karnataka-crime-news News, karnataka-crime-news News in kannada, karnataka-crime-news ಕನ್ನಡದಲ್ಲಿ ಸುದ್ದಿ, karnataka-crime-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Karnataka crime news

Latest karnataka crime news Photos

ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್ ಹಿನ್ನೆಲೆ ಏನು?
ಸುಮಾರು 15 ಕೆಜಿ ಚಿನ್ನವನ್ನು ಕಳ್ಳಸಾಗಾಣೆ ಮಾಡುವಾಗ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಕನ್ನಡದ ನಟಿ 33 ವರ್ಷದ ರನ್ಯಾ ರಾವ್‌ ಅವರನ್ನು ಕುರಿತು ಬಗೆದಷ್ಟೂ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.

Ranya Rao: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪಿ ಕನ್ನಡ ನಟಿ ರನ್ಯಾ ರಾವ್ ಬಗ್ಗೆ ಇಲ್ಲಿದೆ ಮಾಹಿತಿ

Thursday, March 6, 2025

ನಿಮ್ಮ ಫೋನ್ ಕಳೆದುಹೋದರೆ ಮೊದಲು ಈ ಕೆಲಸ ಮಾಡಿ
ಇಂದಿನ ಸ್ಮಾರ್ಟ್‌ ಡಿಜಿಟಲ್ ಯುಗದಲ್ಲಿ, ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ, ಹಣದ ನಷ್ಟವಾಗುವುದಲ್ಲದೆ, ವೈಯಕ್ತಿಕ ಮಾಹಿತಿ ಮತ್ತು ಗೌಪ್ಯತೆಗೆ ಅಪಾಯವೂ ಹೆಚ್ಚಾಗುತ್ತದೆ. ನೀವು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಭಯಪಡುವ ಬದಲು, ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ.

Smartphone Lost: ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಏನು ಮಾಡಬೇಕು? ಮೊದಲು ಈ ಕೆಲಸ ಮಾಡಿ.

Thursday, March 6, 2025

ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರದ ವಿನಾಯಕ ನಗರ ಬಳಿ ಆರೋಪಿಯು ಆ ಭಾಗದಲ್ಲಿ ವಾಸವಾಗಿದ್ದ ಹೊರ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ, ಮಾದಕ ವಸ್ತುಗಳ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿದ್ದ ಸ್ಪೇನ್‌ ಪ್ರಜೆ ನಿವಾಸದಲ್ಲಿ ಕಳ್ಳತನ: ವಿದೇಶಿ ಡ್ರಗ್​ ಪೆಡ್ಲರ್‌ ಬಂಧನ, 48 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ, MDMA ಜಪ್ತಿ

Sunday, January 19, 2025

ವೈಕುಂಠ ದ್ವಾರ ದರ್ಶನ  ಟೋಕನ್ ವಿತರಣೆ ಅವ್ಯವಸ್ಥೆ ಕಾರಣ ಟಿಟಿಡಿ ಇತಿಹಾಸದಲ್ಲೇ ದೊಡ್ಡ ದುರಂತ ಸಂಭವಿಸಿದೆ. ಕನಿಷ್ಠ 6 ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ದುರಂತ ಸ್ಥಳದ ಚಿತ್ರಣ ಒದಗಿಸುವ ಚಿತ್ರನೋಟ ಇಲ್ಲಿದೆ.

ಟಿಟಿಡಿ ಇತಿಹಾಸದಲ್ಲೇ ದೊಡ್ಡದುರಂತ; ವೈಕುಂಠದ್ವಾರ ದರ್ಶನ ಟೋಕನ್ ವಿತರಣೆ ಅವ್ಯವಸ್ಥೆ, ತಿರುಪತಿ ಕಾಲ್ತುಳಿತಕ್ಕೆ ನೂಕುನುಗ್ಗಲು ಕಾರಣ, ಫೋಟೋಸ್‌

Wednesday, January 8, 2025

ನೆಲಮಂಗಲ ಅಪಘಾತ; ನೆಲಮಂಗಲ ಸಮೀಪ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ  ವೋಲ್ವೋ ಕಾರಿನ ಮೇಲೆ ಕಂಟೇನರ್‌ ಬಿದ್ದ ಕಾರಣ ಕಾರಿನಲ್ಲಿದ್ದ 6 ಜನ ದುರ್ಮರಣಕ್ಕೀಡಾದ ಕಳವಳಕಾರಿ ಘಟನೆ ವರದಿಯಾಗಿದೆ. ಈ ದುರಂತದಲ್ಲಿ ಕೆಎಂಎಫ್‌ ನಂದಿನಿ ಟ್ರಕ್‌ ಕೂಡ ಪಲ್ಟಿಯಾಗಿದೆ

ನೆಲಮಂಗಲ ಅಪಘಾತ; ವೋಲ್ವೋ ಕಾರಿನ ಮೇಲೆ ಬಿದ್ದ ಕಂಟೇನರ್‌, ಕಾರಿನಲ್ಲಿದ್ದ 6 ಜನ ದುರ್ಮರಣ, ಕೆಎಂಎಫ್‌ ನಂದಿನಿ ಟ್ರಕ್‌ ಕೂಡ ಪಲ್ಟಿ, ಫೋಟೋಸ್‌

Saturday, December 21, 2024

ವಶಪಡಿಸಿಕೊಂಡ ಚಿನ್ನ ಮತ್ತು ಬೆಳ್ಳಿಯ ಮೌಲ್ಯವು ಅಂದಾಜು 88 ಲಕ್ಷ ಇರಬಹುದು ಎಂದು ಹೇಳಲಾಗಿದೆ.

Gold and Silver: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೆಜಿ ಚಿನ್ನ, 1 ಕೆಜಿ ಬೆಳ್ಳಿ; ಓರ್ವ ಬಂಧನ

Thursday, October 17, 2024

ಮೃತ ಇಬ್ಬರೂ ವ್ಯಕ್ತಿಗಳ ಗುರುತು ಪತ್ತೆಯಾಗದ ರೀತಿಯಲ್ಲಿ ಛಿದ್ರವಾಗಿ ಬಿದ್ದಿವೆ. ಸ್ಥಳಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

Hubli Crime: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಬೆಂಗಳೂರು ವ್ಯಕ್ತಿ ಸೇರಿ ಇಬ್ಬರು ಸಾವು; ದೇಹಗಳು ಛಿದ್ರ ಛಿದ್ರ!

Tuesday, October 15, 2024

ಕಾರಟಗಿ ತಾಲೂಕಿನಲ್ಲಿ ಹಂದಿ ಸಾಕಣಿಕೆಯನ್ನು ಕಸುಬನ್ನಾಗಿ ಮಾಡಿಕೊಂಡವರು ಹಲವರು. ಇವರೆಲ್ಲರಿಗೂ ಈಗ ಸವಾಲಾಗಿ ಪರಿಣಮಿಸಿರುವುದು ಹಂದಿ ಕಳ್ಳರ ಗ್ಯಾಂಗ್‌ನಿಂದ ತಾವು ಸಾಕಿದ ಹಂದಿಯನ್ನು ರಕ್ಷಿಸುವುದು.

ಕಾರಟಗಿಯಲ್ಲಿ ಹಂದಿ ಕಳ್ಳರ ಗ್ಯಾಂಗ್ ಸಕ್ರಿಯ, ಹಿಡಿಯೆಲೆತ್ನಿಸಿದ ಪುರಸಭೆ ಸದಸ್ಯನಿಗೆ ವಾಹನ ಡಿಕ್ಕಿ ಹೊಡೆಸಿ ಕೊಂದ ಕಳ್ಳರು

Wednesday, August 14, 2024

ಭಾರತದಲ್ಲಿ ಇಂದಿನಿಂದ (ಜುಲೈ 1) ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೊಂಡಿವೆ. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ಉಂಟುಮಾಡಿದ್ದು, ವಸಾಹತುಶಾಹಿ ಯುಗದ ಕಾನೂನುಗಳ ಜಾಗವನ್ನು ತುಂಬಿವೆ.

ಭಾರತೀಯ ನ್ಯಾಯ ಸಂಹಿತೆ ಸೇರಿ 3 ಹೊಸ ಅಪರಾಧ ಕಾನೂನು ಇಂದಿನಿಂದ ಜಾರಿ, ಗಮನಸೆಳೆದ 10 ಅಂಶಗಳು ಹೀಗಿವೆ

Monday, July 1, 2024

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಆರೋಪಿಗಳಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಮತ್ತು ಸಂಗಡಿಗರು ಈಗ ವಿಚಾರಣಾಧೀನ ಕೈದಿಗಳಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆದು ಕೋರ್ಟ್ ತೀರ್ಪು ನೀಡಿದ ಮೇಲಷ್ಟೆ ಅಪರಾಧಿಗಳು ಯಾರೆಂಬುದು ಘೋಷಣೆ ಆಗಲಿದೆ. ಆದರೆ, ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಿಗುವ 10 ಜೀವನ ಪಾಠಗಳಿವು. (ಸಾಂಕೇತಿಕ ಚಿತ್ರ)

ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಂಡುಬಂದ 10 ಜೀವನ ಪಾಠಗಳು

Monday, June 24, 2024

ಕನ್ನಡ ನಟ ದರ್ಶನ್‌ ಸೇರಿದಂತೆ ಒಟ್ಟು ನಾಲ್ಕು ಆರೋಪಿಗಳ ಪೊಲೀಸ್‌ ಕಸ್ಟಡಿ ವಿಸ್ತರಣೆ ಮಾಡಲಾಗಿದೆ. ಎರಡು ದಿನಗಳ ಕಾಲ ಕಸ್ಟಡಿ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.  ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರ ಗೌಡ ಮತ್ತು ಇತರೆ 13 ಆರೋಪಿಗಳ ವಿಚಾರಣೆ ಪೂರ್ಣಗೊಂಡಿರುವುದರಿಂದ ಇವರೆಲ್ಲ ಪರಪ್ಪನ ಅಗ್ರಹಾರ ಸೇರಿದ್ದಾರೆ.  A2 ದರ್ಶನ್‌, A9 ಧನರಾಜ್, A10 ವಿನಯ್ ಹಾಗೂ A14 ಪ್ರದೋಶ್‌ ಅವರ ಕಸ್ಟಡಿ ವಿಸ್ತರಣೆ ಮಾಡಲಾಗಿದೆ. ಜೂನ್‌ 22 ಸಂಜೆ 5 ಗಂಟೆಯ ಮೊದಲು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು  ಸೂಚಿಸಲಾಗಿದೆ. ವಿವಿಧ ವರದಿಗಳ ಪ್ರಕಾರ ದರ್ಶನ್‌ ಮತ್ತು ಉಳಿದ ಮೂವರ ಕಸ್ಟಡಿ ವಿಸ್ತರಣೆಗೆ ಕಾರಣವಾದ ಅಂಶಗಳು ಇಲ್ಲಿದೆ.

Darshan Case: ದರ್ಶನ್‌ ಪರಪ್ಪನ ಅಗ್ರಹಾರಕ್ಕೆ ಹೋಗಿಲ್ಲವೇಕೆ? 4 ಆರೋಪಿಗಳ ಕಸ್ಟಡಿ ವಿಸ್ತರಣೆಗೆ 5 ಕಾರಣಗಳು

Thursday, June 20, 2024

ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

Tuesday, May 28, 2024

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ ನಿನ್ನೆ (ಮೇ 23) ತಡ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು, 4 ಸಾವು, 6 ಜನರಿಗೆ ಗಾಯ

Friday, May 24, 2024

ಬೆಂಗಳೂರಿನ ಆರ್‌.ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರಿಂಕ್ಸ್‌ ಕಟ್ಟಡದಲ್ಲಿ 30ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಟ್ಟಡದ ಮಹಡಿಯಲ್ಲಿ ಶುಕ್ರವಾರ (ಏಪ್ರಿಲ್ 5) ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ.

ಬೆಂಗಳೂರಿನ ಆರ್‌ಟಿ ನಗರದ ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಬೆಂಕಿ ಅವಘಡ; ತಪ್ಪಿದ ಅನಾಹುತ, 20 ಮಂದಿಯ ರಕ್ಷಣೆ -Bangalore News

Friday, April 5, 2024

ಬೆಂಗಳೂರಿನ ಇಂದಿರಾನಗರ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ರಾಮೇಶ್ವರಂ ಕೆಫೆಯ ಮುಂಭಾಗ ಮತ್ತು ಸೈಡ್‌ನ ನೋಟ. ಮುಂಭಾಗ ಖಾಲಿ ಇದ್ದರೆ ಒಳಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡುತ್ತಿರುವುದು ಕಾಣಬಹುದು.

Bengaluru Blast: ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ; ಘಟನಾ ಸ್ಥಳದ ಕೆಲವು ಫೋಟೋಸ್

Friday, March 1, 2024

ಕುಖ್ಯಾತ ರೌಡಿ ಆಕಾಶ್‌ಭವನ್ ಶರಣ್‌ ಜನವರಿ 5 ರಂದು ರಾತ್ರಿ ಮಂಗಳೂರಿನ ಮೇರಿಹಿಲ್ ಬಳಿ ಪೊಲೀಸರಿಗೆ ಸೆರೆ ಸಿಕ್ಕುವುದನ್ನು ತಪ್ಪಿಸಲು ಅವರ ಮೇಲೆಯೇ ಕಾರು ಹಾಯಿಸಿ, ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಆದರೆ, ಮಂಗಳವಾರ (ಜ.9) ಪೊಲೀಸರು ನಡೆಸಿದ ಸಿನಿಮೀಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದಾನೆ.

ಕಾರು ಹಾಯಿಸಿ ಪೊಲೀಸರ ಕೊಲೆಗೆ ಯತ್ನಿಸಿದ್ದ ಆಕಾಶ್‌ಭವನ್ ಶರಣ್‌ ಸೆರೆಗೆ ಸಿನಿಮೀಯ ಕಾರ್ಯಾಚರಣೆ; ಇಲ್ಲಿವೆ ಫೋಟೋಸ್

Wednesday, January 10, 2024

ಹೊಸಪೇಟೆ ತಾಲೂಕು ವಡ್ಡರಹಳ್ಳಿ ಸೇತುವೆ ಸಮೀಪ ಶುಕ್ರವಾರ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ತುಂಗಭದ್ರಾ ಡ್ಯಾಮ್‌ ಕಡೆಗೆ ಆಟೋ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

Hospete Accident: ವಿಜಯನಗರ ಜಿಲ್ಲೆ ಹೊಸಪೇಟೆಯ ವಡ್ಡರಹಳ್ಳಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಫೋಟೋ ವರದಿ

Friday, June 30, 2023

ಭಾರತದಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನದ ವಸೂಲಿಗೆ ಸಂಬಂಧಿಸಿ ಈ ವರ್ಷದ ಅಂಕಿ ಅಂಶವು ಕಳೆದ ಮೂರು ವರ್ಷಗಳಲ್ಲಿ ಅತ್ಯಧಿಕವಾಗಿದೆ. ಚಿನ್ನದ ಆಮದು ಸುಂಕವನ್ನು ಹೆಚ್ಚಿಸಿದ ನಂತರ ಭಾರತದಲ್ಲಿ ಚಿನ್ನದ ಕಳ್ಳಸಾಗಣೆ ವ್ಯಾಪಾರ ಹೆಚ್ಚಾಗಿದೆ ಎಂದು ತೋರುತ್ತಿದೆ. ಕೋವಿಡ್ ನಂತರದಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭವಾಗುತ್ತಿದ್ದಂತೆ ಕಳ್ಳಸಾಗಣೆ ಪ್ರಮಾಣವೂ ಹೆಚ್ಚಿದೆ.

Gold Smuggling: 3 ವರ್ಷದ ಗರಿಷ್ಠ ಮಟ್ಟಕ್ಕೆ ಚಿನ್ನ ಕಳ್ಳಸಾಗಣೆ; ಆಮದು ಸುಂಕ ಏರಿದ ನಂತರದ ವಿದ್ಯಮಾನ- ವಿವರ ಇಲ್ಲಿದೆ

Monday, December 12, 2022

ಓಲಾ ಇಲೆಕ್ಟ್ರಿಕ್‌ ಕಂಪನಿಯ ಬೆಂಗಳೂರು ಕಚೇರಿಯ ಫೋಟೋ. ಓಲಾ ಇಲೆಕ್ಟ್ರಿಕ್‌ ಸ್ಕೂಟಿ ಹೆಸರಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ಆನ್‌ಲೈನ್‌ ವಂಚನೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Ola scooty scam: ಓಲಾ ಸ್ಕೂಟಿ ಹೆಸರಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಆನ್‌ಲೈನ್‌ ವಂಚನೆ; 20 ವಂಚಕರು ಪೊಲೀಸ್‌ ಬಲೆಗೆ; ಇಲ್ಲಿದೆ ಅವರ PHOTO

Tuesday, November 15, 2022

ಚಿತ್ರದುರ್ಗ ಪ್ರವಾಸಿ ಮಂದಿರ ಸಮೀಪ ರಸ್ತೆಯ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Chitradurga Car Accident: ಚಿತ್ರದುರ್ಗ ಪ್ರವಾಸಿ ಮಂದಿರ ಸಮೀಪ ಭೀಕರ ರಸ್ತೆ ಅಪಘಾತ; ಮೂವರ ದುರ್ಮರಣ - ಅಪಘಾತ ಸ್ಥಳದ PHOTOS ಇಲ್ಲಿವೆ

Tuesday, October 25, 2022