logo
ಕನ್ನಡ ಸುದ್ದಿ  /  ಕ್ರಿಕೆಟ್  /  99 ರನ್ನಿಂದ ಶತಕ ವಂಚಿತರಾದ ಬಾಬರ್ ಅಜಮ್; 1 ರನ್ ಗಳಿಸಿ ಔಟಾದ ಪಾಕ್ ಮಾಜಿ ನಾಯಕ ಫುಲ್ ಟ್ರೋಲ್

99 ರನ್ನಿಂದ ಶತಕ ವಂಚಿತರಾದ ಬಾಬರ್ ಅಜಮ್; 1 ರನ್ ಗಳಿಸಿ ಔಟಾದ ಪಾಕ್ ಮಾಜಿ ನಾಯಕ ಫುಲ್ ಟ್ರೋಲ್

Prasanna Kumar P N HT Kannada

Dec 28, 2023 02:28 PM IST

google News

ಬಾಬರ್ ಅಜಮ್.

    • Babar Azam: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟಾದ ಪಾಕಿಸ್ತಾನ ತಂಡ ಮಾಜಿ ನಾಯಕ ಬಾಬರ್ ಅಜಮ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 
ಬಾಬರ್ ಅಜಮ್.
ಬಾಬರ್ ಅಜಮ್.

ಮೆಲ್ಬರ್ನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲೂ (Australia vs Pakistan) ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ (Babar Azam) ಮತ್ತೆ ವೈಫಲ್ಯ ಅನುಭವಿಸಿದ್ದಾರೆ. ಮೊದಲ ಟೆಸ್ಟ್​​ನಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಬಾಬರ್, 2ನೇ ಪಂದ್ಯ​ದಲ್ಲೂ ನಿರಾಸೆ ಮೂಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಾಬರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿ ರುಬ್ಬುತ್ತಿದ್ದಾರೆ. 99 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಮೆಲ್ಬರ್ನ್​ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕ್​, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಪರಿಣಾಮ ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ 314 ರನ್ ಗಳಿಗೆ ಆಲೌಟ್​ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕ್​, ಮತ್ತೆ ಕಳಪೆ ನಿರಾಸೆ ಮೂಡಿಸಿತು. 264 ರನ್​​ಗೆ ಸರ್ವಪತನ ಕಂಡು 54 ರನ್​ಗಳ ಹಿನ್ನಡೆ ಅನುಭವಿಸಿತು. ಈಗ ಆಸೀಸ್​​ 2ನೇ ಇನ್ನಿಂಗ್ಸ್​​​ನಲ್ಲಿ 54 ರನ್​ಗಳ ಮುನ್ನಡೆಯಿಂದ 6 ವಿಕೆಟ್​ಗೆ 241 ರನ್ ಗಳಿಸಿದೆ. ನಾಲ್ಕನೇ ದಿನವೂ ಬ್ಯಾಟಿಂಗ್​ ಮುಂದುವರೆಸಲಿದೆ.

ಬಾಬರ್ ಹೀನಾಯ ಪ್ರದರ್ಶನ

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ನಾಯಕನಾಗಿ ವೈಫಲ್ಯ ಅನುಭವಿಸಿದ ಕಾರಣ 3 ಸ್ವರೂಪದ ಕ್ರಿಕೆಟ್​​ ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಇನ್ಮುಂದೆ ಒತ್ತಡ ಮುಕ್ತರಾಗಿ ಬ್ಯಾಟಿಂಗ್​ ನಡೆಸಲಿದ್ದು, ಲಯಕ್ಕೆ ಮರಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಮಾಜಿ ಕ್ರಿಕೆಟರ್ಸ್​ ಸಹ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಮತ್ತದೇ ಕಳಪೆ ಫಾರ್ಮ್​ ಮುಂದುವರೆಸಿದ್ದಾರೆ. ಅಲ್ಲದೆ, ಟೀಕೆಗೂ ಒಳಗಾಗಿದ್ದಾರೆ. ಅದರಲ್ಲೂ ಕೊಹ್ಲಿಗೆ ಹೋಲಿಸಿದ್ದ ಕಾರಣ ವಿರಾಟ್ ಅಭಿಮಾನಿಗಳು ಇದೇ ನೆಪವನ್ನಿಟ್ಟುಕೊಟ್ಟು ಟ್ರೋಲ್ ಮಾಡುತ್ತಿ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದ ಪ್ರಥಮ ಇನ್ನಿಂಗ್ಸ್​ನಲ್ಲಿ ಬಾಬರ್​​ ಕೇವಲ 1 ರನ್ ಗಳಿಸಿ ಔಟಾದರು. ಏಳು ಎಸೆತಗಳನ್ನು ಎದುರಿಸಿದ ಬಾಬರ್​, ನಾಯಕ ಪ್ಯಾಟ್ ಕಮಿನ್ಸ್​ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆದರು. ಇನ್ನೂ ಆಡದ ಎರಡನೇ ಇನ್ನಿಂಗ್ಸ್​ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮೊದಲ ಟೆಸ್ಟ್​ನ ಪ್ರಥಮ ಇನ್ನಿಂಗ್ಸ್​ನಲ್ಲಿ 21 ರನ್​ಗಳಿಗೆ ಔಟ್ ಆಗಿದ್ದ ಬಾಬರ್, ಎರಡನೇ ಇನ್ನಿಂಗ್ಸ್​​ನಲ್ಲಿ 14 ರನ್ ಗಳಿಗೆ ಆಟ ಮುಗಿಸಿದ್ದರು.

99 ರನ್​ಗಳಿಂದ ಶತಕ ಮಿಸ್ ಎಂದ ನೆಟ್ಟಿಗರು

ಬಾಬರ್ ಅವರನ್ನು ವಿರಾಟ್ ಕೊಹ್ಲಿ ಆಟಕ್ಕೆ ಹೋಲಿಸಲಾಗಿತ್ತು. ಶತಕಗಳಲ್ಲಿ ಕೊಹ್ಲಿ ದಾಖಲೆಯನ್ನು ಮುರಿಯುತ್ತಾರೆ ಎಂದು ಹೇಳಲಾಗಿತ್ತು. ಕೆಲ ಮಾಜಿ ಕ್ರಿಕೆಟರ್ಸ್​ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದೀಗ 1 ರನ್ನಿಗೆ ಔಟ್​ ಆಗುತ್ತಿದ್ದಂತೆ ಬಾಬರ್​ರನ್ನು ಟ್ರೋಲ್ ಮಾಡಲಾಗುತ್ತಿದೆ. 99 ರನ್​​ಗಳಿಂದ ಶತಕ ವಂಚಿತರಾದರು ಎಂದು ವ್ಯಂಗ್ಯವಾಗಿ ರುಬ್ಬುತ್ತಿದ್ದಾರೆ. ಇದು ಬಾಬರ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ