ಮಹಿಳಾ ವಿಶ್ವಕಪ್ 2024ರಲ್ಲಿ 'ಸಿಕ್ಸರ್ ಕ್ವೀನ್' ಯಾರು? ಮಂಧಾನ, ಶಫಾಲಿ, ಹರ್ಮನ್ ಸಿಕ್ಸರ್ ಸಂಖ್ಯೆ ಕೇಳಿದ್ರೆ ಅಚ್ಚರಿ ಖಚಿತ
- Most Sixes: ಮಹಿಳಾ ಟಿ20 ವಿಶ್ವಕಪ್ 2024 ಟೂರ್ನಿಗೆ ತೆರೆ ಬಿದ್ದಿದೆ. ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಸೋಲಿಸಿ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿತು. ಹಾಗಾದರೆ ಈ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದವರು ಯಾರು? ಭಾರತೀಯರು ಯಾವ ಸ್ಥಾನದಲ್ಲಿದ್ದಾರೆ.
- Most Sixes: ಮಹಿಳಾ ಟಿ20 ವಿಶ್ವಕಪ್ 2024 ಟೂರ್ನಿಗೆ ತೆರೆ ಬಿದ್ದಿದೆ. ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಸೋಲಿಸಿ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿತು. ಹಾಗಾದರೆ ಈ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದವರು ಯಾರು? ಭಾರತೀಯರು ಯಾವ ಸ್ಥಾನದಲ್ಲಿದ್ದಾರೆ.
(1 / 5)
ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದೆ. 8 ವರ್ಷಗಳ ನಂತರ ಮಹಿಳಾ ಟಿ20 ಕ್ರಿಕೆಟ್‌ಗೆ ಹೊಸ ಚಾಂಪಿಯನ್ ದೊರಕಿದೆ. ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 32 ರನ್ಗಳ ಅಂತರದಿಂದ ಗೆದ್ದು ಟ್ರೋಫಿಗೆ ಮುತ್ತಿಕ್ಕಿತು. 18 ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿಯರು ಯಾರು? ಈ ಪಟ್ಟಿಯಲ್ಲಿ ಭಾರತೀಯರು ಯಾವ ಸ್ಥಾನ ಗಳಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.
(2 / 5)
ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಅವರು 2024ರ ಮಹಿಳಾ ಟಿ20 ವಿಶ್ವಕಪ್‌ನ 'ಸಿಕ್ಸರ್ ಕ್ವೀನ್' ಆಗಿ ಹೊರಹೊಮ್ಮಿದ್ದಾರೆ. ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ತಾನಾಡಿದ 5 ಪಂದ್ಯಗಳಲ್ಲಿ ಗರಿಷ್ಠ 9 ಸಿಕ್ಸರ್ ಬಾರಿಸಿದ್ದಾರೆ. ಆ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.(AFP)
(3 / 5)
ವೆಸ್ಟ್ ಇಂಡೀಸ್‌ನ ಕಿಯಾನಾ ಜೋಸೆಫ್ 2ನೇ ಸ್ಥಾನದಲ್ಲಿದ್ದಾರೆ. 23 ವರ್ಷದ ಕಿಯಾನಾ 5 ಪಂದ್ಯಗಳಲ್ಲಿ 3 ಸಿಕ್ಸರ್ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡವು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಹೊರಬಿತ್ತು.(AFP)
(4 / 5)
ಅತ್ಯಧಿಕ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಐವರು 3ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರ್ರಿ, ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ತಜ್ಮಿನ್ ಬ್ರಿಟ್ಸ್ (ದಕ್ಷಿಣ ಆಫ್ರಿಕಾ), ಜಾರ್ಜಿಯಾ ಪ್ಲೈಮರ್ (ನ್ಯೂಜಿಲೆಂಡ್) ಮತ್ತು ಲಾರಾ ವೊಲ್ವಾರ್ಡ್ (ದಕ್ಷಿಣ ಆಫ್ರಿಕಾ) ಅವರು ತಲಾ 2 ಸಿಕ್ಸರ್ ಸಿಡಿಸಿದ್ದಾರೆ.(AFP)
ಇತರ ಗ್ಯಾಲರಿಗಳು