100ನೇ ಪಂದ್ಯದಲ್ಲಿ ಕಣಕ್ಕಿಳಿದು ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್; ಈ ಸಾಧನೆ ಮಾಡಿದ ಮೊದಲ ಭಾರತೀಯ
Apr 25, 2024 07:27 AM IST
100ನೇ ಪಂದ್ಯದಲ್ಲಿ ಕಣಕ್ಕಿಳಿದು ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- Shubman Gill: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಮತ್ತೊಂದು ಐಪಿಎಲ್ ಮೈಲಿಗಲ್ಲನ್ನು ಸಾಧಿಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದ್ದಾರೆ.
ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ (Shubman Gill) ಅವರು ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 40ನೇ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸುವ ಮೂಲಕ ವಿರಾಟ್ ಕೊಹ್ಲಿ (Virat Kohli) ದಾಖಲೆಯನ್ನು ಮುರಿದಿದ್ದಾರೆ. ಮಾಜಿ ಚಾಂಪಿಯನ್ ತನ್ನ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿದ ನಂತರ ರಾಷ್ಟ್ರ ರಾಜಧಾನಿಗೆ ಆಗಮಿಸಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಿತು. ಹಾರ್ದಿಕ್ ಅವರು ಮುಂಬೈ ಇಂಡಿಯನ್ಸ್ ನಾಯಕನಾದ ನಂತರ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಜಿಟಿ ಕ್ಯಾಪ್ಟನ್ ಆದ ಶುಭ್ಮನ್ ಈಗ ಐಪಿಎಲ್ನಲ್ಲಿ ನೂರು ಪಂದ್ಯಗಳನ್ನು ಪೂರೈಸಿದ್ದಾರೆ.
ಐಪಿಎಲ್ನ 40ನೇ ಪಂದ್ಯದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಗಿಲ್ ಈ ದಾಖಲೆ ಬರೆದರು. ಗಿಲ್ (24 ವರ್ಷ 229 ದಿನಗಳು) ವಿಶ್ವದ ಶ್ರೀಮಂತ ಟಿ20 ಲೀಗ್ನಲ್ಲಿ 100 ಪಂದ್ಯಗಳನ್ನು ಪೂರ್ಣಗೊಳಿಸಿದ ಐಪಿಎಲ್ನ 2ನೇ ಕಿರಿಯ ಮತ್ತು ವೇಗದ ಭಾರತೀಯ ಎನಿಸಿದ್ದಾರೆ. 24ನೇ ವಯಸ್ಸಿನಲ್ಲಿ ಗಿಲ್, ಕೊಹ್ಲಿಯನ್ನು ಹಿಂದಿಕ್ಕಿ 100 ಐಪಿಎಲ್ ಪಂದ್ಯಗಳನ್ನು ಆಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ನಂತರದ ಸ್ಥಾನಗಳಲ್ಲಿ ಸ್ಯಾಮ್ಸನ್ (25) ಮತ್ತು ಪಿಯೂಷ್ ಚಾವ್ಲಾ (26) ಇದ್ದಾರೆ.
ಐಪಿಎಲ್ನಲ್ಲಿ 100 ಪಂದ್ಯಗಳನ್ನು ಆಡಿದ ಅತ್ಯಂತ ಕಿರಿಯ ಆಟಗಾರ
1) ರಶೀದ್ ಖಾನ್ (24 ವರ್ಷ, 221 ದಿನ)
2) ಶುಭ್ಮನ್ ಗಿಲ್ (24 ವರ್ಷ, 229 ದಿನ)
3) ವಿರಾಟ್ ಕೊಹ್ಲಿ (25 ವರ್ಷ, 182 ದಿನ)
4) ಸಂಜು ಸ್ಯಾಮ್ಸನ್ (25 ವರ್ಷ, 335 ದಿನ)
5) ಪಿಯೂಷ್ ಚಾವ್ಲಾ (26 ವರ್ಷ, 108 ದಿನ)
ಐಪಿಎಲ್ 2022ಕ್ಕೆ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಬಿಡುಗಡೆಯಾದ ಗಿಲ್, ಗುಜರಾತ್ ಟೈಟಾನ್ಸ್ ಚೊಚ್ಚಲ ಋತುವಿಗೆ ಸಹಿ ಹಾಕಿತು. ಭಾರತೀಯ ಬ್ಯಾಟ್ಸ್ಮನ್ 2022ರ ಋತುವಿನಲ್ಲಿ ಜಿಟಿ ತಂಡದ ಪರ ಆಡಿದರು. 2022ರಲ್ಲಿ ಗಿಲ್ ಗುಜರಾತ್ ಮೂಲದ ಫ್ರಾಂಚೈಸಿಗಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರ ಹೊಮ್ಮಿದರು. ಗಿಲ್ 16 ಪಂದ್ಯಗಳಲ್ಲಿ 34.50 ಸರಾಸರಿ ಮತ್ತು 132.33 ಸ್ಟ್ರೈಕ್ರೇಟ್ನಲ್ಲಿ 483 ರನ್ ಗಳಿಸಿದ್ದಾರೆ. ಗಿಲ್ ನಾಲ್ಕು ಅರ್ಧಶತಕ ಗಳಿಸಿದರು. 2022ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 96 ರನ್ ಗಳಿಸಿದ್ದರು.
2023ರ ಋತುವಿನಲ್ಲಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಗಿಲ್, ಕಳೆದ ವರ್ಷ ಐಪಿಎಲ್ನಲ್ಲಿ ತಮ್ಮ ಮೊದಲ ಆರೆಂಜ್ ಕ್ಯಾಪ್ ಗೆದ್ದರು. ಕಳೆದ ಅದ್ಭುತ ಪ್ರದರ್ಶನ ನೀಡಿದ್ದ ಗಿಲ್, 17 ಪಂದ್ಯಗಳಲ್ಲಿ 59.33ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ, 4 ಅರ್ಧಶತಕ ಸಹಿತ 890 ರನ್ ಬಾರಿಸಿದ್ದರು. ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. 9 ಪಂದ್ಯಗಳಿಂದ 304 ರನ್ ಬಾರಿಸಿದ್ದಾರೆ.