bengaluru-city News, bengaluru-city News in kannada, bengaluru-city ಕನ್ನಡದಲ್ಲಿ ಸುದ್ದಿ, bengaluru-city Kannada News – HT Kannada

Latest bengaluru city Photos

ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ಜಾತ್ರೆಯಲ್ಲಿ ಸ್ನೇಹಿತರ ಸಮ್ಮಿಲನ ಸಾಮಾನ್ಯ, ಎಲ್ಲರು ಒಟ್ಟಿಗೆ ಸೇರಿ ಕಡಲೆಕಾಯಿ ಜತೆಗೆ ಜಾತ್ರೆಯ ಸವಿಯನ್ನು ನೆನಪುಗಳೊಂದಿಗೆ ಸವಿಯುತ್ತಾರೆ.

Bangalore News: ಬಸವನಗುಡಿ ಕಡಲೆಕಾಯಿ ಪರಿಷೆ ಶುರು, ಬೆಂಗಳೂರು ಜಾತ್ರೆಯಲ್ಲಿ ಕುಟುಂಬಗಳು, ಸ್ನೇಹಿತರ ಮಿಲನದ ಖುಷ್‌ ಖುಷಿ ಕ್ಷಣ

Monday, November 25, 2024

ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಇಂದು ಮತ್ತು ನಾಳೆ ನಡೆಯುತ್ತಿರುವುದಾದರೂ, ಶುಕ್ರವಾರದಿಂದಲೇ ರಾಮಕೃಷ್ಣ ಆಶ್ರಮ ವೃತ್ತದಿಂದ ಬ್ಯೂಗಲ್‌ರಾಕ್ ತನಕವೂ ರಸ್ತೆ ಬದಿ ಕಡಲೆಕಾಯಿ ಮತ್ತು ಆಟಸಾಮಗ್ರಿ, ಹೆಣ್ಮಕ್ಕಳ ಅಲಂಕಾರ ವಸ್ತುಗಳ ಮಾರಾಟ, ತಿಂಡಿ ತಿನಿಸುಗಳ ಮಾರಾಟ ಜೋರಾಗಿದೆ.

ಇಂದು, ನಾಳೆ ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಯ ಸಂಭ್ರಮ, ಸಡಗರ, ಇಲ್ಲಿದೆ ಆಕರ್ಷಕ ಚಿತ್ರನೋಟ

Monday, November 25, 2024

ಪ್ರತಿವರ್ಷವೂ ಕಾರ್ತೀಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ಬೆಂಗಳೂರು ಮಾತ್ರವಲ್ಲದೇ ಹಲವೆಡೆ ನಡೆಯುತ್ತದೆ. ಈ ಬಾರಿ ನವೆಂಬರ್‌ 25ರಂದು ಕಾರ್ತೀಕ ಮಾಸದ ಸೋಮವಾರವಾಗಿರುವುದರಿಂದ ಬೆಂಗಳೂರಿನ ಇತಿಹಾಸ ಪ್ರಸಿದ್ದ ಕಡಲೆಕಾಯಿ ಪರಿಷೆ ಶುರುವಾಗಲಿದೆ. ಆದರೆ ಹಿಂದಿನ ದಿನಗಳು ಭಾನುವಾರ, ಶನಿವಾರವಾಗಿರುವುದರಿಂದ ಬಸವನಗುಡಿ ಬೀದಿಗಳಲ್ಲಿ ನವೆಂಬರ್‌ 23ರಿಂದಲೇ ಹಬ್ಬದ ಸಡಗರ ಶುರುವಾಗಿದೆ.

Bangalore Groundnut Festival: ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಘಮಲು ಆಗಲೇ ಶುರು; ಬಸವನಗುಡಿಯಲ್ಲಿ ಜಾತ್ರೆಯ ನೋಟ ಬಲು ಜೋರು

Sunday, November 24, 2024

ಬೆಂಗಳೂರಿನಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಡಾ.ಮಹದೇವಪ್ಪ. ಶಿವರಾಜ ತಂಡಗಡಿ, ಪ್ರಿಯಾಂಕ್‌ ಖರ್ಗೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತತಿರರು ಇದ್ದರು.

ಕರ್ನಾಟಕದಲ್ಲಿ ಕನಕದಾಸರ ಜಯಂತಿ: ಕುಲ ಕುಲ ಕುಲ ಎಂದು ಹೊಡೆದಾಡದಿರಿ ಎಂದ ದಾಸ ಶ್ರೇಷ್ಠರಿಗೆ ಕರುನಾಡ ಗೌರವ ಹೀಗಿತ್ತು

Monday, November 18, 2024

ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಹರ ಲಾಲ್ ನೆಹರು ಅವರ ಜಯಂತಿ ಅಂಗವಾಗಿ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಸಂವಾದ ನಡೆಸಿದ ವೇಳೆ ಮಕ್ಕಳು ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಕರ್ನಾಟಕದಲ್ಲಿ ಮಕ್ಕಳ ದಿನಾಚರಣೆ ಹೇಗಿತ್ತು: ಮಕ್ಕಳೊಂದಿಗೆ ಡಿಸಿಎಂ ಸಂವಾದ, ಮೈಸೂರು ವಸ್ತು ಪ್ರದರ್ಶನದಲ್ಲಿ ಅವರದ್ದೇ ಹವಾ

Thursday, November 14, 2024

ಮೈಸೂರು ಚಾಮರಾಜೇಂದ್ರ ಮೃಗಾಲಯ-
ಕರ್ನಾಟಕ ಅತ್ಯಂತ ಹಳೆಯ ಮೃಗಾಲಯ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಆಸಕ್ತಿಯಿಂದ ಪ್ರಾಣಿ ಮನೆ ಈಗ ವಿಶ್ವದ ಪ್ರಮುಖ ಮೃಗಾಲಯವಾಗಿ ಮಾರ್ಪಟ್ಟಿದೆ. ಬಗೆಬಗೆಯ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯವಿದು. ಮೈಸೂರಿನ ಹೃದಯ ಭಾಗದಲ್ಲಿರುವ 117.41 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ  ಇಲ್ಲಿ ಜಿರಾಫೆ, ಚಿಂಪಾಂಜಿ ವಿಶೇಷ ಆಕರ್ಷಣೆ. ಪಕ್ಕದಲ್ಲೇ ಕಾರಂಜಿಕೆರೆಯೂ ಇದ್ದು, ಇದೂ ಕೂಡ ವಿಶೇಷ ಆಕರ್ಷಣೆಯೇ.

Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು

Wednesday, November 13, 2024

ಬೆಂಗಳೂರಿನ ಬಡಾವಣೆಯೊಂದರಲ್ಲಿ ಹಿಮಬಿದ್ದ ರಸ್ತೆ ಕಂಡಿದ್ದು ಹೀಗೆ. ಬೆಳಿಗ್ಗೆ ಬಹು  ಹೊತ್ತಿನವರೆಗೂ ಇಂತಹದೇ ವಾತಾವರಣ ಇತ್ತು.

Foggy Bangalore: ಬೆಂಗಳೂರು ಮೇಲ್‌ ಮಂಜು, ಉದ್ಯಾನಗರಿಯಲ್ಲಿ ಚಳಿಯ ಉದಯರಾಗ; ಬೆಳ್ಳಂಬೆಳಗ್ಗೆ ಕೂಲ್‌ ಕೂಲ್‌ ವಾತಾವರಣದ ಕ್ಷಣ ಹೇಗಿತ್ತು

Sunday, November 10, 2024

ಅತ್ತೆ ಸುಧಾಮೂರ್ತಿ, ಮಾವ ನಾರಾಯಣಮೂರ್ತಿ, ಪತ್ನಿ ಅಕ್ಷತಾ ಅವರೊಂದಿಗೆ ಬಂದ ರಿಷಿ ಸುನಕ್‌ ಅವರನ್ನು ಮಠದಿಂದ ಆತ್ಮೀಯವಾಗಿ ಗೌರವಿಸಲಾಯಿತು.

Rishi Sunak in Bangalore: ಬೆಂಗಳೂರಲ್ಲಿ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್‌ ಕಾಫಿ ಟೈಂ; ಪತ್ನಿ ಜತೆ ಸುತ್ತಿದ ಇನ್ಫಿ ಮೂರ್ತಿ ಅಳಿಯ

Thursday, November 7, 2024

ಕರ್ನಾಟಕ ಹಲವು ಕಲೆ, ವಿಭಿನ್ನತೆಗಳ ಸಂಗ್ರಹ. ಇತಿಹಾಸವನ್ನು ತಿಳಿಯಬೇಕೆಂದರೆ ವಸ್ತು ಪ್ರದರ್ಶನ ಬೇಕೇ ಬೇಕು. ಅಂತಹ ವಿಭಿನ್ನ ವಸ್ತು ಪ್ರದರ್ಶನ( museums) ಕರ್ನಾಟಕದಲ್ಲಿವೆ. ಇದು ಬೆಂಗಳೂರಿನ ಚಿತ್ರಕಲಾ ಪರಿಷತ್‌ ನ ಕಲಾ ನೋಟ.

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ವಿಭಿನ್ನ ಸಂಗ್ರಹಣೆಯ 10 ಪ್ರಸಿದ್ಧ ಮ್ಯೂಸಿಯಂಗಳು ಯಾವುದಿರಬಹುದು

Friday, October 25, 2024

ಟೆಸ್ಟ್‌ನ ನಾಲ್ಕನೇ ದಿನದಂದು ಮಳೆಯಾಗುವ ಸಾಧ್ಯತೆ ಕಡಿಮೆ. ಶನಿವಾರ ಶೇ.25ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ಮೋಡ ಕವಿದಿರುತ್ತದೆ. ಆ ದಿನ ಪೂರ್ಣ ಆಟ ನಡೆಯುವ ಸಾಧ್ಯತೆ ಇದೆ. ಐದನೇ ದಿನ ಅಂದರೆ ಭಾನುವಾರ, ಮಳೆಯಾಗುವ ಸಾಧ್ಯತೆ ಶೇಕಡಾ 40 ರಷ್ಟಿದೆ. ಗುಡುಗು ಸಹಿತ ಮಳೆ ಜೊತೆಗೆ ಮೋಡ ಕವಿದ ವಾತಾವರಣ ಇರುವ ಸಂಭವವಿದೆ.

ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್ 3ನೇ ದಿನದಾಟಕ್ಕೂ ಮಳೆ ಅಡ್ಡಿಯಾಗುತ್ತಾ; ಬೆಂಗಳೂರು ಹವಾಮಾನ ಹೇಗಿರಲಿದೆ?

Thursday, October 17, 2024

ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಾಷ್ಟ್ರೋತ್ಥಾನ ಮೇಲ್ಸೇತುವೆ ಡೌನ್ ರಾಂಪ್ ಹತ್ತಿರ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನೀರು ನಿಂತಿರುವ ದೃಶ್ಯ.

ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ವಾಹನ ಸಂಚಾರ; ಸವಾರರ ಪರದಾಟದ ಚಿತ್ರನೋಟ

Tuesday, October 15, 2024

ಬೆಂಗಳೂರಿನಲ್ಲಿ ಎಡಬಿಡದೇ ಮಳೆಯಾಗುತ್ತಿರುವುದರಿಂದ ಜ್ಞಾನಭಾರತಿ ಪ್ರದೇಶದಲ್ಲಿ ರಸ್ತೆಗೆ ನೀರು ನುಗ್ಗಿ ವಾಹನ ಸವಾರರು ಪ್ರಯಾಸ ಪಡಬೇಕಾಯಿತು. ರಸ್ತೆಯಲ್ಲಿ ನಡೆದು ಹೋಗುವವರೂ ತೊಂದರೆ ಅನುಭವಿಸಿದರು.

Bangalore Rains: ಬೆಂಗಳೂರಲ್ಲಿ ಬಿಡುವು ನೀಡದ ಮಳೆ; ರಸ್ತೆಗೆ ನುಗ್ಗಿದ ನೀರು, ಉರುಳಿದ ಮರಗಳು, ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

Tuesday, October 15, 2024

ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಮಸ್ಕಾರ ಮಾಡಿದರು. ಅಲ್ಲದೆ, ಪರಸ್ಪರ ಕೈಕುಲುಕಿದರು. ಇನ್ನೂ ಸಿಎಂ ಜೊತೆ ಗವರ್ನರ್ ಕೂಡ ನಗು ನಗುತ್ತಾ ಮಾತಾಡಿದರು. ಈ ಚಿತ್ರಗಳು ನೆಟ್ಸ್​ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಮುಡಾ ಹಗರಣ, ಸಿಎಂ ಬದಲಾವಣೆ ಚರ್ಚೆ ಮಧ್ಯೆ ಮೊದಲ ಬಾರಿಗೆ ಮುಖ್ಯಮಂತ್ರಿ-ಗವರ್ನರ್ ಭೇಟಿ; ಈ ಮುಖಾಮುಖಿಯ ಗುಟ್ಟೇನು?

Wednesday, October 9, 2024

ದಸರಾ ರಜೆಗೆ ಅನುಗುಣವಾಗಿ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಪ್ರಕಟಿಸಿದೆ. ಬೆಂಗಳೂರಿನಿಂದ ಎರಡು ರಾತ್ರಿ ಮೂರು ಹಗಲು ಪ್ರಯಾಣದ ವಿಸ್ಟಾಡೋಮ್ ಪ್ರವಾಸ ವಿಶೇಷ ಅನುಭವ ನೀಡುವಂಥದ್ದು. ಇದರಲ್ಲಿ ಯಶವಂತಪುರದಿಂದ ಅಕ್ಟೋಬರ್ 5 ರಂದು ಬೆಳಗ್ಗೆ 7 ಗಂಟೆಗೆ ಹೊರಟು ಅಕ್ಟೋಬರ್ 7 ರಂದು ಬೆಳಗ್ಗೆ 6.15ಕ್ಕೆ ಪುನಃ ಯಶವಂತಪುರ ತಲುಪುವ ವಿವರ ನೀಡಿದೆ. ಕಟೀಲು, ಧರ್ಮಸ್ಥಳ, ಕುಕ್ಕೆ ವಿಸ್ಟಾಡೋಮ್ ಟೂರ್ ಪ್ಯಾಕೇಜ್ ಎಂದು ಐಆರ್‌ಸಿಟಿಸಿ ಘೋಷಿಸಿದೆ.

ದಸರಾ ರಜೆಯಲ್ಲಿ ಐಆರ್‌ಸಿಟಿಸಿ ವಿಸ್ಟಾಡೋಮ್ ಪ್ರವಾಸ ಮಿಸ್‌ ಮಾಡ್ಕೊಬೇಡಿ, ಧರ್ಮಸ್ಥಳ, ಕುಕ್ಕೆ, ಕಟೀಲಿಗೆ ಹೊರಡಿ

Monday, September 30, 2024

Rain in Karnataka: ಉತ್ತರ ಒಳನಾಡು ಕರ್ನಾಟಕದಲ್ಲಿ ಅಕ್ಟೋಬರ್​ 2ರ ತನಕ ಮತ್ತು ದಕ್ಷಿಣ ಒಳನಾಡು ಕರ್ನಾಟಕಕ್ಕೆ ಇವತ್ತಿಗೆ ಯಲ್ಲೋ ಅಲರ್ಟ್ ಹಾಕಲಾಗಿದೆ. ಅಕ್ಟೋಬರ್ 1ರಂದು ಕರಾವಳಿ, ಅಕ್ಟೋಬರ್​ 2ರಂದು ಕರ್ನಾಟಕದ ಹಲವು ಸ್ಥಳಗಳಲ್ಲಿ, ಅಕ್ಟೋಬರ್​ 3ರಿಂದ 5ರ ತನಕ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

Rain in Karnataka: ಕರ್ನಾಟಕದ ಈ 3 ಜಿಲ್ಲೆಗಳಲ್ಲಿಂದು ಧಾರಾಕಾರ ಮಳೆ; ಉತ್ತರ, ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್

Monday, September 30, 2024

ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತ  ಆಗಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೇ ಇರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ ಮಧ್ಯರಾತ್ರಿ ಬೆಂಗಳೂರು ಪ್ರದಕ್ಷಿಣೆ ಹಾಕಿದರು.

Bangalore potholes: ಬೆಂಗಳೂರು ನಗರ ಗಂಡಾಗುಂಡಿ; ನಡುರಾತ್ರಿಯಲ್ಲಿ ಡಿಸಿಎಂ ಡಿಕೆಶಿ ರೌಂಡ್ಸ್‌, ಕಾಮಗಾರಿ ಪರಿಶೀಲನೆ ಹೀಗಿತ್ತು

Tuesday, September 24, 2024

ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶುಕ್ರವಾರ (ಸೆಪ್ಟೆಂಬರ್ 20) ನಡೆದ 'eARTh' ಕಾರ್ಯಕ್ರಮದಲ್ಲಿ ವಾಸು ದೀಕ್ಷಿತ್ ಅವರು ಬದಲಾವಣೆಯನ್ನು ಬೆಳೆಸುವಲ್ಲಿ ಕಲೆಯ ಪಾತ್ರವನ್ನು ಎತ್ತಿ ತೋರಿಸಿದರು. ಕಾರ್ಯಕ್ರಮದಲ್ಲಿ ವಾಸು ದೀಕ್ಷಿತ್‌ ಕಲೆಕ್ಟಿವ್‌ ಮತ್ತು ಸ್ಲ್ಯಾಮ್ ಔಟ್ ಲೌಡ್ ತಂಡದ ಮಕ್ಕಳ ಪ್ರದರ್ಶನಗಳ ಮೂಲಕ ಗಮನಸೆಳೆದವು. ಪರಿಸರ ರಾಯಭಾರಿ ರಿಕಿ ಕೇಜ್ ಅವರು ಪರಿಸರ ರಕ್ಷಣೆಯಲ್ಲಿ ವೈಯಕ್ತಿಕ ಕ್ರಿಯೆಯನ್ನು ಒತ್ತಿಹೇಳಿದರೆ, CSTEP ಎಕ್ಸಿಕ್ಯೂಟಿವ್ ಡೈರೆಕ್ಟರ್‌ ಜೈ ಅಸುಂಡಿ ಅವರು, ಸಾಮೂಹಿಕ ಬದಲಾವಣೆಗಾಗಿ ಭಾವನಾತ್ಮಕ ಸಂಪರ್ಕಗಳ ಅಗತ್ಯವನ್ನು ಒತ್ತಿಹೇಳಿದರು.

ಹವಾಮಾನ ಬದಲಾವಣೆ ತಡೆಗೆ ಕಲಾ ಸ್ಪರ್ಶ, eARTh 2ನೇ ಆವೃತ್ತಿಯಲ್ಲಿ ಯುವಕಲಾವಿದರ ಕಲಾಭಿವ್ಯಕ್ತಿ ಹೀಗಿತ್ತು - ಚಿತ್ರನೋಟ

Monday, September 23, 2024

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಧುನಿಕ‌ ಜೀವ ರಕ್ಷಕ ಸವಲತ್ತು ಹೊಂದಿರುವ 65 ಆ್ಯಂಬುಲೆನ್ಸ್​​ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. 26 ಸುಧಾರಿತ ಹಾಗೂ 39 ಬೇಸಿಕ್​​ ಲೈಫ್ ಸಪೋರ್ಟ್​ ಆಂಬುಲೆನ್ಸ್​​ಗಳು ಜನರ ಸೇವೆಗೆ ಮುಕ್ತವಾಗಿವೆ.

ಆಧುನಿಕ 65 ಆ್ಯಂಬುಲೆನ್ಸ್​ಗೆ ಸಿದ್ದರಾಮಯ್ಯ ಚಾಲನೆ; ಸಂಚಾರಿ ನಿಯಮ ಪಾಲಿಸದಿದ್ದರೆ ಲೈಸನ್ಸ್ ರದ್ದು ಎಂದ ಸಿಎಂ

Monday, September 23, 2024

ಆದರೆ, ಮೋಹಿತ್​ ಆನ್​ಲೈನ್​​ನಲ್ಲಿ ಪಾವತಿಸಿದ್ದರೂ ಪ್ರಾಡಕ್ಟ್​ ಅನ್ನು ಕಳುಹಿಸಿರಲಿಲ್ಲ. ಇಟಿಎ ಮಾಲ್​​ನಲ್ಲಿರುವ ಡೆಕಾಥ್ಲಾನ್​ ಮಳಿಗೆಯನ್ನು ಸಂಪರ್ಕಿಸಿದಾಗ ಆ ಉತ್ಪನ್ನ ನಮ್ಮಲ್ಲಿ ಇಲ್ಲ ಎಂದು ಅಲ್ಲಿನ ಪ್ರತಿನಿಧಿಗಳು ತಿಳಿಸಿದ್ದರು. ಹೀಗಾಗಿ ಫೆಬ್ರವರಿ 6ರಂದು ಮೋಹಿತ್​, ಇಟಿಎ ಮಾಲ್​ನಲ್ಲಿರುವ ಅಂಗಡಿಗೆ ಭೇಟಿ ನೀಡಿ ಪ್ರಶ್ನಿಸಿದ್ದರು. ಈ ವೇಳೆ ಹಣವನ್ನು ಮರಳಿಸುವುದಾಗಿ ತಿಳಿಸಿದ್ದರು.

ಆರ್ಡರ್ ಮಾಡಿದ್ದ 1399 ರೂ ಟ್ರೆಕ್ಕಿಂಗ್ ಪ್ಯಾಂಟ್ ತಲುಪಿಸದ ಡೆಕಥ್ಲಾನ್​ಗೆ 35000 ದಂಡ; ನಿಮಗೂ ಮೋಸ ಆಗಿದ್ರೆ ಹೀಗೆ ಮಾಡಿ

Monday, September 23, 2024

ದಕ್ಷಿಣ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನ ದೊಡ್ಡ ಗಣೇಶನ ದೇವಸ್ಥಾನ. ಬೆಂಗಳೂರಿನ ಅತಿದೊಡ್ಡ ಕಡ್ಲೆಕಾಯಿ ಪರಿಷೆ ಆಗೋ ಜಾಗವೂ ಇದೇ. ಬುಲ್ ಟೆಂಪಲ್ ಅಂತಾನೇ ಫೇಮಸ್‌ ಈ ಜಾಗ. ಇಲ್ಲಿನ ಗಣೇಶನೂ ಹೆಸರಿಗೆ ತಕ್ಕಂತೆ ದೊಡ್ಡ ಗಾತ್ರದ ದೇವರು. ಬರೋಬ್ಬರಿ 18 ಅಡಿ ಎತ್ತರ ಮತ್ತು 16 ಅಡಿ ಅಗಲ. ಈ ಗಣಪನ ಬೆಣ್ಣೆ ಅಲಂಕಾರಕ್ಕೆ 100 ಕಿಲೋ ಬೆಣ್ಣೆ ಬೇಕು. ಈ ಸಲದ ಗಣೇಶ ದರ್ಶನ ಇಲ್ಲಿಂದಲೇ ಶುರುಮಾಡಬಹುದು ನೋಡಿ. ದೊಡ್ಡ ಗಣೇಶ ದೇವಸ್ಥಾನದ ಟೈಮಿಂಗ್ಸ್ - ಬೆಳಗ್ಗೆ 6:30 ರಿಂದ ರಾತ್ರಿ 8:30 ರ ತನಕ.

Ganesha Tempels; ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲೇ ಇದ್ದೀರಾ, ಗಣಪನ ದರ್ಶನಕ್ಕೆ ದೊಡ್ಡ ಗಣಪತಿ ಸೇರಿ ಆಯ್ದ 10 ದೇಗುಲಗಳಿವು - ಚಿತ್ರನೋಟ

Wednesday, September 4, 2024