ಕನ್ನಡ ಸುದ್ದಿ  /  ಮನರಂಜನೆ  /  Lakshmi Nivasa Serial: ಪತಿಗಾಗಿ ಪಲಾವ್‌ ಮಾಡಿದ ಜಾನು; ಪಲಾವ್‌ ಬಿಟ್ಟು ಪಾತ್ರೆ ತೊಳೆಯೋ ಸಿಂಕ್‌ ನೋಡಿದ ಸ್ಯಾಡಿಸ್ಟ್‌ ಸೈಕೋ ಜಯಂತ್‌!

Lakshmi Nivasa Serial: ಪತಿಗಾಗಿ ಪಲಾವ್‌ ಮಾಡಿದ ಜಾನು; ಪಲಾವ್‌ ಬಿಟ್ಟು ಪಾತ್ರೆ ತೊಳೆಯೋ ಸಿಂಕ್‌ ನೋಡಿದ ಸ್ಯಾಡಿಸ್ಟ್‌ ಸೈಕೋ ಜಯಂತ್‌!

ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಹೊಸ ವಿಲನ್‌ ಎಂಟ್ರಿ ಆದ್ರಾ? ಜಾಹ್ನವಿ ಮದುವೆಯಾದ ಜಯಂತ್‌ ಅಂದುಕೊಂಡಂತಲ್ಲ ಎಂಬುದು ವೀಕ್ಷಕರಿಗೆ ಇದೀಗ ಅರ್ಥವಾಗುತ್ತಿದೆ. ಗಿಳಿ ಸಾಕಿ ಗಿಡುಗನ ಕೈಲಿ ಕೊಟ್ಟಂಗೆ ಆಯ್ತಲ್ಲ ಎಂಬ ಪ್ರತಿಕ್ರಿಯೆ ನೋಡುಗರಿಂದ ಬರುತ್ತಿದೆ.

Lakshmi Nivasa Serial: ಪತಿಗಾಗಿ ಪಲಾವ್‌ ಮಾಡಿದ ಜಾನು; ಪಲಾವ್‌ ಬಿಟ್ಟು ಪಾತ್ರೆ ತೊಳೆಯೋ ಸಿಂಕ್‌ ನೋಡಿದ ಸ್ಯಾಡಿಸ್ಟ್‌ ಸೈಕೋ ಜಯಂತ್‌!
Lakshmi Nivasa Serial: ಪತಿಗಾಗಿ ಪಲಾವ್‌ ಮಾಡಿದ ಜಾನು; ಪಲಾವ್‌ ಬಿಟ್ಟು ಪಾತ್ರೆ ತೊಳೆಯೋ ಸಿಂಕ್‌ ನೋಡಿದ ಸ್ಯಾಡಿಸ್ಟ್‌ ಸೈಕೋ ಜಯಂತ್‌!

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಈ ವರೆಗೂ ಆಗಿದ್ದು ಒಂದಾದರೆ, ಇನ್ಮೇಲೆ ಆಗುವುದು ಇನ್ನೊಂದು. ಯಾರೂ ನಿರೀಕ್ಷಿಸದ ಘಟನಾವಳಿಗೆ ಈ ಧಾರಾವಾಹಿ ಸಾಕ್ಷಿಯಾಗುತ್ತಿದೆ. ಸೀರಿಯಲ್ ಕಥೆ ಕಿರುತೆರೆ ವೀಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಈ ವರೆಗೂ ಜಯಂತನ ಗುಣಗಾನ ಮಾಡುತ್ತಿದ್ದ ವೀಕ್ಷಕ, ಇದೀಗ ಅದೇ ಜಯಂತನ ಮತ್ತೊಂದು ಮುಖವಾಡ ಕಳಚಿ ಬೀಳುತ್ತಿದೆ. ಮದುವೆಗೂ ಮುನ್ನ ಬಂಗಾರದಂಥ ಅಳಿಯ ಸಿಕ್ಕ ಎಂದು ಮನೆ ಮಂದಿಯೆಲ್ಲ ಆತನನ್ನು ಹೊಗಳಿ ಅಟ್ಟಕ್ಕೆ ಏರಿಸಿದ್ದೇ ಬಂತು, ಆದರೆ ಈಗ ಆತನ ಒಂದೊಂದೆ ನಿಜ ಗುಣಗಳು ಆಚೆ ಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಕೋಟ್ಯಧೀಶ, ಬೃಹತ್‌ ಬಂಗಲೆ, ಒಂಟಿ ಜೀವನ.. ಹೀಗೆ ಜೀವನ ಸಾಗಿಸೋ ಜಯಂತ್‌ ಬಾಳಿಗೆ ಬಂದ ಜಾನು ಕಥೆಯೀಗ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಮದುವೆ, ಗಂಡ, ದಾಂಪತ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಜಾಹ್ನವಿ, ತಾನು ಸೈಕೋಪಾತ್‌ನನ್ನು ಮದುವೆಯಾಗಿದ್ದೇನೆ ಎಂಬ ಸುಳಿವು ಇನ್ನೂ ಸಿಕ್ಕಿಲ್ಲ. ಆದರೆ, ವೀಕ್ಷಕನಿಗೆ ಮಾತ್ರ ಜಯಂತ್‌ನಲ್ಲಿನ ಸ್ಯಾಡಿಷ್‌ ಮೆಂಟಾಲಿಟಿ ಅರ್ಥವಾಗುತ್ತಿದೆ. ಮೊದಲ ರಾತ್ರಿಯಂದೇ ಜಾನುಗೆ ಕೀಟಲೆ ಕೊಟ್ಟ ಜಿರಳೆಯನ್ನು ಹಾಲಿಗೆ ಹಾಕಿ ಬೆರೆಸಿ ಕುಡಿದಿದ್ದ ಆತ, ಈಗ ಪತ್ನಿಯ ಮೇಲೆಯೇ ಹದ್ದಿನ ಕಣ್ಣಿಟ್ಟಿದ್ದಾನೆ.

ಆಫೀಸ್‌ನಿಂದಲೇ ಪತ್ನಿಯ ಚಲನ ವಲನ ವೀಕ್ಷಣೆ

ಮಗಳ ಮದುವೆಯನ್ನೇನೋ ಮನೆಯವರು ಅದ್ಧೂರಿಯಾಗಿ ಮಾಡಿಕೊಟ್ಟಿದ್ದಾರೆ. ಆದರೆ, ಅಳಿಯನ ಬಗ್ಗೆ, ಆತನ ಹಿನ್ನೆಲೆ ಬಗ್ಗೆ ಸಣ್ಣ ಅರಿವೂ ಮನೆಯವರಿಗಿಲ್ಲ. ಅಷ್ಟಕ್ಕೂ ಜಯಂತ್‌ಗೆ ತನ್ನವರು ಅಂತ ಯಾರೂ ಇಲ್ಲ. ಒಂಟಿಯಾಗಿಯೇ ಬದುಕುತ್ತಿದ್ದಾರೆ. ಈ ನಡುವೆ ಶುಕ್ರವಾರದ ಏಪಿಸೋಡ್‌ನಲ್ಲಿ ಜಾನು ಕಲ್ಯಾಣ ಮಂಟಪದಂಥ ಬೃಹತ್‌ ಮನೆಯಲ್ಲಿ ಒಂಟಿ. ಕೆಲಸದವರೂ ಅಲ್ಲಿಲ್ಲ. ಸಿಕ್ಕಿದ್ದೇ ಚಾನ್ಸು ಅಂತ ಮನೆಯವರಿಗೆ ಫೋನ್‌ ಮಾಡಿ ಮಾತನಾಡಿದ್ದಾಳೆ. ಪತ್ನಿಯ ಚಲನವಲನಗಳನ್ನು ಆಫೀಸ್‌ನಿಂದಲೇ ಕುಳಿತು ವೀಕ್ಷಿಸಿದ್ದಾನೆ ಜಯಂತ್.‌

ಪತಿಗೆ ಸರ್ಪ್ರೈಸ್‌ ಕೊಡಲು ಜಾನು ಸಿದ್ಧತೆ

ಜಯಂತ್‌ನ ಮನೆ ಬರೀ ಮನೆಯಲ್ಲ ಅದೊಂದು ಕೋಟೆ. ಮನೆಯ ಬಾಗಿಲು ತೆಗೆಯಬೇಕೆಂದರೆ ಅದಕ್ಕೆ ಜಯಂತ್ ಪಾಸ್‌ವರ್ಡ್‌ ಹಾಕಬೇಕು. ಇಡೀ ಮನೆತುಂಬ ಸಿಸಿಟಿವಿ ಅಳವಡಿಸಿದ್ದರೂ, ಅದೆಲ್ಲಿ ಇದೆ ಎಂದೂ ಯಾರಿಗೂ ತಿಳಿದಿಲ್ಲ. ಅಷ್ಟೊಂದು ರಹಸ್ಯವನ್ನು ತನ್ನೊಳಗಿರಿಸಿಕೊಂಡಿದ್ದಾನೆ. ಹೀಗಿರುವಾಗ, ಜಾನು ಮನೆಯವರಿಗೆ ಫೋನ್‌ ಮಾಡಿದ್ದಾಳೆ. ಇದನ್ನು ನೋಡಿ ಅನುಮಾನಗೊಂಡ ಜಯಂತ್‌, ಪತ್ನಿಗೆ ಕರೆ ಮಾಡಿ ಎಲ್ಲವನ್ನೂ ಕೇಳಿದ್ದಾನೆ. ಫೋನ್‌ ಇಡುವಾಗ, ಆದಷ್ಟು ಬೇಗ ಬನ್ನಿ ನಿಮಗೊಂದು ಸರ್ಪ್ರೈಸ್‌ ಇದೆ ಎಂದಿದ್ದಾಳೆ.

ಸಿಂಕ್‌ ಮೇಲೆ ಬಿತ್ತು ಜಯಂತನ ಕಣ್ಣು

ಮೊದಲೇ ಅನುಮಾನದ ಗಿರಾಕಿ, ಇದೀಗ ಸರ್ಪ್ರೈಸ್‌ ಅಂದಮೇಲೆ ಮತ್ತಷ್ಟು ಕುತೂಹಲ ಮೂಡಿದೆ ಜಯಂತ್‌ಗೆ. ಏನಿರಬಹುದೆಂದು ಎಂದು ಮನೆಗೆ ಬಂದಿದ್ದಾನೆ. ಚೆಂದವಾಗಿ ರೆಡಿಯಾಗಿದ್ದ ಜಾಹ್ನವಿಯನ್ನು ಕಂಡು ಖುಷಿಯಾಗಿದ್ದಾನೆ.‌ ಅಷ್ಟೇ ಅಲ್ಲ ಪತಿಯ ಕಣ್ಣು ಮುಚ್ಚಿ ಆತನನ್ನು ಡೈನಿಂಗ್‌ ಟೇಬಲ್‌ ಬಳಿ ಕರೆತಂದಿದ್ದಾಳೆ ಜಾನು. ಇನ್ನೇನು ತಟ್ಟೆಗೆ ಪ್ರೀತಿಯಿಂದ ಮಾಡಿದ ಪಲಾವ್‌ ಬಡಿಸಬೇಕು ಎನ್ನುವಷ್ಟರಲ್ಲಿ, ಊಟದ ತಟ್ಟೆ ಬಿಟ್ಟು, ಪಾತ್ರೆ ಕ್ಲೀನ್‌ ಮಾಡೋ ಸಿಂಕ್‌ ಕಡೆ ಜಯಂತನ ದೃಷ್ಟಿ ನೆಟ್ಟಿದೆ. ಅಲ್ಲಿಗೆ ಏಪಿಸೋಡ್ ಮುಕ್ತಾಯವಾಗಿದೆ.

ಹಾಗಾದರೆ, ಈ ವರೆಗೂ ಜಾಹ್ನವಿ ಮುಂದೆ ಮರೆಮಾಚಿದ್ದ ತನ್ನ ಇನ್ನೊಂದು ಸ್ಯಾಡಿಸ್ಟ್‌ ಮುಖವನ್ನು ಜಯಂತ್‌ ಅನಾವರಣ ಮಾಡ್ತಾನಾ? ಆತನ ವರ್ತನೆಯ ಹಿಂದಿನ ಕಾರಣವನ್ನು ಪತ್ನಿ ಮುಂದೆ ಹೇಳಿಕೊಳ್ಳುತ್ತಾನಾ? ಇದೆಲ್ಲದಕ್ಕೂ ಸೋಮವಾರದ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಸದ್ಯಕ್ಕೆ ಇದೆಲ್ಲವನ್ನು ಕಾದು ನೋಡಬೇಕು.

ಟಿ20 ವರ್ಲ್ಡ್‌ಕಪ್ 2024