Mohammed Siraj: ಮೊಹಮ್ಮದ್ ಸಿರಾಜ್ ಹೆಂಡತಿ ಯಾರು? Google ನಲ್ಲಿ ಭಾರತೀಯರು ಹುಡುಕಿದ್ದೇ ಹುಡುಕಿದ್ದು, ಸಿಕ್ಕ ಉತ್ತರ ಇದು
Sep 18, 2023 01:52 PM IST
ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್
2023ರ ಏಷ್ಯಾಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಸೂಪರ್ ಸ್ಟಾರ್ ಆಗಿರುವ ವೇಗಿ ಮೊಹಮ್ಮದ್ ಸಿರಾಜ್ ಸಖತ್ ಟ್ರೆಂಡ್ ಆಗಿದ್ದಾರೆ. ಗೂಗಲ್‌ನಲ್ಲಿ ಜನರು ಸಿರಾಜ್ ಅವರ ವೈಯಕ್ತಿಕ ಮಾಹಿತಿಯನ್ನು ಹುಡುಕಾಡಿದ್ದಾರೆ. ಇದರಲ್ಲಿ ಅವರ ಹೆಂಡತಿ ಯಾರೆಂದು ಹೆಚ್ಚು ಸರ್ಚ್ ಮಾಡಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾದ (Team India) ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ (Asia Cup Final 2023) ಶ್ರೀಲಂಕಾ ಬ್ಯಾಟರ್‌ಗಳಿಗೆ ಎಸೆದ ಬೆಂಕಿಯಂತಹ ಎಸೆತೆಗಳು ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 17) ನಡೆದ ಏಷ್ಯಾಕಪ್ ಅಂತಿಮ ಹಣಾಹಣಿಯಲ್ಲಿ ಸಿರಾಜ್ 7 ಓವರ್‌ಗಳಲ್ಲಿ 21 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಪಡೆದಿದ್ದರು. 16 ಎಸೆತಗಳಲ್ಲಿ 5 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದಾರೆ. ಅಲ್ಲದೆ, ಲಂಕಾ ಪಡೆ ಕೇವಲ 50 ರನ್‌ಗಳಿಗೆ ಸರ್ವಪತನಕ್ಕೆ ಪ್ರಮುಖ ಕಾರಣರಾಗಿದ್ದರು.
ಲಂಕಾ ನೀಡಿದ್ದ 51 ರನ್‌ಗಳ ಸಾಧಾರಣ ಗುರಿಯನ್ನು ಟೀಂ ಇಂಡಿಯಾ ಕೇವಲ 6.1 ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಮುಟ್ಟಿತ್ತು. 10 ವಿಕೆಟ್‌ಗಳ ದೊಡ್ಡ ಗೆಲುವಿನ ಪಡೆದು 8ನೇ ಬಾರಿಗೆ ಏಷ್ಯಾಕಪ್ ಎತ್ತ ಹಿಡಿದಿದೆ.
ಈ ಐತಿಹಾಸಿಕ ಮತ್ತು ಅವಿಸ್ಮರಣೀಯ ಪಂದ್ಯದ ಆರಂಭದಲ್ಲೇ 6 ವಿಕೆಟ್ ಪಡೆದು ಮಿಂಚಿದ್ದ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಟೀಂ ಇಂಡಿಯಾ ಯಾರೂ ನಿರೀಕ್ಷೆ ಮಾಡದಂತಹ ರೀತಿಯಲ್ಲಿ 2023ರ ಏಷ್ಯಾಕಪ್ ಎತ್ತಿ ಹಿಡಿಯಲು ಪ್ರಮುಖ ಕಾರಣವಾಗಿರುವ ಮೊಹಮ್ಮದ್ ಸಿರಾಜ್ ಸಖತ್ ಟ್ರೆಂಡಿಂಗ್‌ನಲ್ಲಿನದ್ದಾರೆ. ಸಿರಾಜ್ ಅವರ ಅತ್ಯುತ್ತಮ ಪ್ರದರ್ಶನವನ್ನು ಕೊಂಡಾಡುತ್ತಿರುವ ಜನರು, ಇವರ ವೈಯಕ್ತಿಕ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.
ಮೊಹಮ್ಮದ್ ಸಿರಾಜ್ ವೈಯಕ್ತಿಕ ಮಾಹಿತಿ ಹೆಚ್ಚು ಗೂಗಲ್ ಸರ್ಚ್
ಮೊಹಮ್ಮದ್ ಸಿರಾಜ್ ಲವ್ ಸ್ಟೋರಿ, ಮೊಹಮ್ಮದ್ ಸಿರಾಜ್ ಮನೆ ಹೇಗಿದೆ? ಎಲ್ಲಿದೆ? ಮೊಹಮ್ಮದ್ ಸಿರಾಜ್ ತಂದೆ ಯಾರು, ಅವರು ಏನು ಮಾಡುತ್ತಿದ್ದಾರೆ? ಸಿರಾಜ್ ಅವರ ತಾಯಿ ಯಾರು ಹೀಗೆ ಸಿರಾಜ್‌ಗೆ ಸಂಬಂಧಿಸಿದ ವೈಯಕ್ತಿಕ ವಿಚಾರಗಳ ಕುರಿತ ಹತ್ತಾರು ಪ್ರಶ್ನೆಗಳನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಇನ್ನೂ ಮುಂದುವರೆದು ಮೊಹಮ್ಮದ್ ಸಿರಾಜ್ ಅವರಿಗೆ ಮದುವೆ ಆಗಿದೆಯೇ? ಸಿರಾಜ್ ಅವರ ಹೆಂಡತಿಯ ಹೆಸರೇನು? ಅಂತಲೂ ಸರ್ಚ್ ಮಾಡಿದ್ದಾರೆ. ಅಧಿಕ ಮಂದಿ ಸಿರಾಜ್ ಅವರ ಹೆಂಡತಿಯ ಹೆಸರೇನು ಎಂಬುದನ್ನೇ ಹುಡುಕಾಡಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ಗೂಗಲ್ ಕೂಡ ಉತ್ತರ ನೀಡಿದೆ.
ಮೊಹಮ್ಮದ್ ಸಿರಾಜ್ ಅವರ ಹೈದರಾಬಾದ್‌ನ ಸಾಧಾರಣ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಮೊಹಮ್ಮದ್ ಗೌಸ್ ಆಟೋ ರಿಕ್ಷಾ ಚಾಲಕರಾಗಿದ್ದವರು. 2020ರಲ್ಲಿ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ನಿಧನರಾಗಿದ್ದಾರೆ. ಇವರ ತಾಯಿ ಶಬಾನಾ ಬೇಗಂ ಗೃಹಿಣಿಯಾಗಿದ್ದಾರೆ.
ಇನ್ನೂ ಮದುವೆಯಾಗಿಲ್ಲ, ಗರ್ಲ್‌ಫ್ರೆಂಡ್ ಕೂಡ ಇಲ್ಲ
ಹೈದರಾಬಾದ್‌ನ ಗಲ್ಲಿಗಳಲ್ಲಿ ಆಡಿ ಬೆಳೆದ ಸಿರಾಜ್, ಕ್ರಿಕೆಟ್‌ನಲ್ಲಿ ಹಾಕಿದ ಶ್ರಮ ಇವತ್ತು ಅವರನ್ನು ಹೈದರಾಬಾದ್‌ನ ಪ್ರತಿಷ್ಠಿತ ಪ್ರದೇಶದಲ್ಲಿ ವಾಸ ಮಾಡುವಂತೆ ಮಾಡಿದೆ. ಗಲ್ಲಿಯಲ್ಲಿ ಬೆಳೆದ ಸಿರಾಜ್ ಹೈದರಾಬಾದ್‌ನ ಜುಬ್ಲಿಹಿಲ್ಸ್‌ನಲ್ಲಿ ಐಷರಾಮಿ ಬಂಗೆಲೆಯೊಂದರಲ್ಲಿ ವಾಸವಾಗಿದ್ದಾರೆ. ಇವರ ಬಳಿ ಬಿಎಂಡಬ್ಲ್ಯೂ ಕಾರಿದೆ. ಜೊತೆಗೆ ಮಹೀಂದ್ರಾ ಥಾರ್, ಟಯೋಟ ಕೊರಲಾ, ಸೇರಿದಂತೆ ಹಲವು ಕಾರುಗಳ ಮಾಲೀಕರಾಗಿದ್ದಾರೆ. ಅಂದಹಾಗೆ ಟೀಂ ಇಂಡಿಯಾದ ಪ್ರಮುಖ ವೇಗಿ 29 ವರ್ಷದ ಸಿರಾಜ್‌ಗೆ ಇನ್ನೂ ಮದುವೆಯಾಗಿಲ್ಲ. ಗರ್ಲ್‌ಫ್ರೆಂಡ್ ಕೂಡ ಇಲ್ಲ.