ಕನ್ನಡ ಸುದ್ದಿ  /  Sports  /  Virender Sehwag On How Sachin Tendulkar Upped His Fitness Game

ಸಚಿನ್​​​​​​ ಅಸಲಿ ವಿಷಯ ಬಹಿರಂಗಪಡಿಸಿದ ಸೆಹ್ವಾಗ್.. ಇದು ಕ್ರಿಕೆಟ್​ ದೇವರ ಬಗ್ಗೆ ಯಾರಿಗೂ ಗೊತ್ತಿಲ್ಲದ ರಹಸ್ಯ!

Sachin Tendulkar: ಸಚಿನ್ 24 ವರ್ಷಗಳ ಕಾಲ ಫಿಟ್​​​ನೆಸ್​ ಕಾಯ್ದುಕೊಂಡಿದ್ದು ಹೇಗೆ.? ಅವರ ಫಿಟ್​​​ನೆಸ್​ ರಹಸ್ಯವೇನು? ಇದೀಗ ಅದೆಲ್ಲವೂ ಬಯಲಾಗಿದೆ. ಭಾರತ ತಂಡದ​​​​ ಮಾಜಿ ಡ್ಯಾಶಿಂಗ್ ಓಪನರ್​​​​​ ವೀರೇಂದ್ರ ಸೆಹ್ವಾಗ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಫಿಟ್‌ನೆಸ್ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಸಚಿನ್​ ತೆಂಡೂಲ್ಕರ್​ ಮತ್ತು ವೀರೇಂದ್ರ ಸೆಹ್ವಾಗ್​
ಸಚಿನ್​ ತೆಂಡೂಲ್ಕರ್​ ಮತ್ತು ವೀರೇಂದ್ರ ಸೆಹ್ವಾಗ್​

ಸಚಿನ್ ತೆಂಡೂಲ್ಕರ್.. (Sachin Tendulkar) ಮಾಸ್ಟರ್​ ಬ್ಲಾಸ್ಟರ್, ಬ್ಯಾಟಿಂಗ್​ ದಿಗ್ಗಜ, ಕ್ರಿಕೆಟ್ ದೇವರು.. ಈ ಹೆಸರು ಕ್ರಿಕೆಟ್ ಇತಿಹಾಸದಲ್ಲಿ ಚಿರ ಕಾಲ ಉಳಿಯಲಿದೆ. ಅವರ ಹೆಸರಿನಲ್ಲಿರುವ ದಾಖಲೆಗಳು ಲೆಕ್ಕಕ್ಕಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ.! 24 ವರ್ಷಗಳ ಕಾಲ ಕ್ರಿಕೆಟ್​​​​​ ಲೋಕವನ್ನು ಆಳ್ವಿಕೆ ಮಾಡಿರುವ ಸಚಿನ್, ರನ್​ ಪರ್ವವನ್ನೇ ನಿರ್ಮಿಸಿದ್ದಾರೆ.

ದೀರ್ಘಕಾಲದವರೆಗೆ ಮೈದಾನದಲ್ಲಿ ಬ್ಯಾಟ್​ ಬೀಸಿದ ಸಚಿನ್​ ಬರೋಬ್ಬರಿ 24 ವರ್ಷಗಳ ಕಾಲ ಕ್ರಿಕೆಟ್​​ ಆಡಿದ್ದಾರೆ. ಇಷ್ಟು ವರ್ಷಗಳ ಕಾಲ ಫಿಟ್​ನೆಸ್ ಕಾಪಾಡಿಕೊಂಡಿರುವುದು ಅಂದರೆ ಒಂದು ಅದ್ಭುತವೇ ಸರಿ. ಅಷ್ಟರ ಮಟ್ಟಿಗೆ ಸಚಿನ್​ ತಮ್ಮ ಫಿಟ್​ನೆಸ್​​ ಸಿಕ್ರೇಟ್​ ಮೆಂಟೇನ್​ ಮಾಡಿದ್ದಾರೆ.​​​ ಈ ಗುಟ್ಟು ಯಾರಿಗೂ ಗೊತ್ತಿಲ್ಲ. ಫಿಟ್​ನೆಸ್​​​​​​ ಬಗ್ಗೆ ಏನೂ ತಿಳಿಯದ ಅದೆಷ್ಟೋ ಕ್ರಿಕೆಟರ್ಸ್​​ ಕ್ರಿಕೆಟ್​​​ನಲ್ಲಿ ಹೆಸರಿಲ್ಲದೆ ಹೋದರು.

ಆದರೆ ಸಚಿನ್ ಇಷ್ಟು ದಿನ ಫಿಟ್​​​ನೆಸ್​ ಕಾಯ್ದುಕೊಂಡಿದ್ದು ಹೇಗೆ.? ಅವರ ಫಿಟ್​​​ನೆಸ್​ ರಹಸ್ಯವೇನು? ಈ ಬಗ್ಗೆ ತಿಳಿದುಕೊಳ್ಳಲು ಈಗಲೂ ಕ್ರಿಕೆಟರ್ಸ್​​ಗೆ ಅದೇನೋ ಕೌತುಕ.! ಇದೀಗ ಅದೆಲ್ಲವೂ ಬಯಲಾಗಿದೆ. ಭಾರತ ತಂಡದ​​​​ ಮಾಜಿ ಡ್ಯಾಶಿಂಗ್ ಓಪನರ್​​​​​ ವೀರೇಂದ್ರ ಸೆಹ್ವಾಗ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಫಿಟ್‌ನೆಸ್ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ನೊಂದಿಗೆ ಮಾತನಾಡಿದ ಸೆಹ್ವಾಗ್, ಸಚಿನ್ ತಮ್ಮ ಆಟದಲ್ಲಿ ಸುಧಾರಣೆ ಕಾಣಲು ನಿರಂತರವಾಗಿ ಯೋಚಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಾರೆ. ಸಚಿನ್ ಅವರು ಫಿಟ್​​ನೆಸ್​​​ ವಿಚಾರದಲ್ಲಿ ವಿರಾಟ್​​ ಕೊಹ್ಲಿಗೆ ಯಾವಾಗಲೂ ಪೈಪೋಟಿ ನೀಡುತ್ತಿದ್ದರು ಎಂಬ ಅಂಶವನ್ನು ವಿವರಿಸಿದ್ದಾರೆ.

ಸಚಿನ್ ಬೇಕಿದ್ದರೆ ಇನ್ನೂ ಕೆಲವು ವರ್ಷ ಕ್ರಿಕೆಟ್ ಆಡಬಹುದು ಎಂದು ಎಲ್ಲರೂ ಅಂದುಕೊಂಡಿದ್ದು ಯಾಕೆ ಗೊತ್ತಾ? ಪ್ರತಿ ವರ್ಷ ಸಚಿನ್ ತನ್ನ ಬ್ಯಾಟಿಂಗ್ ಅನ್ನು ಹೇಗೆ ಸುಧಾರಿಸಬಹುದು ಎಂದು ನೋಡಲು ತನ್ನ ಆಟವನ್ನು ಪರಿಶೀಲಿಸುತ್ತಾರೆ. ಬ್ಯಾಟಿಂಗ್​ನಲ್ಲಿ ಬದಲಾವಣೆ ಇಲ್ಲದೇ ಇದ್ದರೆ ಶತಕಗಳನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಬೇಕಾದ ಫಿಟ್​ನೆಸ್ ಕಡೆಗೆ ಗಮನ ಹರಿಸುತ್ತಾರೆ’ ಎಂದು ಸೆಹ್ವಾಗ್ ವಿವರಿಸಿದ್ದಾರೆ.

2000ರ ಅವಧಿಯಲ್ಲಿ ತಂಡದಲ್ಲಿದ್ದ ನಮ್ಮೆಲ್ಲರಿಗಿಂತ ಸಚಿನ್ ಹೆಚ್ಚು ಫಿಟ್​ನೆಸ್​ ಕಡೆಗೆ ಗಮನ ಹರಿಸುತ್ತಿದ್ದರು. 2008ರ ನಂತರ ತಂಡದಲ್ಲಿ ಅವಕಾಶ ಪಡೆದ ವಿರಾಟ್ ಕೊಹ್ಲಿ ಅವರಿಗೆ ಸಚಿನ್ ಪೈಪೋಟಿ ನೀಡಿದ್ದು, ವಿಶೇಷವಾಗಿತ್ತು. ಫಿಟ್​ನೆಸ್​​ ವಿಚಾರದಲ್ಲಿ ಕೊಹ್ಲಿಗಿಂತ ಸಚಿನ್ ತೆಂಡೂಲ್ಕರ್​​ ಅವರೇ ಹೆಚ್ಚು ಗಮನಹರಿಸುತ್ತಿದ್ದರು. ಯಾರೂ ಕೂಡ ತಂಡದಲ್ಲಿ ಆ ಮಟ್ಟಿಗೆ ಫಿಟ್​ನೆಸ್​ ಕಾಯ್ದುಕೊಂಡಿರಲ್ಲ. ಅಷ್ಟರ ಮಟ್ಟಿಗೆ ಸಚಿನ್​​​ ದೈಹಿಕವಾಗಿ ಫಿಟ್​ ಆಗಿದ್ದರು ಎಂದು ಸಚಿನ್​​​ ಫಿಟ್​ನೆಸ್​​ ಗುಟ್ಟನ್ನು ರಟ್ಟು ಮಾಡಿದ್ದಾರೆ.

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸಚಿನ್ ತೆಂಡೂಲ್ಕರ್, 100 ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ. 51 ಟೆಸ್ಟ್ ಶತಕ ಮತ್ತು 49 ODI ಶತಕ ಗಳಿಸಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಗಳಿಸಿದರು. 24 ವರ್ಷದ ಕ್ರಿಕೆಟ್​​ನಲ್ಲಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 6 ಏಕದಿನ ವಿಶ್ವಕಪ್‌ ಆಡಿದ್ದಾರೆ.