Babar Azam: ಪೆಟ್ರೋಲ್​ ಎಲ್ಲಿಂದ ಕಳ್ಳತನ ಮಾಡಿದ್ರಿ; ವಿಶ್ವಕಪ್​ ಹತ್ತಿರ ಬರ್ತಿದ್ರೂ ಬೈಕ್​ ರೈಡಿಂಗ್​ ಬೇಕಾ; ಬಾಬರ್ ಅಜಮ್ ಫುಲ್ ಟ್ರೋಲ್-cricket news where did you steal petrol from pakistanis want captain babar azam to stop riding his superbike prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Babar Azam: ಪೆಟ್ರೋಲ್​ ಎಲ್ಲಿಂದ ಕಳ್ಳತನ ಮಾಡಿದ್ರಿ; ವಿಶ್ವಕಪ್​ ಹತ್ತಿರ ಬರ್ತಿದ್ರೂ ಬೈಕ್​ ರೈಡಿಂಗ್​ ಬೇಕಾ; ಬಾಬರ್ ಅಜಮ್ ಫುಲ್ ಟ್ರೋಲ್

Babar Azam: ಪೆಟ್ರೋಲ್​ ಎಲ್ಲಿಂದ ಕಳ್ಳತನ ಮಾಡಿದ್ರಿ; ವಿಶ್ವಕಪ್​ ಹತ್ತಿರ ಬರ್ತಿದ್ರೂ ಬೈಕ್​ ರೈಡಿಂಗ್​ ಬೇಕಾ; ಬಾಬರ್ ಅಜಮ್ ಫುಲ್ ಟ್ರೋಲ್

ಲಾಹೋರ್ ಬೀದಿಗಳಲ್ಲಿ ಬಿಎಂಡಬ್ಲ್ಯು ಬೈಕ್ ರೈಡ್​ ಮಾಡುತ್ತಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್ ಅಜಮ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಬಾಬರ್​ ಅಜಮ್​
ಬಾಬರ್​ ಅಜಮ್​

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Pakistan Cricket Team Captain Babar Azam) ಅವರನ್ನು ಪಾಕಿಸ್ತಾನಿ ನೆಟಿಜನ್‌ಗಳು ನಿಂದಿಸುತ್ತಿದ್ದಾರೆ. ಅವಕಾಶ ಸಿಕ್ಕಿದೆ ಅಂತ ತಿಳಿದುಕೊಂಡಿರುವ ನೆಟ್ಟಿಗರು ವಿಪರೀತ ಟ್ರೋಲ್ ಮಾಡುತ್ತಿದ್ದಾರೆ. ತಮ್ಮದೇ ದೇಶದ ಕ್ರಿಕೆಟಿಗನನ್ನು ಯಾಕೆ ಟ್ರೋಲ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಇದು ನಿಜ ಅಲ್ಲವೇನೋ ಎಂದೂ ನಿಮಗೆ ಅನಿಸಬಹುದು. ಆದರೆ, ಇದು ಅಕ್ಷರಶಃ ಸತ್ಯ.

ಇದಕ್ಕೆ ಕಾರಣ, ಬಾಬರ್ ಅಜಮ್ ಲಾಹೋರ್ ಬೀದಿಗಳಲ್ಲಿ ಬಿಎಂಡಬ್ಲ್ಯು ಬೈಕ್ ಓಡಿಸುತ್ತಿರುವುದು. ಹೌದು, ಬಾಬರ್ ಕೂಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅದರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮತ್ತು ಆ ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಕೆಲವು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು, ಈ ಬಗ್ಗೆ ವಿಮರ್ಶಾತ್ಮಕ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ನಿಮಗಿದು ಬೇಕಿತ್ತಾ ಎನ್ನುತ್ತಿದ್ದಾರೆ. ಕೆಲವರು ಎಚ್ಚರಿಕೆಯ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಹೀಗೆ ಟ್ರೋಲ್​ ಮಾಡಲು ಕಾರಣ ಇದೆ. ಇನ್ನು ಕೆಲವೇ ವಾರಗಳಲ್ಲಿ ಏಷ್ಯಾಕಪ್ ಮತ್ತು ಇನ್ನೈದು ತಿಂಗಳಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಆದರೆ ಈ ಸಮಯದಲ್ಲಿ ಬಾಬರ್ ತನ್ನ ಬೈಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ನೆಟ್ಸ್​​ನಲ್ಲಿ ಅಭ್ಯಾಸ ನಡೆಸಿ, ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ವಿಶ್ವಕಪ್ ಗೆದ್ದುಕೊಡುವ ಭಾವನೆ ಅವರಿಗಿಲ್ಲ ಎನ್ನುತ್ತಿದ್ದಾರೆ.

ಪೆಟ್ರೋಲ್​ಗೆ ದುಡ್ಡು ಎಲ್ಲಿಂದ ಬಂತು?

ಈ ಹಿನ್ನೆಲೆಯಲ್ಲಿ ಕೆಲ ನೆಟ್ಟಿಗರು ‘ಪೆಟ್ರೋಲ್​ಗೆ ಹಣ ಎಲ್ಲಿಂದ ಕಳ್ಳತನ ಮಾಡಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರು ಪಾಕ್ ನಾಯಕನನ್ನು ಅವಮಾನಿಸುವ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಇನ್ನು ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಎಚ್ಚರಿಕೆಯಿಂದ ಬೈಕ್ ಓಡಿಸಿ ಬಾಬರ್​. ಪಾಕಿಸ್ತಾನ ಕಪ್ ಗೆಲ್ಲಬೇಕಾದರೆ ನೀವೇ ಆಧಾರ ಎಂದಿದ್ದಾರೆ.

ಈ ಸಮಯದಲ್ಲಿ ಬೈಕ್​ನಿಂದ ಕೆಳಗೆ ಬಿದ್ದರೆ ವಿಶ್ವಕಪ್​​ನಲ್ಲಿ ಸೋಲುವುದು ಭಾರತದ ವಿರುದ್ಧ ಸೋಲುವುದು ಗ್ಯಾರಂಟಿ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಕೆಲವು ನೆಟಿಜನ್‌ಗಳು ವಿಶ್ವಕಪ್ ಗೆಲ್ಲಲು ಈ ಸಮಯವು ತುಂಬಾ ಮೌಲ್ಯಯುತವಾಗಿದೆ. ಆದರೆ ತಂಡದ ನಾಯಕ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ. ಅವರು ತುಂಬಾ ಬೇಜವಾಬ್ದಾರಿ ಎಂದು ಕಿಡಿಕಾರಿದ್ದಾರೆ.

ಪಾಕಿಸ್ತಾನ ದಿವಾಳಿ

ಪಾಕಿಸ್ತಾನ ದೇಶವು ಸದ್ಯ ಆರ್ಥಿಕ ದಿವಾಳಿಯಾಗಿದೆ. ದೇಶದಲ್ಲಿ ಬೆಲೆ ಏರಿಕೆ ಡಬಲ್​ ಆಗಿದೆ. ದಿನಸಿ ಸೇರಿದಂತೆ ಪ್ರತಿಯೊಂದೂ ವಸ್ತುವಿನ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಅಪಮೌಲ್ಯದ ನಡುವೆ ನಗದು ಕೊರತೆ ಎದುರಿಸುತ್ತಿದೆ. ಇದರ ಜೊತೆಗೆ ಪೆಟ್ರೋಲ್ ಬೆಲೆಯೂ ಹೆಚ್ಚಾಗಿದೆ. ಲೀಟರ್‌ಗೆ 10 ರೂಪಾಯಿ ಏರಿದೆ. ಇದರೊಂದಿಗೆ ಪಾಕ್​ನಲ್ಲಿ ಪ್ರತಿ ಲೀಟರ್​ಗೆ 282 ರೂಪಾಯಿ ಆಗಿದೆ.

ಆದರೆ ಡೀಸೆಲ್ ಮತ್ತು ಲಘು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಕಾಣದಿರುವುದು ಸಮಾಧಾನಕರ ಸಂಗತಿ. ಡೀಸೆಲ್ 293 ರೂಪಾಯಿ ಮತ್ತು ಲಘು ಡೀಸೆಲ್ 174.68 ರೂಪಾಯಿ ಇದೆ. ಈ ಬಗ್ಗೆ ಹಣಕಾಸು ಸಚಿವ ಇಶಾಕ್ ದಾರ್ ಅವರು ಏಪ್ರಿಲ್​​ನಲ್ಲಿ ಪ್ರಕಟಿಸಿದ್ದರು. ಸೀಮೆಎಣ್ಣೆ ಬೆಲೆಯೂ ಪ್ರತಿ ಲೀಟರ್​​ಗೆ 186.07 ರೂಪಾಯಿಗೆ ತಲುಪಿದೆ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.