ಕನ್ನಡ ಸುದ್ದಿ  /  ಕ್ರೀಡೆ  /  Wtc Prize Money: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಬಹುಮಾನ ಮೊತ್ತ ಘೋಷಣೆ; ವಿಜೇತರು, ರನ್ನರ್​ಅಪ್​​ ತಂಡಕ್ಕೆ ಇಷ್ಟು ಕೋಟಿ ಸಿಗುತ್ತೆ!

WTC Prize Money: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಬಹುಮಾನ ಮೊತ್ತ ಘೋಷಣೆ; ವಿಜೇತರು, ರನ್ನರ್​ಅಪ್​​ ತಂಡಕ್ಕೆ ಇಷ್ಟು ಕೋಟಿ ಸಿಗುತ್ತೆ!

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ಗೆ (WTC 2023) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಬಹುಮಾನದ ವಿವರಗಳನ್ನು ಬಹಿರಂಗಪಡಿಸಿದೆ

ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್​ ಕಮಿನ್ಸ್​ ಮತ್ತು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ.
ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್​ ಕಮಿನ್ಸ್​ ಮತ್ತು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ. (ICC Twitter)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (2021-2023) ಫೈನಲ್​ (ICC World Test Championship Final 2023) ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ಮುಂದಿನ ತಿಂಗಳು 7-11 ರಿಂದ ಇಂಗ್ಲೆಂಡ್‌ನ ಓವಲ್‌ನಲ್ಲಿ (England Oval) ನಡೆಯಲಿದೆ. ಉಭಯ ತಂಡಗಳ ಹಲವು ಆಟಗಾರರು ಈಗಾಗಲೇ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ. ಏತನ್ಮಧ್ಯೆ, ಇಂಟರ್​​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (International Cricket Council) ಚಾಂಪಿಯನ್​, ರನ್ನರ್​​ಅಪ್​ ತಂಡಗಳಿಗೆ ಬಹುಮಾನ ಮೊತ್ತ (Prize Money) ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ವಿಜೇತ ತಂಡಕ್ಕೆ 13.32 ಕೋಟಿ

ಚಾಂಪಿಯನ್​ ಮತ್ತು ರನ್ನರ್​ ಅಪ್​ ತಂಡಗಳಿಗೆ ಮಾತ್ರವಲ್ಲ, ಉಳಿದ ತಂಡಗಳಿಗೂ ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿದೆ. ಆದರೆ ಅವುಗಳ ಸ್ಥಾನಕ್ಕೆ ತಕ್ಕಂತೆ ಬಹುಮಾನ ಮೊತ್ತ ಸಿಗಲಿದೆ. ಈ ಎರಡು ವರ್ಷಗಳ ಅವಧಿಗೆ ಡಬ್ಲ್ಯೂಟಿಸಿ ಆಡಿದ 9 ತಂಡಗಳಿಗೆ ಐಸಿಸಿ 3.8 ಮಿಲಿಯನ್ ಡಾಲರ್‌ಗಳನ್ನು ಬಹುಮಾನವಾಗಿ ವಿತರಿಸಲಿದೆ.

ಅದರಂತೆ, ಡಬ್ಲ್ಯೂಟಿಸಿ ಫೈನಲ್​​​​ ವಿಜೇತರು 1.6 ಮಿಲಿಯನ್ ಡಾಲರ್ ಬಹುಮಾನ ಪಡೆಯುತ್ತಾರೆ. ಅಂದರೆ, ಓವಲ್ ಟೆಸ್ಟ್​ನಲ್ಲಿ ಗೆಲ್ಲುವ ತಂಡಕ್ಕೆ 13.32 ಕೋಟಿ ರೂಪಾಯಿ ಲಭ್ಯವಾಗಲಿದೆ. ಕಳೆದ ವರ್ಷ ಭಾರತ ಮತ್ತು ನ್ಯೂಜಿಲೆಂಡ್ (India vs Australia) ನಡುವಿನ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಗೆದ್ದಿದ್ದ ನ್ಯೂಜಿಲೆಂಡ್​ ತಂಡಕ್ಕೂ ಇಷ್ಟೇ ಬಹುಮಾನ ಸಿಕ್ಕಿತ್ತು.

ಫೈನಲ್​​ನಲ್ಲಿ ಸೋತು ಹೊರ ನಡೆದ ತಂಡಕ್ಕೆ 6.5 ಕೋಟಿ ($ 8,00,000) ಸಿಗಲಿದೆ. ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ (South Africa) 4,50,000 ಡಾಲರ್ (3.5 ಕೋಟಿ ರೂ), 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್ (England) 3,50,000 ಡಾಲರ್ (2.8 ಕೋಟಿ ರೂ) ಪಡೆಯಲಿದೆ. ಶ್ರೀಲಂಕಾ (Sri Lanka) 5ನೇ ಸ್ಥಾನದಲ್ಲಿರುವ 2,00,000 ಡಾಲರ್ (1.6 ಕೋಟಿ ರೂ) ಪಡೆಯುತ್ತದೆ.

ಈ ಕ್ರಮಾಂಕದಲ್ಲಿ ನಂತರದ ಸ್ಥಾನದಲ್ಲಿರುವ ನ್ಯೂಜಿಲೆಂಡ್ (New Zealand), ಪಾಕಿಸ್ತಾನ (Pakistan), ವೆಸ್ಟ್ ಇಂಡೀಸ್ (West Indies) ಮತ್ತು ಬಾಂಗ್ಲಾದೇಶ (Bangladesh) ತಲಾ 1,00,000 ಡಾಲರ್ (ಪ್ರತಿ ತಂಡಕ್ಕೆ 82 ಲಕ್ಷ ರೂ) ಪಡೆಯಲಿವೆ. ಡಬ್ಲ್ಯೂಟಿಸಿ ಫೈನಲ್​ ಮುಗಿದ ತಕ್ಷಣ ಐಸಿಸಿ ಈ ಬಹುಮಾನದ ಹಣವನ್ನು ವಿತರಿಸುತ್ತದೆ.

ಫೈನಲ್​​ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಇದು ಎರಡನೇ ಆವೃತ್ತಿಯಾಗಿದೆ. ಮೊದಲ ಆವೃತ್ತಿಯಲ್ಲಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಟೀಮ್​ ಇಂಡಿಯಾ ಮತ್ತೊಮ್ಮೆ ಫೈನಲ್​ ಪ್ರವೇಶಿಸಿದೆ. ಕಳೆದ ಬಾರಿ ನ್ಯೂಜಿಲೆಂಡ್​ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಈ ಬಾರಿ ಡಬ್ಲ್ಯೂಟಿಸಿ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಗುತ್ತಿವೆ.

ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ ಆಟಗಾರರು

ಫೈನಲ್​ ಪಂದ್ಯಕ್ಕೆ ಟೀಮ್​ ಇಂಡಿಯಾವನ್ನು ಪ್ರಕಟಿಸಿದೆ. ಗಾಯದಿಂದ ಕೆಎಲ್​ ರಾಹುಲ್​ ಅವರು ಮಹತ್ವದ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಪಂದ್ಯಕ್ಕೆ ಆಯ್ಕೆಯಾದ ಭಾರತದ ಆಟಗಾರರು ಈಗಾಗಲೇ ಇಂಗ್ಲೆಂಡ್​ನಲ್ಲಿ ಬೀಡು ಬಿಟ್ಟಿದ್ದಾರೆ. ರೋಹಿತ್​ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಮೇ 28ರಂದು ನಡೆಯುವ ಐಪಿಎಲ್​ ಫೈನಲ್​ ನಂತರ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ.