Vastu Tips: ಮನೆಯ ಮೂಲೆಗಳಲ್ಲಿ ಜೇಡ ಕಟ್ಟುವುದು ಶುಭವೋ ಅಶುಭವೋ; ವಾಸ್ತುತಜ್ಞರು ಏನು ಹೇಳ್ತಾರೆ?
Apr 28, 2024 11:01 AM IST
ಮನೆಯ ಮೂಲೆಗಳಲ್ಲಿ ಜೇಡ ಕಟ್ಟುವುದು ಶುಭವೋ ಅಶುಭವೋ ವಾಸ್ತುತಜ್ಞರು ಏನು ಹೇಳ್ತಾರೆ?
Vastu Tips: ವಾಸ್ತು ಪ್ರಕಾರ ಮನೆ ಗೋಡೆಯ ಮೂಲೆಗಳಲ್ಲಿ ಕಟ್ಟುವ ಜೇಡವು ಮನೆಗೆ ಅಶುಭ ಎಂದು ಪರಿಗಣಿಸಲಾಗಿದೆ. ಏಕೆಂದರೆ ಈ ರೀತಿ ಜೇಡ ಬಲೆ ಕಟ್ಟುವುದರಿಂದ ಕುಟುಂಬದ ಸದಸ್ಯರಿಗೆ ಸಮಸ್ಯೆ ಉಂಟಾಗುತ್ತದೆ. ಅನಾರೋಗ್ಯ ಕಾಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಆಗ್ಗಾಗ್ಗೆ ಮನೆ ಸ್ವಚ್ಛಗೊಳಿಬೇಕು ಎಂದು ವಾಸ್ತುತಜ್ಞರು ಹೇಳುತ್ತಾರೆ.
ಮನೆ ಮನಸ್ಸು ಶುದ್ಧವಾಗಿದ್ದರೆ ಮನೆಯಲ್ಲಿ ಸಂತೋಷ, ನೆಮ್ಮದಿ, ಸಮೃದ್ಧಿ ಇರುತ್ತದೆ. ಆದರೆ ಕೆಲವರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಎಲ್ಲಿ ನೋಡಿದರೂ ಕಸದ ರಾಶಿ, ಹಳೆಯ ಪೇಪರ್‌ಗಳು, ಎಲ್ಲೆಂದರಲ್ಲಿ ಹರಡಿರುವ ಬಟ್ಟೆಗಳು, ಸಾಮಗ್ರಿಗಳು, ಜಿರಳೆ ಮೊಟ್ಟೆಗಳು ಹೀಗೆ ಮನೆ ಬಹಳ ಅಸ್ತವ್ಯಸ್ತವಾಗಿರುತ್ತದೆ. ಇದರ ಜೊತೆಗೆ ಮನೆಯ ಮೂಲೆಗಳಲ್ಲಿ ಜೇಡರ ಬಲೆ ಕಟ್ಟಿರುತ್ತದೆ.
ತಾಜಾ ಫೋಟೊಗಳು
ಆದರೆ ವಾಸ್ತು ಪ್ರಕಾರ ಮನೆ ಗೋಡೆಯ ಮೇಲ್ಭಾದಲ್ಲಿ ಜೇಡರ ಬಲೆ ಕಟ್ಟುವುದು ಮನೆಗೆ ಶುಭವಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಕುಟುಂಬದ ಸದಸ್ಯರಿಗೆ ಅನಾರೋಗ್ಯ, ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ವಾಸ್ತು ಪ್ರಕಾರ, ಮನೆಯ ಧನಾತ್ಮಕತೆಯನ್ನು ಹೆಚ್ಚಿಸಲು
ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲವರು ಆಗಾಗ್ಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ. ಆದರೆ ಕೈಲಾಗದ ಕಾರಣಕ್ಕೆ ಗೋಡೆ ಮೇಲ್ಭಾಗ ಕಟ್ಟಿರುವ ಜೇಡರ ಬಲೆಯನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಮನೆಯಲ್ಲಿ ವಾಸ್ತು ದೋಷ ಉಂಟಾಗಬಹುದು. ಮನೆಯಲ್ಲಿ ಅತಿಯಾದ ಜೇಡರ ಬಲೆಯಿಂದಾಗಿ ಕುಟುಂಬ ಸದಸ್ಯರು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬಹುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಇದನ್ನೂ ಓದಿ: ಸ್ನಾನ ಮಾಡುವಾಗ ಚಪ್ಪಲಿ ಧರಿಸಬಹುದೇ?
ಜೇಡರ ಬಲೆ ಕಟ್ಟುವುದು ಮನೆಗೆ ಅಶುಭ
ಎಲ್ಲೆಂದರೆ ಜೇಡ ಕಟ್ಟಿದರೆ ಮನೆಯಲ್ಲಿ ಹಣದ ಕೊರತೆ ಕಾಡಬಹುದು. ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಕುಟುಂಬ ಸದಸ್ಯರ ಸ್ವಭಾವದಲ್ಲಿ ಸೋಮಾರಿತನ, ಕಿರಿಕಿರಿ ಮತ್ತು ನಕಾರಾತ್ಮಕತೆ ಹೆಚ್ಚಾಗಬಹುದು. ಇದರಿಂದ ಇನ್ನೂ ಏನೆಲ್ಲಾ ಸಮಸ್ಯೆಗಳು ಉದ್ಭವಿಸುತ್ತವೆ ನೋಡೋಣ.
- ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಜೇಡರ ಬಲೆ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಪತಿ-ಪತ್ನಿಯರ ನಡುವೆ ಸದಾ ಭಿನ್ನಾಭಿಪ್ರಾಯವಿರುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
- ದೀರ್ಘಕಾಲದವರೆಗೆ ಮನೆಯ ಮೂಲೆಗಳಲ್ಲಿ ಜೇಡರ ಬಲೆಗಳನ್ನು ತೆರವುಗೊಳಿಸದಿದ್ದರೆ, ಕುಟುಂಬ ಸದಸ್ಯರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ ಕ್ರಮೇಣ ಹಣವನ್ನು ಕಳೆದುಕೊಳ್ಳುತ್ತಾರೆ.
- ನಿಮ್ಮ ಮನೆಯ ದೇವರ ಕೋಣೆಯಲ್ಲಿ ಕೂಡಾ ಜೇಡರ ಬಲೆ ಹೆಣೆಯಲು ಬಿಡಬೇಡಿ. ದೇವರ ಚಿತ್ರಗಳ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ದೇವರ ಮನೆಯಲ್ಲಿ ಕಟ್ಟುವ ಜೇಡರ ಬಲೆಯು ವ್ಯಕ್ತಿಗೆ ದುರಾದೃಷ್ಟವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ದೇವಸ್ಥಾನ ಹೊರತುಪಡಿಸಿ ಮನೆಯ ಆವರಣದಲ್ಲಿ ಅರಳಿಗಿಡ ಬೆಳೆಸುವುದು ಸರಿಯೋ ತಪ್ಪೋ? ಇಲ್ಲಿದೆ ವಾಸ್ತು ಸಲಹೆ
- ಅಡುಗೆಮನೆಯಲ್ಲಿ ಕೂಡಾ ಜೇಡ ಬಲೆ ಕಟ್ಟುವುದು ಅಶುಭ. ಈ ಕಾರಣದಿಂದಾಗಿ ಕುಟುಂಬದ ಸದಸ್ಯರು ಅನಾರೋಗ್ಯವನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಕಾಲಕಾಲಕ್ಕೆ ಅಡುಗೆಮನೆಯಲ್ಲಿ ಗ್ಯಾಸ್ ಮತ್ತುಸಿಂಕ್ ಅಡಿಯಲ್ಲಿ ಜೇಡ ಬಲೆ ಕಟ್ಟಿದ್ದರೆ ಸ್ವಚ್ಛಗೊಳಿಸುತ್ತಿರಿ.
- ಇದಿಷ್ಟೇ ಅಲ್ಲದೆ ಜೇಡರ ಬಲೆ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣವಿರುತ್ತದೆ. ಆದ್ದರಿಂದ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.