ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್, ಒಂದೇ ಭಾಷೆಗೆ ಸೀಮಿತವಾಗದ ಕಲಾವಿದ. ಈಗಾಗಲೇ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಮನ್, ಕನ್ನಡ, ತೆಲುಗು, ತಮಿಳು ಮಾತ್ರವಲ್ಲದೆ ಒಟ್ಟು 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ʻಸ್ನೇಹದ ಕಡಲಲ್ಲಿʼ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಆಗಮಿಸಿದ್ದಾರೆ.