logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮ್ಯೂಸಿಕಲ್ ಚೇರ್ ಆಯ್ತು ಪಾಕಿಸ್ತಾನ ತಂಡದ ನಾಯಕತ್ವ; ಅವರ ಬಿಟ್ಟು ಇವರ ಬಿಟ್ಟು ಮತ್ಯಾರು ಎಂಬಂತೆ ಮತ್ತೆ ಬಾಬರ್ ಅಜಮ್​ಗೆ ಪಟ್ಟ

ಮ್ಯೂಸಿಕಲ್ ಚೇರ್ ಆಯ್ತು ಪಾಕಿಸ್ತಾನ ತಂಡದ ನಾಯಕತ್ವ; ಅವರ ಬಿಟ್ಟು ಇವರ ಬಿಟ್ಟು ಮತ್ಯಾರು ಎಂಬಂತೆ ಮತ್ತೆ ಬಾಬರ್ ಅಜಮ್​ಗೆ ಪಟ್ಟ

Prasanna Kumar P N HT Kannada

Mar 30, 2024 04:29 PM IST

ಪಾಕ್ ನಾಯಕನಾಗಿ ಬಾಬರ್ ಅಜಮ್ ವಾಪಸ್

    • ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಸುದ್ದಿ ಜೋರಾಗಿದೆ. ಮೂರು ಫಾರ್ಮೆಟ್ ಕ್ರಿಕೆಟ್​​ಗೂ ಬಾಬರ್​ ಅಜಮ್ ಅವರನ್ನೇ ಮತ್ತೆ ಕ್ಯಾಪ್ಟನ್ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಪಾಕ್ ನಾಯಕನಾಗಿ ಬಾಬರ್ ಅಜಮ್ ವಾಪಸ್
ಪಾಕ್ ನಾಯಕನಾಗಿ ಬಾಬರ್ ಅಜಮ್ ವಾಪಸ್

ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಗೂ (T20 World Cup 2024) ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ನಾಯಕತ್ವ ಬದಲಿಸುವ ಚಿಂತನೆ ನಡೆಸಿದೆ. ಮೂರು ಸ್ವರೂಪದ ಕ್ರಿಕೆಟ್​​​ಗೂ ಮತ್ತೆ ಬಾಬರ್​ ಅಜಮ್ (Babar Azam) ಅವರನ್ನೇ ನಾಯಕನಾಗಿ ನೇಮಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ನಾಯಕರನ್ನು ಬದಲಿಸುರವ ಪಾಕಿಸ್ತಾನದ ಸಂಪ್ರದಾಯವು ದೀರ್ಘಕಾಲದ ಸಮಸ್ಯೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಬಟ್ಲರ್ ಅಲಭ್ಯ, ಶಿಮ್ರಾನ್ ಹೆಟ್ಮೆಯರ್ ಇನ್; ಆರ್‌ಸಿಬಿ ವಿರುದ್ಧದ ಎಲಿಮನೇಟರ್‌ ಕದನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ

ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಕ್ರಿಕೆಟ್‌ ಬಗ್ಗೆ ಅಂಧಕಾರ, ದುರಭಿಮಾನ ಇದ್ದರಷ್ಟೇ ಧೋನಿಯನ್ನು ದ್ವೇಷಿಸಲು ಸಾಧ್ಯ; ರಾಜೀವ್‌ ಹೆಗಡೆ ಬರಹ

2023ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ (ODI World Cup 2023) ತನ್ನ ನಾಯಕತ್ವದಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡಿದ ಕಾರಣ ಬಾಬರ್​ ಅಜಮ್ ಅವರು ಹೊಣೆ ಹೊತ್ತು ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ವಿಶ್ವಕಪ್​​ನಲ್ಲಿ ಪಾಕಿಸ್ತಾನ ನಿರಾಶಾದಾಯಕ ಪ್ರದರ್ಶನ ನೀಡಿತು. ಸೆಮಿಫೈನಲ್​​ ಪ್ರವೇಶಿಸಲು ಸಾಧ್ಯವಾಗಿಲ್ಲ. ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಬಾಬರ್​ ನಾಯಕತ್ವ ತ್ಯಜಿಸಿದರು.

ಬಾಬರ್ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಶಾನ್ ಮಸೂದ್ (Shan Masood) ಮತ್ತು ಟಿ20 ಕ್ರಿಕೆಟ್​ಗೆ ಶಾಹೀನ್ ಅಫ್ರಿದಿ (Shaheen Afridi) ನೂತನ ಕ್ಯಾಪ್ಟನ್​​ಗಳಾಗಿ ನೇಮಕಗೊಂಡರು. ಆದರೆ ಅವರ ನಾಯಕತ್ವದಲ್ಲಿ ಪಾಕ್ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. ಟೆಸ್ಟ್​ ಮತ್ತು ಟಿ20 ಸರಣಿಯಲ್ಲಿ ಹೀನಾಯ ಸೋಲಿಗೆ ಶರಣಾಯಿತು. ಅಲ್ಲದೆ, ಅವರ ನಾಯಕತ್ವದಲ್ಲಿ ಧಮ್ ಇಲ್ಲ ಎಂದು ಪಾಕ್ ಮಾಜಿ ಕ್ರಿಕೆಟರ್​​ಗಳು ಟೀಕಿಸಿದ್ದರು.

ಬಾಬರ್​ ಅಜಮ್ ನಾಯಕತ್ವಕ್ಕೆ ಆಯ್ಕೆ ಸಮಿತಿ ಶಿಫಾರಸು

ಜೂನ್​ನಲ್ಲಿ ಟಿ20 ವಿಶ್ವಕಪ್​​ ನಡೆಯಲಿದೆ. ಅದಕ್ಕೆ ಕೇವಲ 2 ತಿಂಗಳು ಮಾತ್ರ ಉಳಿದಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ನಾಯಕತ್ವದ ಸುತ್ತಲಿನ ಅನಿಶ್ಚಿತತೆ ಮತ್ತೆ ಕಾಣಿಸಿಕೊಂಡಿದೆ. ಮಹತ್ವದ ಟೂರ್ನಿಯಲ್ಲಿ ಬಾಬರ್ ಅಜಮ್​ಗೆ ನಾಯಕತ್ವ ನೀಡಬೇಕೆಂದು ಅನುಭವಿಗೆ ನೀಡಲು ಪಿಸಿಬಿ ಚಿಂತಿಸಿದೆ. ಈಗ, ಬಾಬರ್ ಅಜಮ್ ಮತ್ತೆ ನಾಯಕತ್ವಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸದಾಗಿ ರಚಿಸಲಾದ ಆಯ್ಕೆ ಸಮಿತಿಯ ಶಿಫಾರಸಿನ ನಂತರ ಬಾಬರ್ ಅಜಮ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ಮರುನೇಮಕ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಜಿಯೋ ನ್ಯೂಸ್ ಶುಕ್ರವಾರ ಉಲ್ಲೇಖಿಸಿದ ಮೂಲಗಳ ಪ್ರಕಾರ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಬಾಬರ್ ನಾಯಕನಾಗಿ ತಮ್ಮ ಪಾತ್ರವನ್ನು ಪುನರಾರಂಭಿಸಲಿದ್ದಾರೆ.

ಬಾಬರ್ ಅಜಮ್ ಅವರನ್ನು ಟಿ 20 ನಾಯಕನಾಗಿ ಮರುಸ್ಥಾಪಿಸುವ ಶಿಫಾರಸು ಆಯ್ಕೆ ಸಮಿತಿಯಿಂದ ಸರ್ವಾನುಮತದಿಂದ ಬಂದಿದೆ ಎಂದು ವರದಿಯಾಗಿದೆ. ಅವರು ತಮ್ಮ ನಿರ್ಧಾರವನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ತಿಳಿಸಿದ್ದಾರೆ. ಇದರ ಪರಿಣಾಮವಾಗಿ 29 ವರ್ಷದ ಬ್ಯಾಟ್ಸ್​ಮನ್​ ಮತ್ತೊಮ್ಮೆ ನಾಯಕನಾಗಲಿದ್ದಾರೆ ಎನ್ನುತ್ತಿವೆ ಖಚಿತ ಮೂಲಕಗಳು. ಅದೇ ವರದಿಯು ಶಾಹೀನ್ ನಾಯಕತ್ವದ ಪಾತ್ರದಿಂದ ಕೆಳಗಿಳಿಯುವ ಬಗ್ಗೆ ಯೋಚಿಸಿದ್ದರು ಎಂದು ಹೇಳಿದೆ.

ಬಾಬರ್ ಅವರ ನಿರಾಶಾದಾಯಕ ದಾಖಲೆ

ಕಳೆದ ವರ್ಷ ನವೆಂಬರ್​​​ನಲ್ಲಿ ಎಲ್ಲಾ ಸ್ವರೂಪಗಳಲ್ಲಿ ನಾಯಕತ್ವದ ಪಾತ್ರಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ ನಂತರ ಬಾಬರ್ ಅಜಮ್ ನಾಯಕತ್ವಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಏಕದಿನ ವಿಶ್ವಕಪ್ ನಿರಾಶೆಯ ಜೊತೆಗೆ, ಏಷ್ಯಾ ಕಪ್​ನಂತಹ ಪಂದ್ಯಾವಳಿಗಳಲ್ಲಿ ತಂಡದ ನೀರಸ ಪ್ರದರ್ಶನವು ಬಾಬರ್ ಅವರ ನಾಯಕತ್ವದ ಸಾಮರ್ಥ್ಯಗಳ ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಿತು.

ಬಾಬರ್ ತಮ್ಮ ನಾಯಕತ್ವದಲ್ಲಿ ಯಾವುದೇ ಐಸಿಸಿ ಅಥವಾ ಏಷ್ಯಾ ಕಪ್ ಪ್ರಶಸ್ತಿಗಳನ್ನು ಪಡೆಯಲು ವಿಫಲವಾದ ಕಾರಣ ಟೀಕೆಗಳನ್ನು ಎದುರಿಸಿದ್ದಾರೆ. ವಿಶೇಷವೆಂದರೆ, 2022ರಲ್ಲಿ ಬಾಬರ್ ನಾಯಕತ್ವದಲ್ಲಿ ತಂಡವು ಒಂದೇ ಒಂದು ತವರು ಟೆಸ್ಟ್ ಗೆಲುವನ್ನು ದಾಖಲಿಸಲು ವಿಫಲವಾಗಿದೆ. ಟಿ20ಐಗಳಲ್ಲಿ ತಂಡವು 2021ರ ಟಿ 20 ವಿಶ್ವಕಪ್​​ನಲ್ಲಿ ಸೆಮಿಫೈನಲ್ ಸೋಲನ್ನು ಎದುರಿಸಿತು. 2022ರಲ್ಲಿ ಫೈನಲ್​ನಲ್ಲಿ ಸೋಲು ಕಂಡಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ