ಅಂದುಕೊಂಡಿದ್ದೇ ಬೇರೆ-ಆಗಿದ್ದೇ ಬೇರೆ; ಪಂದ್ಯದ ನಡುವೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಪ್ರೀತಿಯ ಅಪ್ಪುಗೆ, ವಿಡಿಯೋ ವೈರಲ್-gautam gambhir shakes virat kohli hand hugs former teammate during rcb vs kkr game time out video viral cricket news prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂದುಕೊಂಡಿದ್ದೇ ಬೇರೆ-ಆಗಿದ್ದೇ ಬೇರೆ; ಪಂದ್ಯದ ನಡುವೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಪ್ರೀತಿಯ ಅಪ್ಪುಗೆ, ವಿಡಿಯೋ ವೈರಲ್

ಅಂದುಕೊಂಡಿದ್ದೇ ಬೇರೆ-ಆಗಿದ್ದೇ ಬೇರೆ; ಪಂದ್ಯದ ನಡುವೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಪ್ರೀತಿಯ ಅಪ್ಪುಗೆ, ವಿಡಿಯೋ ವೈರಲ್

Gautam Gambhir - Virat Kohli : ಆರ್​​ಸಿಬಿ ಮತ್ತು ಕೆಕೆಆರ್​ ಪಂದ್ಯದ ಸೋಲು ಮತ್ತು ಗೆಲುವಿಗಿಂತ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್​ ನಡುವೆ ಸ್ಲೆಡ್ಜಿಂಗ್ ವಾರ್​ ನಡೆಯುವುದು ಖಚಿತ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಪಂದ್ಯದ ನಡುವೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಪ್ರೀತಿಯ ಅಪ್ಪುಗೆ
ಪಂದ್ಯದ ನಡುವೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಪ್ರೀತಿಯ ಅಪ್ಪುಗೆ

17ನೇ ಆವೃತ್ತಿಯ ಐಪಿಎಲ್​ನ 10ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​​ಗಳ ಸೋಲಿಗೆ ಶರಣಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ತನ್ನ ತವರಿನಲ್ಲಿ ಮೊದಲ ಹಾಗೂ ಟೂರ್ನಿಯಲ್ಲಿ ಎರಡನೇ ಸೋಲನುಭವಿತು. ಕೆಕೆಆರ್ ಸತತ ಎರಡನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಅದ್ಭುತ ಆರಂಭ ಪಡೆದರೂ ಅದೇ ಪ್ರದರ್ಶನ ಕೊನೆವರೆಗೂ ಮುಂದುವರೆಸಲು ವಿಫಲವಾಯಿತು. ವಿರಾಟ್ ಕೊಹ್ಲಿ (83*) ಏಕಾಂಗಿ ಹೋರಾಟ ನಡೆಸಿದ ಪರಿಣಾಮ 20 ಓವರ್​​​ಗಳಲ್ಲಿ 6 ವಿಕೆಟ್​​ಗೆ 182 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೋಲ್ಕತ್ತಾ, ಸಿಡಿಲಬ್ಬದ ಬ್ಯಾಟಿಂಗ್​ ಮೂಲಕ 19 ಎಸೆತಗಳು ಬಾಕಿ ಇರುವಂತೆಯೇ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ಆದರೆ ಈ ಪಂದ್ಯಕ್ಕೂ ಮುನ್ನ ನಿರೀಕ್ಷೆಗಳು ಹೆಚ್ಚಾಗಿದ್ದವು. 2016ರ ನಂತರ ತವರಿನ ಮೈದಾನದಲ್ಲಿ ಕೆಕೆಆರ್ ತಂಡವನ್ನು ಆರ್​​ಸಿಬಿ ಸೋಲಿಸುತ್ತದೆ ಎಂದು ಭರವಸೆ ಇತ್ತು. ಅಷ್ಟೇ ಅಲ್ಲದೆ, ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಅವರ ನಡುವಿನ ಕಾಳಗವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ.!

ಕೊಹ್ಲಿ-ಗಂಭೀರ್ ಸ್ನೇಹ ಗಾನ

ಪಂದ್ಯದ ಸೋಲು ಮತ್ತು ಗೆಲುವಿಗಿಂತ ಕೊಹ್ಲಿ ಮತ್ತು ಗಂಭೀರ್​ ನಡುವೆ ಸ್ಲೆಡ್ಜಿಂಗ್ ವಾರ್​ ನಡೆಯುವುದು ಖಚಿತ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. 2013ರಿಂದಲೂ ಐಪಿಎಲ್​ನಲ್ಲಿ ವೈರತ್ವ ಬೆಳೆಸಿಕೊಂಡಿದ್ದ ವಿರಾಟ್ ಮತ್ತು ಗೌತಮ್ ಈಗ ಏಕಾಏಕಿ ಒಂದಾಗಿದ್ದಾರೆ. ಟೈಮ್ ಔಟ್ ವೇಳೆ ಕೊಹ್ಲಿಯನ್ನು ಗಂಭೀರ್ ಹಗ್ ಮಾಡಿದ್ದಲ್ಲದೆ, ತುಂಬಾ ಆಪ್ತತೆಯಿಂದ ಮಾತನಾಡಿದ್ದಾರೆ.

ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆರ್​​ಸಿಬಿ 16ನೇ ಓವರ್​​ನಲ್ಲಿ ಟೈಮ್ ಔಟ್ ತೆಗೆದುಕೊಂಡಿತು. ಆಗ ಮೈದಾನಕ್ಕೆ ಬಂದ ಗೌತಿ, ವಿರಾಟ್ ಕೊಹ್ಲಿಯನ್ನು ಕಂಡೊಡನೆ ನಕ್ಕು ಹ್ಯಾಂಡ್ ಶೇಕ್ ನೀಡಿದರು. ಬಳಿಕ ಇಬ್ಬರೂ ಪರಸ್ಪರ ತಬ್ಬಿಕೊಂಡ ಕೆಕೆಆರ್​ ಮೆಂಟರ್​ ಮತ್ತು ಆರ್​ಸಿಬಿ ಬ್ಯಾಟಿಂಗ್ ಸೂಪರ್​ ಸ್ಟಾರ್​ ಕೆಲ ಹೊತ್ತು ಆಪ್ತತೆಯಿಂದ ಮಾತನಾಡಿದರು. ಈ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕೊಹ್ಲಿ ತನ್ನ ಸಹ ಆಟಗಾರನೊಂದಿಗೆ ಹರಟೆ ಹೊಡೆಯುತ್ತಿದ್ದಾಗ ನೀರು ಕುಡಿಯುತ್ತಿದ್ದರು. ಇನ್ನೇನು ಕೆಕೆಆರ್ ಡಗೌಟ್‌ಗೆ ಹಿಂತಿರುಗುವ ಮೊದಲು ಕೊಹ್ಲಿ ಮತ್ತು ಗಂಭೀರ್​ ಕಿರು ಚಾಟ್ ಮೂಲಕ ಗಮನ ಸೆಳೆದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಗೆಬಗೆ ಕಾಮೆಂಟ್​​ಗಳ ಗಮನ ಸೆಳೆದಿದ್ದಾರೆ. ಇಬ್ಬರ ನಡುವಿನ ಮುನಿಸು ಇವತ್ತಿಗೆ ಅಂತ್ಯವಾಗಿದೆ ಎಂದು ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ.

ಕಳೆದ ಐಪಿಎಲ್​ನಲ್ಲಿ ಜಗಳ

2023ರ ಐಪಿಎಲ್​ನಲ್ಲಿ ವಿರಾಟ್ - ಗಂಭೀರ್​ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುವಷ್ಟರ ಮಟ್ಟಿಗೆ ಗಲಾಟೆ ಮಾಡಿಕೊಂಡಿದ್ದರು. ಮೈದಾನದಲ್ಲಿ ನವೀನ್ ಉಲ್ ಹಕ್​ಗೆ ಸ್ಲೆಡ್ಜಿಂಗ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿ ದೊಡ್ಡದಾಗಿ ಕಿತ್ತಾಡಿಕೊಂಡಿದ್ದರು. ಅಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು ಗಂಭೀರ್. 2013ರಲ್ಲಿ ಕೊಹ್ಲಿ ಮತ್ತು ಗೌತಿ ಮೊದಲ ಬಾರಿಗೆ ಜಗಳ ಮಾಡಿಕೊಂಡಿದ್ದರು. ಬಳಿಕ ಇಬ್ಬರು ಆಗಾಗ್ಗೆ ಮೈದಾನದಲ್ಲಿ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಈಗ ಎಲ್ಲವೂ ಶಮನಗೊಂಡಿದೆ ಎಂದು ಭಾವಿಸಲಾಗಿದೆ.

ವಿರಾಟ್ ಕೊಹ್ಲಿ ಅಬ್ಬರ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕಿಂಗ್ ಕೊಹ್ಲಿ, 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 83 ರನ್ ಗಳಿಸಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧವೂ ಅಬ್ಬರಿಸಿದ್ದ ಕೊಹ್ಲಿ ಈಗ ಸತತ ಎರಡನೇ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ, ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಆರೆಂಜ್ ಕ್ಯಾಪ್ ಪಡೆದಿದ್ದಾರೆ.