logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬಾಲರಾಮನ ಮುದ್ದು ಮೊಗವ ನೋಡಿದಿರಾ: ಹಣೆಯ ಮೇಲೊಪ್ಪುವ ಕೆಂಪು ನಾಮಕ್ಕೂ ಇದೆ ಅಧ್ಯಾತ್ಮ ಅರ್ಥ, ಮಹತ್ವ ಅಪಾರ -Ht Special

ಬಾಲರಾಮನ ಮುದ್ದು ಮೊಗವ ನೋಡಿದಿರಾ: ಹಣೆಯ ಮೇಲೊಪ್ಪುವ ಕೆಂಪು ನಾಮಕ್ಕೂ ಇದೆ ಅಧ್ಯಾತ್ಮ ಅರ್ಥ, ಮಹತ್ವ ಅಪಾರ -HT Special

Umesh Kumar S HT Kannada

Jan 22, 2024 07:36 PM IST

google News

ಕುತೂಹಲ ಕೆರಳಿಸಿದೆ ಅಯೋಧ್ಯೆ ಬಾಲರಾಮನ ಮುದ್ದುಮೊಗದ ಮೇಲಿನ ತಿಲಕ

  • Ayodhya Ram Lalla and his Thenkalai Namam: ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನನಾದ ಬಾಲರಾಮನ ಮುದ್ದು ಮೊಗದ ಮೇಲೆ ರಾರಾಜಿಸಿದ ತಿಲಕ ಸದ್ಯ ಚರ್ಚೆಯ ಕೇಂದ್ರ ಬಿಂದು. ರಾಮ ಮಂದಿರದಲ್ಲಿ ಅನುಸರಣೆಯಾಗುವುದು ತೆಂಗಲೈ ಸಂಪ್ರದಾಯವಾ ರಾಮಾನಂದಿ ಸಂಪ್ರದಾಯವಾ ಎಂಬ ಚರ್ಚೆಗೆ ಪೂರಕ ಮಾಹಿತಿ ನೀಡಿದ್ದಾರೆ ಇತಿಹಾಸ ಪ್ರಾಧ್ಯಾಪಕ ಶೆಲ್ವಪಿಳ್ಳೈ ಅಯ್ಯಂಗಾರ್. 

ಕುತೂಹಲ ಕೆರಳಿಸಿದೆ ಅಯೋಧ್ಯೆ ಬಾಲರಾಮನ ಮುದ್ದುಮೊಗದ ಮೇಲಿನ ತಿಲಕ
ಕುತೂಹಲ ಕೆರಳಿಸಿದೆ ಅಯೋಧ್ಯೆ ಬಾಲರಾಮನ ಮುದ್ದುಮೊಗದ ಮೇಲಿನ ತಿಲಕ

ಅಯೋಧ್ಯೆ ರಾಮ ಮಂದಿರ (Ayodhya Ram Mandir) ದಲ್ಲಿ ಹೂನಗು ಚೆಲ್ಲುತ್ತ ಬಾಲರಾಮ ವಿರಾಜಮಾನನಾಗಿದ್ದು, ದೇವರ ಮುಖದ ಮೇಲಿನ ತಿಲಕ ಗಮನಸೆಳೆದಿದೆ. ಬಾಲರಾಮನ ಮುಖದ ಮೇಲಿನ ತಿಲಕ ತೆಂಗಲೈ ನಾಮ ಎಂಬ ವಿಚಾರ ತೀವ್ರವಾಗಿ ಚರ್ಚೆಗೆ ಒಳಗಾಗಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಪೂಜಿಸುವವರು ರಾಮಾನಂದಿ ಸಂಪ್ರದಾಯದವರು. ಅವರು ಈ ತೆಂಗಲೈ ನಾಮವನ್ನು ಹೋಲುವ ತಿಲಕವನ್ನು ಹೇಗ ಇಟ್ಟರು ಎಂಬ ಕುತೂಹಲವೂ ಚರ್ಚೆಯ ಭಾಗವಾಗಿದೆ.

ತಾಜಾ ಫೋಟೊಗಳು

ಕನಸಲ್ಲಿ ಆನೆ ಬಂತಾ, ಎಷ್ಟು ಆನೆಗಳಿದ್ದವು, ಹೇಗಿದ್ದವು, ಆ ಕನಸಿನ ಅರ್ಥ ಏನು- ವಾಸ್ತು ತಜ್ಞ ಮುಕುಲ್ ರಸ್ತೋಗಿ ವಿವರಣೆ ಹೀಗಿದೆ ನೋಡಿ

Nov 30, 2024 04:19 PM

ನಾಳಿನ ದಿನ ಭವಿಷ್ಯ: ಕೆಲಸದಲ್ಲಿ ಪ್ರಗತಿಗೆ ಅನೇಕ ಅವಕಾಶಗಳಿವೆ, ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ

Nov 30, 2024 04:12 PM

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಬಾಲರಾಮನ ಮುಖದ ಮೇಲಿನ ತಿಲಕಕ್ಕೆ ಸಂಬಂಧಿಸಿದ ಕುತೂಹಲ ತಣಿಸುವ ಪ್ರಯತ್ನಕ್ಕಾಗಿ ಇತಿಹಾಸ ಪ್ರಾಧ್ಯಾಪಕ ಶೆಲ್ವಪಿಳ್ಳೈ ಅಯ್ಯಂಗಾರ್ (Dr. Shelvapillai Iyengar) ಅವರನ್ನು'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಮಾತನಾಡಿಸಿತು. ಅವರ ಕೊಟ್ಟ ವಿವರಣೆ ಹೀಗಿದೆ.

"ಅಯೋಧ್ಯೆಯ ಬಾಲರಾಮನ ಮುಖದ ಮೇಲೆ ಇದ್ದ ನಾಮ ತೆಂಗಲೈ ನಾಮವಲ್ಲ. ಬಾಲರಾಮನ ಮುಖದ ಮೇಲೆ ಇದ್ದ ನಾಮವನ್ನು ತಿಲಕ ಎಂದೇ ಕರೆಯಲಾಗುತ್ತದೆ. ನಾಮವನ್ನು ದೇವರಿಗೆ ಹಾಕಿದಾಗ ಅದನ್ನು ತಿಲಕ ಎನ್ನುವುದು ವಾಡಿಕೆ. ದೇವರ ತಿಲಕವನ್ನು ತಿರುನಾಮ, ಊರ್ಧ್ವ ಪುಂಡ್ರ ಎಂದೂ ಹೇಳುತ್ತಾರೆ. ಭಕ್ತರ ಮುಖದ ಮೇಲೆ ಇದ್ದರೆ ಅದು ದೇವರ ಪಾದ.

ತಿಲಕದ ಬಿಳಿಯಾಗಿರುವ ಭಾಗವನ್ನು ಪಾದಗಳು ಎಂದು ಪರಿಗಣಿಸಲಾಗುತ್ತದೆ. ಆ ಪಾದಗಳ ತಳಭಾಗದಲ್ಲಿ ಇರುವ ಪೀಠದಂತಹ ಭಾಗವು ಕಮಲದ ಹೂವನ್ನು ಪ್ರತಿನಿಧಿಸುತ್ತದೆ. ಇನ್ನು ಕೆಂಪು ತಿಲಕವು ಮಹಾಲಕ್ಷ್ಮಿಯ ಸಾನ್ನಿಧ್ಯವನ್ನು ತೋರಿಸುತ್ತದೆ. ಬಿಳಿ ಬಣ್ಣ ಶ್ರೀಮನ್ನಾರಾಯಣನನ್ನು ಸಂಕೇತಿಸುವ ವರ್ಣ ಅದು. ಕೆಂಪು ವರ್ಣ ಮಹಾಲಕ್ಷ್ಮಿಯನ್ನು ಸಂಕೇತಿಸುತ್ತದೆ. ಕೆಂಪು ವರ್ಣ ಎಂದರೆ ಅದನ್ನು “ತಪ್ಪಕಾಂಚನ ಸನ್ನಿಭಾಂ” ಎಂದು ವರ್ಣಿಸುತ್ತಾರೆ. ಸರಳವಾಗಿ ಹೇಳಬೇಕು ಎಂದರೆ, ಚಿನ್ನ ಸಾಮಾನ್ಯವಾಗಿ ಹಳದಿಬಣ್ಣದಲ್ಲಿರುತ್ತದೆ. ಆದರೆ, ಕುದಿಯುವ ಚಿನ್ನ ಕೆಂಪುಮಿಶ್ರಿತ ಹಳದಿ ವರ್ಣದಲ್ಲಿರುತ್ತದೆ. ಅಂತಹ ವರ್ಣದ ತಿಲಕ ಅದು.

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಮಲದ ಹೂವುಗಳನ್ನೇ ಸಮರ್ಪಿಸಿದ್ದರು. ಕಮಲದ ಹೂವಿನ ಬಣ್ಣ ಬಿಳಿ ಮತ್ತು ಒಂದು ರೀತಿಯ ಕೆಂಪು ವರ್ಣ. ಇವು ದೇವರ ವರ್ಣಗಳು. ಹೀಗಾಗಿ ಪ್ರಧಾನಿ ಮೋದಿಯವರು ಕಮಲ ಹೂವುಗಳನ್ನು ಅರ್ಪಣೆ ಮಾಡಿದ್ದು ವಿಶೇಷ."

ತೆಂಗಲೈ ಸಂಪ್ರದಾಯ vs ರಾಮಾನಂದಿ ಸಂಪ್ರದಾಯ

"ಬಾಲರಾಮನ ಮುಖದ ಮೇಲೆ ಇದ್ದ ತಿಲಕ ತೆಂಗಲೈ ಸಂಪ್ರದಾಯವನ್ನು ಪ್ರತಿಬಿಂಬಿಸಿದರೂ, ಅಯೋಧ್ಯೆಯ ರಾಮ ಮಂದಿರದಲ್ಲಿ ಅನುಸರಣೆಯಾಗುತ್ತಿರುವುದು ರಾಮಾನಂದಿ ಸಂಪ್ರದಾಯ. ಭಗವದ್ ರಾಮಾನುಜಾಚಾರ್ಯರ ಸಿದ್ಧಾಂತಾನುಸಾರ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆಗಳು ನಡೆಯುತ್ತವೆ. ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ವಡಗಲೈ ಸಂಪ್ರದಾಯವೂ ಆಚರಣೆಯಲ್ಲಿದೆ. ಇವರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಸ್ವಲ್ಪ ಕಟ್ಟುನಿಟ್ಟು. ವೇದ ಪ್ರಾಧ್ಯಾನವಾದ ಸಂಪ್ರದಾಯ. ವರ್ಣಾಶ್ರಮವನ್ನು ಪರಿಗಣಿಸುತ್ತಾರೆ. ದೇವರ ಪೂಜೆಗೆ ನಿರ್ದಿಷ್ಟ ವೈದಿಕರೇ ನಡೆಸಬೇಕು ಎಂಬ ಕಟ್ಟಳೆ ಇದೆ.

ಆದರೆ, ತೆಂಗಲೈ ಸಂಪ್ರದಾಯದಲ್ಲಿ ಜಾತಿ ಮತ ಲಿಂಗ ವಯಸ್ಸು, ದೇಶ ಕಾಲ ಬೇದವಿಲ್ಲದೆ ಭಕ್ತರಿಗೆ ಸಮಾನತೆಯ ಸಿದ್ಧಾಂತಾನುಸಾರ ದೇವರ ಪೂಜೆಗೆ ಅವಕಾಶ ಇದೆ. ಭಕ್ತರು ಗರ್ಭಗುಡಿಗೆ ಹೋಗಿ ದೇವರ ಪೂಜೆ ಮಾಡಬಹುದು. ಅಯೋಧ್ಯೆ ವಿಚಾರಕ್ಕೆ ಬಂದರೆ, ಅಲ್ಲಿರುವುದು ಈಗಾಗಲೇ ಹೇಳಿದಂತೆ ರಾಮಾನಂದಿ ಸಂಪ್ರದಾಯ. ಉತ್ತರ ಭಾರತದಲ್ಲಿ ದೇಗುಲಗಳ ಮೇಲೆ ಮೊಘಲರು ಮತ್ತು ಅನ್ಯರ ಆಕ್ರಮಣ ಅವ್ಯಾಹತವಾಗಿ ಇದ್ದ ಕಾರಣ, ಅಲ್ಲಿನವರು ಉದಾರ ನೀತಿ ಅನುಸರಿಸಿದರು. ವಿಶೇಷವಾಗಿ 1366ರಿಂದ 1467ರ ಕಾಲಘಟ್ಟದಲ್ಲಿ ಜಗದ್ಗುರು ರಾಮಾನಂದರು ಭಗವದ್ ರಾಮಾನುಜಾಚಾರ್ಯರ ತೆಂಗಲೈ ಸಂಪ್ರದಾಯದಲ್ಲಿ ನೀತಿಯನ್ನು ಕೊಂಚ ಸಡಿಲಿಸಿದರು. ಈ ಸಂಪ್ರದಾಯವನ್ನು ರಾಮಾನಂದಿ ಸಂಪ್ರದಾಯ ಎಂದು ಗುರುತಿಸುತ್ತಾರೆ. ಈ ಸಂಪ್ರದಾಯ ಈಗ ಅಯೋಧ್ಯೆಯಲ್ಲಿರುವುದು.

ಅಯೋಧ್ಯೆಯಲ್ಲಿ ರಾಮಾನಂದಿ ಸಂಪ್ರದಾಯ ಪ್ರಕಾರ, ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಮತ್ತು ಗಣ್ಯರಿಗೆ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದೆ" ಎಂದು ಶೆಲ್ವಪಿಳ್ಳೈ ಅಯ್ಯಂಗಾರ್ ವಿವರಿಸಿದರು.

(ಬರಹ: ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ)

ಶೆಲ್ವಪಿಳ್ಳೈ ಅಯ್ಯಂಗಾರ್, ಇತಿಹಾಸ ತಜ್ಞ
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ