logo
ಕನ್ನಡ ಸುದ್ದಿ  /  ಕ್ರಿಕೆಟ್  /  ಶಾಹೀನ್ ಅಫ್ರಿದಿ, ಶಾನ್ ಮಸೂದ್ ವಿಫಲ ಪ್ರಯೋಗ; ಬಾಬರ್ ಅಜಮ್​​ ನಾಯಕನಾಗಿ ಮರುನೇಮಕ? ಪಿಸಿಬಿ ಯು-ಟರ್ನ್

ಶಾಹೀನ್ ಅಫ್ರಿದಿ, ಶಾನ್ ಮಸೂದ್ ವಿಫಲ ಪ್ರಯೋಗ; ಬಾಬರ್ ಅಜಮ್​​ ನಾಯಕನಾಗಿ ಮರುನೇಮಕ? ಪಿಸಿಬಿ ಯು-ಟರ್ನ್

Prasanna Kumar P N HT Kannada

Feb 08, 2024 10:47 AM IST

ಶಾಹೀನ್ ಅಫ್ರಿದಿ, ಶಾನ್ ಮಸೂದ್ ವಿಫಲ ಪ್ರಯೋಗ; ಬಾಬರ್ ಅಜಮ್​​ ನಾಯಕನಾಗಿ ಮರುನೇಮಕ

    • Babar Azam : ಪಾಕಿಸ್ತಾನ ಕ್ರಿಕೆಟ್​ನಲ್ಲಿ ಮತ್ತೊಮ್ಮೆ ಬದಲಾವಣೆ ಪರ್ವ ಆರಂಭಗೊಂಡಿದೆ. ಬಾಬರ್​ ಅಜಮ್ ಅವರನ್ನು ಮತ್ತೆ ಪಾಕಿಸ್ತಾನ ತಂಡದ ನಾಯಕನನ್ನಾಗಿ ಮರು ನೇಮಿಸಲು ಪಿಸಿಬಿ ನೂತನ ಅಧ್ಯಕ್ಷ ಸೈಯದ್ ಮೊಹ್ಸಿನ್ ನಖ್ವಿ ಚಿಂತನೆ ನಡೆಸಿದ್ದಾರೆ.
ಶಾಹೀನ್ ಅಫ್ರಿದಿ, ಶಾನ್ ಮಸೂದ್ ವಿಫಲ ಪ್ರಯೋಗ; ಬಾಬರ್ ಅಜಮ್​​ ನಾಯಕನಾಗಿ ಮರುನೇಮಕ
ಶಾಹೀನ್ ಅಫ್ರಿದಿ, ಶಾನ್ ಮಸೂದ್ ವಿಫಲ ಪ್ರಯೋಗ; ಬಾಬರ್ ಅಜಮ್​​ ನಾಯಕನಾಗಿ ಮರುನೇಮಕ

ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಟೂರ್ನಿಯಲ್ಲಿ (ODI World Cup 2023) ಹೀನಾಯ ಪ್ರದರ್ಶನ ನೀಡಿ ಲೀಗ್​ ಹಂತದಿಂದಲೇ ಹೊರ ಬೀಳುತ್ತಿದ್ದಂತೆ ಮೂರು ಫಾರ್ಮೆಟ್​ ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಮ್ (Babar Azam)​ ಅವರನ್ನೇ ಮತ್ತೆ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದ ಕ್ಯಾಪ್ಟನ್​ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket board) ಚಿಂತನೆ ನಡೆಸಿದೆ. 29 ವರ್ಷದ ಬಾಬರ್ ಮತ್ತೆ ನಾಯಕರಾಗುವ ಸಾಧ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

ಎಚ್ಚರ.. ಎಚ್ಚರ..; ಆರ್​ಸಿಬಿ vs ಸಿಎಸ್​ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ

ಆರ್‌ಸಿಬಿ-ಡೆಲ್ಲಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟಿನ್ ಆಹಾರ ಸೇವಿಸಿ ವ್ಯಕ್ತಿ ಅಸ್ವಸ್ಥ; ಎಫ್‌ಐಆರ್ ದಾಖಲು

ಐಪಿಎಲ್‌ ಪಂದ್ಯಗಳ ವೇಳೆ ಕ್ರಿಕೆಟಿಗರು ಕುಡಿಯೋದೇನು; ಬಣ್ಣ ಬಣ್ಣದ ಪಾನೀಯಗಳಲ್ಲಿ ಏನಿರುತ್ತೆ?

ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?

ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನ, ಏಕದಿನ ವಿಶ್ವಕಪ್​​ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. 9 ಲೀಗ್ ಪಂದ್ಯಗಳಲ್ಲಿ ಐದರಲ್ಲಿ ಸೋತಿತ್ತು. ಬಾಬರ್​ ಕೆಳಗಿಳಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಶಾನ್ ಮಸೂದ್ ಮತ್ತು ಶಾಹೀನ್ ಶಾ ಆಫ್ರಿದಿ ಅವರನ್ನು ಕ್ರಮವಾಗಿ ಟೆಸ್ಟ್ ಮತ್ತು ಟಿ20ಐ ತಂಡಗಳ ನಾಯಕರನ್ನಾಗಿ ನೇಮಿಸಿತು. ಆದರೆ, ಇವರ ನಾಯಕತ್ವದ ಪ್ರಯೋಗದಲ್ಲಿ ಪಾಕ್ ವಿಫಲವಾಗಿತ್ತು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು

ಆಸ್ಟ್ರೇಲಿಯಾ ವಿರುದ್ಧ ಶಾನ್​ ಮಸೂದ್ ನಾಯಕತ್ವದ ಅಡಿಯಲ್ಲಿ ಪಾಕಿಸ್ತಾನ ವೈಟ್​ವಾಶ್ ಟೆಸ್ಟ್‌ನಲ್ಲಿ 0-3 ಅಂತರದಲ್ಲಿ ಮುಖಭಂಗಕ್ಕೆ ಒಳಗಾಯಿತು. ಆಸ್ಟ್ರೇಲಿಯಾ ವಿರುದ್ಧದ ಕಳಾಹೀನ ಪ್ರದರ್ಶನ ನಂತರ ನಡೆದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 1-4 ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವ ಕ್ರಿಕೆಟ್​ನಲ್ಲಿ ಭಾರಿ ಮುಖಭಂಗಕ್ಕೆ ಒಳಗಾಯಿತು.

ಬದಲಾವಣೆಗೆ ಮುಂದಾದ ನೂತನ ಅಧ್ಯಕ್ಷ

ಶಾನ್ ಮಸೂದ್ ಮತ್ತು ಶಾಹೀನ್ ಅಫ್ರಿದಿ ನಾಯಕರಾಗಿ ತಮ್ಮ ಮೊದಲ ಹಂತದಲ್ಲಿ ಪ್ರಭಾವ ಬೀರಲು ವಿಫಲವಾದ ನಂತರ ಬದಲಾವಣೆಗೆ ಪಿಸಿಬಿ ಮುಂದಾಗಿದೆ. ಹೊಸದಾಗಿ ನೇಮಕಗೊಂಡ ಪಿಸಿಬಿ ಅಧ್ಯಕ್ಷ ಸೈಯದ್ ಮೊಹ್ಸಿನ್ ನಖ್ವಿ ಅವರು ಬಾಬರ್ ಅವರನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿ ಮರುನೇಮಕ ಮಾಡಲು ಬಯಸುತ್ತಿದ್ದಾರೆ ಎಂಬ ವರದಿಗಳಿವೆ.

ಫೆಬ್ರವರಿ 6 ಝಾಕಾ ಅಶ್ರಫ್ ಉತ್ತರಾಧಿಕಾರಿಯಾಗಿ ಮೊಹ್ಸಿನ್ ನಖ್ವಿ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ವರದಿಗಳು ನಿಜವಾದರೆ ಮುಂಬರುವ ದಿನಗಳಲ್ಲಿ ಬಾಬರ್​ರನ್ನು ಮತ್ತೊಮ್ಮೆ ಪಾಕಿಸ್ತಾನದ ನಾಯಕರಾಗಿ ನೇಮಕಗೊಳ್ಳುವುದು ಖಚಿತ. ಬಾಬರ್​ ಕ್ಯಾಪ್ಟನ್ ಆಗಿ ಅತ್ಯಂತ ಯಶಸ್ಸು ಕಂಡಿದ್ದರೂ 2023ರ ಏಷ್ಯಾಕಪ್, ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ತಮ್ಮ ನಾಯಕತ್ವ ತ್ಯಜಿಸಿದರು.

ಬಾಬರ್ ನಾಯಕತ್ವದ ಪ್ರದರ್ಶನ

ಬಾಬರ್ 2019ರಲ್ಲಿ ಎಲ್ಲಾ ಮೂರು ಫಾರ್ಮೆಟ್‌ಗಳಿಗೆ ಪಾಕಿಸ್ತಾನದ ನಾಯಕನಾಗಿ ನೇಮಕಗೊಂಡರು. ಅವರ ನಾಯಕತ್ವದಲ್ಲಿ ಪಾಕಿಸ್ತಾನ ಅಕ್ಟೋಬರ್ 24, 2021ರಂದು ದುಬೈನಲ್ಲಿ ನಡೆದ ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಅಲ್ಲದೆ, ಅವರು ಪಾಕ್ ಅನ್ನು 2022ರ ಟಿ20 ವಿಶ್ವಕಪ್‌ನ ಫೈನಲ್‌ಗೆ ಮುನ್ನಡೆಸಿದ್ದರು. ಇದೀಗ ಮತ್ತೆ ಟಿ20 ವಿಶ್ವಕಪ್ ಬರುತ್ತಿರುವ ಕಾರಣ ಬಾಬರ್​ಗೆ ಪಟ್ಟ ಕಟ್ಟಲು ಪಿಸಿಬಿ ನೂತನ ಅಧ್ಯಕ್ಷರು ನಿರ್ಧರಿಸಿದ್ದಾರೆ.

ಬಾಬರ್ ನಾಯಕರಾಗಿ 20 ಟೆಸ್ಟ್‌ಗಳು, 43 ಏಕದಿನ ಮತ್ತು 71 ಟಿ20ಐ ಪಂದ್ಯಗಳಲ್ಲಿ ಪಾಕ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಮವಾಗಿ 10 ಟೆಸ್ಟ್, 26 ಏಕದಿನ ಮತ್ತು 42 ಟಿ20ಐ ಪಂದ್ಯಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕನಾಗಿ ಅಲ್ಲದೆ, ಬ್ಯಾಟಿಂಗ್​​ನಲ್ಲೂ ಬಾಬರ್ ಯಶಸ್ಸು ಕಂಡಿದ್ದರು. ಆದರೆ, ಏಕದಿನ ವಿಶ್ವಕಪ್​​​ ಟೂರ್ನಿಯಲ್ಲೂ ವೈಫಲ್ಯ ಅನುಭವಿಸಿದರು.

ಮೂರು ಫಾರ್ಮೆಟ್ ತೊರೆದ ಬಾಬರ್

ವಿಶ್ವಕಪ್‌ನಲ್ಲಿ ಬಾಬರ್ ಬ್ಯಾಟ್‌ನೊಂದಿಗೆ ಕೊಡುಗೆ ನೀಡಲು ವಿಫಲರಾದ ನಂತರ ಅಂದಿನ ಪಿಸಿಬಿ ಅಧ್ಯಕ್ಷ ಅಶ್ರಫ್ ಅವರು ಟೆಸ್ಟ್ ನಾಯಕತ್ವ ಉಳಿಸಿಕೊಂಡು, ವೈಟ್-ಬಾಲ್ ನಾಯಕತ್ವವನ್ನು ತೊರೆಯುವ ಆಯ್ಕೆ ನೀಡಿದ್ದರು. ಆದರೆ, ಬಾಬರ್ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವ ತ್ಯಜಿಸಿದ್ದರು. ಇದೀಗ ಮತ್ತೆ ನಾಯಕನ ಪಟ್ಟಕೊಡಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.

IPL, 2024

Live

LSG

214/6

20.0 Overs

VS

MI

67/0

(6.5)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ