ಬೇಸಿಗೆ ಟ್ರಿಪ್‌ ಪ್ಲಾನ್‌ ಇದ್ರೆ, ಭಾರತದ ಈ 6 ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ; ಬಿರು ಬಿಸಿಲಿನಲ್ಲೂ ಕೂಲ್‌ ಆಗಿರುವ ತಾಣಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೇಸಿಗೆ ಟ್ರಿಪ್‌ ಪ್ಲಾನ್‌ ಇದ್ರೆ, ಭಾರತದ ಈ 6 ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ; ಬಿರು ಬಿಸಿಲಿನಲ್ಲೂ ಕೂಲ್‌ ಆಗಿರುವ ತಾಣಗಳಿವು

ಬೇಸಿಗೆ ಟ್ರಿಪ್‌ ಪ್ಲಾನ್‌ ಇದ್ರೆ, ಭಾರತದ ಈ 6 ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ; ಬಿರು ಬಿಸಿಲಿನಲ್ಲೂ ಕೂಲ್‌ ಆಗಿರುವ ತಾಣಗಳಿವು

  • ಕಳೆದ ಕೆಲ ದಿನಗಳಿಂದ ಸೂರ್ಯನ ತಾಪಕ್ಕೆ ನಲುಗಿ, ತಣ್ಣನೆಯ ವಾತಾವರಣದಲ್ಲಿ ಒಂದಿಷ್ಟು ದಿನ ಇದ್ದು ಬರಬೇಕು ಎಂದು ಮನಸ್ಸು ಬಯಸ್ತಾ ಇದ್ಯಾ? ಹಾಗಾದ್ರೆ ಎಲ್ಲಿಗೆ ಹೋಗಬಹುದು ಎಂದು ಯೋಚನೆ ನಿಮಗಿದ್ದರೆ, ಇಲ್ಲಿದೆ ನೋಡಿ ಬೇಸಿಗೆಯಲ್ಲೂ ತಣ್ಣಗಿರುವ ಭಾರತದ ಪ್ರಸಿದ್ಧ ಸ್ಥಳಗಳು.

ಬೇಸಿಗೆ ಎಂದರೆ ಸಮ್ಮರ್‌ ಹಾಲಿಡೇಸ್‌. ಮಕ್ಕಳ ಬೇಸಿಗೆ ರಜೆ ಎಂಬುದು ಪೋಷಕರಿಗೂ ಒಂದು ರೀತಿಯ ಬಿಡುವಿನ ಕಾಲ. ಹಾಗಾಗಿ ಹಲವರು ಬೇಸಿಗೆ ಟ್ರಿಪ್‌ ಪ್ಲಾನ್‌ ಮಾಡುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದಿಚೇಗೆ ಅತಿಯಾದ ಬಿಸಿಲಿನ ಕಾರಣದಿಂದ ಹೊರಗಡೆ ಹೋಗುವುದು ಕಷ್ಟವಾಗಿದೆ, ಆದ್ರೂ ಮಕ್ಕಳು ಕೇಳಬೇಕಲ್ಲ. ಟ್ರಿಪ್‌ ಹೋಗುವ ಎಂದು ಹಟ ಮಾಡುವುದು ಸಹಜ. 
icon

(1 / 9)

ಈ ವರ್ಷ ಬಿಸಿಲಿನ ತಾಪ ಜೋರಾಗಿಯೇ ಇದ್ದು ತಣ್ಣನೆಯ ವಾತಾವರಣ ಇರುವ ಜಾಗದಲ್ಲಿ ಚಿಲ್‌ ಮಾಡಬೇಕು ಎಂದು ಮನಸ್ಸು ಬಯಸುತ್ತಿದ್ದರೆ, ಭಾರತದಲ್ಲೇ ಇರುವ ಈ ತಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಬಿರು ಬೇಸಿಗೆಯಲ್ಲೂ ಕೂಲ್‌ ಆಗಿರುವ ವಾತಾವರಣ ಇರಲಿದ್ದು ನೀವು ಮಕ್ಕಳೊಂದಿಗೆ ಈ ಬೇಸಿಗೆ ಟ್ರಿಪ್‌ ಅನ್ನು ಎಂಜಾಯ್‌ ಮಾಡಬಹುದು. ಅಂತಹ ಸ್ಥಳಗಳು ಯಾವುವು ನೋಡಿ. 
icon

(2 / 9)

ಜಿರೋ, ಅರುಣಾಚಲ ಪ್ರದೇಶ: ಅರುಣಾಚಲದಲ್ಲಿರುವ ಈ ಸುಂದರ ಕಣಿವೆಯು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಕಣ್ಣು ಹಾಯಿಸಿದಷ್ಟೂ ದೂರದ ಹಚ್ಚಹಸಿರು, ರಮಣೀಯ ಭತ್ತದ ಗದ್ದೆಗಳು, ಈಚಲು ಮರಗಳಿಂದ ಆವೃತವಾದ ಬೆಟ್ಟಗಳು ನಿಮ್ಮ ಕಣ್ಮನಗಳಿಗೆ ಹಬ್ಬ ನೀಡುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಸ್ಥಳೀಯ ಬುಡಕಟ್ಟು ಜನಾಂಗದವರು ಆಚರಿಸುವ ಹಾರ್ನ್‌ಬಿಲ್‌ ಉತ್ಸವ ತುಂಬಾನೇ ಫೇಮಸ್‌. 
icon

(3 / 9)

ಜಿರೋ, ಅರುಣಾಚಲ ಪ್ರದೇಶ: ಅರುಣಾಚಲದಲ್ಲಿರುವ ಈ ಸುಂದರ ಕಣಿವೆಯು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಕಣ್ಣು ಹಾಯಿಸಿದಷ್ಟೂ ದೂರದ ಹಚ್ಚಹಸಿರು, ರಮಣೀಯ ಭತ್ತದ ಗದ್ದೆಗಳು, ಈಚಲು ಮರಗಳಿಂದ ಆವೃತವಾದ ಬೆಟ್ಟಗಳು ನಿಮ್ಮ ಕಣ್ಮನಗಳಿಗೆ ಹಬ್ಬ ನೀಡುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಸ್ಥಳೀಯ ಬುಡಕಟ್ಟು ಜನಾಂಗದವರು ಆಚರಿಸುವ ಹಾರ್ನ್‌ಬಿಲ್‌ ಉತ್ಸವ ತುಂಬಾನೇ ಫೇಮಸ್‌. (Yatramantra)

ಸ್ಪಿತಿ ಕಣಿವೆ, ಅರುಣಾಚಲ ಪ್ರದೇಶ: ಭೂಮಿಯ ಮೇಲಿನ ಸ್ವರ್ಗದಂತಿರುವ ಸ್ಪಿತಿ ವ್ಯಾಲಿಯು ಪ್ರವಾಸಿಗರು ಅದರಲ್ಲೂ ಬೈಕ್‌ ರೈಡರ್ಸ್‌ಗಳ ನೆಚ್ಚಿನ ತಾಣ. ಎತ್ತರದ ಮರುಭೂಮಿಗಳು, ಆಳ ಕಣಿವೆಗಳು, ಪ್ರಾಚೀನ ಬೌದ್ಧ ಮಠಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಜನಜಂಗುಳಿ ಕಡಿಮೆ ಇರುವ ಜಾಗ ನಿಮಗೆ ಇಷ್ಟವಾದರೆ ಇದು ಬೆಸ್ಟ್‌ ಖಂಡಿತ. 
icon

(4 / 9)

ಮುನ್ನಾರ್‌ ಕೇರಳ: ಕೇರಳದ ಮುನ್ನಾರ್‌ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಇಲ್ಲಿನ ಗಿರಿಧಾಮಗಳು, ಹಸಿರ ಬೆಟ್ಟಗಳು, ಚಹಾ ತೋಟಗಳು, ಹಚ್ಚ ಹಸಿರಿನ ಕಾಡುಗಳ ಅದ್ಭುತ ನೋಟ ಕಣ್ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. ಇದು ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿಗಳಲ್ಲಿ ಒಂದು. 
icon

(5 / 9)

ಕೂರ್ಗ್‌, ಕರ್ನಾಟಕ: ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೂರ್ಗ್‌ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ್ದು. ಹಸಿರು ಹಾಸಿದ ಬೆಟ್ಟ-ಗುಡ್ಡಗಳು, ಗಿರಿಧಾಮಗಳು, ಕಾಡುಗಳ ಮಧ್ಯೆ ಇರುವ ಕೂರ್ಗ್‌ ಬೇಸಿಗೆಯಲ್ಲೂ ಕೂಲ್‌ ಆಗಿರುತ್ತದೆ. ಕಾಫಿ ತೋಟಗಳ ಘಮದ ಜೊತೆಗೆ ಜಲಪಾತಗಳ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಬಹುದು. ಆದರೆ ಬೇಸಿಗೆಯಲ್ಲಿ ಜಲಪಾತಗಳಲ್ಲಿ ನೀರು ಕಡಿಮೆ ಇರುತ್ತದೆ. 
icon

(6 / 9)

ಔಲಿ ಉತ್ತರಾಖಂಡ: ಇದು ಕಾರು ಮುಕ್ತ ರೆಸಾರ್ಟ್‌ ಪಟ್ಟಣವಾಗಿದೆ. ಬೇಸಿಗೆಯಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದ ತಾಣ ಇದಾಗಿದೆ. ಔಲಿಯು ಹಿಮಾಲಯದ ಸುಂದರ ದೃಶ್ಯಕಾವ್ಯವನ್ನು ನಿಮ್ಮ ಮುಂದೆ ತೆರೆದಿಡುತ್ತದೆ. ಇಲ್ಲಿ ಟ್ರೆಕ್ಕಿಂಗ್‌, ಕ್ಯಾಂಪಿಂಗ್‌ ವಿಶೇಷ.
icon

(7 / 9)

ಮಾವ್ಲಿನ್ನಾಂಗ್‌: ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿದೆ ಮಾವ್ಲಿನ್ನಾಂಗ್‌. ಗಾಡ್ಸ್ ಓನ್ ಗಾರ್ಡನ್ ಎಂದು ಕರೆಯಲ್ಪಡುವ ಈ ತಾಣವು ನಿಮ್ಮನ್ನು ಸ್ವರ್ಗದಲ್ಲಿರುವಂತೆ ಫೀಲ್‌ ಮಾಡುವುದು ಖಂಡಿತ. ಅದ್ಭುತ ದೃಶ ಸಂಕೋಲೆಗಳಿಂದ ಇದು ನಿಮ್ಮನ್ನು ಕಟ್ಟಿ ಹಾಕುತ್ತದೆ. ಏಷ್ಯಾದ ಅತ್ಯಂತ ಸ್ವಚ್ಛ ಹಳ್ಳಿ ಎಂದೂ ಇದಕ್ಕೆ ಕರೆಯುತ್ತಾರೆ. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಇತರ ಗ್ಯಾಲರಿಗಳು