tumakuru News, tumakuru News in kannada, tumakuru ಕನ್ನಡದಲ್ಲಿ ಸುದ್ದಿ, tumakuru Kannada News – HT Kannada

Latest tumakuru Photos

ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಭಕ್ತರು, ಗಣ್ಯರ ದಂಡು ಹರಿದು ಬಂದಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಬಿ. ಸುರೇಶ್ಗೌಡ, ಜ್ಯೋತಿಗಣೇಶ್, ಶ್ರೀನಿವಾಸಯ್ಯ ಸೇರಿದಂತೆ ವಿವಿಧ ಮಠಾಧೀಶರುಗಳು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ; ಪುತ್ಥಳಿ ಮೆರವಣಿಗೆ, ಮಕ್ಕಳಿಗೆ ನಾಮಕರಣ, ಬೃಹತ್ ರಂಗೋಲಿ‌ -Photos

Tuesday, April 1, 2025

ತುಮಕೂರು ಜಿಲ್ಲೆಯ ಇತಿಹಾಸ ಪ್ರಸಿದ್ದ ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕರಿಗಿರಿ ಕ್ಷೇತ್ರದಲ್ಲಿ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮರಥೋತ್ಸವವು ಮಧ್ಯಾಹ್ನ ಭಕ್ತಾದಿಗಳ ಹರ್ಷೋದ್ಘಾರದ ನಡುವೆ ಗರುಡ ಬಂದು ರಥ ಪ್ರದಕ್ಷಿಣೆ ಹಾಕಿದ ನಂತರ ವಿದ್ಯುಕ್ತವಾಗಿ ನೆರವೇರಿತು.

Devarayanadurga Jatre: ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದಲ್ಲಿ ಜಾತ್ರೆ, ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದ ವೈಭವದ ಫೋಟೋಗಳು

Thursday, March 13, 2025

ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮೊದಲ ದಿನ ನಡೆದ ವೃಷಭ ವಾಹನೋತ್ಸವದ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರೊಂದಿಗೆ ವಿವಿಧ ಮಠಾಧೀಶರು ಭಾಗಿಯಾದರು,

Tumkur Siddganga Jatre 2025: ತುಮಕೂರು ಸಿದ್ದಗಂಗಾ ಮಠದಲ್ಲಿ ಜಾತ್ರಾ ವೈಭವ, ವೃಷಭ ವಾಹನ ಉತ್ಸವದ ಸಡಗರ, ಭಕ್ತರ ಸಮಾಗಮ

Friday, February 21, 2025

ಫಲಪುಷ್ಪ ಪ್ರದರ್ಶನದಲ್ಲಿ ಮಂದರಗಿರಿ ಮರು ಸೃಷ್ಟಿ, ಸಿರಿಧಾನ್ಯ ಕಲಾಕೃತಿ, ತರಕಾರಿ ಕೆತ್ತನೆಯಲ್ಲಿ ಇಸ್ರೋಗೆ ನಮನ, ರೈತ ಜೀವನ, ಮರಳು ಕಲಾಕೃತಿ, ಆಕರ್ಷಕ ವಿನ್ಯಾಸದ ಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆಯಾಗಿವೆ.

ಮಂದರಗಿರಿ ಮರು ಸೃಷ್ಟಿ, ಸಿರಿಧಾನ್ಯ ಕಲಾಕೃತಿ ಆಕರ್ಷಣೆ; ತುಮಕೂರಿನಲ್ಲಿ ಜ 26ರಿಂದ ಫಲಪುಷ್ಪ ಪ್ರದರ್ಶನ

Saturday, January 25, 2025

ತುಮಕೂರಿನಲ್ಲಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ದೇವರಾಯನ ದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನ ಪಿಳ್ಳಾಆಂಜನೇಯ ಗುಡಿಯ ಬಳಿ ಪತ್ತೆಯಾಗಿದ್ದ ಈ ಜೇಡಕ್ಕೆ ತೆಂಕಣ ಜಯಮಂಗಲಿ ಎಂದು ಹೆಸರಿಡಲಾಗಿದೆ.

Tenkana Jayamangali: ದೇವರಾಯನದುರ್ಗದ ಬಳಿ ಹೊಸ ಪ್ರಭೇದದ ಜೇಡ ಪತ್ತೆ; ಸ್ಫೈಡರ್​ಗೆ ವಿಶೇಷ ಹೆಸರು ನಾಮಕರಣ

Sunday, October 13, 2024

ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಎಲ್ಲ ರೀತಿಯಲ್ಲೂ ಶ್ರೀಮಂತವಾದುದು. ಸುತ್ತಮುತ್ತ ಚಾರಿತ್ರಿಕ ಪ್ರದೇಶಗಳಿವೆ., ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಪ್ರಕೃತಿ ರಮ್ಯ ತಾಣಗಳಿವೆ. ವಾರಾಂತ್ಯದ ಚಾರಣಕ್ಕೆ ಹೇಳಿ ಮಾಡಿಸಿದ ಹತ್ತಾರು ಬೆಟ್ಟಗಳಿವೆ. ಈ ಪೈಕಿ ಆಯ್ದ ಏಳು ಚಾರಣ ತಾಣಗಳ ಕಿರು ಪರಿಚಯ ಇಲ್ಲಿದೆ.

Weekend getaways; ಬೆಂಗಳೂರು ಸುತ್ತಮುತ್ತ ವಾರಾಂತ್ಯದ ರಜೆಯಲ್ಲಿ ತೆರಳಬಹುದಾದ 7 ಜನಪ್ರಿಯ ಚಾರಣ ತಾಣಗಳಿವು

Thursday, August 15, 2024

ತುಮಕೂರು ತಾಲೂಕು ಉರುಡಗೆರೆ ಹೋಬಳಿ, ಮೈದಾಳ ಗ್ರಾಮ ಪಂಚಾಯಿತಿಯ ಅಯ್ಯನಪಾಳ್ಯ ಗ್ರಾಮದ ರಾಮಚಂದ್ರಯ್ಯ ಅವರ ಮನೆ ಸಮೀಪ 13 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಪುಟ್ಟಯ್ಯ ಅವರು ಹುಲ್ಲು ಕೊಯ್ಯಲು ಹೋದಾಗ ಹೆಬ್ಬಾವು ಅವರಿಗೆ ಕಾಣಸಿಕ್ಕಿತ್ತು. ಕೂಡಲೇ ಅವರು ತುಮಕೂರಿನ ವರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಹೆಬ್ಬಾವು ಇರುವುದರ ಬಗ್ಗೆ ತಿಳಿಸಿದ್ದರು.

ತುಮಕೂರು ಅಯ್ಯನಪಾಳ್ಯದಲ್ಲಿತ್ತು 13 ಅಡಿ ಉದ್ದದ ಹೆಬ್ಬಾವು; ವರಂಗಲ್‌ ಫೌಂಡೇಶನ್‌ ತಂಡದ ನೆರವಿನೊಂದಿಗೆ ಸುರಕ್ಷಿತಾರಣ್ಯಕ್ಕೆ-ಚಿತ್ರನೋಟ

Saturday, July 27, 2024

ತುಮಕೂರು ಸಮೀಪದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಎಂಬಲ್ಲಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಭಾನುವಾರ (ಮೇ 5) ರಾತ್ರಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿತ್ತು.

ತುಮಕೂರು: ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಹೋಂಡಾ ಆಕ್ಟೀವಾ ಸ್ಕೂಟರ್ ಒಳಗಿತ್ತು ಆ ನಾಗರಹಾವು- ಫೋಟೋ ವರದಿ

Tuesday, May 7, 2024

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಮ್ಮ ಮತದಾನದ ಹಕ್ಕು ಚಾಲಾಯಿಸಿದ್ದಾರೆ, ಇಲ್ಲಿನ ಶಾಲೆಯೊಂದರಲ್ಲಿ ತೆರೆದಿದ್ದ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಅವರು, ಎಲ್ಲರೂ ತಪ್ಪದೆ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದರಿ, ತಪ್ಪದೆ ಎಲ್ಲರು ಮತದಾನ ಮಾಡಿ ಎಂದು ಕರೆ ನೀಡಿದರು.

ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದಲ್ಲಿ ಸಿದ್ಧಗಂಗಾ ಸ್ವಾಮೀಜಿ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಇತರರಿಂದ ಮತದಾನ - ಫೋಟೋಸ್

Friday, April 26, 2024

ತುಮಕೂರು ಭಾಗದ ಇತಿಹಾಸ ಪ್ರಸಿದ್ದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ತುಮಕೂರು ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ, ಸುಡು ಬಿಸಿಲಲ್ಲಿ ಭಕ್ತರ ಸಂಭ್ರಮ- ಚಿತ್ರನೋಟ

Wednesday, April 24, 2024

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್​, ಸದ್ಯ ನಾನು ನಮ್ಮ ಮನೆಗೆ ವಾಪಸ್ ಬಂದಿದ್ದೇನೆ. ಭಾರತೀಯ ಜನತಾ ಪಾರ್ಟಿ 34 ವರ್ಷಗಳಿಂದ ನಾನು ಸಂಘಟನೆ ಮಾಡಿದಂತಹ ಮನೆ, ಹಾಗಾಗಿ ಮತ್ತೆ ನಮ್ಮ ಮನೆಗೆ ವಾಪಸ್ಸಾಗಿದ್ದೇನೆ. ರಾಜ್ಯ ಬಿಜೆಪಿ ಪಕ್ಷದ ಎಲ್ಲಾ ಪ್ರಮುಖ ನಾಯಕರು ನನ್ನ ಮರು ಸೇರ್ಪಡೆಗೆ ಬಹಳ ಆತ್ಮೀಯತೆ ತೋರಿಸಿದ್ದಾರೆ ಎಂದರು.

ಕಾಂಗ್ರೆಸ್ ಬಿಡಲಿಕ್ಕೆ ಯಾವುದೇ ಕಾರಣಗಳಿಲ್ಲ, ಬಿಜೆಪಿ ನನ್ನ ಮನೆ, ವಾಪಸ್ ಬಂದಿದ್ದೇನೆ: ಜಗದೀಶ್ ಶೆಟ್ಟರ್

Sunday, January 28, 2024

ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಮಹಿಳಾ ಚೆಸ್​ ವಿಭಾಗದಲ್ಲಿ ದೊಡ್ಡಬಳ್ಳಾಪುರ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಜಯಶ್ರೀ ಅಭೂತಪೂರ್ವ ಗೆಲುವು ದಾಖಲಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಮಹಿಳಾ ಚೆಸ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ದೊಡ್ಡಬಳ್ಳಾಪುರದ ಶಿಕ್ಷಕಿ ಆಯ್ಕೆ

Monday, October 30, 2023

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್​ಡಿಕೆ, “ಚುನಾವಣೆ ಪ್ರಚಾರದ ವೇಳೆ ಕುಣಿಗಲ್ ಪಟ್ಟಣದಲ್ಲಿ ಜನಸಾಗರ. ಕ್ಷೇತ್ರದ ಮಹಾಜನತೆಗೆ ಅನಂತ ಧನ್ಯವಾದಗಳು” ಎಂದು ಟ್ವೀಟ್​ ಮಾಡಿದ್ದಾರೆ.

HDK Campain in Kunigal: ಕುಣಿಗಲ್​ನಲ್ಲಿ ಹೆಚ್​ಡಿಕೆ ಪ್ರಚಾರದ ವೇಳೆ ಜನಸಾಗರ; ಈ ಬಾರಿ ಜನತಾ ಸರಕಾರ ಎಂದ ಜೆಡಿಎಸ್ ನಾಯಕ PHOTOS

Saturday, May 6, 2023