ಯಪ್ಪಾ! ರೋಹಿತ್ಗೆ ಈ ಪಾಟಿ ಕೋಪನಾ; ರನೌಟ್ ಬೆನ್ನಲ್ಲೇ ಶುಭ್ಮನ್ ಗಿಲ್ ಮೇಲೆ ರೇಗಾಡಿದ ಹಿಟ್ಮ್ಯಾನ್
Jan 11, 2024 10:45 PM IST
ರನೌಟ್ ಮಾಡಿದ ಶುಭ್ಮನ್ ಗಿಲ್ ಮೇಲೆ ರೇಗಾಡಿದ ಹಿಟ್ಮ್ಯಾನ್.
- Rohit Sharma: ರನ್ ಕದಿಯುವ ಯತ್ನದಲ್ಲಿ ರೋಹಿತ್ ಶರ್ಮಾ ಡಕೌಟ್ ಆಗಿ ಹೊಡೆದರು. ಆದರೆ, ರನೌಟ್ ಆದ ಬೆನ್ನಲ್ಲೇ ಸಹ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮೇಲೆ ರೇಗಾಡಿದ್ದಾರೆ.
14 ತಿಂಗಳ ನಂತರ ಟಿ20 ಕ್ರಿಕೆಟ್ಗೆ ಮರಳಿದ ನಂತರ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ರನೌಟ್ ಆದರು. ಕೇವಲ 2 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ರನೌಟ್ ಆದ ಬೆನ್ನಲ್ಲೇ ಸಹ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮೇಲೆ ರೇಗಾಡಿದ ಹಿಟ್ಮ್ಯಾನ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೊಹಾಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಚೇಸ್‌ನ ಮೊದಲ ಓವರ್‌ನಲ್ಲೇ ರನ್ ಕದಿಯುವ ಯತ್ನದಲ್ಲಿ ಗೊಂದಲ ಉಂಟಾಗಿ ನಾಯಕ ರನೌಟ್ ಆಗಿ ಹೊರ ನಡೆದರು. 14 ತಿಂಗಳ ನಂತರ ಮೊದಲ ಬಾರಿಗೆ ಟಿ20ಐಗೆ ಹಿಂದಿರುಗಿದ ರೋಹಿತ್ ಶರ್ಮಾ ಜನವರಿ 11 ರಂದು 2 ಎಸೆತಗಳಲ್ಲಿ 0 ರನ್ ಗಳಿಸಿ ಭಾರಿ ನಿರಾಸೆಗೊಂಡರು.
ಗೊಂದಲಕ್ಕೆ ಒಳಗಾದ ಆಟಗಾರರು
ತಣ್ಣನೆಯ ಸಂಜೆಯಲ್ಲಿ ಸ್ಟ್ರೈಕ್ ತೆಗೆದುಕೊಂಡು ಇನ್ನಿಂಗ್ಸ್ ಆರಂಭಿಸಲು ಭಾರತದ ನಾಯಕ ಭಾರತೀಯ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಡಾಟ್ ಬಾಲ್ ಆಡಿದರು. ಫಜಲ್ಹಕ್ ಫಾರೂಕಿ ಮೊದಲ ಓವರ್ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ಭಾರತ ತಂಡದ ನಾಯಕನಿಗೆ ಸ್ವಿಂಗ್ ಬೌಲಿಂಗ್ ಮೂಲಕ ಕಾಡಿದ ಎಡಗೈ ವೇಗಿ, 2ನೇ ಎಸೆತದಲ್ಲಿ ಲಾಂಗ್ ಆನ್ಗೆ ಹೊಡೆಯಲು ಯತ್ನಿಸಿದರು.
ಮಿಡ್-ಆಫ್‌ನ ಬಲಕ್ಕೆ ಹೋಗುತ್ತಿದ್ದ ಚೆಂಡನ್ನು ಇಬ್ರಾಹಿಂ ಝದ್ರಾನ್, ಅದ್ಭುತ ಫೀಲ್ಡಿಂಗ್ ಮೂಲಕ ತಡೆದರು. ಆದರೆ ಬೌಂಡರಿ ಹೋಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ರೋಹಿತ್, ರನ್ ಕದಿಯಲು ಯತ್ನಿಸಿದರು. ಆದರೆ ಶುಭ್ಮನ್ ಗಿಲ್ ಚೆಂಡನ್ನು ನೋಡುತ್ತಾ ರನ್ನಿಗೆ ಓಡಲಿಲ್ಲ. ಅತ್ತ ರೋಹಿತ್ ಓಡಿ ಬಂದಿದ್ದನ್ನೂ ಗಿಲ್ ನೋಡಲಿಲ್ಲ. ಇಬ್ಬರ ಬ್ಯಾಟರ್ಗಳ ಗೊಂದಲದ ನಡುವೆ ರನೌಟ್ ವಿಕೆಟ್ ತ್ಯಾಗ ಮಾಡಬೇಕಾಯಿತು.
ಭಾರತ ತಂಡಕ್ಕೆ ಭರ್ಜರಿ ಗೆಲುವು
ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ 5 ವಿಕೆಟ್ ನಷ್ಟಕ್ಕೆ 158 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗೆಲುವಿನ ಗೆರೆ ದಾಟಿತು.
ಆರಂಭಿಕ ಆಘಾತದ ನಡುವೆಯೂ ರೋಹಿತ್ ಪಡೆ ಅಬ್ಬರಿಸಿತು. ರೋಹಿತ್ ಡಕೌಟ್ಗೆ ಬಲಿಯಾದರೆ, ಶುಭ್ಮನ್ ಗಿಲ್ 23 ರನ್ ಗಳಿಗೆ ಆಟ ಮುಗಿಸಿದರು. ತಿಲಕ್ ವರ್ಮಾ 26 ರನ್ ಗಳಿಸಿದರೆ, ಶಿವಂ ದುಬೆ ಅಜೇಯ 60 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಜಿತೇಶ್ ಶರ್ಮಾ 31 ರನ್, ರಿಂಕು ಸಿಂಗ್ ಅಜೇಯ 16 ರನ್ ಗಳಿಸಿದರು.
ಭಾರತ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್.
ಅಫ್ಘಾನಿಸ್ತಾನ ಆಡುವ 11ರ ಬಳಗ
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ರಹ್ಮಾನ್ ಉರ್ಹಕ್.