logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿಗೆ ಹ್ಯಾಟ್ರಿಕ್ ಗೆಲುವು, ಗುಜರಾತ್​ಗೆ ಹ್ಯಾಟ್ರಿಕ್ ಸೋಲು; 10 ರಿಂದ 7ನೇ ಸ್ಥಾನಕ್ಕೆ ಜಿಗಿದ ಫಾಫ್ ಪಡೆ

ಆರ್​​ಸಿಬಿಗೆ ಹ್ಯಾಟ್ರಿಕ್ ಗೆಲುವು, ಗುಜರಾತ್​ಗೆ ಹ್ಯಾಟ್ರಿಕ್ ಸೋಲು; 10 ರಿಂದ 7ನೇ ಸ್ಥಾನಕ್ಕೆ ಜಿಗಿದ ಫಾಫ್ ಪಡೆ

Prasanna Kumar P N HT Kannada

May 04, 2024 11:14 PM IST

ಆರ್​​ಸಿಬಿಗೆ ಹ್ಯಾಟ್ರಿಕ್ ಗೆಲುವು, ಗುಜರಾತ್​ಗೆ ಹ್ಯಾಟ್ರಿಕ್ ಸೋಲು; 10 ರಿಂದ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಫಾಫ್ ಪಡೆ

    • RCB vs GT : 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ 4 ವಿಕೆಟ್​​ಗಳ ಗೆಲುವು ಸಾಧಿಸಿತು.
ಆರ್​​ಸಿಬಿಗೆ ಹ್ಯಾಟ್ರಿಕ್ ಗೆಲುವು, ಗುಜರಾತ್​ಗೆ ಹ್ಯಾಟ್ರಿಕ್ ಸೋಲು; 10 ರಿಂದ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಫಾಫ್ ಪಡೆ
ಆರ್​​ಸಿಬಿಗೆ ಹ್ಯಾಟ್ರಿಕ್ ಗೆಲುವು, ಗುಜರಾತ್​ಗೆ ಹ್ಯಾಟ್ರಿಕ್ ಸೋಲು; 10 ರಿಂದ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಫಾಫ್ ಪಡೆ (PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದೆ. ತನ್ನ 10ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 16 ಓವರ್​​ಗಳಲ್ಲಿ (Royal Challengers Bengaluru vs Gujarat Titans) ಗೆದ್ದಿದ್ದ ಆರ್​ಸಿಬಿ, ಇದೀಗ ತನ್ನ 11ನೇ ಪಂದ್ಯದಲ್ಲಿ ಅದೇ ತಂಡದ ವಿರುದ್ಧ 13.4 ಓವರ್​ಗಳಲ್ಲೇ ಗೆದ್ದು ಬೀಗಿತು. 4 ವಿಕೆಟ್​​ಗಳಿಂದ ದಿಗ್ವಿಜಯ ಸಾಧಿಸಿದ ಫಾಫ್ ಪಡೆಯ ಪ್ಲೇಆಫ್ ಆಸೆ ಜೀವಂತವಾಗಿದೆ. ಹ್ಯಾಟ್ರಿಕ್ ಜಯದ ನಗೆ ಬೀರಿದ ಚಾಲೆಂಜರ್ಸ್​, ಹಲವು ದಿನಗಳ ನಂತರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಸತತ ಸೋಲುಗಳಿಂದ ಕಂಗೆಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆದರೆ ಗುಜರಾತ್, ಹ್ಯಾಟ್ರಿಕ್ ಸೋಲಿಗೆ ಶರಣಾಯಿತು. ಅಂಕಪಟ್ಟಿಯಲ್ಲೂ 9ನೇ ಸ್ಥಾನಕ್ಕೆ ಕುಸಿದಿದೆ. ಈ ಸೋಲಿನೊಂದಿಗೆ ಪ್ಲೇಆಫ್​​ ಹಾದಿ ಮತ್ತಷ್ಟು ದುರ್ಗಮವಾಯಿತು. ಫಾಫ್ ಡು ಪ್ಲೆಸಿಸ್ ವೇಗದ ಅರ್ಧಶತಕ ಸಿಡಿಸಿ ಮಿಂಚಿದರೆ, ಬೌಲರ್​​ಗಳು ಜಿಟಿ ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ಪರಿಣಾಮ ಆರ್​​ಸಿಬಿ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್ ಟೈಟಾನ್ಸ್, ಆರ್​​ಸಿಬಿ ಬೌಲರ್​ಗಳ ದಾಳಿಗೆ ತತ್ತರಿಸಿತು. ಪರಿಣಾಮ 19.3 ಓವರ್​​ಗಳಲ್ಲಿ 147 ರನ್​ಗಳಿಗೆ ಆಲೌಟ್​ ಆಯಿತು. ಮೊಹಮ್ಮದ್ ಸಿರಾಜ್, ವಿಜಯ್​ಕುಮಾರ್ ವೈಶಾಕ್ ಮತ್ತು ಯಶ್ ದಯಾಳ್ ತಲಾ 2 ವಿಕೆಟ್​ ಪಡೆದರು. ಈ ಗುರಿ ಬೆನ್ನಟ್ಟಿದ ಆರ್​​ಸಿಬಿ 13.4 ಓವರ್​​​ಗಳಲ್ಲಿ ಜಯದ ನಗೆ ಬೀರಿತು. ಆದರೆ ಜೋಶುವಾ ಲಿಟಲ್ 4 ವಿಕೆಟ್ ಪಡೆದು ಬೆಂಗಳೂರು ಬಿರುಸಿನ ಆಟಕ್ಕೆ ಬ್ರೇಕ್​ ಹಾಕಿದರೂ ಗೆಲುವು ಸಾಧ್ಯವಾಗಲಿಲ್ಲ.

ಬಿರುಸಿನ ಬ್ಯಾಟಿಂಗ್​​ಗೆ ಬ್ರೇಕ್ ಹಾಕಿದ ಜೋಶುವಾ ಲಿಟಲ್

148 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್​ಸಿಬಿ, ಬಿರುಸಿನ ಆರಂಭ ಪಡೆಯಿತು. ಪವರ್​​ಪ್ಲೇನಲ್ಲಿ ದಾಖಲೆಯ 92 ರನ್ ಪೇರಿಸಿತು. ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್​ ಕೊಹ್ಲಿ ಆರಂಭದಿಂದಲೇ ದಂಡಯಾತ್ರೆ ನಡೆಸಿದರು. ಜಿಟಿ ಬೌಲರ್​ಗಳನ್ನು ಚೆಂಡಾಡಿದರು. ಅದರಲ್ಲೂ ಫಾಫ್ 18 ಎಸೆತಗಳಲ್ಲೇ ಅರ್ಧಶತಕವನ್ನು ಪೂರೈಸಿದರು. ಒಟ್ಟಾರೆ 23 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್​ ಸಹಿತ 64 ರನ್ ಬಾರಿಸಿ ಔಟಾದರು. ಆದರೆ ಫಾಫ್ ಔಟಾದ ಬೆನ್ನಲ್ಲೇ 25 ರನ್​ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು.

ವಿಲ್ ಜಾಕ್ಸ್ (1), ರಜತ್ ಪಾಟೀದಾರ್​ (2), ಗ್ಲೆನ್ ಮ್ಯಾಕ್ಸ್​ವೆಲ್​ (4), ಕ್ಯಾಮರೂನ್ ಗ್ರೀನ್ (1) ನಿರಾಸೆ ಮೂಡಿಸಿದರು. ಸತತ ವಿಕೆಟ್​ ನಡುವೆಯೂ ಮಿಂಚುತ್ತಿದ್ದ ವಿರಾಟ್ ಕೊಹ್ಲಿ ಸಹ ಹೊರ ನಡೆದರು. 27 ಎಸೆತಗಳಲ್ಲಿ 4 ಸಿಕ್ಸರ್​, 2 ಬೌಂಡರಿ ಸಹಿತ 42 ರನ್ ಗಳಿಸಿದರು. ತನ್ನ ಮೊದಲ ವಿಕೆಟ್ ಅನ್ನು 92ಕ್ಕೆ ಕಳೆದುಕೊಂಡ ಬೆಂಗಳೂರು, 117 ರನ್ ಆಗುವಷ್ಟರಲ್ಲಿ ಟಾಪ್​​-6 ವಿಕೆಟ್​​ಗಳನ್ನು ಕಳೆದುಕೊಂಡಿತು. ಜೋಶುವಾ ಲಿಟಲ್ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಿದರು. 4 ವಿಕೆಟ್ ಉರುಳಿಸಿ ಗಮನ ಸೆಳೆದರು.

ಆದರೆ ಸತತ ವಿಕೆಟ್ ಕಳೆದುಕೊಂಡರೂ ಆರ್​ಸಿಬಿ ಸುಸ್ಥಿತಿಯಲ್ಲಿತ್ತು. ಆಗ ಆರ್​ಸಿಬಿ ಗೆಲುವಿಗೆ ಕೇವಲ 31 ರನ್ ಬೇಕಿತ್ತು. ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಮತ್ತು ಸ್ವಪ್ನಿಲ್ ಸಿಂಗ್ ಅವರು ವಿಕೆಟ್ ರಕ್ಷಿಸಿಕೊಂಡು ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ದಿನೇಶ್ ಕಾರ್ತಿಕ್ ಅಜೇಯ 21 ರನ್, ಸ್ವಪ್ನಿಲ್ ಸಿಂಗ್ 15 ರನ್ ಗಳಿಸಿ ಔಟಾಗದೆ ಉಳಿದರು. ಜೋಶುವಾ ಲಿಟಲ್ 4 ವಿಕೆಟ್, ನೂರ್ ಅಹ್ಮದ್​ 2 ವಿಕೆಟ್ ಪಡೆದು ಮಿಂಚಿದರು.

ಆರ್​​ಸಿಬಿ ಬೌಲರ್​ಗಳ ದರ್ಬಾರ್​

ಮೊದಲು ಬ್ಯಾಟಿಂಗ್ ಜಿಟಿ ನೀರಸ ಬ್ಯಾಟಿಂಗ್ ಆರಂಭ ಪಡೆಯಿತು. ಪವರ್​​ಪ್ಲೇನಲ್ಲಿ ಕೇವಲ 23 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತು. ವೃದ್ಧಿಮಾನ್​ ಸಾಹ (1) ಮತ್ತು ಶುಭ್ಮನ್ ಗಿಲ್​ಗೆ (2) ಸಿರಾಜ್ ಗೇಟ್​ಪಾಸ್ ನೀಡಿದರೆ, ಸಾಯಿ ಸುದರ್ಶನ್ (6)​ ಅವರನ್ನು ಗ್ರೀನ್ ಹೊರಹಾಕಿದರು. ಆದರೆ ಸಂಕಷ್ಟಕ್ಕೆ ಸಿಲುಕಿದ ಗುಜರಾತ್ ತಂಡಕ್ಕೆ ಶಾರೂಖ್ ಖಾನ್ ಮತ್ತು ಡೇವಿಡ್ ಮಿಲ್ಲರ್​ ಚೇತರಿಕೆ ನೀಡಿದರು. 61 ರನ್ ಪಾಲುದಾರಿಕೆ ನೀಡಿದರು. ಆದರೆ, ಶಾರೂಖ್ 37 ರನ್​ಗಳಿಸಿ ರನೌಟ್​ ಆದರು.

ಇದರ ಬೆನ್ನಲ್ಲೇ 30 ರನ್ ಗಳಿಸಿದ್ದ ಮಿಲ್ಲರ್​ ಸಹ ಹೊರ ನಡೆದರು. ಆದರೆ ಕೊನೆಯಲ್ಲಿ ರಾಹುಲ್ ತೆವಾಟಿಯಾ ಕೊನೆಯವರೆಗೂ ಕ್ರೀಸ್​ನಲ್ಲಿ ಉಳಿದು 35 ರನ್ ಸಿಡಿಸಿದರೆ, ರಶೀದ್​ ಖಾನ್ 18 ರನ್ ಗಳಿಸಿದರು. ನಾಲ್ಕನೇ ವಿಕೆಟ್ ನಂತರ ಮತ್ತೆ ಮೇಲುಗೈ ಸಾಧಿಸಿದ ಆರ್​ಸಿಬಿ ಬೌಲರ್​​ಗಳು 19.3 ಓವರ್​​​ಗಳಲ್ಲಿ ಜಿಟಿಯನ್ನು ಆಲೌಟ್ ಮಾಡಿದರು. ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯ್ ಕುಮಾರ್​ ವೈಶಾಕ್ ತಲಾ 2 ವಿಕೆಟ್ ಪಡೆದರು. ಕ್ಯಾಮರೂನ್ ಗ್ರೀನ್ ಮತ್ತು ಕರಣ್ ಶರ್ಮಾ ತಲಾ 1 ವಿಕೆಟ್ ಪಡೆದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ