ಕನ್ನಡ ಸುದ್ದಿ  /  ವಿಷಯ  /  odi world cup 2023

Latest odi world cup 2023 Photos

ವಿರಾಟ್ ಕೊಹ್ಲಿ ಈವರೆಗೆ ಬರೋಬ್ಬರಿ 10 ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರೊಂದಿಗೆ 5 ಬಿಸಿಸಿಐ ಪ್ರಶಸ್ತಿಗಳು ಹಾಗೂ 3 ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ‌. ಇದರೊಂದಿಗೆ 12 ಐಸಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಪಡೆಯುವ ಮೂಲಕ, ಪ್ರಶಸ್ತಿಗಳ ಸರದಾರನಾಗಿದ್ದಾರೆ.

10 ಐಸಿಸಿ ಪ್ರಶಸ್ತಿ, 5 ಬಿಸಿಸಿಐ ಪ್ರಶಸ್ತಿ; ದಾಖಲೆಗಳ ಸರದಾರ ವಿರಾಟ್ ಕೊಹ್ಲಿಗೆ ಒಲಿದ ಪ್ರಶಸ್ತಿಗಳು ಒಂದೆರಡಲ್ಲ

Sunday, January 28, 2024

ತಿಂಗಳ ಅವಧಿಯಲ್ಲಿ ಆಡಿದ ಎರಡು ಟೆಸ್ಟ್‌ಗಳಲ್ಲಿ ದೀಪ್ತಿ ಶರ್ಮಾ 55 ಸರಾಸರಿಯಲ್ಲಿ 165 ರನ್‌ ಕಲೆ ಹಾಕಿದರೆ, ಬೌಲಿಂಗ್​​ನಲ್ಲಿ 10.81ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 67 ರನ್ ಗಳಿಸಿದರು. ಅವರ ಬೌಲಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ಅವರು 7 ರನ್‌ಗಳಿಗೆ 5 ವಿಕೆಟ್ ಮತ್ತು 32ಕ್ಕೆ 4 ವಿಕೆಟ್‌ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಉರುಳಿಸಿದರು.

ವಿಶ್ವಕಪ್​ಗೆ ಮುತ್ತಿಕ್ಕಿದ ಕಮಿನ್ಸ್​ಗೆ ಮತ್ತೊಂದು ಗರಿ; ಡಿಸೆಂಬರ್ ತಿಂಗಳ ಐಸಿಸಿ ಪ್ರಶಸ್ತಿ ಗೆದ್ದ ದೀಪ್ತಿ ಶರ್ಮಾ

Wednesday, January 17, 2024

2023ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿಯೂ ಭಾರತೀಯ ಕ್ರಿಕೆಟಿಗರು ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2023ರಲ್ಲಿ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಮೂರು ಬ್ಯಾಟರ್‌ಗಳಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ವರ್ಷವಿಡೀ ಅತಿ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯ ಬೌಲರ್‌ಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.

2023ರಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್ ಕಬಳಿಸಿದ ಬೌಲರ್‌ಗಳು; ಅಗ್ರ ಮೂವರು ಭಾರತೀಯರು

Wednesday, December 27, 2023

ಕ್ರಿಕ್‌ಬಜ್‌ ಜೊತೆಗೆ ಮಾತನಾಡಿರುವ ಹಿರಿಯ ಸ್ಟಾರ್ ಆಲ್‌ರೌಂಡರ್, ಒತ್ತಡದಿಂದಾಗಿ ವಿಶ್ವಕಪ್‌ನಾದ್ಯಂತ ದೃಷ್ಟಿ ಮಸುಕಾಗಿತ್ತು ಎಂದು ಹೇಳಿಕೊಂಡಿದ್ದಾರೆ.‌ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಅದು ತನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.

ಪಂದ್ಯಾವಳಿ ಪೂರ್ತಿ ದೃಷ್ಟಿ ಮಸುಕಾಗಿತ್ತು; ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ವಿವರಿಸಿದ ಶಕೀಬ್

Tuesday, December 26, 2023

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು.

2023ರಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಟಾಪ್ 10 ಆಟಗಾರರು; ಭಾರತದ ನಾಲ್ವರಿಗೆ ಸ್ಥಾನ

Sunday, December 24, 2023

ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ 830 ಭಾರತದ ಆಟಗಾರರು ಸೇರಿ ಒಟ್ಟು 1166 ಮಂದಿ ನೋಂದಾಯಿಸಿಕೊಂಡಿದ್ದಾರೆ. ಆದರೆ, 30 ವಿದೇಶಿಗರು ಸೇರಿ ಹರಾಜಿನಲ್ಲಿ 77 ಸ್ಲಾಟ್​​ಗಳು ತುಂಬಬೇಕಿದೆ.

IPL 2024: ಐಪಿಎಲ್​ ಹರಾಜಿನಲ್ಲಿ ಕೋಟಿಗಟ್ಟಲೇ ಜಾಕ್​ಪಾಟ್ ಹೊಡೆಯುವ ಐವರು ಸ್ಟಾರ್ ಆಟಗಾರರು ಇವರೇ

Sunday, December 10, 2023

ವಿಶ್ವಕಪ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ ಇಬ್ಬರು ಆಸೀಸ್ ಆಟಗಾರರು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಮಾತ್ರವಲ್ಲದೆ, ಭಾರತ ವಿರುದ್ಧದ ಟಿ20 ಸರಣಿಯಲ್ಲಿಯೂ ಆಸ್ಟ್ರೇಲಿಯಾದ ಇಬ್ಬರು ಕ್ರಿಕೆಟಿಗರು ಮಿಂಚಿದ್ದರು. ಹೀಗಾಗಿ ತಿಂಗಳ ಅತ್ಯುತ್ತಮ ಕ್ರಿಕೆಟಿಗರ ರೇಸ್‌ನಲ್ಲಿ ಇವರಿಬ್ಬರನ್ನು ಪರಿಗಣಿಸಲಾಗಿದೆ.

ಐಸಿಸಿ ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಮೂವರು ಕ್ರಿಕೆಟಿಗರು; ಭಾರತದ ವೇಗಿಗೆ ಸ್ಥಾನ

Thursday, December 7, 2023

"ನನಗೆ ನೋವಾಗಿದೆ. ವಿಶ್ವದ ಎಲ್ಲಾ ತಂಡಗಳು ಈ ಟ್ರೋಫಿಗಾಗಿ ಹೋರಾಡುತ್ತಾರೆ, ತಮ್ಮ ತಲೆಯ ಮೇಲೆ ಹೊತ್ತುಕೊಳ್ಳಲು ಬಯಸುತ್ತಾರೆ. ಆದರೆ ಅದೇ ಟ್ರೋಫಿಯ ಮೇಲೆ ಕಾಲು ಇಡುವುದು ನನಗೆ ಸಂತೋಷವನ್ನು ನೀಡಲಿಲ್ಲ" ಎಂದು ಶಮಿ ಹೇಳಿದ್ದಾರೆ.

'ನನಗೆ ನೋವಾಗಿದೆ, ತಲೆ ಮೇಲೆ ಹೊತ್ತು ತಿರುಗುವ ಟ್ರೋಫಿ ಮೇಲೆ ಕಾಲಿಡುವುದು ಸರಿಯಲ್ಲ'; ಶಮಿ ಬೇಸರ

Saturday, November 25, 2023

ಇದೀಗ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕೂಡ ಮಿಚೆಲ್ ಮಾರ್ಷ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿರುವ ಫೋಟೋ ಹಾಗೂ ವಿಶ್ವಕಪ್​ ಟ್ರೋಫಿಗೆ ತಾವು ಮುತ್ತಿಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

'ಬ್ರೋ, ವಿಶ್ವಕಪ್ ಟ್ರೋಫಿಗೆ ಸ್ವಲ್ಪನಾದ್ರು ಗೌರವ ಕೊಡಿ': ಮಿಚೆಲ್ ಮಾರ್ಷ್​ ವಿರುದ್ಧ ನಟಿ ಊರ್ವಶಿ ರೌಟೇಲಾ ಗರಂ

Saturday, November 25, 2023

ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಬಿಯರ್ ಬಾಟೆಲ್ ಜೊತೆಗೆ ಮಾರ್ಷ್ ಟ್ರೋಫಿ ಕಾಲಿಟ್ಟ ಫೋಟೋ ಸಖತ್ ವೈರಲ್ ಆಗಿತ್ತು.

ಟ್ರೋಫಿ ಮೇಲೆ ಕಾಲಿಟ್ಟಿದ್ದ ಮಾರ್ಷ್ ಮೇಲೆ ಬಿತ್ತು ಕೇಸ್; ಬ್ಯಾನ್ ಮಾಡುವಂತೆ ಪ್ರಧಾನಿಗೆ ದೂರು

Friday, November 24, 2023

2023ರ ವಿಶ್ವಕಪ್‌ನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ 35 ವರ್ಷ ದಾಟಿದ್ದಾರೆ. ಹಾಗಾಗಿ 2027ರ ವಿಶ್ವಕಪ್​ಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿ ಫಾರ್ಮ್, ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ತಂಡದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದ ಆಡುವುದು ಅನುಮಾನ. ಇದು ವಿರಾಟ್ ವೃತ್ತಿಜೀವನದ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯಿದೆ ಎಂದು ಫ್ಯಾನ್ಸ್​ಗೂ ತಿಳಿದಿದೆ.

2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!

Friday, November 24, 2023

ವಿಶ್ವಕಪ್​ನಲ್ಲಿ ಫ್ಲಾಪ್ ಸ್ಟಾರ್​​ಗಳು.

ಬಾಬರ್​​ ಟು ಸೂರ್ಯ; ನಿರೀಕ್ಷೆ ಹೆಚ್ಚಿಸಿ ವಿಶ್ವಕಪ್​ನಲ್ಲಿ ಸದ್ದೇ ಮಾಡಲಿಲ್ಲ ಈ ಸ್ಟಾರ್​ ಆಟಗಾರರು

Wednesday, November 22, 2023

ಐಸಿಸಿ ವಿಶ್ವಕಪ್‌ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದಿದ್ದು ನಮ್ಮ ಭಾರತೀಯ ಆಟಗಾರ. ಈ ಪಟ್ಟಿಯಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.

ವಿಶ್ವಕಪ್ ಸೆಮಿ ಫೈನಲ್, ಫೈನಲ್‌ನಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಆಟಗಾರರು ಇವರು; ಫೋಟೊಸ್

Monday, November 20, 2023

ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್ ಸಮಾರಂಭದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಆಟಗಾರರು.

ಮೂರಕ್ಕೇರದ ಭಾರತ, ಆರಕ್ಕೇರಿದ ಆಸೀಸ್; ವಿಶ್ವಕಪ್ ಸೋಲು-ಗೆಲುವಿನ ಭಾವನಾತ್ಮಕ ಕ್ಷಣಗಳು, PHOTOS

Monday, November 20, 2023

ಎಕ್ಸ್​ ಖಾತೆಯಲ್ಲಿ ಮೋದಿ ಸಂತೈಸಿದ ಚಿತ್ರವನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲಾ ಭಾರತೀಯ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ನಿನ್ನೆಯ ದಿನ ನಮ್ಮದಾಗಿರಲಿಲ್ಲ; ಮೋದಿ ಸಂತೈಸಿದ ಚಿತ್ರದೊಂದಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಮಿ

Monday, November 20, 2023

2016ರಲ್ಲಿ ಭಾರತದಲ್ಲೇ ಜರುಗಿದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಧೋನಿಯೇ ಮುನ್ನಡೆಸಿದರು. ಆದರೆ, ಮತ್ತೆ ಸೆಮಿಫೈನಲ್​ನಲ್ಲೇ ಸೋತು ನಿರಾಸೆಗೆ ಒಳಗಾಯಿತು. ವೆಸ್ಟ್ ಇಂಡೀಸ್​ ಎದುರು ಸೆಮಿ ಕದನದಲ್ಲಿ ಸೋಲಿನೊಂದಿಗೆ ಟೂರ್ನಿಯಿಂದ ಹೊರ ಬಿತ್ತು. 2017ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಸಾರಥಿಯಾಗಿದ್ದರು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತ, ಫೈನಲ್​​ನಲ್ಲಿ ಮತ್ತೊಮ್ಮೆ ನಿರಾಸೆಗೆ ಒಳಗಾಯಿತು. ಪಾಕಿಸ್ತಾನದ ಎದುರು ಹೀನಾಯವಾಗಿ ಶರಣಾಯಿತು.

10 ವರ್ಷಗಳಲ್ಲಿ 9 ಬಾರಿ ನಾಕೌಟ್ ಹಂತದಲ್ಲಿ ಸೋಲು; ಐಸಿಸಿ ಟೂರ್ನಿಯಲ್ಲಿ ಅಂತಿಮ ಹಂತದಲ್ಲಿ ಎಡವುತ್ತಿರುವ ಭಾರತ

Monday, November 20, 2023

2023ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ 2ನೇ ಬಾರಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾದ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

ಡಬಲ್ ಚಾಂಪಿಯನ್ಸ್; ಇತಿಹಾಸ ನಿರ್ಮಿಸಿದ ಆಸ್ಟ್ರೇಲಿಯಾ ತಂಡದ 7 ಆಟಗಾರರು

Monday, November 20, 2023

ಭಾರತದ ಗೆಲುವಿನೊಂದಿಗೆ ಸದಾ ಜೊತೆಯಾಗಿದ್ದ ಅಭಿಮಾನಿಗಳು, ಸವರ ಸೋಲಿನಲ್ಲೂ ಜೊತೆಯರಬೇಕು. ಭಾರತೀಯ ಕ್ರಿಕೆಟ್‌ ತಂಡದ ಸೋಲು ಭಾರತೀಯರ ಸೋಲಿನಂತೆ. ಅವರ ಜೊತೆ ನಿಲ್ಲುವ ಜವಾಬ್ದಾರಿ ಪ್ರತಿಯೊಬ್ಬ ಅಭಿಮಾನಿಯದ್ದು.

ಬಿಕ್ಕಿ ಬಿಕ್ಕಿ ಅತ್ತ ಸಿರಾಜ್‌, ಮೈದಾನದಲ್ಲೇ ಕುಸಿದ ರಾಹುಲ್;‌ ಸೋಲಿನ ಬಳಿಕ ಕೊಹ್ಲಿ, ರೋಹಿತ್‌ ಭಾವುಕ

Monday, November 20, 2023

ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 11 ಪಂದ್ಯಗಳಲ್ಲಿ 3 ಶತಕ, 6 ಅರ್ಧಶತಕಗಳೊಂದಿಗೆ 765 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ 1 ವಿಕೆಟ್ ಪಡೆದಿದ್ದರು. ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ವಿರಾಟ್ ಸರಣಿ ಶ್ರೇಷ್ಠ ಗೆದ್ದರು. ಗೋಲ್ಡನ್​ ಬ್ಯಾಟ್​ ಅನ್ನು ಗೆದ್ದುಕೊಂಡಿದ್ದಾರೆ.

ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ, ಗರಿಷ್ಠ ರನ್, ಹೆಚ್ಚು ವಿಕೆಟ್; ವಿಶ್ವಕಪ್​ನಲ್ಲಿ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ, ಇಲ್ಲಿದೆ ಪಟ್ಟಿ

Monday, November 20, 2023

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆಸೀಸ್‌ ಗೆಲುವಿಗೆ 241 ರನ್‌ಗಳ ಸಾಧಾರಣ ಗುರಿ ನೀಡಿತು. ಚೇಸಿಂಗ್‌ ನಡೆಸಿದ ಆಸ್ಟ್ರೇಲಿಯಾ, ಕೇವಲ 43 ಓವರ್‌ಗಳಲ್ಲಿ ಗುರಿ ತಲುಪಿತು. ಭಾರತದ ಸತತ 11 ಗೆಲುವಿಗೆ ಅಡ್ಡಿಯಾಯ್ತು.

ಆರನೇ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ ಆಸ್ಟ್ರೇಲಿಯಾ; ಕಮಿನ್ಸ್‌ ಪಡೆ ಗೆದ್ದ ಬಹುಮಾನ ಮೊತ್ತ ಇಷ್ಟು

Monday, November 20, 2023