದು ಎನ್ನುವ ಕುರಿತು ಸ್ಪಷ್ಟತೆ ಇರಲಿ. ನಿಮಗೆ ಯಾವುದರಲ್ಲಿ ಹೆಚ್ಚು ವಿಡಿಯೋ ಕಂಟೆಂಟ್‌ ನೀಡಬಹುದು ಎಂದೆನಿಸುತ್ತದೆಯೋ ಅದರಲ್ಲಿ ಮುಂದುವರೆಯಿರಿ. ನಿಮ್ಮ ಅಕೌಂಟ್‌ ಮಾಹಿತಿಯನ್ನು ರೀಲ್ಸ್‌ ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಪ್ರಮೋಟ್‌ ಮಾಡಿ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸ್ಪಾನ್ಸರ್‌ಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ. 
icon

(3 / 7)

ಹೀಗೆ ಯಾವ ಕಂಟೆಂಟ್‌ ವಿಷಯ ಮೂಲಕ ಜನಪ್ರಿಯತೆ ಪಡೆಯಬಹುದು ಎನ್ನುವ ಕುರಿತು ಸ್ಪಷ್ಟತೆ ಇರಲಿ. ನಿಮಗೆ ಯಾವುದರಲ್ಲಿ ಹೆಚ್ಚು ವಿಡಿಯೋ ಕಂಟೆಂಟ್‌ ನೀಡಬಹುದು ಎಂದೆನಿಸುತ್ತದೆಯೋ ಅದರಲ್ಲಿ ಮುಂದುವರೆಯಿರಿ. ನಿಮ್ಮ ಅಕೌಂಟ್‌ ಮಾಹಿತಿಯನ್ನು ರೀಲ್ಸ್‌ ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಪ್ರಮೋಟ್‌ ಮಾಡಿ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸ್ಪಾನ್ಸರ್‌ಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ. (Pixabay)

ಕನೆಕ್ಟ್‌ ಆಗಿ, ಸಹಭಾಗಿತ್ವ ಮಾಡಿಕೊಳ್ಳಿ:  ಎಲ್ಲಾ ವಯೋಮಾನದ ಕ್ರಿಯೆಟರ್‌ಗಳ ಜತೆ ಕನೆಕ್ಟ್‌ ಆಗಿ ಮತ್ತು ಸಹಭಾಗಿತ್ವ ಮಾಡಿಕೊಳ್ಳಿ. ಇತರರ ರೀಲ್ಸ್‌ಗೆ ಕಾಮೆಂಟ್‌ ಮಾಡುತ್ತ, ಸಹಭಾಗಿತ್ವ ಮಾಡುತ್ತ, ಜಂಟಿ ಪೋಸ್ಟ್‌ಗಳನ್ನು (ನಿಮ್ಮ ವಿಡಿಯೋದಲ್ಲಿ ಇತರೆ ಕ್ರಿಯೆಟರ್‌ಗಳೂ ಭಾಗಿಯಾಗುವಂತಹ) ಮಾಡಿ. ಇದರಿಂದ ನಿಮ್ಮ ಬಳಗ ವಿಸ್ತರಿಸಿಕೊಳ್ಳಲು, ಫಾಲೋವರ್ಸ್‌ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. 
icon

(4 / 7)

ಕನೆಕ್ಟ್‌ ಆಗಿ, ಸಹಭಾಗಿತ್ವ ಮಾಡಿಕೊಳ್ಳಿ:  ಎಲ್ಲಾ ವಯೋಮಾನದ ಕ್ರಿಯೆಟರ್‌ಗಳ ಜತೆ ಕನೆಕ್ಟ್‌ ಆಗಿ ಮತ್ತು ಸಹಭಾಗಿತ್ವ ಮಾಡಿಕೊಳ್ಳಿ. ಇತರರ ರೀಲ್ಸ್‌ಗೆ ಕಾಮೆಂಟ್‌ ಮಾಡುತ್ತ, ಸಹಭಾಗಿತ್ವ ಮಾಡುತ್ತ, ಜಂಟಿ ಪೋಸ್ಟ್‌ಗಳನ್ನು (ನಿಮ್ಮ ವಿಡಿಯೋದಲ್ಲಿ ಇತರೆ ಕ್ರಿಯೆಟರ್‌ಗಳೂ ಭಾಗಿಯಾಗುವಂತಹ) ಮಾಡಿ. ಇದರಿಂದ ನಿಮ್ಮ ಬಳಗ ವಿಸ್ತರಿಸಿಕೊಳ್ಳಲು, ಫಾಲೋವರ್ಸ್‌ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. (Pixabay)

ಪ್ರಾಯೋಜಕರ ಗಮನ ಸೆಳೆಯಿರಿ: ನಿಮಗೆ ನಿಜಕ್ಕೂ ಇಷ್ಟವಾದ ವಸ್ತುಗಳನ್ನು, ಉತ್ಪನ್ನಗಳನ್ನು ವಿಡಿಯೋದಲ್ಲಿ ತೋರಿಸಿ. ಆಯಾ ಬ್ರ್ಯಾಂಡ್‌ಗಳಿಗೆ ಟ್ಯಾಗ್‌ ಮಾಡಿ. ಇದರಿಂದ ಆ ಕಂಪನಿ ಮುಂದಿನ ದಿನಗಳಲ್ಲಿ ಪ್ರಮೋಷನ್‌ಗಾಗಿ ನಿಮ್ಮನ್ನು ಸಂಪರ್ಕಿಸಬಹುದು. ವಿವಿಧ ಬ್ರ್ಯಾಂಡ್‌ಗಳಿಗೆ ಇಮೇಲ್‌, ಸಂದೇಶಗಳನ್ನು ಕಳುಹಿಸಿ. ಈ ರೀತಿ ಸಂದೇಶಗಳನ್ನು ಕಳುಹಿಸುವಾಗ ನಿಮ್ಮ ವಿಶೇಷ ಲಕ್ಷಣಗಳು, ಟ್ಯಾಲೆಂಟ್‌ ಬಗ್ಗೆ ತಿಳಿಸಿ. ಇದರಿಂದ ಅವರು ನಿಮ್ಮನ್ನು ಸೋಷಿಯಲ್‌ ಮೀಡಿಯಾ ರಾಯಭಾರಿಯಾಗಿಯೂ ಮಾಡಿಕೊಳ್ಳಬಹುದು. 
icon

(5 / 7)

ಪ್ರಾಯೋಜಕರ ಗಮನ ಸೆಳೆಯಿರಿ: ನಿಮಗೆ ನಿಜಕ್ಕೂ ಇಷ್ಟವಾದ ವಸ್ತುಗಳನ್ನು, ಉತ್ಪನ್ನಗಳನ್ನು ವಿಡಿಯೋದಲ್ಲಿ ತೋರಿಸಿ. ಆಯಾ ಬ್ರ್ಯಾಂಡ್‌ಗಳಿಗೆ ಟ್ಯಾಗ್‌ ಮಾಡಿ. ಇದರಿಂದ ಆ ಕಂಪನಿ ಮುಂದಿನ ದಿನಗಳಲ್ಲಿ ಪ್ರಮೋಷನ್‌ಗಾಗಿ ನಿಮ್ಮನ್ನು ಸಂಪರ್ಕಿಸಬಹುದು. ವಿವಿಧ ಬ್ರ್ಯಾಂಡ್‌ಗಳಿಗೆ ಇಮೇಲ್‌, ಸಂದೇಶಗಳನ್ನು ಕಳುಹಿಸಿ. ಈ ರೀತಿ ಸಂದೇಶಗಳನ್ನು ಕಳುಹಿಸುವಾಗ ನಿಮ್ಮ ವಿಶೇಷ ಲಕ್ಷಣಗಳು, ಟ್ಯಾಲೆಂಟ್‌ ಬಗ್ಗೆ ತಿಳಿಸಿ. ಇದರಿಂದ ಅವರು ನಿಮ್ಮನ್ನು ಸೋಷಿಯಲ್‌ ಮೀಡಿಯಾ ರಾಯಭಾರಿಯಾಗಿಯೂ ಮಾಡಿಕೊಳ್ಳಬಹುದು. (Pixabay)

ಫಸ್ಟ್‌ ಇಂಪ್ರೆಷನ್: ನಿಮಗೆ ಮೊದಲ ಬಾರಿಗೆ ಯಾವುದಾದರೂ ಪಾಟ್ನರ್‌ಷಿಪ್‌ ದೊರಕಿದಾಗ ಅದನ್ನು ಅದ್ಭುತವಾಗಿ ರಚಿಸಿ. ಈ ಪಾಟ್ನರ್‌ಶಿಪ್‌ ಮೂಲಕ ನಿಮಗೆ ಹಣ ದೊರಕಬಹುದು ಅಥವಾ ಉಚಿತ ಉತ್ಪನ್ನಗಳು ದೊರಕಬಹುದು. ಬೆಸ್ಟ್‌ ಎನಿಸುವಂತಹ ವಿಡಿಯೋ ನೀಡಿ. ಯಾರಿಗಾದರೂ ಯಾವುದಾದರೂ ಕಂಪನಿ ಸ್ಪಾನ್ಸರ್‌ಷಿಪ್‌ ನೀಡುವಾಗ ಆ ಕಂಪನಿಯು ನಿಮ್ಮ ಹಿಂದಿನ ಸ್ಪಾನ್ಸರ್‌ಷಿಪ್‌ ವಿಡಿಯೋಗಳ ಗುಣಮಟ್ಟವನ್ನು ಪರಿಶೀಲಿಸುತ್ತದೆ. 
icon

(6 / 7)

ಫಸ್ಟ್‌ ಇಂಪ್ರೆಷನ್: ನಿಮಗೆ ಮೊದಲ ಬಾರಿಗೆ ಯಾವುದಾದರೂ ಪಾಟ್ನರ್‌ಷಿಪ್‌ ದೊರಕಿದಾಗ ಅದನ್ನು ಅದ್ಭುತವಾಗಿ ರಚಿಸಿ. ಈ ಪಾಟ್ನರ್‌ಶಿಪ್‌ ಮೂಲಕ ನಿಮಗೆ ಹಣ ದೊರಕಬಹುದು ಅಥವಾ ಉಚಿತ ಉತ್ಪನ್ನಗಳು ದೊರಕಬಹುದು. ಬೆಸ್ಟ್‌ ಎನಿಸುವಂತಹ ವಿಡಿಯೋ ನೀಡಿ. ಯಾರಿಗಾದರೂ ಯಾವುದಾದರೂ ಕಂಪನಿ ಸ್ಪಾನ್ಸರ್‌ಷಿಪ್‌ ನೀಡುವಾಗ ಆ ಕಂಪನಿಯು ನಿಮ್ಮ ಹಿಂದಿನ ಸ್ಪಾನ್ಸರ್‌ಷಿಪ್‌ ವಿಡಿಯೋಗಳ ಗುಣಮಟ್ಟವನ್ನು ಪರಿಶೀಲಿಸುತ್ತದೆ. (Pixabay)

ವಂಚಕರಿಂದ ದೂರವಿರಿ: ಈ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಲು ಬಯಸುವವರನ್ನು ವಂಚಿಸುವ ಜಾಲವು ಸಕ್ರಿಯವಾಗಿರುತ್ತದೆ. ವಿವಿಧ ಕಂಪನಿಗಳ ಹೆಸರಿನಲ್ಲಿ ಸ್ಪಾನ್ಸರ್‌ ಮಾಡಲು ಅವರು ಕೇಳಬಹುದು. ಯಾರು ವೃತ್ತಿಪರವಾಗಿ ವರ್ತಿಸುವುದಿಲ್ಲವೋ, ಯಾರು ಸ್ಪೆಲ್ಲಿಂಗ್‌ ತಪ್ಪುಗಳೊಂದಿಗೆ ಸಂದೇಶ ಕಳುಹಿಸುತ್ತಾರೋ ಅವರು ಸ್ಪ್ಯಾಮರ್‌ಗಳೆಂದು ತಿಳಿಯಿರಿ.  
icon

(7 / 7)

ವಂಚಕರಿಂದ ದೂರವಿರಿ: ಈ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಲು ಬಯಸುವವರನ್ನು ವಂಚಿಸುವ ಜಾಲವು ಸಕ್ರಿಯವಾಗಿರುತ್ತದೆ. ವಿವಿಧ ಕಂಪನಿಗಳ ಹೆಸರಿನಲ್ಲಿ ಸ್ಪಾನ್ಸರ್‌ ಮಾಡಲು ಅವರು ಕೇಳಬಹುದು. ಯಾರು ವೃತ್ತಿಪರವಾಗಿ ವರ್ತಿಸುವುದಿಲ್ಲವೋ, ಯಾರು ಸ್ಪೆಲ್ಲಿಂಗ್‌ ತಪ್ಪುಗಳೊಂದಿಗೆ ಸಂದೇಶ ಕಳುಹಿಸುತ್ತಾರೋ ಅವರು ಸ್ಪ್ಯಾಮರ್‌ಗಳೆಂದು ತಿಳಿಯಿರಿ.  (Pixabay)


ಇತರ ಗ್ಯಾಲರಿಗಳು