logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಾವಣನ ಊರಿನಲ್ಲಿ ರಾಮ ನಾಮ ಜಪ; ಕೆಜಿಎಫ್, ಪುಷ್ಪಾ ಹಾಡಿಗೂ ಪ್ರೇಕ್ಷಕರು ಸಖತ್ ಸ್ಪೆಪ್ಸ್​

ರಾವಣನ ಊರಿನಲ್ಲಿ ರಾಮ ನಾಮ ಜಪ; ಕೆಜಿಎಫ್, ಪುಷ್ಪಾ ಹಾಡಿಗೂ ಪ್ರೇಕ್ಷಕರು ಸಖತ್ ಸ್ಪೆಪ್ಸ್​

Prasanna Kumar P N HT Kannada

Sep 03, 2023 09:07 AM IST

google News

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ರಾಮ ನಾಮ ಜಪ.

    • India vs Pakistan: ಏಷ್ಯಾಕಪ್​ ಟೂರ್ನಿಯ 3ನೇ ಪಂದ್ಯದಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್​ ಸಂದರ್ಭದಲ್ಲಿ ಭಾರತದ ಅಭಿಮಾನಿಗಳು ರಾಮನಾಪ ಜಪಿಸಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯದಲ್ಲಿ ರಾಮ ನಾಮ ಜಪ.
ಭಾರತ-ಪಾಕಿಸ್ತಾನ ಪಂದ್ಯದಲ್ಲಿ ರಾಮ ನಾಮ ಜಪ.

ಭಾರತ-ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ ಪಂದ್ಯ ರದ್ದುಗೊಂಡಿದೆ. ಭಾರತದ ಇನ್ನಿಂಗ್ಸ್​​​ ಬಳಿಕ 267 ರನ್ ಹಿಂಬಾಲಿಸಲು ಸಜ್ಜಾಗಿದ್ದ ಪಾಕಿಸ್ತಾನಕ್ಕೆ ಮಳೆ ಆಘಾತ ನೀಡಿತು. ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಫಲಿತಾಂಶ ಕಾಣದೆ ಅಂತ್ಯಗೊಂಡಿತು. ಆದರೆ ರಾವಣ ಊರು ಶ್ರೀಲಂಕಾದ ಪಲ್ಲೆಕೆಲೆ ಮೈದಾನದಲ್ಲಿ (Pallekele) ನಡೆದ ಈ ಏಷ್ಯಾಕಪ್ (Asia Cup 2023) ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್​ ಸಂದರ್ಭದಲ್ಲಿ ಭಾರತದ ಅಭಿಮಾನಿಗಳು ರಾಮನಾಪ ಜಪಿಸಿದ್ದಾರೆ.

ಭಾರತದ ಅಗ್ರಕ್ರಮಾಂಕದ ನಾಲ್ವರು ಆಟಗಾರರು, ಮಹತ್ವದ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ವೈಫಲ್ಯ ಅನುಭವಿಸಿದರು. ಇದರಿಂದ ಟೀಮ್ ಇಂಡಿಯಾ 66ಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಸ್ಥಿತಿಗೆ ಬಂದು ನಿಂತಿತ್ತು. ಆದರೆ ಈ ಹಂತದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಇನ್ನಿಂಗ್ಸ್​ ಕಟ್ಟಿದರು. ತಲಾ ಅರ್ಧಶತಕ ಸಿಡಿಸಿ ಮಿಂಚಿ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು.

ರಾಮ ನಾಮ ಜಪ

ಬದ್ಧವೈರಿ ಪಾಕಿಸ್ತಾನದ ಬೌಲರ್​​​ಗಳಿಗೆ ಬೆಂಡೆತ್ತಿದ್ದ ಇಶಾನ್ 82 ರನ್, ಹಾರ್ದಿಕ್​ ಪಾಂಡ್ಯ 87 ರನ್ ಗಳಿಸಿದರು. ಆ ಮೂಲಕ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಪತ್ಭಾಂದವರಾದರು. ಈ ಉಭಯ ಆಟಗಾರರು ಪಂದ್ಯದಲ್ಲಿ ಬೌಂಡರಿ ಸಿಡಿಸುತ್ತಿದ್ದ ವೇಳೆ ಮೈದಾನದಲ್ಲಿ ನೆರೆದಿದ್ದ ಭಾರತದ ಅಭಿಮಾನಿಗಳು ರಾಮ್​ ಸಿಯಾ ರಾಮ್, (Ram Siya Ram) ಎಂದು ರಾಮ ನಾಮ ಜಪಿಸಿದ ವಿಡಿಯೋವೊಂದು ವೈರಲ್​ ಆಗುತ್ತಿದೆ.

ಹಾರ್ದಿಕ್ ಮತ್ತು ಇಶಾನ್ ಇಬ್ಬರೂ ನಾ ಮುಂದು, ತಾ ಮುಂದು ಎನ್ನುವಂತೆ ಬೌಂಡರಿ ಸಿಡಿಸಿದರು. ಈ ಸಂದರ್ಭದಲ್ಲಿ ಮೈದಾನದಲ್ಲಿ ಇದ್ದ ಪ್ರೇಕ್ಷಕರು ಉಭಯ ಆಟಗಾರರನ್ನು ಹುರಿದುಂಬಿಸಲು ತಿರಂಗಾ ಧ್ವಜ ಬೀಸುತ್ತಾ ರಾಮ್ ಸಿಯಾ ರಾಮ್ ಎಂದು ಹಾಡಿದ್ದಾರೆ. ಈ ಹಾಡು ಪ್ರಭಾಸ್ (Actor Prabhas) ನಟನೆಯ ಆದಿಪುರುಷ್‌ ಚಿತ್ರದಲ್ಲಿದೆ. ರಾವಣನ ಊರಿನಲ್ಲಿ ರಾಮ ಜಪ ಸಖತ್ ಹೊಸ ಸೆನ್ಸೇಷನ್ ಸೃಷ್ಟಿಸಿದೆ.

ಪುಷ್ಪ-ಕೆಜಿಎಫ್​ ಹಾಡಿಗೂ ಪ್ರೇಕ್ಷಕರು ಭರ್ಜರಿ ಡ್ಯಾನ್ಸ್​

ರಾಮ ನಾಮ ಜಪ ಮಾತ್ರವಲ್ಲ, ಡಿಜೆಯಲ್ಲಿ ಕೆಜಿಎಫ್​ ಮತ್ತು ಪುಷ್ಪಾ ಹಾಡುಗಳು ಸಹ ಗಮನ ಸೆಳೆದವು. ವಂದೇ ಮಾತರಂ ಹಾಡು ಸಹ ಮೊಳಗಿತು. ಪುಷ್ಪಾದ ರಾರಾ ಸಾಮಿ ಹಾಡು, ಕೆಜಿಎಫ್​​ನ ಧೀರಾ ಧೀರಾ ಹಾಡು ಸೇರಿದಂತೆ ಭಾರತಕ್ಕೆ ಸಂಬಂಧಿಸಿದ ಹಾಡುಗಳೇ ಸದ್ದು ಮಾಡಿದವು. ಈ ಹಾಡುಗಳಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಮತ್ತೊಂದೆಡೆ ಇಶಾನ್ ಕಿಶನ್ ಬೌಂಡರಿ-ಸಿಕ್ಸರ್​​ ಸಿಡಿಸುತ್ತಿದ್ದದ್ದು ಅದಕ್ಕೆ ತಾಳ ಹಾಕಿದಂತಿತ್ತು. ಸದ್ಯ ಭಾರತ ತನ್ನ ಮುಂದಿನ ಪಂದ್ಯವನ್ನು ಸೆಪ್ಟೆಂಬರ್ 4ರಂದು ಇದೇ ಮೈದಾನದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಸೂಪರ್-4 ಹಂತಕ್ಕೆ ಪ್ರವೇಶಿಸಬೇಕೆಂದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ