logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸಲು ಬಾಬರ್ ಅಜಾಮ್‌ ನಿರ್ಧಾರ; ವರದಿ ಹೇಳಿದ್ದು ಹೀಗೆ

ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸಲು ಬಾಬರ್ ಅಜಾಮ್‌ ನಿರ್ಧಾರ; ವರದಿ ಹೇಳಿದ್ದು ಹೀಗೆ

Jayaraj HT Kannada

Nov 11, 2023 11:36 AM IST

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಅಭ್ಯಾಸದ ಅವಧಿಯಲ್ಲಿ ಬಾಬರ್ ಅಜಾಮ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಜೊತೆಗೆ ಸಂಭಾಷಣೆ ನಡೆಸಿದರು.

    • Babar Azam: ವಿಶ್ವಕಪ್‌ ಬಳಿಕ ಪಾಕಿಸ್ತಾನ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕಯತ್ವದಿಂದ ಬಾಬರ್‌ ಅಜಾಮ್‌ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ. ಈ ಕುರಿತು ವರದಿಯೊಂದು ಬಹಿರಂಗಪಡಿಸಿದೆ. 
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಅಭ್ಯಾಸದ ಅವಧಿಯಲ್ಲಿ ಬಾಬರ್ ಅಜಾಮ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಜೊತೆಗೆ ಸಂಭಾಷಣೆ ನಡೆಸಿದರು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಅಭ್ಯಾಸದ ಅವಧಿಯಲ್ಲಿ ಬಾಬರ್ ಅಜಾಮ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಜೊತೆಗೆ ಸಂಭಾಷಣೆ ನಡೆಸಿದರು. (Bibhash Lodh)

ಏಕದಿನ ವಿಶ್ವಕಪ್‌ 2023ರಲ್ಲಿ (ICC ODI World Cup 2023) ಆಡಲು ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್‌ ತಂಡ (Pakistan Cricket team), ಈವರೆಗೆ ಮಿಶ್ರ ಫಲಿತಾಂಶ ಪಡೆದಿದೆ. ಲೀಗ್‌ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಬರ್‌ ಅಜಾಮ್‌ ಬಳಗದ ಸೆಮೀಸ್‌ ಹಾದಿ ಬಹುತೇಕ ಅಸಾಧ್ಯ ಎಂಬಂತಾಗಿದೆ. ಕಳಪೆ ಪ್ರದರ್ಶನದಿಂದಾಗಿ ತಮ್ಮ ದೇಶದ ಹಿರಿಯ ಆಟಗಾರರು ಹಾಗೂ ಅಭಿಮಾನಿಗಳ ಕಟು ಟೀಕೆಗಳಿಂದ ನಾಯಕ ಬಾಬರ್‌ ಹಾಗೂ ತಂಡದ ಆಟಗಾರರು ಬೇಸತ್ತಿದ್ದಾರೆ. ಹೀಗಾಗಿ ವೈಟ್‌ ಬಾಲ್‌ ನಾಯಕತ್ವಕ್ಕೆ ರಾಜೀನಾಮೆ ಹೇಳಲು ಬಾಬರ್‌ ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

ವಿಶ್ವಕಪ್‌ನಲ್ಲಿ ಯಶಸ್ವಿ ಪ್ರದರ್ಶನ ನೀಡಲು ವಿಫಲವಾಗಿರುವ ತಂಡವನ್ನು ಟೀಕಿಸುತ್ತಿರುವ ತಮ್ಮದೇ ದೇಶದ ಪಂಡಿತರಿಗೆ ಈಗಾಗಲೇ ಬಾಬರ್ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿಯಲ್ಲಿ ಲೈವ್‌ ಬಂದು ಟೀಕಿಸುವ ಬದಲು ತಮ್ಮ ಸಲಹೆ ಸೂಚನೆಗಳನ್ನು ನೇರವಾಗಿ ಸಂದೇಶ ಕಳಿಸುವುದು ಉತ್ತಮ ಎಂದು ಅವರು ಹೇಳಿದ್ದಾರೆ. ಈ ನಡುವೆ ಬಾಬರ್‌ ನಾಯಕತ್ವ ತ್ಯಜಿಸುವ ಕುರಿತ ವರದಿಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ನೇರವಾಗಿ ಮೆಸೇಜ್‌ ಮಾಡಿ

ಕೋಲ್ಕತ್ತಾದಲ್ಲಿ ಶನಿವಾರ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನ ತಮ್ಮ ಮೇಲಿನ ಟೀಕೆಗಳನ್ನು ಉದ್ದೇಶಿಸಿ ಮಾತನಾಡಿದ ಬಾಬರ್, “ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನ ಹೊಂದಿರುತ್ತಾರೆ. ತಮ್ಮದೇ ಆದ ಆಲೋಚನೆಗಳಿರುತ್ತವೆ. ಅವನು ಹೀಗಿರಬೇಕು ಹಾಗಿರಬೇಕು ಎಂದು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಯಾರಾದರೂ ನನಗೆ ಸಲಹೆ ನೀಡಬೇಕೆಂದು ಬಯಸಿದರೆ, ಎಲ್ಲರಲ್ಲೂ ನನ್ನ ಮೊಬೈಲ್‌ ಸಂಖ್ಯೆ ಇದೆ. ಟಿವಿ ಮುಂದೆ ಬಂದು ಸಲಹೆ ನೀಡುವುದು ಸುಲಭ. ಅದರ ಬದಲು ನನಗೆ ಅವರು ನೇರವಾಗಿ ಸಂದೇಶ ಕಳುಹಿಸಬಹುದು” ಎಂದು ಬಾಬರ್ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ ಏಷ್ಯಾಕಪ್ ಪಂದ್ಯಾವಳಿಯ ಫೈನಲ್‌ ಪ್ರವೇಶಿಸಲು ಪಾಕ್‌ ವಿಫಲವಾಗಿತ್ತು. ಅದರ ಬೆನ್ನಲ್ಲೇ 2023ರ ವಿಶ್ವಕಪ್‌ನಿಂದಲೂ ಪಾಕಿಸ್ತಾನ ಬಹುತೇಕ ಹೊರಬಿದ್ದಿದೆ. ಹೀಗಾಗಿ ಬಾಬರ್‌ ನಾಯಕತ್ವವನ್ನು ಅನುಭವಿಗಳು ಮತ್ತು ಪರಿಣಿತರು ಪ್ರಶ್ನಿಸಿದ್ದಾರೆ. ಈ ನಡುವೆ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ. ಇದು ನಾಯಕನ ನೈತಿಕ ಬಲವನ್ನು ಕುಗ್ಗಿಸಿದೆ.

ವರದಿ ಹೇಳಿದೇನು?

ಈ ನಡುವೆ, ಜಿಯೋ ಸೂಪರ್‌ (Geo Super) ವರದಿಯ ಪ್ರಕಾರ, ಏಕದಿನ ವಿಶ್ವಕಪ್ ಬಳಿಕ ಏಕದಿನ ಮತ್ತು ಟಿ20 ನಾಯಕತ್ವಕ್ಕೆ ಬಾಬರ್ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು‌ ವರದಿ ಬಹಿರಂಗಪಡಿಸಿದೆ. ಈ ಸಂಬಂಧ ಅವರು ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಮತ್ತು ಅವರ ನಿಕಟವರ್ತಿಗಳ ಮಾರ್ಗದರ್ಶನ ಕೋರಿದ್ದಾರೆ ಎಂದು ಹೇಳಲಾಗಿದೆ. ಅತ್ತ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮುನ್ನಾದಿನದಂದು ಈಡನ್ ಗಾರ್ಡನ್ಸ್‌ ಮೈದಾನಲ್ಲಿ ರಮೀಜ್ ರಾಜಾ ಅವರೊಂದಿಗೆ ಬಾಬರ್ ಸುದೀರ್ಘ ಅವಧಿಯ ಚರ್ಚೆ ನಡೆಸುತ್ತಿರುವುದು ಕಂಡುಬಂತು.

ವರದಿಯ ಪ್ರಕಾರ, ನಾಯಕತ್ವದಲ್ಲಿ ಮುಂದುವರೆಯುವ ನಿರ್ಧಾರವು ಬಾಬರ್ ಅವರು ಅಭಿಮಾನಿಗಳಿಂದ ಸ್ವೀಕರಿಸುವ ಸಲಹೆಯನ್ನು ಕೂಡಾ ಅವಲಂಬಿಸಿರುತ್ತದೆ. ಮತ್ತೊಂದೆಡೆ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದಲೂ ಕೆಳಗಿಳಿಯುವಂತೆ ಬಾಬರ್‌ ಅವರ ಕೆಲವು ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

IPL, 2024

Live

RCB

30/0

2.4 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ