IPL Final 2024: ಚೆನ್ನೈನಲ್ಲಿಂದು ಕೆಕೆಆರ್ vs ಎಸ್‌ಆರ್‌ಎಚ್ ಐಪಿಎಲ್ ಫೈನಲ್ ಫೈಟ್; ಯಾರ ಮುಡಿಗೆ ಕಿರೀಟ
May 26, 2024 03:48 PM IST
ಚೆನ್ನೈನಲ್ಲಿಂದು ಕೆಕೆಆರ್ vs ಎಸ್‌ಆರ್‌ಎಚ್ ಐಪಿಎಲ್ ಫೈನಲ್ ಫೈಟ್ ನಡೆಯಲಿದೆ. ಯಾರ ಮುಡಿಗೆ ಕಿರೀಟ ಅನ್ನೋದರ ಕುತೂಹಲ.
- 17ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಚೆನ್ನೈನಲ್ಲಿ ಮೇ 26ರ ಭಾನುವಾರ ರಾತ್ರಿ 7.30ಕ್ಕೆ ಆರಂಭವಾಗಿದೆ.
ಚೆನ್ನೈ (ತಮಿಳುನಾಡು): ಕಡಲ ನಗರಿ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂ 17ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯಕ್ಕೆ (IPL Final 2024) ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಪ್ರಶಸ್ತಿಗಾಗಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಹಣಾಹಣಿ (KKR vs SRH IPL Final) ನಡೆಸಲಿವೆ. ಈ ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇಂದು (ಮೇ 26, ಭಾನುವಾರ) ರಾತ್ರಿ 7.30ಕ್ಕೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಅನ್ನೋ ಕುತೂಹಲ ಹೆಚ್ಚಾಗುತ್ತಲೇ ಇದೆ. ಕೆಕೆಆರ್ ಗೆಲ್ಲೋದು ಪಕ್ಕಾ ಅಂತ ಒಂದಷ್ಟು ಮಂದಿ ಹೇಳಿದ್ರೆ, ಇಲ್ಲ ಎಸ್‌ಆರ್‌ಎಚ್ ಈ ಬಾರಿಯ ಐಪಿಎಲ್ ಮುಡಿಗೇರಿಸಿಕೊಳ್ಳುತ್ತೆ ಅಂತ ಕೆಲವರು ಭವಿಷ್ಯ ನುಡಿಯುತ್ತಿದ್ದಾರೆ.
ಎರಡು ತಿಂಗಳುಗಿಂತ ಹೆಚ್ಚು ದಿನಗಳ ಕಾಲ ನಡೆದ ಐಪಿಎಲ್ ಟೂರ್ನಿ ಕೊನೆಯ ಹಂತಕ್ಕೆ ಬಂದಿದ್ದು, ಇವತ್ತಿನ ಫೈನಲ್ ಪಂದ್ಯವನ್ನು ಆಡುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಲೀಗ್ ಹಂತದ 14 ಪಂದ್ಯಗಳ ಪೈಕಿ 9 ಗೆಲುವು ಹಾಗೂ 3 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ತಲುಪಿತ್ತು. ಅಹಮಾದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರೆಂಜ್ ಆರ್ಮಿಯನ್ನು 8 ವಿಕೆಟ್‌ಗಳಿಂದ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ.
ಲೀಗ್ ಹಂತದ ಬಳಿಕ ಅಗ್ರ 2ನೇ ಸ್ಥಾನವನ್ನು ಪಡೆದಿದ್ದ ಸನ್‌ರೈಸರ್ಸ್ ಹೈದಾರಾಬಾದ್ ತಂಡ ಕೆಕೆಆರ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಚೆನ್ನೈನಲ್ಲಿ ಮೇ 24 ರಂದು ನಡೆದ ಎರಡನೇ ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 36 ರನ್‌ಗಳಿಂದ ಗೆದ್ದು ಮತ್ತೆ ಫೈನಲ್‌ಗೆ ಬಂದಿದೆ.
ಗೂಗಲ್ ಪ್ರಿಡಿಕ್ಷನ್‌ನಲ್ಲಿ ಯಾವ ತಂಡಕ್ಕೆ ಗೆಲ್ಲುವ ಚಾನ್ಸ್ ಇದೆ?
ಉಭಯ ತಂಡಗಳು ಈವೆರೆಗೆ 27 ಬಾರಿ ಮುಖಾಮುಖಿಯಾಗಿದ್ದು, 18 ಪಂದ್ಯಗಳನ್ನು ಕೋಲ್ಕತ್ತ ನೈಟ್ ರೈಡರ್ಸ್ ಗೆದ್ದುಕೊಂಡಿದ್ದರೆ, 9 ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಜಯ ಸಾಧಿಸಿದೆ. ಇಂದು (ಮೇ 26, ಭಾನುವಾರ) ಚೆನ್ನೈನ ಪಿ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತೆ ಎಂಬುದರ ಬಗ್ಗೆ ಗೂಗಲ್ ಪ್ರಿಡಿಕ್ಷನ್‌ನಲ್ಲಿ ಕೆಕೆಆರ್ ಗೆಲ್ಲುವ ಸಾಧ್ಯತೆ ಶೇಕಡಾ 53 ರಷ್ಟು ಇದ್ದರೆ, ಸನ್‌ರೈಸರ್ಸ್ ಹೈದರಾಬಾದ್ ಗೆಲ್ಲುವ ಚಾನ್ಸ್ ಶೇಕಡಾ 47 ರಷ್ಟಿದೆ.
ಚೆನ್ನೈ ಪಿಚ್ ಬ್ಯಾಟರ್‌ಗಳಿಗೆ ನೆರವಾಗುವ ಸಾಧ್ಯತೆ ಇದೆ. ಹೀಗಾಗಿ ದೊಡ್ಡ ಮೊತ್ತವನ್ನು ನಿರೀಕ್ಷಿಸಲಾಗಿದೆ. ಅಂತಿಮವಾಗಿ ಪಂದ್ಯದ ಬಳಿಕ 17ನೇ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ಯಾರು ಎತ್ತಿಹಿಡಿಯಲಿದ್ದಾರೆ ಅನ್ನೋದು ಗೊತ್ತಾಗಲಿದೆ. ಇನ್ನ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನು ಇತ್ತಂಡಗಳ ನಾಯಕರು ಚೆನ್ನೈನ ಮರೀನಾ ಬೀಚ್‌ನಲ್ಲಿ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)