money News, money News in kannada, money ಕನ್ನಡದಲ್ಲಿ ಸುದ್ದಿ, money Kannada News – HT Kannada

Latest money Photos

ಜಗತ್ತಿನ 10 ಅತ್ಯಂತ ದುಬಾರಿ ಹಣ್ಣುಗಳು
ವಿಶ್ವದ ಕೆಲವು ಹಣ್ಣುಗಳು ಅವುಗಳ ದುಬಾರಿ ಬೆಲೆಗೆ ಹೆಸರಾಗಿವೆ. ರುಚಿ, ಬಣ್ಣ ಮತ್ತು ಪರಿಮಳಕ್ಕಿಂತಲೂ ಅವುಗಳ ಬೆಲೆಯೇ ಎಲ್ಲರ ಹುಬ್ಬೇರಿಸುತ್ತದೆ. ಒಂದು ಹಣ್ಣಿನ ಬೆಲೆಯಂತೂ 22 ಲಕ್ಷ ರೂ. ಇದೆ. ಅಂತಹ ದುಬಾರಿ ಹಣ್ಣುಗಳ ಬಗ್ಗೆ ತಿಳಿದುಕೊಳ್ಳಿ.

Expensive Fruits: ಜಗತ್ತಿನ ಅತ್ಯಂತ ಪ್ರಸಿದ್ಧ ಮತ್ತು ದುಬಾರಿ ಹಣ್ಣುಗಳು; ಒಂದರ ಬೆಲೆ 22 ಲಕ್ಷ ರೂ ಮಾತ್ರ

Monday, March 10, 2025

1. ಗ್ರಾಫ್ ಡೈಮಂಡ್ಸ್ - $55 ಮಿಲಿಯನ್
ಗ್ರಾಫ್ ಡೈಮಂಡ್ಸ್‌ನ ಅಧ್ಯಕ್ಷರಾದ ಲಾರೆನ್ಸ್ ಗ್ರಾಫ್ ವಿನ್ಯಾಸಗೊಳಿಸಿದ ವಿಶ್ವದ ಅತ್ಯಂತ ದುಬಾರಿ ಗಡಿಯಾರ. ಇದು 110 ಕ್ಯಾರೆಟ್‌ಗಳ ವರ್ಣರಂಜಿತ ವಜ್ರಗಳಿಂದ ಕೂಡಿದೆ. ಇದನ್ನು 2014 ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಬಾಸೆಲ್‌ವರ್ಲ್ಡ್ ಪ್ರದರ್ಶನದಲ್ಲಿ ಪರಿಚಯಿಸಲಾಯಿತು.

Most Expensive Watches: ಜಗತ್ತಿನ ಅತಿ ದುಬಾರಿ ಕೈಗಡಿಯಾರಗಳು ಇವು; ಪ್ರತಿ ವಾಚ್ ಬೆಲೆ 5 ಮಿಲಿಯನ್‌ಗೂ ಅಧಿಕ

Friday, February 28, 2025

Money Savings: ಭಾರತೀಯ ಮಹಿಳೆ ಕೇವಲ ಗೃಹಿಣಿಯಲ್ಲ. ಆಕೆ ವೇತನ ಪಡೆಯುವ ಉದ್ಯೋಗಿ, ಹೂಡಿಕೆದಾರಳೂ ಹೌದು. ಇಷ್ಟು ಮಾತ್ರವಲ್ಲದೆ ಸಣ್ಣ ಕಂಪನಿಯಿಂದ ಹಿಡಿದು ದೊಡ್ಡ ಕಂಪನಿಯನ್ನೂ ಮುನ್ನಡೆಸುತ್ತಿದ್ದಾರೆ. ಉಳಿತಾಯದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಒಂದು ಹೆಜ್ಜೆ ಮುಂದು. ಹನಿ ಹನಿಗೂಡಿದರೆ ಹಳ್ಳ ಎಂದು ತಿಳಿದುಕೊಂಡ ಮಹಿಳೆಯರು ಜತನದಿಂದ ಹಣ ಉಳಿತಾಯ ಮಾಡುತ್ತಾರೆ. ಮಹಿಳೆಯರು ಇನ್ನಷ್ಟು ಉತ್ತಮವಾಗಿ ಹಣ ಉಳಿತಾಯ ಮಾಡಲು 50:30:20 ಎಂಬ ಗೋಲ್ಡನ್‌ ನಿಯಮವನ್ನು ಇಲ್ಲಿ ಪರಿಚಯಿಸಲಾಗಿದೆ.

Money Savings: ಹಣ ಉಳಿತಾಯ ಮಾಡಲು ಬಯಸುವ ಮಹಿಳೆಯರಿಗೆ ಇಲ್ಲಿದೆ ಉಪಾಯ; 50:30:20 ಬಜೆಟ್‌ ಹಂಚಿಕೆಯ ಗೋಲ್ಡನ್‌ ನಿಯಮ ತಿಳಿಯಿರಿ

Friday, February 28, 2025

ಇದಿನ ದಿನಮಾನದಲ್ಲಿ ಹಣ ಎಲ್ಲರಿಗೂ ಬೇಕು. ಎಷ್ಟು ಹಣ ಇದ್ದರೂ ಸಾಲದು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಈ ದಿನಗಳಲ್ಲಿ ನೀವು ಕೆಲ ಅಂಶಗಳನ್ನು ಗಮನಿಸಬೇಕು. ನಿಮ್ಮ ಮನೆಯಲ್ಲಿ ಈ ಕೆಳಕಂಡ ವಸ್ತುಗಳಿದ್ದಲ್ಲಿ, ಅವುಗಳನ್ನು ಇಲ್ಲದಂತೆ ಮಾಡಿ.

ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಬಯಸುವವರು ಈ 5 ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬಾರದು

Monday, February 17, 2025

ಸಾಲದ ಶೂಲ ಬೇಡ: ನಿಮ್ಮ ತಿಂಗಳ ವೇತನ ಎಷ್ಟು, ಅದರಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವ ಸ್ಪಷ್ಟತೆ ಇರಲಿ. ಸಾಲ ಕೊಡುತ್ತಾರೆ ಎಂದು ಸ್ನೇಹಿತರಲ್ಲಿ ಸಾಲ ಕೇಳುತ್ತ ಇರಬೇಡಿ. ಈಗ ಸಾಲ ಸುಲಭವಾಗಿ ದೊರಕುತ್ತದೆ. ಕ್ರೆಡಿಟ್‌ ಕಾರ್ಡ್‌ ಅಥವಾ ಗೂಗಲ್‌ ಪೇ ಇತ್ಯಾದಿಗಳ ಮೂಲಕವೂ ಸಾಲ ಪಡೆಯಬಹುದು. ಕೆಲವು ಬ್ಯಾಂಕ್‌ಗಳು ಕರೆದುಕರೆದು ಸಾಲ ನೀಡುತ್ತವೆ. ಇಂತಹ ಸಾಲದ ಶೂಲಕ್ಕೆ ಸಿಲುಕಬೇಡಿ. ನಿಮ್ಮ ಆದಾಯದ ಶೇಕಡ 30ಕ್ಕಿಂತ ಹೆಚ್ಚು ಮೊತ್ತ ಇಎಂಐಗೆ ಹೋಗುವಂತೆ ಇರಬಾರದು.

Salary Savings: ಸ್ಯಾಲರಿ ಹಣ ತಿಂಗಳ ಕೊನೆಗೆ ಖಾಲಿನಾ? ವೇತನ ಪಡೆಯುವವರು ಹಣ ಉಳಿತಾಯ ಮಾಡಲು ಇಲ್ಲುಂಟು 10 ಟಿಪ್ಸ್‌

Tuesday, January 7, 2025

ಖರ್ಚಿನ ಮೇಲೆ ಇರಲಿ ನಿಗಾ: ಸಣ್ಣಪುಟ್ಟ ಖರ್ಚುಗಳನ್ನು ಕಡೆಗಣಿಸಬೇಡಿ. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವ ಬಿರಿಯಾನಿಗೂ ನಿಮ್ಮ ಮನೆಯಿಂದ ಒಂದಿಷ್ಟು ದೂರದಲ್ಲಿರುವ ಬಿರಿಯಾನಿಗೂ ದರದಲ್ಲಿ ಸಾಕಷ್ಟು ವ್ಯತ್ಯಾಸ ಇರಬಹುದು. ಹೋಟೆಲ್‌ಗೆ ಒಂದು ರೌಂಡ್‌ ಹೋಗಿ ಪಾರ್ಸೆಲ್‌ ತಂದ್ರೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದಕ್ಕಿಂತ ನೂರು ಇನ್ನರು ರೂಪಾಯಿ ಉಳಿತಾಯವಾಗಬಹುದು. ಈ ರೀತಿಯ ಸಣ್ಣಪುಟ್ಟ ಉಳಿತಾಯವೇ ದೊಡ್ಡ ಮೊತ್ತವಾಗುತ್ತದೆ. ನಿಮ್ಮ ಸಂಪತ್ತು ಕೆಲವೊಮ್ಮೆ ನೂರು ರೂಪಾಯಿ ನೋಟಿನ ರೂಪದಲ್ಲಿ ಕಳೆದುಹೋಗಬಹುದು. ಕೆಲವೊಮ್ಮೆ ಅನವಶ್ಯಕವಾಗಿ ನೂರು ರೂಪಾಯಿ ಅಥವಾ ಐನೂರು ರೂಪಾಯಿ ನೀವು ಖರ್ಚು ಮಾಡಬಹುದು. ನೂರು ರೂಪಾಯಿಯಲ್ವ? ಅದರಲ್ಲಿ ಏನಿದೆ ಎಂಬ ಮನಸ್ಥಿತಿಯಲ್ಲಿ ದಿನನಿತ್ಯ ನೀವು ಸಾಕಷ್ಟು ಹಣ ಖರ್ಚು ಮಾಡುತ್ತ ಇರಬಹುದು. ತಿಂಗಳಾಂತ್ಯಕ್ಕೆ ಈ ರೀತಿ ಅನಗತ್ಯ ಖರ್ಚಿನ ಮೊತ್ತವೇ ಬೃಹತ್‌ ಆಗಿರುತ್ತದೆ. ಈ ರೀತಿಯ ಅನಗತ್ಯ ಖರ್ಚಿನ ಮೇಲೆ ನಿಗಾ ಇಡುವುದು ಹಣ ಉಳಿತಾಯದ ಮೊದಲ ಹೆಜ್ಜೆಯಾಗಿದೆ.

Savings Mistakes: ಕಷ್ಟಪಟ್ಟು ಸಂಪಾದಿಸಿದ ಹಣ ಉಳಿತಿಲ್ವ? ಅದಕ್ಕೆ ನೀವು ಮಾಡುವ ಈ 10 ತಪ್ಪುಗಳೇ ಕಾರಣ

Wednesday, January 1, 2025

Personal Finance: ಭಾರತೀಯರು ಮಕ್ಕಳ ಉನ್ನತ ಶಿಕ್ಷಣ, ಮದುವೆ ಮುಂತಾದ ಉದ್ದೇಶಗಳಿಗೆ ಉಳಿತಾಯ ಮಾಡಲು ಬಯಸುತ್ತಾರೆ. ಆದರೆ, ಮಕ್ಕಳ ಶಿಕ್ಷಣ ಇತ್ಯಾದಿ ದುಬಾರಿ ಖರ್ಚುಗಳಿಗೆ ಉಳಿತಾಯ ಸಾಕಾಗದೆ ತೊಂದರೆ ಅನುಭವಿಸುತ್ತಾರೆ. ಆರಂಭದಲ್ಲಿಯೇ ಸರಿಯಾದ ಯೋಜನೆ ರೂಪಿಸಿಕೊಡು ಹೂಡಿಕೆ ಮಾಡಲು ಈ ಮುಂದಿನ ಸಲಹೆಗಳನ್ನು ಗಮನಿಸಿ.

Money Savings: ಮಕ್ಕಳ ಭವಿಷ್ಯಕ್ಕೆ ಹಣ ಉಳಿತಾಯ ಮಾಡುವುದು ಹೇಗೆ? ಹೆತ್ತವರು, ಪೋಷಕರು ಈ ಅಂಶಗಳನ್ನು ಗಮನಿಸಿ

Monday, December 30, 2024

ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್‌ ಇದ್ದರೆ ಪ್ರಮೋಷನ್‌ ಇತ್ಯಾದಿಗಳಿಂದ ಆದಾಯ ದೊರಕುತ್ತದೆ.  ನೀವು ಗಮನಿಸಿರಬಹುದು, ಇಂತಹ ಇನ್‌ಫ್ಲೂಯೆನ್ಸರ್‌ಗಳ ಖಾತೆಯಲ್ಲಿ ಡಿಎಂ ಪಾರ್‌ ಪ್ರಮೋಷನ್‌ ಇತ್ಯಾದಿ ಸಂದೇಶ ಇರುತ್ತದೆ. ಕೆಲವರು ಈಗ ರೀಲ್ಸ್‌ ಅನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಉದ್ಯೋಗದಲ್ಲಿದ್ದುಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೀಲ್ಸ್‌ ಮೂಲಕ ಹಣ ಗಳಿಸಬೇಕೆಂದರೆ ನೀವು ರೀಲ್ಸ್‌ ಜಗತ್ತಿನಲ್ಲಿ ಜನಪ್ರಿಯತೆ ಪಡೆಯಬೇಕು.

ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಹಣ ಗಳಿಸಲು ಬಯಸುವವರಿಗೆ ಅಮೂಲ್ಯ 5 ಸಲಹೆಗಳು; ಸೋಷಿಯಲ್‌ ಮೀಡಿಯಾದಲ್ಲಿ ಝಣ ಝಣ ಕಾಂಚಾಣ

Wednesday, October 9, 2024

income streams: ಹಣ ಈ ಜಗತ್ತಿನ ಎಲ್ಲರೂ ಬಯಸುವ ಪ್ರಮುಖ ವಿಷಯ. ಹಣ ಸಂಪಾದನೆ ಹೇಗೆ? ಹಣ ಗಳಿಕೆಯ ಮಾರ್ಗಗಳು ಯಾವುವು? ಸಂಪತ್ತು ಗಳಿಕೆ ಹೇಗೆ, ಸಂಪತ್ತು ಹೆಚ್ಚಿಸಿಕೊಳ್ಳುವುದು ಹೇಗೆ, ಪ್ಯಾಸಿವ್‌ ಆದಾಯ ಹೇಗೆ ಮಾಡೋದು.. ಹೀಗೆ, ಹಣ ಗಳಿಕೆಯ ನಾನಾ ಮಾರ್ಗಗಳನ್ನು ಹುಡುಕುತ್ತಾರೆ. ಹಣ ಮಾಡಬೇಕೆನ್ನುವವರು ಆದಾಯದ ಮಾರ್ಗಗಳನ್ನು ತಿಳಿದಿರಬೇಕು. ಇಲ್ಲಿ ವಿವಿಧ ಆದಾಯದ ಮೂಲಗಳನ್ನು, ದಾರಿಗಳನ್ನು ತಿಳಿಸಲಾಗಿದೆ. ನೀವು ಈ ಏಳು ರಹದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ? ಯಾವುದರ ಮೂಲಕ ಕಿಸೆತುಂಬಿಸಿಕೊಳ್ಳುವಿರಿ? ಆಲೋಚಿಸಿ.

Income Streams: ದೀರ್ಘಕಾಲದ ಆದಾಯಕ್ಕೆ 7 ರಹದಾರಿ: ದುಡ್ಡು ಮಾಡೋ ಆಸೆ ಇರೋರು ತಿಳಿದಿರಬೇಕಾದ ಸಪ್ತ ರಹಸ್ಯಗಳು

Saturday, September 28, 2024

ವಾರೆನ್‌ ಬಫೆಟ್‌ ಹೂಡಿಕೆ ಪ್ರಯಾಣ: ಹೂಡಿಕೆ ಜಗತ್ತಿನಲ್ಲಿ ವಾರೆನ್‌ ಬಫೆಟ್‌ ಅತ್ಯುನ್ನತ ವ್ಯಕ್ತಿ. ಸಾಕಷ್ಟು ಜನರಿಗೆ ಹೂಡಿಕೆ ಗುರು. ಅವರ ಹೂಡಿಕೆ ಪ್ರಯಾಣ ಹೇಗಿತ್ತು ಎನ್ನುವುದು ಶ್ರೀಮಂತರಾಗಲು ಬಯಸುವವರಿಗೆ ಜೀವನಪಾಠವಾಗಬಲ್ಲದು. ಅವರ ಆರಂಭಿಕ ಜೀವನ, ಹೂಡಿಕೆ ಹೇಗಿತ್ತು ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

Warren Buffett: ಶ್ರೀಮಂತರಾಗುವುದು ಹೇಗೆ, 11ನೇ ವಯಸ್ಸಿನಲ್ಲಿ ಇನ್ವೆಸ್ಟ್‌ ಆರಂಭಿಸಿದ ಹೂಡಿಕೆ ಗುರು ವಾರೆನ್‌ ಬಫೆಟ್‌ ತಿಳಿಸಿದ 6 ಪಾಠಗಳು

Saturday, September 9, 2023

ನಿಮ್ಮ ಮಗುವಿಗೆ ಉಳಿತಾಯದ ಮಹತ್ವವನ್ನು ಕಲಿಸಲು ನೀವು ಬಯಸಿದರೆ, ಅವರಿಗೆ ಹಣ ಕೂಡಿಡುವ ಅಭ್ಯಾಸವನ್ನು ಬೆಳೆಸಿ.

Money Management: ಹಣ ನಿರ್ವಹಣೆಯ ಬಗ್ಗೆ ನಿಮ್ಮ ಮಕ್ಕಳಿಗೆ ಈ ರೀತಿ ಕಲಿಸಿ.. ದುಡ್ಡಿನ ಮೌಲ್ಯ ತಿಳಿಸಿ

Tuesday, January 31, 2023