logo
ಕನ್ನಡ ಸುದ್ದಿ  /  ಕ್ರಿಕೆಟ್  /  Eng Vs Ban: ಬಲಿಷ್ಠ ಇಂಗ್ಲೆಂಡ್​ಗೆ ಬಾಂಗ್ಲಾ ಸವಾಲು; ಪಿಚ್ ರಿಪೋರ್ಟ್, ಹವಾಮಾನ ವರದಿ, ಸಂಭಾವ್ಯ ತಂಡ, ಮುಖಾಮುಖಿ ದಾಖಲೆ ಹೀಗಿದೆ!

ENG vs BAN: ಬಲಿಷ್ಠ ಇಂಗ್ಲೆಂಡ್​ಗೆ ಬಾಂಗ್ಲಾ ಸವಾಲು; ಪಿಚ್ ರಿಪೋರ್ಟ್, ಹವಾಮಾನ ವರದಿ, ಸಂಭಾವ್ಯ ತಂಡ, ಮುಖಾಮುಖಿ ದಾಖಲೆ ಹೀಗಿದೆ!

Prasanna Kumar P N HT Kannada

Oct 09, 2023 11:48 PM IST

google News

ಬಲಾಢ್ಯ ಇಂಗ್ಲೆಂಡ್​ಗೆ ಬಾಂಗ್ಲಾ ಸವಾಲು.

    • England vs Bangladesh, ODI World Cup 2023: ಏಕದಿನ ವಿಶ್ವಕಪ್ ಟೂರ್ನಿಯ 7ನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಧರ್ಮಶಾಲಾದ ಹಿಮಾಚಾಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಬಲಾಢ್ಯ ಇಂಗ್ಲೆಂಡ್​ಗೆ ಬಾಂಗ್ಲಾ ಸವಾಲು.
ಬಲಾಢ್ಯ ಇಂಗ್ಲೆಂಡ್​ಗೆ ಬಾಂಗ್ಲಾ ಸವಾಲು.

ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2023) ಉದ್ಘಾಟನಾ ಪಂದ್ಯದಲ್ಲಿ ರನ್ನರ್​​ಅಪ್​ ನ್ಯೂಜಿಲೆಂಡ್​​ ವಿರುದ್ಧ ಹೀನಾಯವಾಗಿ ಪರಾಭವಗೊಂಡ ಹಾಲಿ ಚಾಂಪಿಯನ್​ ಇಂಗ್ಲೆಂಡ್, ತನ್ನ 2ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಅಕ್ಟೋಬರ್ 10ರಂದು ಎರಡು ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಆಂಗ್ಲರು ಬಾಂಗ್ಲಾದೇಶದ ಸವಾಲಿಗೆ (England vs Bangladesh) ಸಜ್ಜಾಗಿದ್ದಾರೆ. ಭಾರತದ ಅತ್ಯಂತ ಸುಂದರ ಮೈದಾನ ಎಂದು ಖ್ಯಾತಿಗೆ ಒಳಗಾಗಿರುವ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ.

ಬಾಂಗ್ಲಾದೇಶ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದು ಗೆಲುವಿನ ಖಾತೆ ತೆರೆದಿದೆ. ಈ ಪಂದ್ಯವೂ ಧರ್ಮಶಾಲಾದಲ್ಲೇ ನಡೆದಿತ್ತು ಎಂಬುದು ವಿಶೇಷ. ಇದೀಗ ಇದೇ ಮೈದಾನದಲ್ಲಿ ಬಲಿಷ್ಠ ಇಂಗ್ಲೆಂಡ್​ಗೆ​ ಸವಾಲೊಡ್ಡಲು ಸಜ್ಜಾಗಿದ್ದು, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಬಾಂಗ್ಲಾ ಆಟಗಾರರು ಅಮೋಘ ಫಾರ್ಮ್​​ನಲ್ಲಿದ್ದು, ಇಂಗ್ಲೆಂಡ್​ಗೆ ಸರಿಸಮನಾದ ಹೋರಾಟ ನಡೆಸಲು ರೆಡಿಯಾಗಿದೆ. ಆದರೆ ಇಂಗ್ಲೆಂಡ್​​ ಬಲಿಷ್ಠ ತಂಡವನ್ನೇ ಹೊಂದಿದ್ದು, ಲಯಕ್ಕೆ ಮರಳಬೇಕಿದೆ.

ಶಕೀಬ್​-ಮೆಹಿದಿ ಮೇಲೆ ಅವಲಂಬನೆ

ನಾಯಕ ಶಕೀಬ್​ ಅಲ್​ ಹಸನ್​ ಮತ್ತು ಮೆಹದಿ ಹಸನ್ ಮಿರಾಜ್​​ ಇಬ್ಬರೂ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ರೆಡ್​ ಹಾಟ್​ ಫಾರ್ಮ್​ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ತಲಾ ಮೂರು ವಿಕೆಟ್​ ಪಡೆದು ಮಿಂಚಿದ್ದರು. 3 ವಿಕೆಟ್ ಪಡೆದ ಮೆಹದಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಹಾಗಾಗಿ ಈ ಪಂದ್ಯಕ್ಕೂ ಇವರನ್ನೇ ನೆಚ್ಚಿಕೊಂಡಿದೆ ಬಾಂಗ್ಲಾ. ಅಲ್ಲದೆ, ನಜ್ಮುಲ್ ಹೊಸೈನ್ ಶಾಂಟೋ ಕೂಡ ತಂಡದ ಬ್ಯಾ ಟಿಂಗ್ ಆಸ್ತ್ರ ಎನಿಸಿಕೊಂಡಿದ್ದಾರೆ. ಆದರೆ ಉಳಿದವರು ಬ್ಯಾಟಿಂಗ್​​​ನಲ್ಲಿ ಕಾಣಿಕೆ ನೀಡಬೇಕಿದೆ. ಬೌಲಿಂಗ್​​ ವಿಭಾಗದಲ್ಲಿ ಎಲ್ಲ ಫಾರ್ಮ್​​ನಲ್ಲಿದ್ದಾರೆ ಎಂಬುದು ಬಾಂಗ್ಲಾ ಪಾಲಿಗೆ ಸಕಾರಾತ್ಮಕ ಅಂಶ.

ಗೆಲ್ಲಬೇಕಾದ ಒತ್ತಡದಲ್ಲಿ ಆಂಗ್ಲರು

ಇಂಗ್ಲೆಂಡ್​ ಮೊದಲ ಪಂದ್ಯ ಸೋಲಿಗೆ ಕಾರಣವಾಗಿದ್ದು, ಬ್ಯಾಟರ್​​ಗಳ ವೈಫಲ್ಯದಿಂದ. ಜೋ ರೂಟ್ ಹೊರತುಪಡಿಸಿ ಬಲಿಷ್ಠ ಆಟಗಾರರೇ ಬ್ಯಾಟರ್​​ಗಳೇ ನಿರಾಸೆ ಮೂಡಿಸಿದರು. ಡೇವಿಡ್ ಮಲಾನ್, ನಾಯಕ ಬಟ್ಲರ್​, ಜಾನಿ ಬೈರ್​ಸ್ಟೋ, ಲಿವಿಂಗ್​ಸ್ಟೋನ್​ ಮತ್ತು ಮೊಯಿನ್​ ಅಲಿ ಅವರ ಬ್ಯಾಟ್ ಸದ್ದು ಮಾಡಬೇಕಿದೆ. ರೂಟ್​ ಅವರು ಸದ್ಯ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್​​ನಲ್ಲೂ ಮಾರ್ಕ್​ವುಡ್, ಕ್ರಿಸ್​ವೋಕ್ಸ್​​, ಸ್ಯಾಮ್​ ಕರನ್, ಆದಿಲ್ ರಶೀದ್​​ ಪರಿಣಾಮ ಬೀರಬೇಕಿದೆ. ಬೆನ್​ಸ್ಟೋಕ್ಸ್​​ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದ್ದು, ಹ್ಯಾರಿ ಬ್ರೂಕ್​ ಬೆಂಚ್​ ಕಾಯಬೇಕಾಗುತ್ತದೆ.

ಪಿಚ್ ​ ರಿಪೋರ್ಟ್​/ಹವಾಮಾನ ವರದಿ

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನ ಪಿಚ್ ಸಮನಾದ ಹೋರಾಟಕ್ಕೆ ಸಾಕ್ಷಿ.​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಮಿಂಚಬಹುದು. ಆದರೆ ರಾತ್ರಿ ವೇಳೆ ಇಬ್ಬನಿ ಸಮಸ್ಯೆ ಕಾಡಲಿದ್ದು, ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚು ಸಹಾಯಕಾರಿ. ಆದರೆ ಈ ಪಂದ್ಯ ಹಗಲಿನಲ್ಲಿ ನಡೆಯುವ ಕಾರಣ ಇಬ್ಬನಿ ಸಮಸ್ಯೆ ಕಾಡುವುದಿಲ್ಲ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನು ಮಳೆ ಸಂಭವವೂ ಕಡಿಮೆ ಇದೆ. ಸಂಪೂರ್ಣ ಪಂದ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಪಂದ್ಯ: ಇಂಗ್ಲೆಂಡ್​ vs ಬಾಂಗ್ಲಾದೇಶ

ಸಮಯ: ಬೆಳಿಗ್ಗೆ 10.30. ಟಾಸ್ ಪ್ರಕ್ರಿಯೆ 10.00 (ಅಕ್ಟೋಬರ್​ 10)

ನೇರ ಪ್ರಸಾರ: ಸ್ಟಾರ್​ಸ್ಪೋರ್ಟ್ಸ್​​, ಡಿಸ್ನಿ ಪ್ಲಸ್ ಹಾಟ್​ಸ್ಟಾರ್ (ಸಂಪೂರ್ಣ ಉಚಿತ)​.

ಸ್ಥಳ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಧರ್ಮಶಾಲಾ

ಉಭಯ ತಂಡಗಳು ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 24

ಇಂಗ್ಲೆಂಡ್ ಗೆಲುವು - 19

ಬಾಂಗ್ಲಾದೇಶ ಗೆಲುವು - 05

ಹೆಚ್​ಪಿಸಿಎ ಮೈದಾನದಲ್ಲಿ ಏಕದಿನ ದಾಖಲೆಗಳು

ಒಟ್ಟು ಪಂದ್ಯಗಳು - 05

ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 01

ಎರಡನೇ ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 05

ಮೊದಲ ಇನ್ನಿಂಗ್ಸ್​ ಸರಾಸರಿ ಮೊತ್ತ - 202

ಎರಡನೇ ಇನ್ನಿಂಗ್ಸ್​​ ಸರಾಸರಿ ಮೊತ್ತ - 192

ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ - 330/6

ಈ ಮೈದಾನದಲ್ಲಿ ದಾಖಲಾದ ಕನಿಷ್ಠ ಮೊತ್ತ - 112/10

ಇಂಗ್ಲೆಂಡ್​ ಸಂಭಾವ್ಯ ತಂಡ

ಜಾನಿ ಬೈರ್‌ಸ್ಟೋ, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್/ಬೆನ್​ಸ್ಟೋಕ್ಸ್, ಮೊಯಿನ್ ಅಲಿ, ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್​), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.

ಬಾಂಗ್ಲಾದೇಶ ಸಂಭಾವ್ಯ ತಂಡ

ತಂಝಿದ್ ತಮೀಮ್, ಲಿಟ್ಟನ್ ದಾಸ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್​​), ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಾಫಿಜುರ್ ರೆಹಮಾನ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ