ಕನ್ನಡ ಸುದ್ದಿ  /  Sports  /  Ind Vs Aus Shreyas Iyer Complains Of Lower Back Pain Sent For Scans

Ind vs Aus: ಅಂತಿಮ ಟೆಸ್ಟ್​ನಲ್ಲಿ ಬ್ಯಾಟ್​ ಬೀಸಲ್ವಾ​​​ ಅಯ್ಯರ್.? IPL​​​ಗೂ ಡೌಟ್​​​? ಯಾಕೆ ಗೊತ್ತಾ?

Ind vs Aus 4th Test: ಮೂರನೇ ದಿನದಾಟದ ಆರಂಭಕ್ಕೂ ಮುನ್ನ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಬಿಸಿಸಿಐ ವೈದ್ಯಕೀಯ ತಂಡ ಶ್ರೇಯಸ್ ಅಯ್ಯರ್ ಅವರನ್ನು ಸ್ಕ್ಯಾನ್​ಗೆ ಕಳುಹಿಸಿದೆ.

ಶ್ರೇಯಸ್​ ಅಯ್ಯರ್​
ಶ್ರೇಯಸ್​ ಅಯ್ಯರ್​ (Twitter)

ಅಹ್ಮದಾಬಾದ್​ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್​​​ ಇಂಡಿಯಾಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಪಂದ್ಯ ಸುಸ್ಥಿತಿಯಲ್ಲಿ ಸಾಗುತ್ತಿದ್ದು, ಭಾರತ ಮುನ್ನಡೆಯತ್ತ ಹೆಜ್ಜೆ ಹಾಕುತ್ತಿದೆ. ಇದರ ನಡುವೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದಾರೆ.

ಮೂರನೇ ದಿನದಾಟದ ಆರಂಭಕ್ಕೂ ಮುನ್ನ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಬಿಸಿಸಿಐ ವೈದ್ಯಕೀಯ ತಂಡ ಶ್ರೇಯಸ್ ಅಯ್ಯರ್ ಅವರನ್ನು ಸ್ಕ್ಯಾನ್​ಗೆ ಕಳುಹಿಸಿದೆ. ಇದೇ ಕಾರಣಕ್ಕೆ ರವೀಂದ್ರ ಜಡೇಜಾ 5ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದರು. ಅಷ್ಟೇ ಅಲ್ಲದೆ, ಇಂದು ಕೂಡ ಅಯ್ಯರ್​​ ಬದಲಿಗೆ KS ಭರತ್​ ಕಣಕ್ಕಿಳಿದರು.

ಅಯ್ಯರ್ ಆರೋಗ್ಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಒಂದು ವೇಳೆ ಶ್ರೇಯಸ್ ಬ್ಯಾಟಿಂಗ್‌ ಆಡಲು ಸಾಧ್ಯವಾಗದೇ ಇದ್ದರೆ, ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ಕನ್ಕಷನ್ ಬ್ಯಾಟ್​ ಬೀಸುವ ಸಾಧ್ಯತೆ ಇದೆ. ಆದಾಗಿಯೂ ಐಸಿಸಿ ನಿಯಮಗಳ ಪ್ರಕಾರ, ಆಟಗಾರನು ಗಾಯಗೊಂಡರೆ ಅವನು ರೆಫರಿಗೆ ತಿಳಿಸಬೇಕು ಮತ್ತು ಕನ್ಕಷನ್ ಬದಲಿ ಆಡಲು ಅನುಮತಿ ತೆಗೆದುಕೊಳ್ಳಬೇಕು.

ಆದರೆ, ಸೂರ್ಯಕುಮಾರ್ ಯಾದವ್ ಅವರಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗುವುದಿಲ್ಲ. ಸದ್ಯ ಅಯ್ಯರ್ ಗಾಯ ಗಂಭೀರವಾಗಿರುವ ಸಾಧ್ಯತೆ ಇದ್ದು, ಆಸ್ಟ್ರೇಲಿಯಾ ಏಕದಿನ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಇದರಿಂದ ಸತತ ವೈಫಲ್ಯ ಅನುಭವಿಸುತ್ತಿರುವ ಸೂರ್ಯ ಮತ್ತೊಂದು ಅವಕಾಶ ತಮ್ಮದಾಗಿಸಿಕೊಳ್ಳಲಿದ್ದಾರೆ.

ಐಪಿಎಲ್​ಗೂ ಅನುಮಾನ..?

ಗಾಯದಿಂದ ಚೇತರಿಸಿಕೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕು ಎಂದು ವೈದ್ಯರು ಸೂಚಿಸಿದರೆ ಅಯ್ಯರ್, ಈ ಬಾರಿಯ ಐಪಿಎಲ್​​​ ಆವೃತ್ತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಇದು KKR​​ ಭಾರೀ ಸಂಕಷ್ಟಕ್ಕೆ ಎದುರಾಗಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್​ ಅಯ್ಯರ್​ ನಾಯಕನಾಗಿದ್ದಾರೆ. ಒಂದು ವೇಳೆ ಅಯ್ಯರ್ ಅಲಭ್ಯರಾದರೆ ನೂತನ ನಾಯಕನ ಹುಡುಕಾಟ ನಡೆಸಬೇಕಾಗುತ್ತದೆ.

ಗಾಯದ ಸಮಸ್ಯೆಯಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್, ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಆಡಿರಲಿಲ್ಲ. ಅಯ್ಯರ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಆಡಿದ್ದರು. ಆದರೆ ಸೂರ್ಯ ತಮ್ಮ ಮೊದಲ ಟೆಸ್ಟ್‌ನಲ್ಲಿ 20 ಎಸೆತಗಳಲ್ಲಿ 8 ರನ್​ಗಳಿಸಿ ಔಟಾಗಿದ್ದರು.

ನಾಗ್ಪುರ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ಸೋತಿದ್ದರಿಂದ ಸೂರ್ಯಕುಮಾರ್​​​ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ. ಗಾಯದಿಂದ ಚೇತರಿಸಿಕೊಂಡ ಶ್ರೇಯಸ್ ಡೆಲ್ಲಿಯಲ್ಲಿ ನಡೆದ 2ನೇ ಟೆಸ್ಟ್​​​​​​​​​​​​ನಲ್ಲಿ ಅವಕಾಶ ಪಡೆದಿದ್ದರು. ಮೊದಲ ಇನಿಂಗ್ಸ್‌ನಲ್ಲಿ 15 ಎಸೆತಗಳಲ್ಲಿ 4 ರನ್ ಗಳಿಸಿದ್ದ ಮಿಡಲ್​ ಆರ್ಡರ್​ ಬ್ಯಾಟರ್​​ 2ನೇ ಇನ್ನಿಂಗ್ಸ್‌ನಲ್ಲಿ 10 ಎಸೆತಗಳಲ್ಲಿ 12 ರನ್ ಮತ್ತು ಒಂದು ಸಿಕ್ಸರ್ ಗಳಿಸಿ ಪೆವಿಲಿಯನ್​ಗೆ ಹೆಜ್ಜೆ ಹಾಕಿದ್ದರು.

ಇಂದೋರ್‌ನಲ್ಲಿ ನಡೆದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಡಕ್​​​​ ಔಟ್​​ ಆಗಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ ಅಯ್ಯರ್ 27 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 26 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಪೆವಿಲಿಯನ್ ಸೇರಿದರು.