Wayanad By Election Result 2024: ಅಣ್ಣನ ನಂತರ ತಂಗಿಯನ್ನೂ ಗೆಲ್ಲಿಸಿದ ಗಿರಿನಾಡ ಜನ; ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವದ್ರಾ ಜಯದ ನಗೆ
- ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಅಮೋಘ ಜಯ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಿಯಾಂಕಾ, ರಾಹುಲ್‌ಗಿಂತಲೂ ಅತ್ಯಧಿಕ ಮತಗಳನ್ನು ಪಡೆದಿದ್ದಾರೆ. ಈ ಮೂಲಕ ದೇವರ ನಾಡಿನ ಮತದಾರ ಮತ್ತೆ ಕಾಂಗ್ರೆಸ್ ಕೈ ಹಿಡಿದಿದ್ದಾನೆ. 4 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
- ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಅಮೋಘ ಜಯ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಿಯಾಂಕಾ, ರಾಹುಲ್‌ಗಿಂತಲೂ ಅತ್ಯಧಿಕ ಮತಗಳನ್ನು ಪಡೆದಿದ್ದಾರೆ. ಈ ಮೂಲಕ ದೇವರ ನಾಡಿನ ಮತದಾರ ಮತ್ತೆ ಕಾಂಗ್ರೆಸ್ ಕೈ ಹಿಡಿದಿದ್ದಾನೆ. 4 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
(2 / 13)
ಮೊದಲ ನೋಟಕ್ಕೆ ಇಂದಿರಾ ಗಾಂಧಿ ಥರ ಕಾಣುತ್ತಾರೆ. ಮಾತಿನ ಧಾಟಿ ಹಾಗೆಯೇ ಇದೆ ಎನ್ನುವುದು ಪ್ರಿಯಾಂಕಾ ಗಾಂಧಿ ಬಗ್ಗೆ ಇರುವ ಮೆಚ್ಚುಗೆಯ ಮಾತು
(3 / 13)
ರಾಹುಲ್ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದ ಕೇರಳದ ವಯನಾಡ್ ಕ್ಷೇತ್ರದ ಮೂಲಕ ಇದೀಗ ಪ್ರಿಯಾಂಕಾ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ
(4 / 13)
ಇದೀಗ 52 ರ ಹರೆಯದಲ್ಲಿರುವ ಪ್ರಿಯಾಂಕಾ, ಕಾಂಗ್ರೆಸ್‌ಗೆ ಸದಾ ಆಸರೆಯಾಗಿದ್ದವರು. ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಗೆಲುವಿನ ಹಿಂದೆಯೂ ಇವರ ಅವಿರತ ಶ್ರಮ ಇತ್ತು
(5 / 13)
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಪುನರ್ ಸಂಘಟನೆಯಲ್ಲಿ ಕಾರ್ಯತಂತ್ರದ ಛಾತಿ ತೋರಿಸಿದರು.
(6 / 13)
ಬೌದ್ಧ ಧರ್ಮದ ತತ್ವಗಳು (ಬುದ್ಧಿಸ್ಟ್ ಸ್ಟಡೀಸ್) ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ
(7 / 13)
ಬಹುಕಾಲ ತೆರೆಮರೆಯಲ್ಲಿ ತಾಯಿ, ತಮ್ಮನ ನೆರಳಾಗಿದ್ದ ಪ್ರಿಯಾಂಕಾ ಗಾಂಧಿ, ಜನವರಿ 23, 2019 ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ರಾಜಕಾರಣ ಪ್ರವೇಶಿಸಿದರು.
(8 / 13)
ಉತ್ತರ ಪ್ರದೇಶ ರಾಜಕಾರಣದಲ್ಲಿ 2021 ರಿಂದಲೂ ಪ್ರಿಯಾಂಕಾ ಗಾಂಧಿ ಸಕ್ರಿಯರಾಗಿದ್ದಾರೆ. 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನೂ ಪ್ರಿಯಾಂಕಾ ಮುನ್ನಡೆಸಿದ್ದರು. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೊಲೊಪ್ಪಿಕೊಂಡಿತ್ತು
(9 / 13)
ಕಾಂಗ್ರೆಸ್ ಅಧಿಕಾರದಲ್ಲಿರುವ ಭಾರತದ ಪ್ರಮುಖ ರಾಜ್ಯ ಕರ್ನಾಟಕಕ್ಕೆ ಹೊಂದಿಕೊಂಡಂತೆಯೇ ಇರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇದೀಗ ಪ್ರಿಯಾಂಕಾ ಗಾಂಧಿ ಜಯಗಳಿಸಿದ್ದಾರೆ
(10 / 13)
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಿಯಾಂಕಾ ಗಾಂಧಿ ಅವರ ಒತ್ತಾಸೆಯಿತ್ತು. ಮಹಿಳಾ ಕೇಂದ್ರಿತ ರಾಜಕಾರಣದ ಬಗ್ಗೆ ಮಾತನಾಡುವ ಪ್ರಿಯಾಂಕಾ ಲೋಕಸಭೆಯಲ್ಲಿ ಮಹಿಳೆಯರ ವಿಚಾರಗಳ ಬಗ್ಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ನಿರೀಕ್ಷೆ ದೇಶದಲ್ಲಿದೆ.
ಇತರ ಗ್ಯಾಲರಿಗಳು