ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ, ಪಾಕಿಸ್ತಾನ ಮತ್ತು ..; ಟಿ20 ವಿಶ್ವಕಪ್​ನಲ್ಲಿ ಸೆಮೀಸ್​​​ಗೇರುವ 4 ತಂಡಗಳನ್ನು ಆರಿಸಿದ ಯುವರಾಜ್ ಸಿಂಗ್

ಭಾರತ, ಪಾಕಿಸ್ತಾನ ಮತ್ತು ..; ಟಿ20 ವಿಶ್ವಕಪ್​ನಲ್ಲಿ ಸೆಮೀಸ್​​​ಗೇರುವ 4 ತಂಡಗಳನ್ನು ಆರಿಸಿದ ಯುವರಾಜ್ ಸಿಂಗ್

Yuvraj Singh : 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ನಾಲ್ಕು ತಂಡಗಳನ್ನು ಯುವರಾಜ್ ಸಿಂಗ್ ಹೆಸರಿಸಿದ್ದಾರೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ನಾಲ್ಕರ ಘಟ್ಟಕ್ಕೆ ತಲುಪಲಿವೆ ಎಂದಿದ್ದಾರೆ.

ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ...; ಟಿ20 ವಿಶ್ವಕಪ್​ನಲ್ಲಿ ಸೆಮೀಸ್​​​ಗೇರುವ 4 ತಂಡಗಳನ್ನು ಆರಿಸಿದ ಯುವರಾಜ್ ಸಿಂಗ್
ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ...; ಟಿ20 ವಿಶ್ವಕಪ್​ನಲ್ಲಿ ಸೆಮೀಸ್​​​ಗೇರುವ 4 ತಂಡಗಳನ್ನು ಆರಿಸಿದ ಯುವರಾಜ್ ಸಿಂಗ್

2007ರಲ್ಲಿ ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಪ್ರಶಸ್ತಿ (T20 World Cup 2024) ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಗ್ಗಜ ಆಲ್​ರೌಂಡರ್ ಯುವರಾಜ್ ಸಿಂಗ್ (Yuvraj Singh), ಮುಂಬರುವ 2024ರ ಟಿ20 ವಿಶ್ವಕಪ್​​​ನಲ್ಲಿ ಸೆಮಿಫೈನಲ್ ಪ್ರವೇಶಿಸುವ ತಮ್ಮ ನೆಚ್ಚಿನ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಜೂನ್ 1ರಿಂದ ಶುರುವಾಗುವ ಮಿನಿ ಸಮರ ಜೂನ್ 29ರ ತನಕ ನಡೆಯಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್​​ಎ ಜಂಟಿ ಆತಿಥ್ಯದಲ್ಲಿ ಈ ಮೆಗಾ ಟೂರ್ನಿ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

20 ತಂಡಗಳು ನಡುವಿನ ಸೆಣಸಾಟದಲ್ಲಿ ಅಂತಿಮ ನಾಲ್ಕು ಸ್ಥಾನ ಪಡೆಯುವ ತಂಡಗಳು ಯಾವುವು ಎಂದು 42 ವರ್ಷದ ಮಾಜಿ ಎಡಗೈ ಬ್ಯಾಟರ್ ಯುವಿ, ಪ್ರಿಡಿಕ್ಟ್ ಮಾಡಿದ್ದಾರೆ. ಐಸಿಸಿಯ ಅಧಿಕೃತ ಇನ್​ಸ್ಟಾಗ್ರಾಂ ಹ್ಯಾಂಡಲ್ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸುವ 4 ತಂಡಗಳನ್ನು ಆಯ್ಕೆ ಮಾಡಲು ಯುವರಾಜ್ ಅವರನ್ನು ಕೇಳಲಾಯಿತು.

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ

ಇದಕ್ಕೆ ಉತ್ತರಿಸಿದ ಯುವಿ, 'ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ತಂಡಗಳು ಈ ಬಾರಿಯ ವಿಶ್ವಕಪ್​​ನಲ್ಲಿ ಸೆಮೀಸ್​ಗೇರಲಿವೆ' ಎಂದು ಭವಿಷ್ಯ ನುಡಿದಿದ್ದಾರೆ. 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಬುಮ್ರಾ, ನವೆಂಬರ್ 10 ರಂದು ಸಿಡ್ನಿಯಲ್ಲಿ ನಡೆದ 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಅವಮಾನಕರ ಸೋಲನ್ನು ಅನುಭವಿಸಿತ್ತು. ಆಸ್ಟ್ರೇಲಿಯಾದಲ್ಲಿ ನಡೆದ ಈ ವಿಶ್ವಕಪ್‌ ಫೈನಲ್​ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ 5 ವಿಕೆಟ್​ಗಳಿಂದ ಗೆದ್ದಿತ್ತು.

ಟಾಪ್ 4 ತಂಡಗಳಿಗೆ ತನ್ನ ಆಯ್ಕೆಯಲ್ಲಿ ಯುವರಾಜ್ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನೇ ಕೈಬಿಟ್ಟಿದ್ದಾರೆ. ಈ ಹಿಂದೆ ಎರಡು ಬಾರಿ ಟಿ20 ವಿಶ್ವಕಪ್​ ಗೆದ್ದಿದೆ. ಈಗ ವಿಂಡೀಸ್​ ತನ್ನ ತವರಿನಲ್ಲೇ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಲ್ಲದೆ, 2021, 2016 ಮತ್ತು 2022ರಲ್ಲಿ ಸೆಮೀಸ್​ಗೇರಿದ್ದ ನ್ಯೂಜಿಲೆಂಡ್ ತಂಡವನ್ನೂ ಅವರು ಕೈಬಿಟ್ಟಿದ್ದಾರೆ. ಆದರೆ ಕಿವೀಸ್ ಇನ್ನೂ ಒಂದು ಪ್ರಶಸ್ತಿಯನ್ನೂ ಗೆದ್ದಿಲ್ಲ.

ಸೂರ್ಯಕುಮಾರ್ ಪ್ರಮುಖ ಆಟಗಾರ ಎಂದ ಯುವಿ

ಟಿ20 ವಿಶ್ವಕಪ್​ನಲ್ಲಿ ಭಾರತದ ಪರ ಅಬ್ಬರಿಸುವ ಆಟಗಾರನನ್ನೂ ಯುವರಾಜ್ ಸಿಂಗ್ ಹೆಸರಿಸಿದ್ದಾರೆ.​ ವಿಶ್ವದ ನಂ. 1 ಟಿ20ಐ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೆನ್ ಇನ್ ಬ್ಲೂಗೆ ಪ್ರಮುಖ ಆಟಗಾರನಾಗಲಿದ್ದಾರೆ ಎಂದು ಹೇಳಿದ್ದಾರೆ. 'ಸೂರ್ಯಕುಮಾರ್ (ಭಾರತದ ಪ್ರಮುಖ ಆಟಗಾರ). ಅವರು ಆಡುವ ರೀತಿ, ಅವರು 15 ಎಸೆತಗಳಲ್ಲಿ ಆಟದ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ಇದೆ. ಭಾರತ ಈ ಟಿ20 ವಿಶ್ವಕಪ್ ಗೆಲ್ಲಲು, ಸೂರ್ಯ ಪ್ರಮುಖನಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

2021 ಮತ್ತು 2022ರ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ಸೂರ್ಯ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಸೂರ್ಯ 2022ರಲ್ಲಿ ಮೂರನೇ ಪ್ರಮುಖ ರನ್ ಸ್ಕೋರರ್ ಆಗಿ ಟೂರ್ನಿಯನ್ನು ಮುಗಿಸಿದ್ದರು. 6 ಪಂದ್ಯಗಳಲ್ಲಿ ಒಟ್ಟು 239 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 6 ಪಂದ್ಯಗಳಲ್ಲಿ 296 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರು.

ವರ್ಷಅತಿಥೇಯ ದೇಶವಿಜೇತ (ಟಿ20 ವಿಶ್ವಕಪ್)
2007ದಕ್ಷಿಣ ಆಫ್ರಿಕಾಭಾರತ
2009ಇಂಗ್ಲೆಂಡ್ಪಾಕಿಸ್ತಾನ
2010ವೆಸ್ಟ್ ಇಂಡೀಸ್ಇಂಗ್ಲೆಂಡ್
2012ಶ್ರೀಲಂಕಾವೆಸ್ಟ್ ಇಂಡೀಸ್
2014ಬಾಂಗ್ಲಾದೇಶಶ್ರೀಲಂಕಾ
2016ಭಾರತವೆಸ್ಟ್ ಇಂಡೀಸ್
2021ಯುಎಇ/ಒಮನ್ಆಸ್ಟ್ರೇಲಿಯಾ
2022ಆಸ್ಟ್ರೇಲಿಯಾಇಂಗ್ಲೆಂಡ್

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point