KBC 15: ಸಚಿನ್​ ಕುರಿತ ಪ್ರಶ್ನೆಗೆ ತಡಬಡಾಯಿಸಿ ತಪ್ಪು ಉತ್ತರ ಕೊಟ್ಟ ಸ್ಮೃತಿ ಮಂಧಾನ-ಇಶಾನ್ ಕಿಶನ್; ಯಾವುದು ಆ ಪ್ರಶ್ನೆ?
ಕನ್ನಡ ಸುದ್ದಿ  /  ಕ್ರಿಕೆಟ್  /  Kbc 15: ಸಚಿನ್​ ಕುರಿತ ಪ್ರಶ್ನೆಗೆ ತಡಬಡಾಯಿಸಿ ತಪ್ಪು ಉತ್ತರ ಕೊಟ್ಟ ಸ್ಮೃತಿ ಮಂಧಾನ-ಇಶಾನ್ ಕಿಶನ್; ಯಾವುದು ಆ ಪ್ರಶ್ನೆ?

KBC 15: ಸಚಿನ್​ ಕುರಿತ ಪ್ರಶ್ನೆಗೆ ತಡಬಡಾಯಿಸಿ ತಪ್ಪು ಉತ್ತರ ಕೊಟ್ಟ ಸ್ಮೃತಿ ಮಂಧಾನ-ಇಶಾನ್ ಕಿಶನ್; ಯಾವುದು ಆ ಪ್ರಶ್ನೆ?

Kaun Banega Crorepati: ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿಲು ಇಶಾನ್ ಕಿಶನ್ ಮತ್ತು ಸ್ಮತಿ ಮಂಧಾನ ತಡಬಡಾಯಿಸಿದ್ದಾರೆ.

ಸಚಿನ್​ ಕುರಿತ ಪ್ರಶ್ನೆಗೆ ತಡಬಡಾಯಿಸಿ ತಪ್ಪು ಕೊಟ್ಟ ಸ್ಮೃತಿ ಮಂಧಾನ-ಇಶಾನ್ ಕಿಶನ್.
ಸಚಿನ್​ ಕುರಿತ ಪ್ರಶ್ನೆಗೆ ತಡಬಡಾಯಿಸಿ ತಪ್ಪು ಕೊಟ್ಟ ಸ್ಮೃತಿ ಮಂಧಾನ-ಇಶಾನ್ ಕಿಶನ್.

ಬಾಲಿವುಡ್​ ಹಿರಿಯ ನಟ ಹಾಗೂ ಐಕಾನ್ ಅಮಿತಾಭ್ ಬಚ್ಚನ್ ನಿರೂಪಿಸುವ ಪ್ರಸಿದ್ಧ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್​ಪತಿ (Kaun Banega Crorepati)ಯ ಇತ್ತೀಚಿನ ಸಂಚಿಕೆಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಮತ್ತು ಮಹಿಳಾ ತಂಡದ ಉಪನಾಯಕಿ ಸ್ಮತಿ ಮಂಧಾನ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ತಡಬಡಾಯಿಸಿದ್ದಾರೆ.

25 ಲಕ್ಷ ಬಹುಮಾನದ ಪ್ರಶ್ನೆಯನ್ನು ಕ್ರಿಕೆಟ್​​ಗೆ ಸಂಬಂಧಿಸಿ ಕೇಳಲಾಯಿತು. ಇದು ಕಾರ್ಯಕ್ರಮದ 12ನೇ ಪ್ರಶ್ನೆಯಾಗಿತ್ತು. ಅಲ್ಲಿಯವರೆಗೂ ಸರಿಯಾದ ಉತ್ತರಗಳನ್ನು ನೀಡುತ್ತಾ ಇಶಾನ್-ಮಂಧಾನ 12ನೇ ಪ್ರಶ್ನೆಗೆ ಉತ್ತರಿಸಲು ಹೆಣಗಾಡಿದರು. ಆರಂಭದಲ್ಲಿ ತಪ್ಪು ಉತ್ತರ ಕೊಟ್ಟರು. ಆದರೆ ಲೈಫ್​ ಲೈನ್​ ಪಡೆದು ಸರಿಯಾದ ಉತ್ತರವನ್ನು ಆಯ್ಕೆ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಪ್ರಶ್ನೆ ಹೀಗಿತ್ತು ನೋಡಿ..

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮೊದಲ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆಟಗಾರ ಯಾರು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಮ್ಯಾಂಚೆಸ್ಟರ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಸಚಿನ್ ತೆಂಡೂಲ್ಕರ್ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದವರು ಎಂಬುದು ಸುಳಿವು. ಓದುಗರು ಸಹ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬಹುದು.

  1. ರಾಹುಲ್ ದ್ರಾವಿಡ್
  2. ಅನಿಲ್ ಕುಂಬ್ಳೆ
  3. ಸೌರವ್ ಗಂಗೂಲಿ
  4. ಜಾವಗಲ್ ಶ್ರೀನಾಥ್

ಪ್ರಶ್ನೆಗೆ ಈ ನಾಲ್ಕು ಉತ್ತರಗಳನ್ನು ನೀಡಲಾಗಿತ್ತು. ಆದರೆ ಉತ್ತರ ನೀಡಲು ಭಾರತೀಯ ಕ್ರಿಕೆಟಿಗರು ಹರಸಾಹಸಪಟ್ಟರು. ಇಬ್ಬರೂ ಚರ್ಚಿಸಿದ ನಂತರ ಒಂದು ನಿರ್ಧಾರಕ್ಕೆ ಬಂದರು. ಅಲ್ಲದೆ, ಸರಿಯಾದ ಉತ್ತರ ಕೊಡುವುದಕ್ಕೂ ಮುನ್ನ ಒಂದು ಲೈಫ್​​ಲೈನ್ ಕೂಡ ಪಡೆದರು. ಸಾಕಷ್ಟು ಕಷ್ಟಪಟ್ಟ ಇಬ್ಬರೂ ತಪ್ಪು ಉತ್ತರವಾಗಿದ್ದ ಜಾವಗಲ್​ ಶ್ರೀನಾಥ್ ಅವರನ್ನು ಆಯ್ಕೆ ಮಾಡಿದರು. ತದನಂತರ ಲೈಫ್​ಲೈನ್ ಬಳಸಿ ಸರಿ ಉತ್ತರವಾಗಿದ್ದ ಅನಿಲ್ ಕುಂಬ್ಳೆ ಎಂದು ಹೇಳಿ ಗೆದ್ದರು.

ಇಶಾನ್ ಕಿಶನ್ ಮಾನಸಿಕ ಆಯಾಸದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಕ್ತಾಯದ ಬಳಿಕ ಎರಡು ಪಂದ್ಯಗಳ ಟೆಸ್ಟ್​ ಸರಣಿಯಿಂದ ಹಿಂದೆ ಸರಿದಿದ್ದಾರೆ. ಸ್ಮೃತಿ ಮಂಧಾನ ಇಂದಿನಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಹರ್ಮನ್​ ಪ್ರೀತ್​ ಕೌರ್​​ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದರೆ, ಸ್ಮೃತಿ ಮಂಧಾನ ಉಪನಾಯಕಿ.

ಕುಂಬ್ಳೆ ಪದಾರ್ಪಣೆ ಪಂದ್ಯದಲ್ಲಿ ಸಚಿನ್ ಶತಕ

1990ರ ಆಗಸ್ಟ್​ 9ರಂದು ಮ್ಯಾಂಚೆಸ್ಟರ್​​ನ ಓಲ್ಡ್​ ಟ್ರಾಫರ್ಡ್​ ಮೈದಾನದಲ್ಲಿ ಇಂಗ್ಲೆಂಡ್-ಭಾರತ ತಂಡಗಳ ನಡುವೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಈ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಸಚಿನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ ಸಚಿನ್ 68 ರನ್ ಸಿಡಿಸಿದ್ದರು. ಇನ್ನು ಅನಿಲ್ ಕುಂಬ್ಳೆ ಈ ಪಂದ್ಯದಲ್ಲಿ ಮೂರು ವಿಕೆಟ್​​ ಪಡೆದರು.

Whats_app_banner