Mangalore:ಹೆಂಡತಿ, ನಾದಿನಿ ಜೊತೆ ಹೋಗುತ್ತಿದ್ದ ಪೊಲೀಸ್ ಮೇಲೇ ನೈತಿಕ ಪೊಲೀಸ್ ಗಿರಿ;ಮಂಗಳೂರಿನಲ್ಲಿ ಇಬ್ಬರು ಅರೆಸ್ಟ್
- ಮಂಗಳೂರಿನ ಬಂಟ್ವಾಳದಲ್ಲಿ ನಿನ್ನೆ ರಾತ್ರಿ ಇಬ್ಬರು ಯುವಕರು ನೈತಿಕ ಪೊಲೀಸ್ ಗಿರಿ ನಡೆಸಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಟ್ವಾಳ ನಗರ ಠಾಣೆಯ ಹೆಡ್ ಕಾನ್ಸೇಟೇಬಲ್ ಕುಮಾರ್ ತನ್ನ ಪತ್ನಿ ಮತ್ತು ನಾದಿನಿಯ ಜೊತೆ ರಾತ್ರಿ ಬಿ.ಸಿ ರೋಡಿನಲ್ಲಿ ಊಟಕ್ಕೆಂದು ಹೊಟೇಲ್ ಬಂದಿದ್ದರು. ಊಟ ಮುಗಿಸಿ ಹೆದ್ದಾರಿ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಯುವಕರು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ಹೆದ್ದಾರಿಯಿಂದ ಒಳಹೋದ ಕೂಡಲೇ ಬೈಕಿನಲ್ಲಿ ಅಡ್ಡಗಟ್ಟಿದ ಯುವಕರು, ಪೊಲೀಸ್ ಎಂದು ತಿಳಿಯದೆ ಅವರನ್ನು ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾರೆ. ಹಿಂದು ಯುವತಿಯರ ಜೊತೆಗೆ ಎಲ್ಲಿ ಹೋಗ್ತಿದ್ದೀಯಾ.. ಇಲ್ಲಿ ಹಾಗೆಲ್ಲ ನಡೆಯೋದಿಲ್ಲ ಗೊತ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ತಾನು ಬಂಟ್ವಾಳ ಠಾಣೆಯ ಸ್ಟಾಫ್ ಎಂದು ಹೇಳಿದರೂ, ನೀನು ಪೊಲೀಸ್ ಅಲ್ಲ ಎನ್ನುತ್ತಾ ಯುವತಿಯನ್ನು ಗುರಿಯಾಗಿಸಿ ಮೊಬೈಲಿನಲ್ಲಿ ವಿಡಿಯೋ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಪೊಲೀಸ್ ಸಿಬ್ಬಂದಿ ಕುಮಾರ್, ಠಾಣೆಗೆ ಸುದ್ದಿ ಮುಟ್ಟಿಸಿ ತಮ್ಮನ್ನು ದಬಾಯಿಸಲು ಬಂದಿದ್ದ ಯುವಕರನ್ನು ವಶಕ್ಕೆ ಪಡೆದಿದ್ದಾರೆ.