ಅಮೃತಧಾರೆ ಸೀರಿಯಲ್‌ನಲ್ಲಿ ಘೋರ ದುರಂತ; ಅಪಘಾತದಿಂದ ಮಗುವನ್ನು ಕಳೆದುಕೊಂಡ್ಲು ಮಲ್ಲಿ, ಜೈದೇವ್‌-ದಿಯಾಳಿಗೆ ಶುರುವಾಗಿದೆ ಹೊಸ ಆತಂಕ-televison news amruthadhaare serial today episode malli baby death in her womb jaidev goutham bhumika shocked pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಸೀರಿಯಲ್‌ನಲ್ಲಿ ಘೋರ ದುರಂತ; ಅಪಘಾತದಿಂದ ಮಗುವನ್ನು ಕಳೆದುಕೊಂಡ್ಲು ಮಲ್ಲಿ, ಜೈದೇವ್‌-ದಿಯಾಳಿಗೆ ಶುರುವಾಗಿದೆ ಹೊಸ ಆತಂಕ

ಅಮೃತಧಾರೆ ಸೀರಿಯಲ್‌ನಲ್ಲಿ ಘೋರ ದುರಂತ; ಅಪಘಾತದಿಂದ ಮಗುವನ್ನು ಕಳೆದುಕೊಂಡ್ಲು ಮಲ್ಲಿ, ಜೈದೇವ್‌-ದಿಯಾಳಿಗೆ ಶುರುವಾಗಿದೆ ಹೊಸ ಆತಂಕ

  • Amruthadhaare serial today episode: ಅಮೃತಧಾರೆ ಸೀರಿಯಲ್‌ನಲ್ಲಿ ಮುಂದೆ ಏನಾಗಲಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ಊಹಿಸಿದಂತೆಯೇ ಆಗಿದೆ. ಅಪಘಾತಗೊಂಡ ಮಲ್ಲಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಆದರೆ, ಆಕೆಯ ಹೊಟ್ಟೆಯೊಳಗಿರುವ ಮಗುವನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ಡಾಕ್ಟರ್‌ ಹೇಳಿದ್ದಾರೆ.

Amruthadhaare serial today episode: ಬಸುರಿ ಸೀಮಂತ ಮುಗಿಸಿ ಹಳ್ಳಿಗೆ ಹೊರಟ ಮಲ್ಲಿಗೆ ಅಪಘಾತವಾಗಿದೆ. ಜೈದೇವ್‌ ಮತ್ತು ದಿಯಾ ಒಟ್ಟಿಗೆ ಇರುವ ಸಂದರ್ಭದಲ್ಲಿ ಮಲ್ಲಿ ನೋಡಿರುತ್ತಾಳೆ. ತನ್ನ ಗಂಡ ಬೇರೊಬ್ಬಳ ತೆಕ್ಕೆಯಲ್ಲಿ ಇರುವ ಘಟನೆಯನ್ನು ಮಲ್ಲಿ ನೋಡುತ್ತಾಳೆ. ಕಾರಿನಲ್ಲಿ ಜೈದೇವ್‌ ಮತ್ತು ದಿಯಾ ಇರುವುದನ್ನು ನೋಡುತ್ತಿರುವಾಗಲೇ ಟಿಟಿ ವಾಹನವೊಂದು ಬಂದು ಮಲ್ಲಿಗೆ ಡಿಕ್ಕಿ ಹೊಡೆದಿದೆ.
icon

(1 / 10)

(2 / 10)

ಈ ರೀತಿ ಅಪಘಾತಗೊಂಡ ಮಲ್ಲಿಯನ್ನು ಜೈದೇವ್‌ ತಕ್ಷಣ ಆಸ್ಪತ್ರೆಗೆ ಸೇರಿಸುತ್ತಾನೆ. ಇದು ಆತ ಮಾಡಿಸಿದ ಅಪಘಾತವಲ್ಲ. ದಿಯಾಳನ್ನು ಆಸ್ಪತ್ರೆಗೆ ಸೇರಿಸಿ ಟೆನ್ಷನ್‌ನಲ್ಲಿರುವ ಜೈದೇವ್‌ ಗೌತಮ್‌ಗೆ ಕರೆ ಮಾಡಿ ವಿಷಯ ತಿಳಿಸುತ್ತಾನೆ. ಎಲ್ಲರೂ ಆಸ್ಪತ್ರೆಗೆ ಬರುತ್ತಾರೆ.
icon

(3 / 10)

ಡಾಕ್ಟರ್‌ ಬಂದಾಗ ಮಲ್ಲಿ ಹೇಗಿದ್ದಾಳೆ ಎಂದು ಜೈದೇವ್‌ ಕೇಳುತ್ತಾನೆ. "ಪೇಷೆಂಟ್‌ಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಆದರೆ, ಆಕೆಯ ಹೊಟ್ಟೆಯಲ್ಲಿರುವ ಮಗುವನ್ನು ಉಳಿಸಿಕೊಳ್ಳಲಾಗಿಲ್ಲ" ಎಂದು ಡಾಕ್ಟರ್‌ ಹೇಳಿದಾಗ ಜೈದೇವ್‌ ಗೋಳಾಡುತ್ತಾನೆ. ಗೌತಮ್‌ ಮತ್ತು ಭೂಮಿಕಾ ಕೂಡ ಆಘಾತಕ್ಕೆ ಒಳಗಾಗುತ್ತಾರೆ. 
icon

(4 / 10)

ಜೀ ಕನ್ನಡ ವಾಹಿನಿಯು ಹಂಚಿಕೊಂಡ ಪ್ರಮೋದಲ್ಲಿ ಇನ್ನೊದು ವಿಷಯವೂ ಗೊತ್ತಾಗಿದೆ. ಜೈದೇವ್‌ಗೆ ಕಾಲ್‌ ಮಾಡಿರುವ ದಿಯಾ "ನಾವು ಕಾರಲ್ಲಿ ಇರುವುದನ್ನು ಮಲ್ಲಿ ನೋಡಿರಬಹುದೇ?" ಎಂಬ ಸಂದೇಹ ವ್ಯಕ್ತಪಡಿಸುತ್ತಾಳೆ. 
icon

(5 / 10)

"ಇಲ್ಲ ನೋಡಿರುವುದಿಲ್ಲ" ಎಂದು ಜೈದೇವ್‌ ಹೇಳಿದರೂ ಆತನಿಗೆ ಹೊಸದೊಂದು ಅನುಮಾನ ಶುರುವಾಗುತ್ತದೆ. ಮಲ್ಲಿಯನ್ನು ಮುಗಿಸಲು ಸಂಚು ಮಾಡುತ್ತಾನೋ ಎಂದು ಕಾದು ನೋಡಬೇಕಿದೆ. ಮಗುವಿನ ನಿರೀಕ್ಷೆಯಲ್ಲಿದ್ದ ಮಲ್ಲಿಗೆ ಆಸ್ಪತ್ರೆಯಲ್ಲಿ ಎಚ್ಚರವಾದಗ ಕೆಟ್ಟ ಸುದ್ದಿ ಕಾದಿದೆ.
icon

(6 / 10)

"ಯಾಕಪ್ಪ ಎಲ್ಲಾ ಸೀರಿಯಲ್‌ನಲ್ಲಿ ಹೊಟ್ಟೆಯಲ್ಲಿರುವ ಮಕ್ಕಳನ್ನು ಸಾಯಿಸುತ್ತೀರ" ಎಂದು ಇದೇ ಸಮಯದಲ್ಲಿ ಪ್ರೇಕ್ಷಕರು ಪ್ರಮೋಗೆ ಕಾಮೆಂಟ್‌ ಮಾಡಿದ್ದಾರೆ. "ಸೀರಿಯಲ್‌ನಲ್ಲಿ ಆಕ್ಟ್‌ ಮಾಡಲು ಮಗು ಸಿಗೋದಿಲ್ಲ. ಅದಕ್ಕೆ ಡೈರೆಕ್ಟರ್‌ಗಳು ಮಗುನ ಸಾಯಿಸ್ತಾರೆ" ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
icon

(7 / 10)

 "ಈ ಸೀರಿಯಲ್‌ನಲ್ಲಿ ಇಬ್ಬರಿಗೆ ಆಕ್ಸಿಡೆಂಟ್‌ ಆಯ್ತು. ಇನ್ನು ಎಷ್ಟು ಜನರಿಗೆ ಆಗುತ್ತೋ" ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. "ಆನಂದ್‌ಗೆ ಗುದ್ದಿದ ಟಿಟಿನೇ ಮಲ್ಲಿಗೆ ಗುದ್ದಿರೋದು" ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಇನ್ನು ಮಲ್ಲಿನ ಬೇಟೆಯಾಡೋ ಕೆಲಸ ಜೈದೇವ್‌ಗೆ" "ಮಲ್ಲಿ ಎಲ್ಲರಿಗೂ ಸತ್ಯ ತಿಳಿಸಬಹುದು" ಎಂದೆಲ್ಲ ಜನರು ಕಾಮೆಂಟ್‌ ಮಾಡಿದ್ದಾರೆ. 
icon

(8 / 10)

ಕಳೆದ ಕೆಲವು ದಿನಗಳಿಂದ ಅಮೃತಧಾರೆ ಧಾರಾವಾಹಿಯಲ್ಲಿ ಏನೆಲ್ಲ ಆಗಿದೆ. ಒಂದೆಡೆ ಭೂಮಿಕಾ ಕ್ಯಾರೆಕ್ಟರ್‌ ಡಲ್‌ ಆಗಿದೆ. ಅಪೇಕ್ಷಾ ದಿವಾನ್‌ ಮನೆಗೆ ಬಂದ ಬಳಿಕ ಡಲ್‌ ಆಗಿದೆ. ಇದಕ್ಕೂ ಮುನ್ನ ಆನಂದ್‌ಗೆ ಅಪಘಾತವಾಗಿ ಕೋಮದಲ್ಲಿದ್ದರು. ಇದೀಗ ಮಲ್ಲಿ ಬದುಕಿನಲ್ಲಿ ದುರಂತ ನಡೆದಿದೆ. 
icon

(9 / 10)

ಗೌತಮ್‌ ದಿವಾನ್‌ ಮತ್ತು ಭೂಮಿಕಾ ಇನ್ನೊಂದೆಡೆ ತಮಗೆ ಮಕ್ಕಳಾಗದೆ ಇರುವುದಕ್ಕೆ ಕಾರಣ ಎಂದು ತಿಳಿಯಲು ಡಾಕ್ಟರ್‌ ಬಳಿಗೆ ಹೋಗಿ ಬಂದಿದ್ದಾರೆ. ಇದೇ ಸಮಯದಲ್ಲಿ ಮಲ್ಲಿಯ ಹೊಟ್ಟೆಯಲ್ಲಿರುವ ಮಗು ಮೃತಪಟ್ಟಿದೆ. ಮಲ್ಲಿಗೆ ಎಚ್ಚರವಾದ ಬಳಿಕ ಏನಾಗಲಿದೆ? ಜೈದೇವ್‌ನ ಕುರಿತು ಸತ್ಯ ತಿಳಿದಿರುವ ಮಲ್ಲಿ ಈ ವಿಚಾರವನ್ನು ಯಾರಿಗೆ ತಿಳಿಸುತ್ತಾಳೆ? ಈಕೆಯನ್ನು  ಸಾಯಿಸಲು ಜೈದೇವ್‌ ಪ್ರಯತ್ನಿಸಬಹುದೇ? ಹೀಗೆ ಹಲವು ಪ್ರಶ್ನೆಗಳು ಪ್ರೇಕ್ಷಕರಲ್ಲಿ ಮೂಡಿದೆ.
icon

(10 / 10)

ಇತರ ಗ್ಯಾಲರಿಗಳು