Reservoirs Back water Trip: ಕರ್ನಾಟಕದ ಜಲಾಶಯಗಳ ಹಿನ್ನೀರಿನ ಟ್ರಿಪ್‌ಗೆ ಯೋಜಿಸಿ: ಎಲ್ಲಿ ಏನೇನಿದೆ ,ಹೇಗೆ ಹೋಗಬಹುದು-tourism news karnataka major reservoir back waters crested best tourism destinations how to visit now kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Reservoirs Back Water Trip: ಕರ್ನಾಟಕದ ಜಲಾಶಯಗಳ ಹಿನ್ನೀರಿನ ಟ್ರಿಪ್‌ಗೆ ಯೋಜಿಸಿ: ಎಲ್ಲಿ ಏನೇನಿದೆ ,ಹೇಗೆ ಹೋಗಬಹುದು

Reservoirs Back water Trip: ಕರ್ನಾಟಕದ ಜಲಾಶಯಗಳ ಹಿನ್ನೀರಿನ ಟ್ರಿಪ್‌ಗೆ ಯೋಜಿಸಿ: ಎಲ್ಲಿ ಏನೇನಿದೆ ,ಹೇಗೆ ಹೋಗಬಹುದು

Tour Time ಕರ್ನಾಟಕದಲ್ಲಿ ಎಲ್ಲಾ ಜಲಾಶಯಗಳು (Karnataka Reservoirs) ತುಂಬಿರುವುದರಿಂದ ಬಹುತೇಕ ಎಲ್ಲಾ ಕಡೆ ಹಿನ್ನೀರ ಪ್ರವಾಸೋದ್ಯಮ (Back water Tourism) ಕೈ ಬೀಸಿ ಕರೆಯುತ್ತಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಸುತ್ತಮುತ್ತ ಇರುವ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಹಿನ್ನೀರು ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಚಾಚಿಕೊಂಡಿದೆ. ಕೆಆರ್‌ಎಸ್‌ ಹಿನ್ನೀರಿನ ಜಲ ವೈಭವ ಕಣ್ತುಂಬಿಕೊಳ್ಳಲು ಮೈಸೂರಿನಿಂದ 25 ಕಿ.ಮಿ ದೂರ ಸಂಚರಿಸಬೇಕು. ಜಲಾಶಯದಲ್ಲಿ ಮುಳುಗಿ ಈಗ ಹೊರ ಭಾಗದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲಸ್ವಾಮಿ ದೇಗುಲ ನೆಚ್ಚಿನ ತಾಣ.
icon

(1 / 9)

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಹಲವು ದೇಗುಲ, ಪ್ರವಾಸಿ ತಾಣಗಳಿವೆ. ಬಾಗಲಕೋಟೆ ನಗರದಲ್ಲೂ ದೇಗುಲ ವೀಕ್ಷಿಸಬಹುದು.  ಹಲವು ಬಗೆಯ ಪಕ್ಷಿಗಳ ವೀಕ್ಷಣೆಗೂ ಅವಕಾಶ ಉಂಟು.
icon

(2 / 9)

ಮೈಸೂರು ಜಿಲ್ಲೆಯಿಂದ ಕೇರಳದವರೆಗೂ ಹಬ್ಬಿಕೊಂಡಿರುವ ಕಬಿನಿ ಹಿನ್ನೀರು ಬೋಟಿಂಗ್‌ ಬಹು ಜನಪ್ರಿಯ. ಹಿನ್ನೀರಿನಲ್ಲಿ ವನ್ಯಜೀವಿ ವೀಕ್ಷಣೆ ಮನಮೋಹಕ. ನಾಗರಹೊಳೆ ಹಾಗೂ ಬಂಡೀಪುರ ಬೇರ್ಪಡಿಸುತ್ತದೆ ಕಬಿನಿ ಹಿನ್ನೀರು  ಇಲ್ಲಿ ಹೋಗಲು ಅರಣ್ಯ ಇಲಾಖೆ ಅನುಮತಿ ಬೇಕು. ಮಾನಂದವಾಡಿ ರಸ್ತೆಯಲ್ಲಿರುವ ಮಾಸ್ತಮ್ಮ ಗುಡಿಯನ್ನು ವೀಕ್ಷಿಸಬಹುದು. ಹಿನ್ನೀರಿನ ಭೀಮನಕೊಲ್ಲಿ ಮಹದೇಶ್ವರ ದೇಗುಲಕ್ಕೂ ಹೋಗಬಹುದು. ಮೈಸೂರಿನಿಂದ 60 ಕಿ.ಮಿ ಆಗಬಹುದು.
icon

(3 / 9)

ಶಿವಮೊಗ್ಗ ತಾಲ್ಲೂಕಿನಲ್ಲಿ ಹರಡಿಕೊಂಡಿರುವ ತುಂಗಾ ಜಲಾಶಯದ ಹಿನ್ನೀರು ಕೂಡ ಬೆಸ್ಟ್‌ ತಾಣವೇ. ಗಾಜನೂರು ಬಳಿ ಇರುವ ಈ ತಾಣ ಶಿವಮೊಗ್ಗದಿಂದ ಅನತಿ ದೂರದಲ್ಲಿದೆ. ಸಕ್ಕರೆ ಬೈಲು ಆನೆ ಶಿಬಿರವೂ ಇಲ್ಲಿಯೇ ಬರುತ್ತದೆ.
icon

(4 / 9)

ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನ ಅತ್ಯುತ್ತಮ ತಾಣ,. ಹಲವು ಕಡೆಗಳಲ್ಲಿ ನೀರಿನ ವೈಭವ ನೋಡಲು ಯುವ ಸಮೂಹ ಬೈಕ್‌ನಲ್ಲಿಯೇ ಇಲ್ಲಿಗೆ ಬರುವುದುಂಟು. ಮೈಸೂರಿನಿಂದ 100  ಕಿ.ಮಿ ದೂರದಲ್ಲಿದೆ. 
icon

(5 / 9)

ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯವೂ ಪ್ರಮುಖ ಪ್ರವಾಸಿ ತಾಣ. ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುವರೆಗೂ ಹಿನ್ನೀರು ಹಬ್ಬಿದೆ. ಇಲ್ಲಿನ ಹಿರೇ ಭಾಸ್ಕರ ಕಿರು ಜಲಾಶಯ, ಹೊನ್ನಮರಡಿ ಜಲಧಾಮಗಳೂ ಹಿನ್ನೀರಿನ ಪ್ರವಾಸಿ ತಾಣಗಳೇ. ಶಿವಮೊಗ್ಗದಿಂದ 100  ಕಿ.ಮಿ ದೂರದಲ್ಲಿವೆ  ಈ ತಾಣ.
icon

(6 / 9)

ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದ ಹಿನ್ನೀರಿನ ಬೆಟ್ಟಗಳು, ಹಸಿರು ತಾಣಗಳು ಹಾಗೂ ಕಣಿವೆಗಳ ವೀಕ್ಷಣೆ ಚಂದ. ಚಿಕ್ಕಮಗಳೂರು ಜಿಲ್ಲೆ ಗಡಿ ಭಾಗದಲ್ಲಿರುವ  ಈ ಜಲಾಶಯದ ಹಿನ್ನೀರು ಶಿವಮೊಗ್ಗಕ್ಕೆ ಸಮೀಪ. 
icon

(7 / 9)

ವಿಜಯನಗರ ಜಿಲ್ಲೆಯ ತುಂಗಭದ್ರಾ ಹಿನ್ನೀರು ಕೊಪ್ಪಳ ಜಿಲ್ಲೆವರೆಗೂ ಹರಡಿಕೊಂಡಿದೆ. ಇದು ಪ್ರಮುಖ ಪಕ್ಷಿಗಳ ತಾಣವೂ ಹೌದು. ಸುಂದರ ಸಂಜೆಗೆ ಇದು ಉತ್ತಮ ತಾಣ. ಹಂಪಿ ವೀಕ್ಷಣೆಗ ಬರುವವರು ಜಲಾಶಯ ಹಿನ್ನೀರಿಗೆ ಹೊಸಪೇಟೆಯಿಂದ ಹೋಗಬಹುದು.( ಚಿತ್ರ: ವಿನಯ್‌ ನಾಗರಾಜ್‌)
icon

(8 / 9)

ವಿಜಯನಗರ ಜಿಲ್ಲೆಯ ತುಂಗಭದ್ರಾ ಹಿನ್ನೀರು ಕೊಪ್ಪಳ ಜಿಲ್ಲೆವರೆಗೂ ಹರಡಿಕೊಂಡಿದೆ. ಇದು ಪ್ರಮುಖ ಪಕ್ಷಿಗಳ ತಾಣವೂ ಹೌದು. ಸುಂದರ ಸಂಜೆಗೆ ಇದು ಉತ್ತಮ ತಾಣ. ಹಂಪಿ ವೀಕ್ಷಣೆಗ ಬರುವವರು ಜಲಾಶಯ ಹಿನ್ನೀರಿಗೆ ಹೊಸಪೇಟೆಯಿಂದ ಹೋಗಬಹುದು.( ಚಿತ್ರ: ವಿನಯ್‌ ನಾಗರಾಜ್‌)(vinay Nagaraj)

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸಮೀಪ ಇರುವ ಸೂಪಾ ಅಣೆಕಟ್ಟು ಉತ್ತಮ ಸ್ಥಳಗಳಲ್ಲಿ ಒಂದಾಗಿದೆ . ಸೂಪಾ ಆಣೆಕಟ್ಟೆ ಹಿನ್ನೀರಿನ ವೈಭವವನ್ನು ಹಸಿರು ಅರಣ್ಯ ಹಾಗೂ ಬೆಟ್ಟಗಳ ಸಾಲಿನ ನಡುವೆ ಪ್ರಶಾಂತ ವಾತಾವರಣ ಅನುಭವಿಸುವುದೇ ಚಂದ. ದಾಂಡೇಲಿಯಿಂದ ಭೇಟಿ ಸುಲಭ.
icon

(9 / 9)

ಇತರ ಗ್ಯಾಲರಿಗಳು