WTC Point Table: ಪರ್ತ್ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೇಗಿದೆ; ಭಾರತಕ್ಕೆ ಬಡ್ತಿ, ಎರಡನೇ ಸ್ಥಾನಕ್ಕೆ ಕುಸಿದ ಆಸೀಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Point Table: ಪರ್ತ್ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೇಗಿದೆ; ಭಾರತಕ್ಕೆ ಬಡ್ತಿ, ಎರಡನೇ ಸ್ಥಾನಕ್ಕೆ ಕುಸಿದ ಆಸೀಸ್

WTC Point Table: ಪರ್ತ್ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೇಗಿದೆ; ಭಾರತಕ್ಕೆ ಬಡ್ತಿ, ಎರಡನೇ ಸ್ಥಾನಕ್ಕೆ ಕುಸಿದ ಆಸೀಸ್

  • ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 295 ರನ್‌​ಗಳ ಐತಿಹಾಸಿಕ ಜಯ ಸಾಧಿಸಿದೆ. ಪರ್ತ್‌ ಟೆಸ್ಟ್‌ನಲ್ಲಿ ಬೃಹತ್‌ ಗೆಲುವಿನೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ ಮೇಲೇರಿದೆ. ಡಬ್ಲ್ಯುಟಿಸಿ ಫೈನಲ್‌ಗೇರಲು ಸರಣಿಯಲ್ಲಿ ತಂಡಕ್ಕೆ ಇನ್ನಷ್ಟು ಗೆಲುವಿನ ಅಗತ್ಯವಿದೆ.

ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ಎರಡನೇ ಸ್ಥಾನದಲ್ಲಿತ್ತು. ಇದೀಗ ಆಸೀಸ್‌ ತಂಡವನ್ನು ಎರಡನೇ ಸ್ಥಾನಕ್ಕಿಳಿಸಿ ಭಾರತ ಅಗ್ರಸ್ಥಾನಕ್ಕೇರಿದೆ. 15 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿರುವ ತಂಡ ಶೇಕಡಾ 61.110 ಅಂಕಗಳನ್ನು ಹೊಂದಿದೆ.
icon

(1 / 7)

ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ಎರಡನೇ ಸ್ಥಾನದಲ್ಲಿತ್ತು. ಇದೀಗ ಆಸೀಸ್‌ ತಂಡವನ್ನು ಎರಡನೇ ಸ್ಥಾನಕ್ಕಿಳಿಸಿ ಭಾರತ ಅಗ್ರಸ್ಥಾನಕ್ಕೇರಿದೆ. 15 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿರುವ ತಂಡ ಶೇಕಡಾ 61.110 ಅಂಕಗಳನ್ನು ಹೊಂದಿದೆ.(AP)

ತವರಿನ ಪ್ರೇಕ್ಷಕರ ಮುಂದೆ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ, ಮತ್ತೆ ಎರಡನೇ ಸ್ಥಾನಕ್ಕೆ ಕುಸಿದಿದೆ. ತವರಿನಲ್ಲಿ ಕಿವೀಸ್‌ ವಿರುದ್ಧ ಭಾರತದ ಸರಣಿ ಸೋಲಿನ ಬಳಿಕ ಆಸೀಸ್‌ ಅಗ್ರಸ್ಥಾನ ಪಡೆದಿತ್ತು. ಈಗ 13 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿರುವ ಆಸೀಸ್‌ ಶೇಕಡಾ 57.690 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿದಿದೆ.
icon

(2 / 7)

ತವರಿನ ಪ್ರೇಕ್ಷಕರ ಮುಂದೆ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ, ಮತ್ತೆ ಎರಡನೇ ಸ್ಥಾನಕ್ಕೆ ಕುಸಿದಿದೆ. ತವರಿನಲ್ಲಿ ಕಿವೀಸ್‌ ವಿರುದ್ಧ ಭಾರತದ ಸರಣಿ ಸೋಲಿನ ಬಳಿಕ ಆಸೀಸ್‌ ಅಗ್ರಸ್ಥಾನ ಪಡೆದಿತ್ತು. ಈಗ 13 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿರುವ ಆಸೀಸ್‌ ಶೇಕಡಾ 57.690 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿದಿದೆ.(AP)

ಅತ್ತ ಶ್ರೀಲಂಕಾ ತಂಡ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. 9 ಪಂದ್ಯಗಳಲ್ಲಿ‌ 5 ಗೆಲುವು ಸಾಧಿಸಿರುವ ತಂಡ ಶೇ. 55.560 ಅಂಕ ಹೊಂದಿದೆ.
icon

(3 / 7)

ಅತ್ತ ಶ್ರೀಲಂಕಾ ತಂಡ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. 9 ಪಂದ್ಯಗಳಲ್ಲಿ‌ 5 ಗೆಲುವು ಸಾಧಿಸಿರುವ ತಂಡ ಶೇ. 55.560 ಅಂಕ ಹೊಂದಿದೆ.(AFP)

ಭಾರತದ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ ಸಾಧಿಸಿದ ನ್ಯೂಜಿಲೆಂಡ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 6 ಗೆಲುವು ಕಂಡಿರುವ ತಂಡ 54.550 ಶೇಕಡಾ ಅಂಕ ಹೊಂದಿದೆ.
icon

(4 / 7)

ಭಾರತದ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ ಸಾಧಿಸಿದ ನ್ಯೂಜಿಲೆಂಡ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 6 ಗೆಲುವು ಕಂಡಿರುವ ತಂಡ 54.550 ಶೇಕಡಾ ಅಂಕ ಹೊಂದಿದೆ.(AP)

ದಕ್ಷಿಣ ಆಫ್ರಿಕಾ ತಂಡ 8ರಲ್ಲಿ 4 ಗೆಲುವಿನೊಂದಿಗೆ ಐದನೇ ಸ್ಥಾನದಲ್ಲಿದೆ. ತಂಡದ ಬಳಿ 54.170 ಶೇಕಡಾ ಅಂಕಗಳಿವೆ.
icon

(5 / 7)

ದಕ್ಷಿಣ ಆಫ್ರಿಕಾ ತಂಡ 8ರಲ್ಲಿ 4 ಗೆಲುವಿನೊಂದಿಗೆ ಐದನೇ ಸ್ಥಾನದಲ್ಲಿದೆ. ತಂಡದ ಬಳಿ 54.170 ಶೇಕಡಾ ಅಂಕಗಳಿವೆ.(AFP)

ಇಂಗ್ಲೆಂಡ್‌ ತಂಡ 19ರಲ್ಲಿ 9 ಗೆಲುವಿನೊಂದಿಗೆ 40.790 ಶೇಕಡಾ ಅಂಖ ಹೊಂದಿದೆ. ತಂಡ ಆರನೇ ಸ್ಥಾನದಲ್ಲಿದೆ.
icon

(6 / 7)

ಇಂಗ್ಲೆಂಡ್‌ ತಂಡ 19ರಲ್ಲಿ 9 ಗೆಲುವಿನೊಂದಿಗೆ 40.790 ಶೇಕಡಾ ಅಂಖ ಹೊಂದಿದೆ. ತಂಡ ಆರನೇ ಸ್ಥಾನದಲ್ಲಿದೆ.(REUTERS)

WTC ಅಂಕಪಟ್ಟಿಯಲ್ಲಿ, ತಂಡಗಳು ಒಂದು ಪಂದ್ಯದಲ್ಲಿ ಗೆದ್ದರೆ 12 ಅಂಕಗಳನ್ನು ನೀಡಲಾಗುತ್ತದೆ. ಡ್ರಾ ಆದರೆ 4 ಮತ್ತು ಟೈ ಆದರೆ ತಲಾ 6 ​​ಅಂಕಗಳನ್ನು ನೀಡಲಾಗುತ್ತವೆ. ಅಂಕಗಳ ಶೇಕಡಾವಾರು ಪ್ರಮಾಣ (PCT) ಆಧರಿಸಿ ಅಂಕಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫೈನಲ್‌ ಪಂದ್ಯ ಆಡುತ್ತವೆ.
icon

(7 / 7)

WTC ಅಂಕಪಟ್ಟಿಯಲ್ಲಿ, ತಂಡಗಳು ಒಂದು ಪಂದ್ಯದಲ್ಲಿ ಗೆದ್ದರೆ 12 ಅಂಕಗಳನ್ನು ನೀಡಲಾಗುತ್ತದೆ. ಡ್ರಾ ಆದರೆ 4 ಮತ್ತು ಟೈ ಆದರೆ ತಲಾ 6 ​​ಅಂಕಗಳನ್ನು ನೀಡಲಾಗುತ್ತವೆ. ಅಂಕಗಳ ಶೇಕಡಾವಾರು ಪ್ರಮಾಣ (PCT) ಆಧರಿಸಿ ಅಂಕಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫೈನಲ್‌ ಪಂದ್ಯ ಆಡುತ್ತವೆ.(AP)


ಇತರ ಗ್ಯಾಲರಿಗಳು