logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮಿತ್ರನಿಂದ ದ್ರೋಹ, ಮೊದಲ ಪತ್ನಿಯಿಂದ ಡಿವೋರ್ಸ್; ಸಾವು-ನೋವು ಗೆದ್ದ ದಿನೇಶ್ ಕಾರ್ತಿಕ್ ಎದ್ದು ನಿಂತಿದ್ದೇ ರೋಚಕ!

ಮಿತ್ರನಿಂದ ದ್ರೋಹ, ಮೊದಲ ಪತ್ನಿಯಿಂದ ಡಿವೋರ್ಸ್; ಸಾವು-ನೋವು ಗೆದ್ದ ದಿನೇಶ್ ಕಾರ್ತಿಕ್ ಎದ್ದು ನಿಂತಿದ್ದೇ ರೋಚಕ!

Prasanna Kumar P N HT Kannada

May 23, 2024 07:27 PM IST

google News

ಮಿತ್ರನಿಂದ ದ್ರೋಹ, ಮೊದಲ ಪತ್ನಿಯಿಂದ ಡಿವೋರ್ಸ್; ಸಾವು-ನೋವು ಗೆದ್ದ ದಿನೇಶ್ ಕಾರ್ತಿಕ್ ಎದ್ದು ನಿಂತಿದ್ದೇ ರೋಚಕ!

    • Dinesh Karthiks Love Story: ಐಪಿಎಲ್​ಗೆ ವಿದಾಯ ಹೇಳಿರುವ ಆರ್​ಸಿಬಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್​ ಒಂದು ಹಂತದಲ್ಲಿ ಆತ್ಮಹತ್ಯೆಗೂ ಮುಂದಾಗಿದ್ದರಂತೆ! ಸಾವು-ನೋವು ಗೆದ್ದ ಡಿಕೆ ಸ್ಟಾರ್ ಕ್ರಿಕೆಟರ್​ ಆಗಿ ಬೆಳೆದು ನಿಂತಿದ್ದೇ ರೋಚಕ.
ಮಿತ್ರನಿಂದ ದ್ರೋಹ, ಮೊದಲ ಪತ್ನಿಯಿಂದ ಡಿವೋರ್ಸ್; ಸಾವು-ನೋವು ಗೆದ್ದ ದಿನೇಶ್ ಕಾರ್ತಿಕ್ ಎದ್ದು ನಿಂತಿದ್ದೇ ರೋಚಕ!
ಮಿತ್ರನಿಂದ ದ್ರೋಹ, ಮೊದಲ ಪತ್ನಿಯಿಂದ ಡಿವೋರ್ಸ್; ಸಾವು-ನೋವು ಗೆದ್ದ ದಿನೇಶ್ ಕಾರ್ತಿಕ್ ಎದ್ದು ನಿಂತಿದ್ದೇ ರೋಚಕ!

ಆರ್​​ಸಿಬಿ ಅಭಿಮಾನಿಗಳು ಎಲಿಮಿನೇಟರ್​ ಪಂದ್ಯದ ಸೋಲಿನ ಜೊತೆಗೆ ದಿನೇಶ್ ಕಾರ್ತಿಕ್ (Dinesh Karthik) ವಿದಾಯದ ನೋವು ಅನುಭವಿಸುತ್ತಿದ್ದಾರೆ. 2008 ರಿಂದ 2024ರ ತನಕ ಅಂದರೆ 17 ವರ್ಷಗಳ ಐಪಿಎಲ್ ಪ್ರಯಾಣ ಅಂತ್ಯಗೊಳಿಸಿದ್ದಾರೆ. ಎಬಿ ಡಿವಿಲಿಯರ್ಸ್ ನಂತರ ಆರ್​ಸಿಬಿ ತಂಡಕ್ಕೆ ಆಪತ್ಭಾಂದವನಾಗಿದ್ದ ಡಿಕೆ, ಇನ್ಮುಂದೆ ಬ್ಯಾಟ್​ ಹಿಡಿಯಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ.

ತನ್ನ ವಿದಾಯದ ನೋವಿನ ನಡುವೆಯೇ ದಿನೇಶ್ ಕಾರ್ತಿಕ್ ವೈಯಕ್ತಿಕ ಜೀವನ ಹಾಗೂ ತನಗೆ ಮೊದಲ ಪತ್ನಿ ಮಾಡಿದ್ದ ಮೋಸದ ಬಗ್ಗೆ ಚರ್ಚೆ ಶುರುವಾಗಿದೆ. ಡಿಕೆ ದೀಪಿಕಾ ಪಳ್ಳಿಕಲ್ ಅವರನ್ನು ವರಿಸಿದ್ದು, ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಆದರೆ ದೀಪಿಕಾ, ಕಾರ್ತಿಕ್ ಬಾಳಿಗೆ ಬರುವುದಕ್ಕೂ ಮುನ್ನ ಆತ್ಮಹತ್ಯೆಗೂ ಮುಂದಾಗಿದ್ದರು. ಅದ್ಯಾಕೆ ಎಂಬುದರ ಕುರಿತು ಇಲ್ಲಿದೆ ವರದಿ.

ಹೌದು, ದಿನೇಶ್ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಏಕೆಂದರೆ, ದಿನೇಶ್ ಕಾರ್ತಿಕ್ ಮೊದಲ ಹೆಂಡತಿ ಅವರಿಗೆ ಅನ್ಯಾಯ ಮಾಡಿದ್ದರು. ಅದು ಟೀಮ್ ಇಂಡಿಯಾ ಸ್ಟಾರ್​ ಕ್ರಿಕೆಟಿಗ ಹಾಗೂ ತನ್ನ ಆಪ್ತ ಗೆಳೆಯನೇ ಮೋಸ ಮಾಡಿದ್ದರು. ಇಬ್ಬರು ತಮಿಳುನಾಡು ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದರು.

ತಮ್ಮ ಬಾಲ್ಯದ ಗೆಳತಿ ನಿಖಿತಾ ವಂಜಾರ ಅವರನ್ನು 2007ರಲ್ಲಿ ಡಿಕೆ ಮದುವೆಯಾಗಿದ್ದರು. ತನ್ನ ಆಪ್ತ ಸ್ನೇಹಿತನಾಗಿದ್ದ ಮುರಳಿ ವಿಜಯ್, ಆಗಾಗ್ಗೆ ಡಿಕೆ ಜೊತೆಗೆ ಮನೆಗೆ ಬರುತ್ತಿದ್ದರು. ಪತ್ನಿ ನಿಖಿತಾಗೂ ಸ್ನೇಹಿತರಾಗಿದ್ದರು. ಆಗಷ್ಟೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪ್ರವೇಶಿಸಿದ್ದ ಕಾರ್ತಿಕ್, ಹೆಚ್ಚು ಬ್ಯುಸಿಯಾಗಿದ್ದರು.

ನಿಖಿತಾ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ವಿಜಯ್

ಆಗ ದಿನೇಶ್ ಕಾರ್ತಿಕ್ ಪತ್ನಿಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ವಿಜಯ್, ತನ್ನೊಂದಿಗೆ ಪ್ರೀತಿಯ ಬಲೆಗೆ ಬೀಳುವಂತೆ ಮಾಡಿದರು. ಇಬ್ಬರು ಸಹ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಪರಸ್ಪರ ಇಷ್ಟಪಟ್ಟರು. ಮದುವೆಯಾಗಲು ನಿರ್ಧರಿಸಿದರು. ಆಗ ಐದು ವರ್ಷಗಳ ನಂತರ ಡಿಕೆಯಿಂದ ಬೇರ್ಪಡಲು ನಿಖಿತಾ ನಿರ್ಧರಿಸಿದರು.

2012ರಲ್ಲಿ ಕರ್ನಾಟಕ ವಿರುದ್ಧದ ನಿರ್ಣಾಯಕ ವಿಜಯ್ ಹಜಾರೆ ಟ್ರೋಫಿ ಪಂದ್ಯದ ಸಮಯದಲ್ಲಿ ದಿನೇಶ್ ಅವರ ಪತ್ನಿ ನಿಕಿತಾ, ಆತ್ಮೀಯ ಸ್ನೇಹಿತ ಮತ್ತು ಸಹ ಆಟಗಾರ ವಿಜಯ್ ಅವರೊಂದಿಗಿನ ಸಂಬಂಧದ ಬಗ್ಗೆ ತಿಳಿದುಕೊಂಡರು. ತನ್ನ ಹೆಂಡತಿ ಮತ್ತು ಆತ್ಮೀಯ ಸ್ನೇಹಿತನಿಂದ ದ್ರೋಹಕ್ಕೆ ಅನುಭವಿಸಿದ ಕಾರ್ತಿಕ್‌ಗೆ ಇದು ದೊಡ್ಡ ಆಘಾತವಾಗಿತ್ತು.

ಆತ್ಮಹತ್ಯೆಗೆ ಮುಂದಾಗಿದ್ರಂತೆ ಡಿಕೆ

ನಿಖಿತಾ ಅವರು ಡಿಕೆಗೆ ಡಿವೋರ್ಸ್ ನೀಡಿ ವಿಜಯ್​ ಅವರನ್ನು ಮದುವೆಯಾದರು. ಈ ಘಟನೆಯಿಂ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಜಿಮ್​ಗೆ ಹೋಗುವುದನ್ನು ನಿಲ್ಲಿಸಿದರು. ಕ್ರಿಕೆಟ್​ನಿಂದ ದೀರ್ಘ ವಿರಾಮ ಪಡೆದರು. ಇದರಿಂದ ಭಾರತ ತಂಡದಿಂದ ಹೊರಬೀಳಲು ಕಾರಣವಾಯಿತು.

ಅವನ ಸ್ನೇಹಿತ ಮತ್ತು ಮಾರ್ಗದರ್ಶಕ ಅಭಿಷೇಕ್ ನಾಯರ್ ತನ್ನ ಜೀವನವನ್ನು ಮರುಪ್ರಾರಂಭಿಸುವಂತೆ ಒತ್ತಾಯಿಸಿದ ಕಾರಣ ದಿನೇಶ್, ಜಿಮ್​ಗೆ ಹೋಗಲು ಪ್ರಾರಂಭಿಸಿದರು. ದಿನಗಳು ಕಳೆದಂತೆ ಅಲ್ಲಿ ಅವರು ಭಾರತೀಯ ರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರ ಪರಿಚಯವಾಯಿತು. ಡಿಕೆ ಮತ್ತು ದೀಪಿಕಾ ಅವರಿಗೆ ಬಸು ಶಂಕರ್ ಅವರೇ ಫಿಟ್ನೆಸ್ ತರಬೇತಿ ನೀಡುತ್ತಿದ್ದರು.

ಡಿಕೆ-ದೀಪಿಕಾ ಜಿಮ್​ನಲ್ಲಿ ಪರಿಚಯ, ಸ್ನೇಹ, ಪ್ರೀತಿ

ಆರಂಭದಲ್ಲಿ ದಿನೇಶ್ ಕಾರ್ತಿಕ್ ಅವರಿಂದ ದೂರಿವಿದ್ದ ದೀಪಿಕಾ ನಂತರ ಇಬ್ಬರು ಒಳ್ಳೆಯ ಸ್ನೇಹಿತರಾದರು. ದಿನೇಶ್ ಮೇಲೆ ದೀಪಿಕಾ ಪ್ರಭಾವ ಬೀರಿದರು. ದಿನಗಳು ಕಳೆದಂತೆ ಒಬ್ಬರನ್ನೊಬ್ಬರು ಪ್ರೀತಿಸಿದರು. ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ದಿನೇಶ್ ಕಾರ್ತಿಕ್ ಲಂಡನ್‌ನಲ್ಲಿ ದೀಪಿಕಾ ಪಳ್ಳಿಕಲ್‌ಗೆ ಪ್ರಪೋಸ್ ಮಾಡಿದ್ದರು. ಬಳಿಕ ಮನೆಯಲ್ಲಿ ಒಪ್ಪಿಸಲಾಗಿತ್ತು. ಆದರೆ ದೀಪಿಕಾ ಮನೆಯಲ್ಲಿ ಮೊದಲು ವಿರೋಧ ವ್ಯಕ್ತವಾಗಿತ್ತು.

2013ರಲ್ಲಿ ದಂಪತಿಗಳು ಚೆನ್ನೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ, 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಸಹ ಕ್ರಿಶ್ಚಿಯನ್ (ಆಗಸ್ಟ್ 18, 2015) ಮತ್ತು ಹಿಂದೂ (ಆಗಸ್ಟ್ 20, 2015 ಶೈಲಿಯಲ್ಲಿ ಎರಡು ಬಾರಿ ಮದುವೆಯಾದರು. 2021ರಲ್ಲಿ ದೀಪಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಅವರ ಹೆಸರು ಕಬೀರ್ ಪಳ್ಳಿಕಲ್ ಕಾರ್ತಿಕ್ ಮತ್ತು ಜಿಯಾನ್ ಪಳ್ಳಿಕಲ್ ಕಾರ್ತಿಕ್.

ಭಾರತ ತಂಡದ ಪರ 2019ರಲ್ಲಿ ಕೊನೆಯದಾಗಿ ಆಡಿದ್ದ ಕಾರ್ತಿಕ್, 2022ರ ಐಪಿಎಲ್​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕಾರಣ ಅದೇ ವರ್ಷ ನಡೆದ ಟಿ20 ವಿಶ್ವಕಪ್​ಗೂ ಆಯ್ಕೆಯಾದರು. ಆ ಬಳಿಕ ಭಾರತ ತಂಡಕ್ಕೆ ಮರಳಲೇ ಇಲ್ಲ. ಐಪಿಎಲ್​ನಲ್ಲೂ ಆರ್​ಸಿಬಿ ಮಿಂಚಿರುವ ಡಿಕೆ, ಟ್ರೋಫಿ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದ್ದರು. ಆದರೆ, ಟ್ರೋಫಿ ಇಲ್ಲದೆಯೇ ವಿದಾಯ ಘೋಷಿಸಿದ್ದಾರೆ ದಿನೇಶ್ ಕಾರ್ತಿಕ್.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ