ಲಯದಲ್ಲಿದ್ದ ಅಶ್ವಿನ್​-ಜಡೇಜಾ ಕೈಬಿಟ್ಟು ಸುಂದರ್-ನಿತೀಶ್​ಗೆ ಅವಕಾಶ ನೀಡಿದ್ದೇಕೆ; ಇಲ್ಲಿದೆ ಅಸಲಿ ಕಾರಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಯದಲ್ಲಿದ್ದ ಅಶ್ವಿನ್​-ಜಡೇಜಾ ಕೈಬಿಟ್ಟು ಸುಂದರ್-ನಿತೀಶ್​ಗೆ ಅವಕಾಶ ನೀಡಿದ್ದೇಕೆ; ಇಲ್ಲಿದೆ ಅಸಲಿ ಕಾರಣ

ಲಯದಲ್ಲಿದ್ದ ಅಶ್ವಿನ್​-ಜಡೇಜಾ ಕೈಬಿಟ್ಟು ಸುಂದರ್-ನಿತೀಶ್​ಗೆ ಅವಕಾಶ ನೀಡಿದ್ದೇಕೆ; ಇಲ್ಲಿದೆ ಅಸಲಿ ಕಾರಣ

  • India vs Australia 1st Test: ಉತ್ತಮ ಲಯದಲ್ಲಿದ್ದ ರವಿಚಂದ್ರನ್ ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್​ ಮತ್ತು ನಿತೀಶ್ ಕುಮಾರ್​ ರೆಡ್ಡಿ​ಗೆ ಅವಕಾಶ ನೀಡಿದ್ದೇಕೆ? ಇಲ್ಲಿದೆ ಅಸಲಿ ಕಾರಣ

ಬಾರ್ಡರ್ ಗವಾಸ್ಕರ್ ಟ್ರೋಫಿಯ ಪ್ರಥಮ ಟೆಸ್ಟ್ ಪಂದ್ಯಕ್ಕೆ ಅಚ್ಚರಿ ಎನ್ನುವಂತೆ ಟೀಮ್ ಇಂಡಿಯಾದ ಸ್ಟಾರ್​ ಆಲ್​ರೌಂಡರ್ಸ್ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟು ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ರೆಡ್ಡಿ ಅವರಿಗೆ ಮಣೆ ಹಾಕಲಾಗಿದೆ. ಅದೇ ರೀತಿ ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ಗೆ ಸುಂದರ್​-ನಿತೀಶ್​ಗೆ ಅವಕಾಶ ನೀಡಿ, ಜಡ್ಡು-ಆ್ಯಷ್​ ಕೈಬಿಟ್ಟಿದ್ದೇಕೆ? ಇಲ್ಲಿದೆ ಸರಿಯಾದ ವಿವರ.
icon

(1 / 9)

ಸುಂದರ್ ಅವಕಾಶ ಗಿಟ್ಟಿಸಿಕೊಳ್ಳಲು ಕಾರಣವೆಂದರೆ ಅವರ ಇತ್ತೀಚಿನ ಪ್ರದರ್ಶನ. ಸುಂದರ್​ ಅವರ ತಂತ್ರಗಾರಿಕೆಯ ಗುಣಮಟ್ಟವು ಅವರನ್ನು ಜಡೇಜಾ ಮತ್ತು ಅಶ್ವಿನ್ ಅವರಿಗಿಂತ ಮುಂದಿರಿಸಿದೆ. ವಿಶೇಷವಾಗಿ ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಸುಂದರ್​​ಗೆ ಪ್ಲೇಯಿಂಗ್ 11ನಲ್ಲಿ ಆಡಿಸಲು ಗೌತಮ್ ಗಂಭೀರ್ ಬಲವಾದ ಕಾರಣವನ್ನು ಕಂಡುಕೊಂಡಿದ್ದಾರೆ. ಹೀಗಾಗಿ, ಈ ನಿರ್ಧಾರ ತೆಗೆದುಕೊಂಡಿದ್ದಾರೆ.
icon

(2 / 9)

ಸುಂದರ್​ರದ್ದು ಕೇವಲ ಸ್ಪಿನ್ನರ್ ಪಾತ್ರವಲ್ಲ ಎಂದು ಭಾರತದ ಸ್ಟ್ಯಾಂಡ್-ಇನ್ ನಾಯಕ ಜಸ್ಪ್ರೀತ್ ಬುಮ್ರಾ ಖಚಿತಪಡಿಸಿದ್ದಾರೆ. ಇದು ಅವರ ಹಿಂದಿನ ಯಶಸ್ಸು ಮತ್ತು ಪ್ರಸ್ತುತ ಫಾರ್ಮ್ ಎರಡನ್ನೂ ಆಧರಿಸಿದೆ.
icon

(3 / 9)

ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸುಂದರ್​ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಆದರೆ ಜಡ್ಡು, ಅಶ್ವಿನ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹಾಗಂತ ಉತ್ತಮ ಲಯದಲ್ಲಿ ಇರಲಿಲ್ಲ ಎಂದಲ್ಲ. 
icon

(4 / 9)

ವಾಷಿಂಗ್ಟನ್ ಸುಂದರ್ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು, ಹಿಂದಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅವರ ಕೊಡುಗೆ ಇದಕ್ಕೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾದ ಭಯಾನಕ ಪರಿಸ್ಥಿತಿಗಳಲ್ಲಿ ಗರಿಷ್ಠ ಸ್ಕೋರ್ 62 ಆಗಿದ್ದು, ಎರಡು ಪಂದ್ಯಗಳಲ್ಲಿ 42 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ.
icon

(5 / 9)

ವಾಷಿಂಗ್ಟನ್ ಸುಂದರ್ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು, ಹಿಂದಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅವರ ಕೊಡುಗೆ ಇದಕ್ಕೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾದ ಭಯಾನಕ ಪರಿಸ್ಥಿತಿಗಳಲ್ಲಿ ಗರಿಷ್ಠ ಸ್ಕೋರ್ 62 ಆಗಿದ್ದು, ಎರಡು ಪಂದ್ಯಗಳಲ್ಲಿ 42 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ.(Surjeet Yadav)

ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್​​​ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. 3/89 ಅತ್ಯುತ್ತಮ ಸ್ಪೆಲ್ ಎಸೆದಿದ್ದರು. ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಆಸ್ಟ್ರೇಲಿಯಾದ ಪಿಚ್​​ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಹಿನ್ನೆಲೆ ಅವಕಾಶ ನೀಡುವ ಮೂಲಕ ತಂತ್ರ ರೂಪಿಸಲಾಗಿದೆ.
icon

(6 / 9)

ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋತರೂ ಸುಂದರ್ ಎರಡು ವಿಭಾಗಗಳಲ್ಲಿ ಮಿಂಚಿದ್ದರು. ಅದಕ್ಕಾಗಿಯೇ ಅವರಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅವಕಾಶ ಸಿಕ್ಕಿತು. ಮತ್ತೊಂದು ಕಾರಣ ಏನೆಂದರೆ ಎಡಗೈ ಬ್ಯಾಟರ್ ಅಗತ್ಯತೆ ಇತ್ತು. ಹಾಗಾಗಿ ಅವರಿಗೆ ಮಣೆ ಹಾಕಲಾಗಿದೆ.
icon

(7 / 9)

ನಿತೀಶ್ ರೆಡ್ಡಿ ಅವಕಾಶ ನೀಡಲು ಕಾರಣ ಏನೆಂದರೆ ಅವರು ವೇಗದ ಆಲ್​ರೌಂಡರ್. ಆಸೀಸ್​ನ ಫಾಸ್ಟ್​ ಅಂಡ್ ಬೌನ್ಸಿ ಟ್ರ್ಯಾಕ್​ನಲ್ಲಿ ವೇಗಿಗಳು ಅಬ್ಬರಿಸುವ ಕಾರಣ ವೇಗದ ಆಲ್​​ರೌಂಡರ್​​ಗೆ ಮಣೆ ಹಾಕಲಾಯಿತು. ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ ಬಳಿಕ ತಂಡವನ್ನು ಸೇರಿದ ವೇಗದ ಬೌಲಿಂಗ್​ ಆಲ್​ರೌಂಡರ್​ ಆಗಿದ್ದಾರೆ.
icon

(8 / 9)

ನಿತೀಶ್ ರೆಡ್ಡಿ ಅವಕಾಶ ನೀಡಲು ಕಾರಣ ಏನೆಂದರೆ ಅವರು ವೇಗದ ಆಲ್​ರೌಂಡರ್. ಆಸೀಸ್​ನ ಫಾಸ್ಟ್​ ಅಂಡ್ ಬೌನ್ಸಿ ಟ್ರ್ಯಾಕ್​ನಲ್ಲಿ ವೇಗಿಗಳು ಅಬ್ಬರಿಸುವ ಕಾರಣ ವೇಗದ ಆಲ್​​ರೌಂಡರ್​​ಗೆ ಮಣೆ ಹಾಕಲಾಯಿತು. ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ ಬಳಿಕ ತಂಡವನ್ನು ಸೇರಿದ ವೇಗದ ಬೌಲಿಂಗ್​ ಆಲ್​ರೌಂಡರ್​ ಆಗಿದ್ದಾರೆ.(AP)

ನಿತೀಶ್ ರೆಡ್ಡಿ ಆಯ್ಕೆ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಟೀಕೆಗೆ ಗುರಿಯಾದವನೇ ಭಾರತ ತಂಡವನ್ನು ರಕ್ಷಿಸಿದ್ದಾನೆ. 59 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 41 ರನ್ ಸಿಡಿಸಿ ತಂಡವನ್ನು 100 ರ ಗಡಿ ದಾಟಿಸಿದರು. 
icon

(9 / 9)

ಇತರ ಗ್ಯಾಲರಿಗಳು