WTC Points Table: ನ್ಯೂಜಿಲೆಂಡ್ ವಿರುದ್ಧ ಸೋತರೂ ಭಾರತಕ್ಕೆ ಅಗ್ರಸ್ಥಾನ, ಆದರೆ ಫೈನಲ್ ಹಾದಿ ಮತ್ತಷ್ಟು ದುರ್ಗಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ನ್ಯೂಜಿಲೆಂಡ್ ವಿರುದ್ಧ ಸೋತರೂ ಭಾರತಕ್ಕೆ ಅಗ್ರಸ್ಥಾನ, ಆದರೆ ಫೈನಲ್ ಹಾದಿ ಮತ್ತಷ್ಟು ದುರ್ಗಮ

WTC Points Table: ನ್ಯೂಜಿಲೆಂಡ್ ವಿರುದ್ಧ ಸೋತರೂ ಭಾರತಕ್ಕೆ ಅಗ್ರಸ್ಥಾನ, ಆದರೆ ಫೈನಲ್ ಹಾದಿ ಮತ್ತಷ್ಟು ದುರ್ಗಮ

  • WTC Points Table: ಪುಣೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಸೋತರೆ ಫೈನಲ್ ಪ್ರವೇಶಿಸುವ ಹಾದಿ ದುರ್ಗಮವಾಗಲಿದೆ.

ಬೆಂಗಳೂರು ಮತ್ತು ಪುಣೆ ಟೆಸ್ಟ್​​​ನಲ್ಲಿ ನ್ಯೂಜಿಲೆಂಡ್​​ ವಿರುದ್ಧ ಸೋಲನುಭವಿಸಿದ ಭಾರತ ತಂಡ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆದರೆ, ಗೆಲುವಿನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದ್ದು, 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಗೆಲುವಿನ ಪ್ರಮಾಣಕ್ಕಿಂತ ಕೊಂಚ ಹೆಚ್ಚಿದೆ. ಪ್ರಸ್ತುತ 62.82ರಷ್ಟು ಗೆಲುವಿನ ಪ್ರಮಾಣ ಹೊಂದಿದೆ. ಆದರೆ ಈ ಎರಡು ಟೆಸ್ಟ್​​ಗಳಿಗೂ ಮುನ್ನ 74ರಷ್ಟು ಗೆಲುವಿನ ಪ್ರಮಾಣ ಇತ್ತು. ಆಸ್ಟ್ರೇಲಿಯಾ 62.50ರಷ್ಟು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ.
icon

(1 / 6)

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ 13 ಪಂದ್ಯಗಳಿಂದ 98 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ಆಡಿರುವ 13 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು, ನಾಲ್ಕರಲ್ಲಿ ಸೋಲು ಕಂಡಿದೆ, ಆದರೆ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ.
icon

(2 / 6)

ಭಾರತ ವಿರುದ್ಧ ಪುಣೆ ಟೆಸ್ಟ್ ಗೆದ್ದ ನಂತರ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿ ಮುಂದುವರೆದಿದೆ. ಕಿವೀಸ್ 10 ಪಂದ್ಯಗಳಲ್ಲಿ 60 ಅಂಕ ಗಳಿಸಿದ್ದು, ಗೆಲುವಿನ ಶೇಕಡವಾರು 50ರಷ್ಟಿದೆ. ಆಡಿರುವ 10 ಪಂದ್ಯಗಳಲ್ಲಿ 5 ಗೆಲುವು, 5 ಸೋಲು ಕಂಡಿದೆ. ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದು, ಫೈನಲ್ ಪ್ರವೇಶಿಸಲು ಪೈಪೋಟಿ ನೀಡುತ್ತಿದೆ.
icon

(3 / 6)

ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು, 1 ಡ್ರಾ ಸಾಧಿಸಿದೆ. ಇದರೊಂದಿಗೆ 90 ಅಂಕ ಗಳಿಸಿದ್ದು, ಗೆಲುವಿನ ಶೇಕಡವಾರು 62.50 ಹೊಂದಿದೆ. ಶ್ರೀಲಂಕಾ ಇನ್ನೂ ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 9 ಪಂದ್ಯಗಳಿಂದ 60 ಅಂಕ ಗಳಿಸಿದೆ. ಗೆಲುವಿನ ಶೇಕಡವಾರು 55.56 ಆಗಿದೆ.
icon

(4 / 6)

ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 7 ಪಂದ್ಯಗಳಲ್ಲಿ 40 ಅಂಕಗಳನ್ನು ಗಳಿಸಿದ್ದು ಗೆಲುವಿನ ಶೇಕಡಾವಾರು 47.62 ರಷ್ಟಿದೆ. ರಾವಲ್ಪಿಂಡಿ ಟೆಸ್ಟ್​​ನಲ್ಲಿ ಪಾಕಿಸ್ತಾನ ವಿರುದ್ಧ ಸೋತರೂ ಇಂಗ್ಲೆಂಡ್ ಲೀಗ್ ಟೇಬಲ್​​ನಲ್ಲಿ 6ನೇ ಸ್ಥಾನದಲ್ಲಿದೆ. 19 ಪಂದ್ಯಗಳಲ್ಲಿ ಇಂಗ್ಲೆಂಡ್ 93 ಅಂಕ ಗಳಿಸಿದ್ದು, ಗೆಲುವಿನ ಶೇಕಡವಾರು 40.79ರಷ್ಟಿದೆ.
icon

(5 / 6)

ರಾವಲ್​ಪಿಂಡಿ ಟೆಸ್ಟ್​​​ನಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಪಾಕಿಸ್ತಾನ 7ನೇ ಸ್ಥಾನದಲ್ಲಿದೆ. 10 ಪಂದ್ಯಗಳಲ್ಲಿ 40 ಅಂಕ ಗಳಿಸಿದ್ದು, ಗೆಲುವಿನ ಶೇಕಡವಾರು 33.33ರಷ್ಟು ಹೊಂದಿದೆ. ಬಾಂಗ್ಲಾದೇಶ 8ನೇ ಸ್ಥಾನದಲ್ಲಿದ್ದು, 9 ಪಂದ್ಯಗಳಲ್ಲಿ 33 ಅಂಕ ಗಳಿಸಿದೆ. ಗೆಲುವಿನ ಶೇಕಡಾವಾರು 30.56ರಷ್ಟಿದೆ, ವೆಸ್ಟ್ ಇಂಡೀಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 9 ಪಂದ್ಯಗಳಲ್ಲಿ ಗೆಲುವಿನ ಶೇಕಡವಾರು 18.52ರ ದರದಲ್ಲಿ 20 ಅಂಕಗಳನ್ನು ಸಂಗ್ರಹಿಸಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು