ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿ, ಸೋಲಾರ್ ವಸ್ತುಗಳ ಸ್ಪೋಟದಿಂದ 32 ಮಂದಿ ಸಾವು; ಹೀಗಿತ್ತು ಸ್ಪೋಟದ ತೀವ್ರತೆಯ ನೋಟ
- ಹಲವು ದೇಶಗಳಲ್ಲಿ ಯುದ್ದ ಭೀತಿ ಇರುವಾಗಲೇ ಲೆಬನಾನ್ ನಲ್ಲಿ ಮೂರು ದಿನಗಳಿಂದ ಸರಣಿ ಸ್ಪೋಟ ಸಂಭವಿಸುತ್ತಲೇ ಇವೆ. ಇದರಿಂದ ಹಲವರು ಮೃತಪಟ್ಟು, ಗಾಯಗೊಂಡವರ ಸಂಖ್ಯೆಯೂ ಅಧಿಕವಾಗಿದೆ.
- ಹಲವು ದೇಶಗಳಲ್ಲಿ ಯುದ್ದ ಭೀತಿ ಇರುವಾಗಲೇ ಲೆಬನಾನ್ ನಲ್ಲಿ ಮೂರು ದಿನಗಳಿಂದ ಸರಣಿ ಸ್ಪೋಟ ಸಂಭವಿಸುತ್ತಲೇ ಇವೆ. ಇದರಿಂದ ಹಲವರು ಮೃತಪಟ್ಟು, ಗಾಯಗೊಂಡವರ ಸಂಖ್ಯೆಯೂ ಅಧಿಕವಾಗಿದೆ.
(1 / 7)
ಲೆಬನಾನ್ ದೇಶದಲ್ಲಿ ಸರಣಿ ಸ್ಪೋಟ ಸಂಭವಿಸಿದೆ. ಸಾರ್ವಜನಿಕ ಸ್ಥಳಗಳು, ಮಾಲ್‌ಗಳಲ್ಲಿಯೇ ಪೇಜರ್, ಸೋಲಾರ್ ಪೆನಲ್‌ಗಳ ಸ್ಪೋಟದಿಂದ ಭಾರೀ ಸಾವು ನೋವುಗಳು ಸಂಭವಿಸಿವೆ.
(2 / 7)
ವಿಶೇಷವಾಗಿ ಪೇಜರ್‌ಗಳ ಬಳಕೆ ಇರುವ ಲೆಬನಾನ್‌ನಲ್ಲಿ ಸ್ಪೋಟಕ್ಕೆ ಬಳಸಿಕೊಳ್ಳಲಾಯಿತೇ ಎನ್ನುವ ಅನುಮಾನವಿದ್ದು, ತನಿಖೆಗೆ ಆದೇಶಿಸಲಾಗಿದೆ.
(3 / 7)
ಲೆಬನಾನ್‌ನ ಬೈರೂತ್ ಸೇರಿದಂತೆ ಹಲವು ಕಡೆಗಳಲ್ಲಿ ಪೇಜರ್, ವಾಕಿ ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ ಸಂಭವಿಸಿದೆ. ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಇದರಲ್ಲಿ 32 ಮಂದಿ ಮೃತಪಟ್ಟಿದ್ದು 3,250ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.
(4 / 7)
ಏಕ ಕಾಲಕ್ಕೆ ಹಲವು ಕಡೆಗಳಲ್ಲಿ ಸೋಲಾರ್ ಪೆನಲ್, ವಾಕಿ ಟಾಕಿಗಳು ಸ್ಪೋಟಗೊಂಡಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
(5 / 7)
ಪೇಜರ್‌ಗಳನ್ನು ಗುರಿಯಾಗಿಟ್ಟುಕೊಂಡು ಉಗ್ರ ಸಂಘಟನೆಗಳು ದಾಳಿ ಮಾಡಿರಬೇಕು ಎನ್ನುವುದು ಪ್ರಾಥಮಿಕ ತನಿಖೆಯಿಂದ ದೊರೆತ ಮಾಹಿತಿ.
(6 / 7)
ಗಾಯಗೊಂಡಿರುವ ಜನರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಲೆಬನಾನ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತರ ಗ್ಯಾಲರಿಗಳು