logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲಿನಂತೆ ಆದ್ಯತೆ ನೀಡುವುದನ್ನು ನಿಲ್ಲಿಸಿ; ಹಾರ್ದಿಕ್ ಪಾಂಡ್ಯ ವಿರುದ್ಧ ಇರ್ಫಾನ್ ಪಠಾಣ್ ವಾಗ್ದಾಳಿ

ಮೊದಲಿನಂತೆ ಆದ್ಯತೆ ನೀಡುವುದನ್ನು ನಿಲ್ಲಿಸಿ; ಹಾರ್ದಿಕ್ ಪಾಂಡ್ಯ ವಿರುದ್ಧ ಇರ್ಫಾನ್ ಪಠಾಣ್ ವಾಗ್ದಾಳಿ

Prasanna Kumar P N HT Kannada

Apr 27, 2024 06:58 PM IST

ಹಾರ್ದಿಕ್ ಪಾಂಡ್ಯ ವಿರುದ್ಧ ಇರ್ಫಾನ್ ಪಠಾಣ್ ವಾಗ್ದಾಳಿ

    • Irfan Pathan on Hardik Pandya : ಹಾರ್ದಿಕ್ ಪಾಂಡ್ಯ ಅವರಿಗೆ ಈ ಹಿಂದೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಭಾರತೀಯ ಕ್ರಿಕೆಟ್ ಇನ್ಮುಂದೆ ನಿಲ್ಲಿಸಬೇಕು ಎಂದು ಇರ್ಫಾನ್ ಪಠಾಣ್, ಬಿಸಿಸಿಐಗೆ ಒತ್ತಾಯಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ವಿರುದ್ಧ ಇರ್ಫಾನ್ ಪಠಾಣ್ ವಾಗ್ದಾಳಿ
ಹಾರ್ದಿಕ್ ಪಾಂಡ್ಯ ವಿರುದ್ಧ ಇರ್ಫಾನ್ ಪಠಾಣ್ ವಾಗ್ದಾಳಿ

ಭಾರತದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಇರ್ಫಾನ್ ಪಠಾಣ್ (Irfan Pathan) ಟೀಕಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆತನಿಗೆ ನೀಡುತ್ತಿರುವ ಹೆಚ್ಚಿನ ಆದ್ಯತೆಯನ್ನು ನಿಲ್ಲಿಸುವಂತೆ ಬಿಸಿಸಿಐಗೆ (BCCI) ಒತ್ತಾಯಿಸಿದ್ದಾರೆ. ಹಾರ್ದಿಕ್ ಬಗ್ಗೆ ತಮ್ಮ ಅಭಿಪ್ರಾಯದ ಬಗ್ಗೆ ಕಿಡಿಕಾರಿರುವ ಪಠಾಣ್, ಇತ್ತೀಚಿಗೆ ಮುಂಬೈ ಇಂಡಿಯನ್ಸ್ (Mumbai Indians) ನಾಯಕ ಭಾರತ ತಂಡದ ಪರ ಕಳಪೆ ಪ್ರದರ್ಶನ ನೀಡಿರುವುದರ ಕುರಿತು ಒತ್ತಿಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್ ಮಾಡದೆ ಮೈದಾನ ತೊರೆದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ

ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

ಬಾಂಗ್ಲಾದೇಶ ವಿರುದ್ಧದ 2023ರ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ ಹಾರ್ದಿಕ್, ಪಾದದ ಗಾಯದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು. ಜನವರಿಯಲ್ಲಿ ಫಿಟ್ನೆಸ್ ಉಳಿಸಿಕೊಂಡಿದ್ದರೂ ಅವರು ಹಿಂತಿರುಗಲಿಲ್ಲ. ಅಫ್ಘಾನಿಸ್ತಾನ್ ಸರಣಿಯಲ್ಲಿ ಆಡಲು ಹಿಂದೇಟು ಹಾಕಿದ ಹಾರ್ದಿಕ್, ನೇರವಾಗಿ ಐಪಿಎಲ್​ನಲ್ಲಿ ಕಣಕ್ಕಿಳಿದರು.

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಐಪಿಎಲ್​ಗೆ ಮರಳುವುದಕ್ಕೂ ಮುನ್ನ ಹಾರ್ದಿಕ್, ಡಿವೈ ಪಾಟೀಲ್​ನಲ್ಲಿ ನಡೆದ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದರು. ಆದರೆ ಪಾಂಡ್ಯ ಪ್ರದರ್ಶನವನ್ನು ಪಠಾಣ್ ಟೀಕಿಸಿದ್ದಾರೆ. 'ಹಾರ್ದಿಕ್ ಬಗ್ಗೆ ನನ್ನ ಅನಿಸಿಕೆ ಏನೆಂದರೆ, ಇಲ್ಲಿಯವರೆಗೆ ಆತನಿಗೆ ನೀಡಿದಷ್ಟು ಆದ್ಯತೆಯನ್ನು ಇನ್ಮುಂದೆ ನೀಡಬಾರದು ಎಂದು ಸ್ಪಷ್ಟಪಡಿಸಬೇಕು ಎಂದು ಬಿಸಿಸಿಐಗೆ ತಿಳಿಸಿದ್ದಾರೆ.

ನಾವು ಇನ್ನೂ ವಿಶ್ವಕಪ್ ಗೆದ್ದಿಲ್ಲ. ಆತನನ್ನು ಪ್ರಾಥಮಿಕ ಆಲ್​​ರೌಂಡರ್ ಎಂದು ಭಾವಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತ ಆ ರೀತಿಯ ಪ್ರಭಾವ ಬೀರಬೇಕು. ಅದರೆ ಆಲ್​​ರೌಂಡರ್​​ಗೆ ಸಂಬಂಧಿಸಿದಂತೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಪ್ರಭಾವ ಬೀರಿಲ್ಲ. ನಾವು ಸಾಮರ್ಥ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ. ಐಪಿಎಲ್ ಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ಪ್ರದರ್ಶನಗಳ ನಡುವೆ ಗೊಂದಲಕ್ಕೆ ಒಳಗಾಗುತ್ತಿದ್ದೇವೆ. ಅದೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಹಾರ್ದಿಕ್ ಆಯ್ಕೆಯನ್ನು ನಿಲ್ಲಿಸಬೇಕು ಎಂದು ಪಠಾಣ್

ಹಾರ್ದಿಕ್ ಅವರ ವೃತ್ತಿಜೀವನದಲ್ಲಿ ಗಾಯಗಳು ಕಠಿಣ ಪಾತ್ರವನ್ನು ವಹಿಸಿವೆ. ಭಾರತದ ಆಲ್​​ರೌಂಡರ್​ ಅನಧಿಕೃತವಾಗಿ ಟೆಸ್ಟ್​​ನಿಂದ ನಿವೃತ್ತರಾಗಲು ಇದು ಒಂದು ಕಾರಣವಾಗಿದೆ. ಅವರ ದೇಹವು ಎಲ್ಲಾ ಮೂರು ಸ್ವರೂಪಗಳ ಕಠಿಣತೆಯನ್ನು ನಿಭಾಯಿಸಲು ಸಾಧ್ಯವಿಲ್ಲ. 2022ರ ಆರಂಭದಲ್ಲಿ ಗಾಯದಿಂದ ಚೇತರಿಸಿಕೊಂಡಾಗಿನಿಂದ ಹಾರ್ದಿಕ್ ಪೂರ್ಣ ಪ್ರಮಾಣದ ಬೌಲಿಂಗ್ ಮಾಡುತ್ತಿದ್ದರು, ಆಗಾಗ್ಗೆ ಗಂಟೆಗೆ 130 ಮತ್ತು 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಇದು ತಂಡದ 6ನೇ ಬೌಲಿಂಗ್ ಆಯ್ಕೆಯಾಗಲು ಸಾಧ್ಯವಾಯಿತು.

ಆದರೆ, ಅದಕ್ಕಿಂತ ಮುಖ್ಯವಾಗಿ ಆತನನ್ನು ಸರಣಿ ಮತ್ತು ಟೂರ್ನಿಗಳಿಗೆ ಆಯ್ಕೆ ಮಾಡುವ ಸ್ವಾತಂತ್ರ್ಯದಿಂದ ಪಾಂಡ್ಯ ಮುಕ್ತರಾಗಬೇಕೆಂದು ಪಠಾಣ್ ಬಯಸಿದ್ದಾರೆ. ಐಪಿಎಲ್ ಪ್ರಾರಂಭಕ್ಕೂ ಮೊದಲು ಬಿಸಿಸಿಐ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರ ವಾರ್ಷಿಕ ಒಪ್ಪಂದಗಳನ್ನು ಕೊನೆಗೊಳಿಸಿದಾಗ ಹಾರ್ದಿಕ್, ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಇಲ್ಲದಿರುವ ವೇಳೆ ದೇಶೀಯ ಕ್ರಿಕೆಟ್ ಆಡುವುದಾಗಿ ಭರವಸೆ ನೀಡಿದ ಕಾರಣ ಇನ್ನೂ ಗುತ್ತಿಗೆ ಪಟ್ಟಿಯಲ್ಲಿದ್ದಾರೆ. ಯಶಸ್ವಿ ತಂಡವು ಅನೇಕ ಕೊಡುಗೆದಾರರನ್ನು ಒಳಗೊಂಡಿರುತ್ತದೆ ಮತ್ತು ಒಬ್ಬರಲ್ಲ ಎಂದು ಪಠಾಣ್ ಒತ್ತಿ ಹೇಳಿದ್ದಾರೆ. ಇದು ಆಸ್ಟ್ರೇಲಿಯಾ ಸಾಧಿಸಿದ ಯಶಸ್ಸಿಗೆ ಲಿಂಕ್ ಮಾಡುತ್ತದೆ.

ಆಸ್ಟ್ರೇಲಿಯಾ ನೋಡಿ ಕಲಿಯಿರಿ ಎಂದ ಇರ್ಫಾನ್

ಬಿಸಿಸಿಐ ಆತನನ್ನು ಆಯ್ಕೆ ಮಾಡುವುದನ್ನು ನಿಲ್ಲಿಸಬೇಕು. ವ್ಯಕ್ತಿಗಳಿಗೆ ಆದ್ಯತೆ ನೀಡುವುದನ್ನು ನಿಲ್ಲಿಸಿ. ನೀವು ಅದನ್ನು ಮಾಡಿದರೆ, ಪ್ರಮುಖ ಟೂರ್ನಿಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಆಸ್ಟ್ರೇಲಿಯಾ ಅನೇಕ ವರ್ಷಗಳಿಂದ ಏನು ಮಾಡುತ್ತಿದೆ ಎಂಬುದನ್ನು ಒಮ್ಮೆ ಗಮನಿಸಿ. ಆಸಸ್ ತಂಡದ ಆಟಕ್ಕೆ ಆದ್ಯತೆ ನೀಡುತ್ತದೆ. ಎಲ್ಲರನ್ನೂ ಸೂಪರ್ ಸ್ಟಾರ್ ಗಳನ್ನಾಗಿ ಮಾಡುತ್ತದೆ. ತಂಡದಲ್ಲಿ ಒಬ್ಬ ಸೂಪರ್ ಸ್ಟಾರ್ ಅಲ್ಲ, ಎಲ್ಲರೂ ಸೂಪರ್ ಸ್ಟಾರ್. ನೀವು ಅದನ್ನು ಮಾಡದಿದ್ದರೆ, ನೀವು ದೊಡ್ಡ ಪಂದ್ಯಾವಳಿಗಳನ್ನು ಗೆಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ