logo
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದು ಎಸೆತದಲ್ಲಿ 13 ರನ್ ಸಿಡಿಸಿದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಅದೇ ಓವರ್​ನಲ್ಲೇ ಸೇಡು ತೀರಿಸಿಕೊಂಡ ಸಿಕಂದರ್ ರಾಜಾ

ಒಂದು ಎಸೆತದಲ್ಲಿ 13 ರನ್ ಸಿಡಿಸಿದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಅದೇ ಓವರ್​ನಲ್ಲೇ ಸೇಡು ತೀರಿಸಿಕೊಂಡ ಸಿಕಂದರ್ ರಾಜಾ

Prasanna Kumar P N HT Kannada

Jul 15, 2024 08:00 AM IST

google News

ಒಂದು ಎಸೆತದಲ್ಲಿ 13 ರನ್ ಸಿಡಿಸಿದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಅದೇ ಓವರ್​ನಲ್ಲೇ ಸೇಡು ತೀರಿಸಿಕೊಂಡ ಸಿಕಂದರ್ ರಾಜಾ

    • Yashasvi Jaiswal: ಜಿಂಬಾಬ್ವೆ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಹೊಸ ದಾಖಲೆ ಬರೆದಿದ್ದಾರೆ. ಆದಾಗ್ಯೂ, ಸಿಕಂದರ್ ರಾಜಾ ಅದೇ ಓವರ್​​ನಲ್ಲಿ ಜೈಸ್ವಾಲ್ ವಿರುದ್ಧ ಸೇಡು ತೀರಿಸಿಕೊಂಡರು.
ಒಂದು ಎಸೆತದಲ್ಲಿ 13 ರನ್ ಸಿಡಿಸಿದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಅದೇ ಓವರ್​ನಲ್ಲೇ ಸೇಡು ತೀರಿಸಿಕೊಂಡ ಸಿಕಂದರ್ ರಾಜಾ
ಒಂದು ಎಸೆತದಲ್ಲಿ 13 ರನ್ ಸಿಡಿಸಿದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಅದೇ ಓವರ್​ನಲ್ಲೇ ಸೇಡು ತೀರಿಸಿಕೊಂಡ ಸಿಕಂದರ್ ರಾಜಾ

ಆತಿಥೇಯ ಜಿಂಬಾಬ್ವೆ ವಿರುದ್ಧದ ಐದನೇ ಟಿ20ಐ ಪಂದ್ಯದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ಜೈಸ್ವಾಲ್, ಜಿಂಬಾಬ್ವೆ ಎದುರು ಒಂದೇ ಎಸೆತದಲ್ಲಿ 13 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಆದರೆ, ಅದೇ ಓವರ್​​ನಲ್ಲಿ ಸಿಕಂದರ್ ರಾಜಾ ಅವರು ಸೇಡು ತೀರಿಸಿಕೊಂಡರು.

ಮೊದಲ ಓವರ್​ನಲ್ಲಿ ಭಾರತಕ್ಕೆ ಭರ್ಜರಿ ಆರಂಭ ನೀಡಿದ ಆರಂಭಿಕ ಆಟಗಾರ ಜೈಸ್ವಾಲ್, ಸಿಕಂದರ್​ ರಾಜಾ ಬೌಲಿಂಗ್​ ಮಾಡಿದ ಮೊದಲ ಎಸೆತದಲ್ಲೇ ಆಕರ್ಷಕ ಸಿಕ್ಸರ್​​​​ನೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿದರು. ಸಿಕಂದರ್ ಫುಲ್​ ಟಾಸ್ ಎಸೆದ ಕಾರಣ ನೋ ಬಾಲ್ ಆಗಿತ್ತು. ಬಳಿಕ ಫ್ರೀ ಹಿಟ್ ಅನ್ನೂ ಜೈಸ್ವಾಲ್ ಸಿಕ್ಸರ್ ಬಾರಿಸಿದರು. ಹೀಗಾಗಿ ಒಂದು ಕಾನೂನುಬದ್ಧ ಎಸೆತದಲ್ಲಿ 13 ರನ್ ಗಳಿಸಿದರು.

ಜಿಂಬಾಬ್ವೆ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಜೈಸ್ವಾಲ್ 1 ಎಸೆತದಲ್ಲಿ 13 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮೊದಲ ಓವರ್​​​ನಲ್ಲೇ 1 ಎಸೆತದಲ್ಲಿ 13 ರನ್ ಗಳಿಸಿದ ಜೈಸ್ವಾಲ್ ದಾಖಲೆಗೆ ಪಾತ್ರರಾದರು. ಮೊದಲ ಓವರ್​ನಲ್ಲಿ ಅತ್ಯುತ್ತಮ ಆರಂಭ ನೀಡಿದ್ದರೂ, ಸ್ಪಿನ್ನರ್ ರಾಜಾ ಅದೇ ಓವರ್​​ನಲ್ಲಿ ಜೈಸ್ವಾಲ್​ಗೆ ಗೇಟ್​ಪಾಸ್ ನೀಡಿದರು. ಜೈಸ್ವಾಲ್ 5 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು.

ಜಿಂಬಾಬ್ವೆ ಎದುರಿನ ಕೊನೆಯ ಹಾಗೂ 5ನೇ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 42 ರನ್​ಗಳಿಂದ ಗೆದ್ದು ಬೀಗಿತು. ಆಲ್​ರೌಂಡ್ ಪ್ರದರ್ಶನ ನೀಡಿದ ಯುವ ಭಾರತ, ಸರಣಿಯನ್ನು 4-1ರ ಅಂತರದಲ್ಲಿ ಗೆದ್ದುಕೊಂಡಿದೆ. ಆತಿಥೇಯ ಜಿಂಬಾಬ್ವೆ ತವರಿನಲ್ಲಿ ಸರಣಿ ಕಳೆದುಕೊಂಡು ಮುಖಭಂಗಕ್ಕೆ ಒಳಗಾಗಿದೆ. ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದರೂ ಉಳಿದ 4ರಲ್ಲೂ ಕಂಬ್ಯಾಕ್ ಮಾಡಲು ವಿಫಲವಾದ ಜಿಂಬಾಬ್ವೆ, ಮೆನ್ ಇನ್ ಬ್ಲ್ಯೂ ವಿರುದ್ಧ ಚೊಚ್ಚಲ ಸರಣಿ ಗೆಲ್ಲಲು ವಿಫಲವಾಯಿತು.

ಹರಾರೆಯ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್​ಗಳ ಸವಾಲಿನ ಮೊತ್ತ ಕಲೆ ಹಾಕಿತು. ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಇನ್ನು ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 18.3 ಓವರ್​​ಗಳಲ್ಲೇ 125 ರನ್​ಗಳಿಗೆ ಆಲೌಟ್ ಆಯಿತು. ಮುಕೇಶ್ ಕುಮಾರ್​ 3.3 ಓವರ್​​ಗಳಲ್ಲಿ ಕೇವಲ 22 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ ಉರುಳಿಸಿದರು.

ಮುಕೇಶ್ ಕುಮಾರ್ ಅದ್ಭುತ ಬೌಲಿಂಗ್

ತವರಿನ ಮೈದಾನದಲ್ಲಿ ಸರಣಿ ಸೋತರೂ ಕೊನೆಯ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸುವ ಲೆಕ್ಕಾಚಾರ ಹಾಕಿದ್ದ ಜಿಂಬಾಬ್ವೆಗೆ ಮುಕೇಶ್​ ಕುಮಾರ್ ಶಾಕ್ ನೀಡಿದರು. ಡಿಯೋನ್ ಮೈಯರ್ಸ್ 34 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿದೆ. ವೆಸ್ಲಿ ಮಾಧೆವೆರೆ (0), ಬ್ರಿಯಾನ್ ಬೆನೆಟ್ (10), ಫರಾಜ್ ಅಕ್ರಮ್ (27), ರಿಚರ್ಡ್ ನಾಗರವ (0) ಅವರನ್ನು ಮುಕೇಶ್ ಕುಮಾರ್ ಔಟ್ ಮಾಡಿದರು. ಶಿವಂ ದುಬೆ ಕೂಡ ಸಾಥ್ ಕೊಟ್ಟರು. ಜೋನಾಥನ್ ಕ್ಯಾಂಪ್ಬೆಲ್ (4), ಮೈಯರ್ಸ್ (34) ಅವರು ಶಿವಂ ದುವೆ ಬೌಲಿಂಗ್​ನಲ್ಲಿ ಹೊರ ನಡೆದರು.

ಸಂಜು ಸ್ಯಾಮ್ಸನ್ ಆಸರೆ

ನಾಲ್ಕನೇ ಟಿ20ಐ ಪಂದ್ಯದಲ್ಲಿ ಅಬ್ಬರಿಸಿದ್ದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕೊನೆಯ ಪಂದ್ಯದಲ್ಲಿ ಕ್ರಮವಾಗಿ 13 ಮತ್ತು 12 ರನ್ ಗಳಿಸಿದರು. ನಂತರ ಅಭಿಷೇಕ್ ಶರ್ಮಾ 14 ರನ್​ಗಳಿಸಿ ಔಟಾದರು. ಟಾಪ್​-3 ಬ್ಯಾಟರ್ಸ್ ಬೇಗನೇ ಔಟಾಗಿ ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಆಸರೆಯಾದರು. ರಕ್ಷಣಾತ್ಮಕ ಒತ್ತು ಕೊಟ್ಟು ಅರ್ಧಶತಕ ಬಾರಿಸಿದರು. ಆದರೆ ರಿಯಾನ್ ಪರಾಗ್ 22 (24) ನಿರೀಕ್ಷೆಗೆ ತಕ್ಕಂತೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಸಂಜು 45 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 58 ರನ್ ಗಳಿಸಿದರು. ಕೊನೆಯಲ್ಲಿ ಶಿವಂ ದುಬೆ 12 ಎಸೆತಗಳಲ್ಲಿ 26 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ