WTC Points Table: ನ್ಯೂಜಿಲೆಂಡ್ ವಿರುದ್ಧ ಸೋತು ಆಸ್ಟ್ರೇಲಿಯಾಗೆ ಸಿಂಹಾಸನ ಬಿಟ್ಟುಕೊಟ್ಟು 2ನೇ ಸ್ಥಾನಕ್ಕೆ ಕುಸಿದ ಭಾರತ
- WTC Standings 2025: ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ.
- WTC Standings 2025: ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ.
(1 / 7)
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ವೈಟ್ವಾಶ್ ಆದ ನಂತರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದೆ. ಕಿವೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 25 ರನ್ಗಳಿಂದ ಸೋತ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ.
(2 / 7)
ಈ ಸೋಲಿನೊಂದಿಗೆ ಭಾರತದ ಗೆಲುವಿನ ಶೇಕಡವಾರು 62.82ರಿಂದ 58.33ಕ್ಕೆ ಕುಸಿದಿದೆ. ಭಾರತ ಈವರೆಗೂ ಆಡಿರುವ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು, 1 ಡ್ರಾ ಸಾಧಿಸಿದ್ದು 98 ಅಂಕ ಗಳಿಸಿದೆ. ಸೋಲಿನ ಹೊರತಾಗಿಯೂ ಭಾರತಕ್ಕೆ ಡಬ್ಲ್ಯುಟಿಸಿ ಫೈನಲ್ ತಲುಪುವ ಸಾಧ್ಯತೆ ಇನ್ನೂ ಇದೆ. ಲೀಗ್ ಅಂಕಪಟ್ಟಿಯಲ್ಲಿ ಅಗ್ರ 2 ತಂಡಗಳು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಲಿವೆ.
(3 / 7)
ಐತಿಹಾಸಿಕ ಸರಣಿಯನ್ನು ಗೆದ್ದುಕೊಂಡ ನ್ಯೂಜಿಲೆಂಡ್, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಅಂತಿಮ ಟೆಸ್ಟ್ನ ಗೆಲುವಿನೊಂದಿಗೆ ಗೆಲುವಿನ ಶೇಕಡವಾರನ್ನು ಏರಿಸಿಕೊಂಡಿದೆ. ಕಿವೀಸ್ 11 ಪಂದ್ಯಗಳಲ್ಲಿ 6 ಗೆಲುವು, 5 ಸೋಲಿನೊಂದಿಗೆ 72 ಅಂಕ ಗಳಿಸಿದೆ. ಬ್ಲ್ಯಾಕ್ಕ್ಯಾಪ್ಸ್ ಗೆಲುವಿನ ಶೇಕಡವಾರು 54.55 ಆಗಿದ್ದು, ಫೈನಲ್ ಪ್ರವೇಶಿಸಲು ರೇಸ್ನಲ್ಲಿದೆ.
(4 / 7)
ಭಾರತ ತಂಡ 2ನೇ ಸ್ಥಾನಕ್ಕೆ ಕುಸಿದ ಕಾರಣ ಆಸ್ಟ್ರೇಲಿಯಾ ಲೀಗ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ಮತ್ತಷ್ಟು ಬೂಸ್ಟ್ ಸಿಕ್ಕಂತಾಗಿದೆ. ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು, 1 ಡ್ರಾ ಸಾಧಿಸಿ ಒಟ್ಟು 90 ಅಂಕ ಗಳಿಸಿದೆ. ಆಸೀಸ್ ಗೆಲುವಿನ ಶೇಕಡಾವಾರು 62.50 ಆಗಿದೆ.
(5 / 7)
ಶ್ರೀಲಂಕಾ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಸದ್ಯ ಶ್ರೀಲಂಕಾ 9 ಪಂದ್ಯಗಳಿಂದ 60 ಅಂಕ ಗಳಿಸಿದೆ. ಅವರ ಗೆಲುವಿನ ಶೇಕಡಾವಾರು 55.56 ಆಗಿದೆ. 8 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ, ಗೆಲುವಿನ ಶೇಕಡವಾರು 54.17 ಹೊಂದಿದೆ. ಇಂಗ್ಲೆಂಡ್ ಆರನೇ ಸ್ಥಾನದಲ್ಲಿದ್ದು, ಗೆಲುವಿನ ಶೇಕಡವಾರು 40.79.
(6 / 7)
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪಾಕಿಸ್ತಾನ 7ನೇ ಸ್ಥಾನದಲ್ಲಿದ್ದು, 10 ಪಂದ್ಯಗಳಲ್ಲಿ 40 ಅಂಕ ಗಳಿಸಿದೆ. ಗೆಲುವಿನ ಶೇ. 33.33. ಬಾಂಗ್ಲಾದೇಶ ಎಂಟನೇ ಸ್ಥಾನದಲ್ಲಿದ್ದು, ಗೆಲುವಿನ ಶೇ. 27.50. ವೆಸ್ಟ್ ಇಂಡೀಸ್ ಒಂಬತ್ತನೇ ಸ್ಥಾನದಲ್ಲಿದ್ದು, ಗೆಲುವಿನ ಶೇಕಡವಾರು 18.52.
ಇತರ ಗ್ಯಾಲರಿಗಳು